ಸಫರೇ ತಕ್ರೀಮ್ ; ಕಾಜೂರಿನಲ್ಲಿ ಚಾಲನೆ
ಕಾಜೂರು : ದರ್ಸ್ ರಂಗದಲ್ಲಿ ನಾಲ್ಕು ದಶಕ ಪೂರೈಸಿದ ಅಸ್ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರಿಗೆ ಶಿಷ್ಯಂದಿರು ನೀಡುವ 'ಅತ್ತಕ್ರೀಮ್' ಗೌರವಾರ್ಪಣೆಯ ಪ್ರಚಾರಾರ್ಥ ಮದನೀಯಂ ಅಬ್ದುಲ್ಲತೀಫ್ ಸಖಾಫಿ ಮುನ್ನಡೆಸುವ 'ಸಫರೇ ತಕ್ರೀಮ್' ಗೆ ಕಾಜೂರು ದರ್ಗಾ ವಠಾರದಲ್ಲಿ ಚಾಲನೆ ನೀಡಲಾಯಿತು. ಕಾಜೂರು ಮುದರ್ರಿಸ್ ತೌಸೀಫ್ ಸಅದಿ ಹರೇಕಳ ಝಿಯಾರತ್ ನೇತೃತ್ವ ನೀಡಿದರು. ನಂತರ ಮಾತನಾಡಿದ ಅಬ್ದುಲ್ಲತೀಫ್ ಸಖಾಫಿ, ಹಸನುಲ್ ಅಹ್ದಲ್ ತಂಙಳರವರು ಸೇವಾ ಬದುಕಿಗೆ ಕಾಲಿಟ್ಟದ್ದು ಈ ಕಾಜೂರಿನಿಂದಲೇ. ಆ ಕಾರಣದಿಂದಲೇ ಈ ಯಾತ್ರೆಗೆ ಕಾಜೂರನ್ನೇ ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮದ ಯಶಸ್ವಿಗೆ ನಿಮ್ಮೆಲ್ಲರ...
ಬೆಳ್ತಂಗಡಿ : ಸರಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ ಹಾಗೂ ದಂಡ ಪ್ರಕಟ
ಬೆಳ್ತಂಗಡಿ: ಸರಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ ಹಾಗೂ ದಂಡ ಪ್ರಕಟವಾಗಿದೆ.ದಿನಾಂಕ: 20-12-2022 ರಂದು ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ವಿಜಯ್ ಎಂಬವರು ತನ್ನ ಬೈಕ್ ನಲ್ಲಿ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಕಕ್ಕೇನಾ ಎಂಬಲ್ಲಿ ಎದುರಿನಿಂದ ಬಂದ ಕೆಎಸ್ ಆರ್ಟಿಸಿ ಬಸ್ ಡಿಕ್ಕಿಯಾಗಿ ವಿಜಯ್ ಅವರಿಗೆ ಗಂಭೀರ ಗಾಯವಾಗಿತ್ತು. ವಿಜಯ್ ಅವರ ತಲೆಗೆ, ಮುಖಕ್ಕೆ, ತೀವ್ರ ಗಾಯವಾಗಿದ್ದರಿಂದ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ...
ಕುತ್ಲೂರು;ಆದಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಬೆಳ್ತಂಗಡಿ; ಕಳೆದ 2 ವರ್ಷಗಳ ಹಿಂದೆ ಆದಿವಾಸಿಗಳಿಗಿದ್ದ ಏಕೈಕ ಸಂಪರ್ಕ ರಸ್ತೆಯ ಮದ್ಯದ ಸೇತುವೆ ಮುರಿದು ಬಿದ್ದರೂ ಹೊಸ ಸೇತುವೆ ನಿರ್ಮಿಸದೆ ಇರುವ ಸರಕಾರದ ನಿರ್ಲಕ್ಷ ಅತ್ಯಂತ ಖಂಡನೀಯವಾಗಿದೆ, ಅದನ್ನು ತಕ್ಷಣ ಪುನರ್ನಿರ್ಮಿಸಿಕೊಡಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಗ್ರಹಿಸಿದರುಅವರು ನಾರಾವಿ ಗ್ರಾಮ ಪಂಚಾಯತು ಎದುರು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಅರಣ್ಯವನ್ನೂ ರಕ್ಷಿಸುತ್ತಾ, ಪರಿಸರ ಸಂರಕ್ಷಿಸುತ್ತಾ ತಮ್ಮ ಕಾಡಲ್ಲೆ ತಮ್ಮ ಬದುಕು ಕಟ್ಟಿಕೊಂಡ ಆದಿವಾಸಿಗಳು ಇಂದು ಅರಣ್ಯದಲ್ಲಿ ವಾಸಿಸುವುದೇ ಸರಕಾರಕ್ಕೆ...
ಡಿ. ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ – ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಮತ್ತು ಕ್ರಿಸ್ಮಸ್ ಆಚರಣೆ
ಬೆಳ್ತಂಗಡಿ;ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಡಿಸೆಂಬರ್ 21 ರಂದು ಕ್ರಿಸ್ಮಸ್ ಆಚರಣೆಯನ್ನು ಬೆಳ್ತಂಗಡಿ, ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.ಸೈಂಟ್ ಥೋಮಸ್ ಚರ್ಚ್ಗಂಡಿಬಾಗಿಲು ಧರ್ಮಗುರುಗಳಾದ ವಂದನೀಯ ಫಾ. ಜೋಸ್ ಆಯಾಂಕುಡಿ ಇವರು ಈ ಕಾರ್ಯಕ್ರಮದ ಪ್ರಾರಂಭದ ಸವಿನೆಪುಗಳನ್ನು ನೆನಪಿಸಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಸಂದೇಶ ನೀಡಿದರು. ಸೈಂಟ್ ತೋಮಸ್ ಪ್ರೌಡಶಾಲೆ ಗಂಡಿಬಾಗಿಲು ಇಲ್ಲಿಯ ಪ್ರಾಧ್ಯಾಪಕಾರದ ಥೋಮಸ್ಪಿ. ಎ ಹಾಗೂ ಸ್ನೇಹಕಿರಣ್ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದಏಲೀಯಮ್ಮ ತೋಮಸ್ ಇವರು ಆಹಾರ ಕಿಟ್ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಸಿಸ್ಟರ್ ಸೆಲಿನ್ ಮದರ್...
ಮಹಿಳಾ ಕಾಂಗ್ರೆಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಝೀನತ್ ಉಜಿರೆ ನೇಮಕ
ಬೆಳ್ತಂಗಡಿ. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ರೆಡ್ಡಿ ರವರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಝೀನತ್ ಉಜಿರೆ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಶಾಲೆಟ್ ಪಿಂಟೋ ಇವರು ನೇಮಕ ಮಾಡಿದ್ದಾರೆ. ಶ್ರೀಮತಿ ಝೀನತ್ ಉಜಿರೆ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಕಾರ್ಯದರ್ಶಿಯಾಗಿ ಪ್ರಸ್ತುತ ಅಧ್ಯಕ್ಷರಾಗಿ ಮತ್ತು ಉಜಿರೆ ವರ್ತಕರ ಸಂಘದ ಸದಸ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ದಯಾ ವಿಶೇಷ ಶಾಲೆಯಲ್ಲಿ ಪತ್ರಕರ್ತ ರೊಂದಿಗೆ ಕ್ರಿಸ್ಮಸ್ ಹಬ್ಬ ಆಚರಣೆ
ಬೆಳ್ತಂಗಡಿ; ಕಪುಚಿನ್ ಕೃಷಿಕ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿಪತ್ರಕರ್ತರೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ವಂ.ಫಾ.ವಿನೋದ್ ಮಸ್ಕರೇನಸ್ರವರು ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದರು, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಶ್ರೀಯುತ. ಶಿಬಿ ಧರ್ಮಸ್ಥಳರವರು ಮುಖ್ಯಅತಿಥಿಗಳಾಗಿ ಆಗಮಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯಾದ ದಿವ್ಯಾ ವಿ.ಟಿ ಹಾಗೂ ಶಾಲಾ ಮಕ್ಕಳಪ್ರತಿನಿಧಿಯಾಗಿ ಮಾಸ್ಟರ್ ಗಗನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿಬಿ ಧರ್ಮಸ್ಥಳರವರು ಮಾತನಾಡಿ ಇಂದು ಈಕಾರ್ಯಕ್ರಮಕ್ಕೆ ಪತ್ರಕರ್ತರ ಸಂಘದ ಎಲ್ಲಾ ಸದಸ್ಯರನ್ನು ಸ್ವಾಗತಿಸಿದ ಸಂಸ್ಥೆಯ ಮುಖ್ಯಸ್ಥರಿಗೂ ಹಾಗೂ ಎಲ್ಲರನ್ನೂವಂದಿಸಿದರು. ಈ ಮಕ್ಕಳ ಸಂತಸ ಸಡಗರ...
ಬೆಳ್ತಂಗಡಿ :ಅಕ್ರಮವಾಗಿ ಕಬ್ಬಿಣದ ಗುಜರಿ ವಸ್ತು ಸಾಗಾಟ ವಾಣಿಜ್ಯ ತೆರಿಗೆ ಇಲಾಖೆ ಯಿಂದ ಲಾರಿ ವಶ
ಬೆಳ್ತಂಗಡಿ : ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಬ್ಬಿಣ ಸಾಗಿಸುತ್ತಿದ್ದ (ಗುಜರಿ) ಲಾರಿಯನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದು, ಈ ವೇಳೆ ಲಾರಿ ಚಾಲಕ ಚಿಕ್ಕಮಗಳೂರಿನ ರಾಜು ಜಿ.ಎಂಬಾತ ವಾಹನ ಬಿಟ್ಟು ಪರಾರಿಯಾಗಿದ್ದು ವಾಹನವನ್ನು ಬೆಳ್ತಂಗಡಿ ಪೊಲೀಸರ ವಶಕ್ಕೆ ನೀಡಿದ್ದಾರೆ.ಬೆಳ್ತಂಗಡಿ ನಗರದ ಹಳೆಪೇಟೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಲಾರಿಯಲ್ಲಿ ಕಬ್ಬಿಣದ ವಸ್ತುಗಳನ್ನು (ಗುಜರಿ) ಗುರುವಾಯನಕೆರೆಯಿಂದ ಬೆಳ್ತಂಗಡಿ ಕಡೆಗೆ ಸಾಗಿಸುತ್ತಿದ್ದಾಗ ಡಿ.16 ರಂದು ರಾತ್ರಿ ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಸಹಾಯಕ ಅಯುಕ್ತ ಜಾರಿ-1 ಸತೀಶ್ ಬಟ್ವಾಡಿ ನೇತೃತ್ವದ ತಂಡ...
ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ಮಡಂತ್ಯಾರು ನಲ್ಲಿ ಅಮಿತ್ ಶಾ ವಿರುದ್ಧ ಎಸ್ಡಿಪಿಐ ಪ್ರತಿಭಟನೆ
ಬೆಳ್ತಂಗಡಿ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಕಣಿಯೂರು ಬ್ಲಾಕ್ ಸಮಿತಿ ವತಿಯಿಂದ ಅಂಬೇಡ್ಕರ್ ಕುರಿತಾದ ಹೇಳಿಕೆ ಖಂಡಿಸಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಮಡಂತ್ಯಾರು ಜಂಕ್ಷನ್ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು. ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ನಾಯಕರಾದ ನವಾಝ್ ಕಟ್ಟೆ, ಅಮಿತ್ ಶಾ ಅವರಿಗೆ ಗೃಹ ಸಚಿವರಾಗುವ ಅರ್ಹತೆ ಇಲ್ಲ. ಇಂತಹ ವ್ಯಕ್ತಿಗೆ ಗೃಹ ಸಚಿವ ಸ್ಥಾನದಂತಹ ಉನ್ನತ ಹುದ್ದೆ ನೀಡಲಾಗಿದೆ. ಅಂಬೇಡ್ಕರ್ ಬಗ್ಗೆ ಬಿಜೆಪಿಗೆ ಇರುವ ಭಾವನೆ ಅಮಿತ್ ಶಾ ಮೂಲಕ ಹೊರಬಿದ್ದಿದೆ....
ಮಂಗಳೂರು ಜೈಲಿನಲ್ಲಿ ಬೆಳ್ತಂಗಡಿ ನಿವಾಸಿ ವಿಚಾರಣಾಧೀನ ಕೈದಿಯ ಮೇಲೆ ಹಲ್ಲೆ; ಪ್ರಕರಣ ದಾಖಲು
ಮಂಗಳೂರು, : ಪೋಕ್ಸೊ ಆರೋಪದಲ್ಲಿ ಜೈಲು ಸೇರಿದ್ದ ಬೆಳ್ತಂಗಡಿ ತಾಲೂಕಿನ ಅಜಿಕುರಿ ನಿವಾಸಿಯಾಗಿರುವ ವಿಚಾರಣಾಧೀನ ಕೈದಿಯ ಮೇಲೆ ಜೈಲಿನ ಸಹ ಕೈದಿಯು ತಿಂಗಳ ಹಿಂದೆ ಹಲ್ಲೆ ನಡೆಸಿದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಯಾಗಿದ್ದ ಸಫ್ಘಾನ್ (18) ಎಂಬಾತನ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ನಲ್ಲಿ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಆರೋಪಿ ಸಫ್ಘಾನ್ ನ್ಯಾಯಾಂಗ ಬಂಧನದಲ್ಲಿದ್ದ. ಈ ಸಂದರ್ಭ ಬೆಳ್ತಂಗಡಿಯ ರಿಝಾನ್ ಎಂಬಾತ ಸಫಾನ್ಗೆ ಹಲ್ಲೆಗೈದಿದ್ದ ಎನ್ನಲಾಗಿದೆ. ಇದಾದ ಬಳಿಕ ಆತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ. ನ.28ರಂದು...
ತೋಟತ್ತಾಡಿ; ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ; ತೋಟತ್ತಾಡಿ ಗ್ರಾಮದ ದರ್ಖಾಸು ಮನೆ ನಿವಾಸಿ ಬಾಬುಗೌಡ (54)ಎಂಬವರು ತಮ್ಮ ಮನೆಯ ಸಮೀಪದ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಡಿ 18ರಂದು ರಾತ್ರಿಯ ವೇಳೆ ಇವರ ಮೃತದೇಹ ಮನೆಯ ಸಮೀಪದ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು ಎನ್ನಲಾಗಿದ್ದು ಬ್ಯಾಂಕ್ ಗಳಿಂದಪಡೆದ ಸಾಲಗಳನ್ನು ಕಟ್ಟಲು ಸಾಧ್ಯವಾಗಿರಲಿಲ್ಲ ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನಾನಿಸಲಾಗಿದೆ















