ಕಡಿರುದ್ಯಾವರದಲ್ಲಿ ಸಲಗನ ಹಾವಳಿ ಕೃಷಿ ನಾಶ
ಬೆಳ್ತಂಗಡಿ:ಕಡಿರುದ್ಯಾವರ ಗ್ರಾಮದ ಹಲವು ಕಡೆ ಒಂಟಿ ಸಲಗ ತೋಟಗಳಿಗೆ ದಾಳಿ ನಡೆಸಿ ಕೃಷಿ ಹಾನಿ ಉಂಟುಮಾಡಿದೆ.ಭಾನುವಾರ ತಡರಾತ್ರಿ ಇಲ್ಲಿನ ಬಸವದಡ್ಡು ಶಂಕರ್ ಭಟ್,ನಡ್ತಂಡ ಮಹೇಶ್ ಭಟ್, ನೀಲಯ್ಯ ಗೌಡ ,ಪ್ರವೀಣ್ ಗೌಡ ಮೊದಲಾದವರ ತೋಟಗಳಿಗೆ ನುಗ್ಗಿದ ಸಲಗ ಅಡಕೆ,ಬಾಳೆ ಗಿಡಗಳನ್ನು ಮುರಿದು ಹಾಕಿದೆ.ರಾಮಚಂದ್ರ ಗೌಡ ಎಂಬವರ ಸಾಕು ನಾಯಿ ಆನೆ ಬಳಿ ಬೊಗಳುತ್ತ ಹೋಗಿದ್ದು ಈ ಸಮಯ ಆನೆ ಅವರ ಮನೆ ತನಕ ನಾಯಿಯನ್ನು ಓಡಿಸಿದ್ದು,ಅಂಗಳದಲ್ಲೇ ನಿಂತು ಘೀಳಿಟ್ಟಿದೆ.ಈ ವೇಳೆ ಮನೆಯವರು ಭೀತ ರಾದ ಘಟನೆಯೂ ನಡೆಯಿತು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕಾಡಾನೆಗಳ ಅಟ್ಟಹಾಸವೂ...
ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯಿ ಗೆ ಶಾಸಕ ಹರೀಶ್ ಪೂಂಜ ಅವರಿಂದ ಅಭಿನಂದನೆ
ಬೆಳ್ತಂಗಡಿ; ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಇಲ್ಲಿನ ವಿದ್ಯಾರ್ಥಿ ಚಿನ್ಮಯಿ ಜಿ.ಕೆ ಇವರನ್ನು ಶಾಸಕರಾದ ಹರೀಶ್ ಪೂಂಜರವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಎಂ ಪಾರೆಂಕಿ ಮತ್ತು ಜಯಾನಂದ ಗೌಡರವರು ಉಪಸ್ಥಿತರಿದ್ದರು
ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ ಬ್ಯಾಂಕ್ ಖಾತೆಯಿಂದ 3.14ಲಕ್ಷ ನಗದು ಅಪಹರಣ
ಬೆಳ್ತಂಗಡಿ; ಉಜಿರೆಯ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಯಿಂದ ಅಪರಿಚಿತರು 3.14 ಲಕ್ಷ ನಗದನ್ನು ಅಪಹರಿಸಿದ ಘಟನೆ ನಡೆದಿದ್ದು ಘಟನೆಯ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಉಜಿರೆ ಬಿ.ಎನ್.ವೈ ಎಸ್ ಕಾಲೇಜಿನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ ಯಾಗಿರುವಪ್ರದೀಪ್ ಸುರೇಶ್ ರೂಗಿ ಎಂಬವರೇ ಹಣ ಕಳೆದು ಕೊಂಡವರಾಗಿದ್ದಾರೆ.ಇವರ ಊರಾದ ಗುಲ್ಬರ್ಗ ಜಿಲ್ಲೆಯ ಅಫ್ಜಲ್ ಪುರದ ಯೂನಿಯನ್ ಬ್ಯಾಂಕಿನಖಾತೆಯಿಂದ ಹಣ ಅಪಹರಿಸಲಾಗಿದೆ.ಮೇ 23 ರ ವರೆಗೆ ಇವರ ಖಾತೆಯಲ್ಲಿ ಹಣವಿತ್ತು. ರಾತ್ರಿ 8.30 ರಬಳಿಕ ಇವರ ಮೊಬೈಲ್ ಗೆ ಎಸ್. ಎಂ.ಎಸ್.ಗಳು ಬಂದಿದ್ದು,...
ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ವತಿಯಿಂದ ಎಸ್.ಎಸ್.ಎಲ್.ಸಿ ಉತ್ತಮ ಅಂಕ ಪಡೆದ ಬೆಳ್ತಂಗಡಿ ವಿದ್ಯಾರ್ಥಿ ಸಿಮ್ರಾ ಪರ್ವೀನ್ ಳಿಗೆ ಸನ್ಮಾನ
ಬೆಳ್ತಂಗಡಿ; 2024-25ನೇ ಸಾಲಿನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 613 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬೆಳ್ತಂಗಡಿ ಸಂಜಯ ನಗರ ನಿವಾಸಿ ಅಡ್ವೋಕೇಟ್ ಶೌಕತ್ ಆಲಿ ಹಾಗೂ ಸಫೀಯಾ ದಂಪತಿಗಳ ಮಗಳಾದ "ಸಿಮ್ರಾ ಪರ್ವೀನ್" ಅವರಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಬೆಳ್ತಂಗಡಿ ಸಮಿತಿ ವತಿಯಿಂದ ಮನೆಗೆ ತೆರಳಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಸಮಿತಿ ಅಧ್ಯಕ್ಷರಾದ ಶಮಾ ಆಲಿ ಉಜಿರೆ, ಕಾರ್ಯದರ್ಶಿ ನಸೀಮಾ ಬೆಳ್ತಂಗಡಿ, ಕೋಶಾಧಿಕಾರಿ ಹಸೀನಾ ಅಕ್ಬರ್, ಸಮಿತಿ ಸದಸ್ಯರಾದ ಅಡ್ವೋಕೇಟ್ ಅಸ್ಮಾ ಬೆಳ್ತಂಗಡಿ, ಝೈನಬಾ...
ಉಜಿರೆಯಲ್ಲಿ ವಸಂತ ಬಂಗೇರರಿಗೆ ನುಡಿನಮನ. ನಾರಾಯಣ ಗುರುಗಳ ಚಿಂತನೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಬಂಗೇರರಿಗೆ ಸಲ್ಲುತ್ತದೆ.- ರಕ್ಷಿತ್ ಶಿವರಾಮ್.
ಉಜಿರೆ: ಇಲ್ಲಿನ ಬಿಲ್ಲವ ಸಂಘ ಹಾಗೂ ಯುವ ವಾಹಿನಿ ಸಂಘಟನೆಯ ನೇತೃತ್ವದಲ್ಲಿ,ಮಾಜಿ ಶಾಸಕರಾದ ಕೆ.ವಸಂತ ಬಂಗೇರರ ನುಡಿ ನಮನ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ಪಿ.ಸಿ.ಸಿ.ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ,'ನಾರಾಯಣ ಗುರುಗಳ ಚಿಂತನೆಯನ್ನು ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಅನುಷ್ಠಾನ ಗೊಳಿಸಿದ ಕೀರ್ತಿ ಬಂಗೇರರಿಗೆ ಸಲ್ಲುತ್ತದೆ.ಬಂಗೇರರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೊನೆಯುಸಿರು ಇರುವರೆಗೂ ಪ್ರಯತ್ನಿಸುತ್ತಿದ್ದರು. ವಿದ್ಯಾ ಸಂಸ್ಥೆಯನ್ನು ಕಟ್ಟಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುವ ಮೂಲಕ ಬಡ ಮಕ್ಕಳ ಕನಸಿಗೆ ಬಲ ತುಂಬಿದರು. ಕನ್ಯಾಡಿಯ ರಾಮ ಮಂದಿರ...
ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು, ಪ್ರಕರಣ ದಾಖಲು
ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಬೈಕ್ ನಿಲ್ಲಿಸಿ ದೇವರ ದರ್ಶನ ಪಡೆದು ಹಿಂತಿರುಗುವ ವೇಳೆಗೆ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿದ ಘಟನೆಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೈಂದೂರು ನಿವಾಸಿ ಮುತ್ತಯ್ಯ ಆಚಾರಿ ಎಂಬವರು ಈಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಮೇ 24ರಂದು ತನ್ನ ಮೋಟಾರ್ ಸೈಕಲ್ k.A 20EJ 3502 ರಲ್ಲಿ ಮಗ ದಿನೇಶ ನೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದಾರೆ. ಇವರೊಂದಿಗೆ ಇನ್ನೂ ಹಲವರು ಬೈಕ್ ಗಳಲ್ಲಿಯೇ ಬಂದಿದ್ದುಎಲ್ಲರೂ ಬೈಕ್ ಗಳನ್ನು ನಿಲ್ಲಿಸಿ ದೇವರ ದರ್ಶನಕ್ಕೆ ತೆರಳಿದ್ದು ಹಂತಿರುಗಿ...
ಕೊಯ್ಯೂರು ಸೇತುವೆ ತಡೆಗೋಡೆಗೆ ಬಸ್ ಡಿಕ್ಕಿ ; ಪ್ರಯಾಣಿಕರು ಅಪಾಯದಿಂದ ಪಾರು
ಬೆಳ್ತಂಗಡಿ : ಕೊಯ್ಯರು ಸಮೀಪದ ಕಾಂತಾಜೆ ಎಂಬಲ್ಲಿ ತಿರುವಿನ ಸೇತುವೆ ತಡೆ ಗೋಡೆಗೆ ಸರಕಾರಿ ಬಸ್ ಡಿಕ್ಕಿಯಾದ ಘಟನೆ ಮೇ.26 ಬೆಳಿಗ್ಗೆ ನಡೆಯಿತು. ಪ್ರಯಾಣಿಕರು ಅದೃಷ್ಟ ವಶಾತ್ ಅಪಾಯದಿಂದ ಪಾರಾಗಿದ್ದಾರೆ ಬಂದಾರುನಿಂದ ಹೊರಟು ಕೊಯ್ಯರು ಮಾರ್ಗವಾಗಿ ಬೆಳ್ತಂಗಡಿಗೆ ಹೋಗುವ ಸರಕಾರಿ ಬಸ್ಸು ನಲ್ಲಿ ಸುಮಾರು 25 ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದರು. ಚಾಲಕ ಅತೀ ವೇಗವಾಗಿ ಬಸ್ ಚಲಾಯಿಸುವ ವೇಳೆಗೆ ಕೊಯ್ಯರು ಸಮೀಪದ ಕಾಂತಾಜೆ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ದೊಡ್ಡ ತೋಡಿನ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದೆ. ತಡೆಗೋಡೆ ಮುರಿದರೂ ಬಸ್ ಅಲ್ಲಿಯೇ ನಿಂತಿದೆ....
ಬೆಳ್ತಂಗಡಿ : ನಂದಿಬೆಟ್ಟದಲ್ಲಿ ಮನೆಯ ಕೆರೆಗೆ ಜಾರಿ ಬಿದ್ದು ನವ ವಿವಾಹಿತ ಸಾವು
ಬೆಳ್ತಂಗಡಿ : ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತ ಮನೆಯ ಕೆರೆಗೆ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಮೇ.25 ರಂದು ರಾತ್ರಿ ಬೆಳ್ತಂಗಡಿಯ ನಂದಿಬೆಟ್ಟದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಹೊಸಹೊಕ್ಲು ನಿವಾಸಿ ಸದಾಶಿವ ಶೆಟ್ಟಿಯ ಒಬ್ಬನೇ ಮಗನಾಗಿರುವ ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಕೃಷಿ ಕೆಲಸ ಮಾಡಿಕೊಂಡಿರುವ ಶೈಲೇಶ್ ಶೆಟ್ಟಿ(38) ಎಂಬವರು ತನ್ನ ಮನೆಯ ಕೆರೆಗೆ ಮೇ.25 ರಂದು ರಾತ್ರಿ ಸುಮಾರು 8:30 ಕ್ಕೆ ಜಾರಿ ಬಿದ್ದು ಕೆಸರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ...
ಬಂಗೇರರಲ್ಲಿ ಹೊರಗೆ ಕಠೋರವಾದ ಹೊದಿಕೆ ಇತ್ತು. ಒಳಗೆ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು; ರಮೇಶ್ ಕುಮಾರ್
ಬೆಳ್ತಂಗಡಿ : ‘ವಸಂತ ಬಂಗೇರರಲ್ಲಿ ಹೊರಗೆ ಕಠೋರವಾದ ಹೊದಿಕೆ ಇತ್ತು. ಆದರೆ ಅವರು ಬಹಳ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು. ಅವರ ಮರಣದ ಬಳಿಕವೂ ಅವರಿಗೆ ಇಷ್ಟೊಂದು ಗೌರವ, ಪ್ರೀತಿ ಸಿಗುತ್ತಿದೆಯೆಂದರೆ ಅವರು ಈ ಭಾಗದ ದೇವರಾಜ ಅರಸು ಆಗಿದ್ದಾರೆ’ ಎಂದು ವಿಧಾನ ಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದರು. ಅವರು ಶನಿವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಈಚೆಗೆ ನಿಧನರಾದ ಮಾಜಿ ಶಾಸಕ ಕೆ ವಸಂತ ಬಂಗೇರರಿಗೆ ಸಾವಿರದ ನುಡಿನಮನಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‘ವಸಂತ...
ಜೈನ ಬಸದಿಗಳ ಅಭಿವೃದ್ಧಿಗೆ ಇರುವ ಸಮಸ್ಯೆಗಳನ್ನು ಬಗೆ ಹರಿಸಲು ಮುಖ್ಯಮಂತ್ರಿ ಯವರಿಗೆ ಮನವಿ
ಬೆಳ್ತಂಗಡಿ; ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಗೌರವಾನ್ವಿತ ಸಿದ್ದರಾಮಯ್ಯನವರನ್ನು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭೇಟಿ ಮಾಡಿ ಜೈನ ಬಸದಿಗಳ ಅಭಿವೃದ್ಧಿಗಳ ಬಗ್ಗೆ ಇರುವ ಸಮಸ್ಯೆಗಳನ್ನು ಗಮನಕ್ಕೆ ತರಲಾಯಿತು.ಈ ಸಂದರ್ಭದಲ್ಲಿ ನಾಭಿರಾಜ್ ಜೈನ್. ಬೆಂಗಳೂರು. ಡಾ. ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ. ಸುದರ್ಶನ್ ಜೈನ್ ಬಂಟ್ವಾಳ. ವಿಜಯಕುಮಾರ್ ಕಾರ್ಯತ್ತಡ್ಕ. ಧನ ಕೀರ್ತಿ ಶೆಟ್ಟಿ, ಧರ್ಮಸ್ಥಳ , ಶಶಿಕಿರಣ್ ಜೈನ್ ಬೆಳ್ತಂಗಡಿ, ಪಣಿರಾಜ್ ಜೈನ್ ಕೊಕ್ಕಡ, ಪ್ರಜ್ವಲ್ ಜೈನ್ ಅಳದoಗಡಿ ಮುಂತಾದವರಿದ್ದರು.















