ಲಾಯಿಲ ಮುಂಡೇಲು ಅಂಬೇಡ್ಕರ್ ನಗರದಲ್ಲಿ‌ ಮೂರು ಮನೆಗಖಿಗೆ ನುಗ್ಗಿದ ನೀರು ಜನರ ಸ್ಥಳಾಂತರ

0

ಬೆಳ್ತಂಗಡಿ;  ಲಾಯಿಲ ಗ್ರಾಮದ ಮುಂಡೇಲು ಅಂಬೇಡ್ಕರ್ ನಗರದಲ್ಲಿ ಮನೆಗಳಿಗೆ ನದಿ ನೀರು ನುಗ್ಗಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಮೂರು ಮನೆಗಳಿಗೆ ನೀರು ನುಗ್ಗಿದ್ದು ಮನೆಯೊಳಗೆ ಮೂರು ಫೀಟ್ ಗಿಂತ ಮೇಲೆ ನೀರು ಬಂದಿದೆ. ಇಲ್ಲಿನ ಮೂರು ಮನೆಯವರನ್ನು ತಾತ್ಕಾಲಿಕವಾಗಿ ಈ ಮನೆಗಳಿಂದ ಸ್ಥಳಾಂತರ ಮಾಡಲಾಗಿದೆ ಏಕಾ ಏಕಿ ಕೆಸರು ನೀರು ನುಗ್ಗಿದ ಕಾರಣ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಸಂಭವಿಸಿದೆ.

ಬೆಳ್ತಂಗಡಿ; ಪಟ್ರಮೆ ನಿವಾಸಿ ಸಿಪಿಐಎಂ ಪಕ್ಷದ ಹಿರಿಯ ಸಂಗಾತಿ ಲಕ್ಷ್ಮಣ ಗೌಡ ನಿಧನ

0

ಬೆಳ್ತಂಗಡಿ ತಾಲೂಕು  ಪಟ್ರಮೆ ಗ್ರಾಮದ ಜಾಲು ಎಂಬಲ್ಲಿರುವ ಸಿಪಿಐಎಂ ಪಕ್ಷದ ಹಿರಿಯ ಸಂಗಾತಿ   ಲಕ್ಷ್ಮಣ ಗೌಡ(70) ಅಲ್ಪಕಾಲದ ಅನಾರೋಗ್ಯದ ಬಳಿಕ  ಶುಕ್ರವಾರ ನಿಧನರಾಗಿದ್ದಾರೆ.  ಮೃತರು ಪತ್ನಿ ಧರ್ನಮ್ಮ, ಮಗ ಯೋಗೀಶ್, ಮಗಳು ಕವಿತಾ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.  ಲಕ್ಷ್ಮಣ ಗೌಡ ಅವರ ನಿಧನಕ್ಕೆ ಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಗೌರವ ಪೂರ್ಣ ಶ್ರದ್ದಾಂಜಲಿ ಸಲ್ಲಿಸಿದೆ ಅವರು ಪಕ್ಷವನ್ನು ಕಟ್ಟಿದ ಹಿರಿಯ ಮುಖಂಡೆಅಗಿದ್ದು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ.ಭಟ್  ಸಂತಾಪ ಸೂಚಿಸಿದ್ದಾರೆ

ಕಡಬ: ಮನೆ ಮೇಲೆ ಮರ ಬಿದ್ದು ಅಪಾರ ಹಾನಿ ಮಹಿಳೆಗೆ ಗಾಯ

0

ಕಡಬ; ಭಾರೀ ಗಾಳಿ ಮಳೆಗೆ ಕಡಬ ತಾಲೂಕಿನ ಬಳ್ಪ ಗ್ರಾಮದ ನೇರ್ಪು ಪರಮೇಶ್ವರ ಗೌಡ ಎಂಬವರ ಮನೆ ಮೇಲೆ ಮರವೊಂದು ಉರುಳಿ ಬಿದ್ದು ಮನೆಗೆ ಅಪಾರ ಹಾನಿಯಾದ ಮನೆಯ ಮೇಲ್ಛಾವಣಿ ಬಹುತೇಕ ಕುಸಿದು ಬಿದ್ದಿದೆಇ ಘಟನೆ ಜು. 31 ರಂದು ವರದಿಯಾಗಿದೆ.ಮನೆಯೊಳಗಿದ್ದ ಪರಮೇಶ್ವರ ಗೌಡರಪತ್ನಿ ಸೀತಮ್ಮ ರವರಿಗೆ ಗಾಯವಾಗಿದ್ದು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ

ಭಾರೀ ಮಳೆ ಮುನ್ಸೂಚನೆ ಆ.1 ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ

0

ಬೆಳ್ತಂಗಡಿ:ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ನಾಳೆ (ಆ. 1ರಂದು) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿ ಕಾಲೇಜಿವರೆಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಘೋಷಿಸಿದ್ದಾರೆ.

ಪಣಂಬೂರು ಬೀಚ್ ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಾಲ್ವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ

0

ಮಂಗಳೂರು; ಸ್ನೇಹಿತನೊಂದಿಗೆ ಯುವಯೊಬ್ಬಳು ತೋಟ ಬೆಂಗ್ರೆ ಬೀಚ್ಗೆ ತೆರಳಿ ಕುಳಿತು ಮಾತನಾಡುತ್ತಿದ್ದ ವೇಳೆ, ಏಳು ಮಂದಿ ಅಪರಿಚಿತರು ಬಂದು ಯುವತಿಯ ಸ್ನೇಹಿತನನ್ನು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿ, ಯುವತಿಯ ಮೇಲೆ ಬಲವಂತವಾಗಿ ಸಾಮೂಹಿಕ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದ ಪ್ರಕರರಣದಲ್ಲಿ ನಾಲ್ವರು ಆರೋಪಿಗಳಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.ಘಟನೆಯ ವಿವರ;2918 ರಲ್ಲಿ ಯುವತಿ ತನ್ನ ಸ್ನೇಹಿತನೊಂದಿಗೆ ಬೀಚ್ ಗೆ ಹೋಗಿದ್ದ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಘಟನೆಯಿಂದ ಭಯಗೊಂಡ ಯುವತಿ ಯಾರಿಗೂ ವಿಷಯ ತಿಳಿಸದೆ...

ಕೊಯ್ಯೂರು ಸಂಜೀವ ಮಲೆಕುಡಿಯ ಅವರಿಗೆ ಬೆಸ್ಟ್ ಫೌಂಡೇಶನ್‌ ವತಿಯಿಂದವೀಲ್‌ಚೇರ್ ಹಸ್ತಾಂತರ

0

ಬೆಳ್ತಂಗಡಿ:ಬೆಸ್ಟ್ ಫೌಂಡೇಶನ್ ವತಿಯಿಂದ ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಲೆಕುಡಿಯರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಮಲೆಕುಡಿಯ ಅವರಿಗೆ ವೀಲ್‌ಚೇರ್ ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ವೀಲ್‌ಚೇರ್ ಅನ್ನು ಹಸ್ತಾಂತರಿಸಿ, ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವಾಗುವ ಸೇವಾ ಕಾರ್ಯಗಳನ್ನು ಬೆಸ್ಟ್ ಫೌಂಡೇಶನ್ ಮುಂದುವರಿಸಿಕೊಂಡು ಹೋಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಗೌಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ನವೀನ್ ಗೌಡ ಸಮಾಜಸೇವಕ ಮಹಮ್ಮದ್...

ಉಜಿರೆ-ಕನ್ಯಾಡಿ ರಸ್ತೆಯಲ್ಲಿ ಅಪಘಾತ: ಸ್ಕೂಟರ್‌ ಗೆ ಡಿಕ್ಕಿ ಹೊಡೆದು ಅಪರಿಚಿತ ವಾಹನ ಪರಾರಿ

0

ಬೆಳ್ತಂಗಡಿ: ಉಜಿರೆ-ಕನ್ಯಾಡಿ ರಸ್ತೆಯಲ್ಲಿ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಗಾಯಗೊಂಡ ಘಟನೆ ನಡೆದಿದೆ. ಅಪರಿಚಿತ ವಾಹನವು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡ ಸ್ಕೂಟರ್ ಸವಾರರನ್ನು ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ ಬಾಲಕೃಷ್ಣ (32) ಎಂದು ಗುರುತಿಸಲಾಗಿದೆ. ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತಕ್ಕೆ ಕಾರಣವಾದ ವಾಹನದ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ : ಕುವೆಟ್ಟುನಲ್ಲಿ ಪೊಲೀಸರಿಂದ ಮಾದಕವಸ್ತು ಬೇಟೆ; ಒರ್ವನ ಬಂಧನ ಗಾಂಜಾ ಎಂಡಿಎಂಎ‌ ವಶಕ್ಕೆ

0

ಬೆಳ್ತಂಗಡಿ : ಅಕ್ರಮವಾಗಿ ಮಾದಕವಸ್ತು ಖರೀದಿಸಿ ಮಾರಾಟ ಮಾಡಲು ಯತ್ನಿಸುತ್ತಿರುವಾಗ ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕವಸ್ತು ಗಾಂಜಾ ಮತ್ತು ಎಮ್.ಡಿ.ಎಮ್.ಎ (MDMA) ಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು ಇಂದು ದುಬೈಗೆ ಉದ್ಯೋಗಕ್ಕೆ ಹೋಗಬೇಕಾದ ಓರ್ವ ಯುವಕ ಜೈಲುಪಾಲಾಗಿದ್ದಾನೆ.ಬಂಧಿತ ಆರೋಪಿ ಕುವೆಟ್ಟು ಗ್ರಾಮದ ಸುಣ್ಣತ್ ಕೆರೆ ನಿವಾಸಿ ತ್ವಲಹ್ @ ಅನ್ಸಾರ್(21) ಎಂಬಾತನಾಗಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಆನಂದ್ ಎಂ ಹಾಗೂ ಸಿಬ್ಬಂದಿ ಜುಲೈ 29ರಂದು ರಾತ್ರಿ ಸುಮಾರು 8 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ...

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ.

0

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾರಾವಿ ಶ್ರೀ ಬ್ರಹ್ಮಬೈದರ್ಕಳ ಗರಡಿ ರೂ. 1 ಕೋಟಿ, ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನ ರೂ. 1 ಕೋಟಿ, ಮಚ್ಚಿನ ಮಾಣೂರು ಸಹಪರಿವಾರ ಶ್ರೀ ಶಾಸ್ತರ ದೇವಸ್ಥಾನ ರೂ. 50 ಲಕ್ಷ, ಕೊಯ್ಯೂರು ದೆಂತ್ಯಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ರೂ. 50 ಲಕ್ಷ ಒಟ್ಟು 3 ಕೋಟಿ ವೆಚ್ಚದಲ್ಲಿ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಡಾ. ಜಿ. ಪರಮೇಶ್ವರವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ […]

31 ವರ್ಷಗಳ ವಿಶ್ವಾಸದ ಪಯಣ: ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ವಿಡಿಯಂ ಸರ್ವಿಸ್ ಕ್ಯಾಂಪ್‌ಗೆ ಚಾಲನೆ, ಸಮಾಜ ಸೇವೆಗೆ ಆಧ್ಯತೆ ಶ್ಲಾಘನೀಯ: ಡಿವೈಎಸ್ಪಿ ರೋಹಿಣಿ ಸಿ.ಕೆ

0

ಬೆಳ್ತಂಗಡಿ: ಕಳೆದ 31 ವರ್ಷಗಳಿಂದ ಗುಣಮಟ್ಟದ ಉತ್ಪನ್ನಗಳು ಮತ್ತು ಅತ್ಯುತ್ತಮ ಗ್ರಾಹಕ ಸೇವೆಯ ಮೂಲಕ ಬೆಳ್ತಂಗಡಿ ಭಾಗದ ಜನರ ವಿಶ್ವಾಸ ಗಳಿಸಿರುವ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯಲ್ಲಿ ವಿಡಿಯಂ ಕಂಪನಿಯ ವಿಶೇಷ ಸರ್ವಿಸ್ ಕ್ಯಾಂಪ್‌ಗೆ ಜು 29ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ರೋಹಿಣಿ ಸಿ.ಕೆ ಅವರು ಬೆಳ್ತಂಗಡಿಯ ಜನರು ಎಲ್ಲರೂ ಒಗ್ಗಟ್ಟಿನಿಂದ ಊರಿನ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಬೆಳವಣಿಗೆ.ಸಮಾಜಮುಖಿ ಚಿಂತನೆಯೊಂದಿಗೆ ಸಾಗುತ್ತಿರುವ ಸೋಜಾ ಸಂಸ್ಥೆಯ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು. ರೂರಲ್ ಡೆವಲಪ್ಮೆಂಟ್ ಸೊಸೈಟಿಯ...