Home ಅಪರಾಧ ಲೋಕ ಮಂಗಳೂರು ಜೈಲಿನಲ್ಲಿ ಬೆಳ್ತಂಗಡಿ ನಿವಾಸಿ  ವಿಚಾರಣಾಧೀನ ಕೈದಿಯ ಮೇಲೆ ಹಲ್ಲೆ; ಪ್ರಕರಣ ದಾಖಲು

ಮಂಗಳೂರು ಜೈಲಿನಲ್ಲಿ ಬೆಳ್ತಂಗಡಿ ನಿವಾಸಿ  ವಿಚಾರಣಾಧೀನ ಕೈದಿಯ ಮೇಲೆ ಹಲ್ಲೆ; ಪ್ರಕರಣ ದಾಖಲು

48
0

ಮಂಗಳೂರು, : ಪೋಕ್ಸೊ ಆರೋಪದಲ್ಲಿ ಜೈಲು ಸೇರಿದ್ದ ಬೆಳ್ತಂಗಡಿ ತಾಲೂಕಿನ ಅಜಿಕುರಿ ನಿವಾಸಿಯಾಗಿರುವ ವಿಚಾರಣಾಧೀನ ಕೈದಿಯ ಮೇಲೆ ಜೈಲಿನ ಸಹ ಕೈದಿಯು ತಿಂಗಳ ಹಿಂದೆ ಹಲ್ಲೆ ನಡೆಸಿದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಯಾಗಿದ್ದ ಸಫ್ಘಾನ್ (18) ಎಂಬಾತನ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್‌ನಲ್ಲಿ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಆರೋಪಿ ಸಫ್ಘಾನ್‌ ನ್ಯಾಯಾಂಗ ಬಂಧನದಲ್ಲಿದ್ದ. ಈ ಸಂದರ್ಭ ಬೆಳ್ತಂಗಡಿಯ ರಿಝಾನ್ ಎಂಬಾತ ಸಫಾನ್‌ಗೆ ಹಲ್ಲೆಗೈದಿದ್ದ ಎನ್ನಲಾಗಿದೆ. ಇದಾದ ಬಳಿಕ ಆತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ.

ನ.28ರಂದು ಸಫಾನ್ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆ ಗೊಂಡಿದ್ದು, ಆ ಬಳಿಕ ಆತ ಪರೀಕ್ಷೆ ಬರೆದಿದ್ದ.
ಇದೀಗ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಜೈಲಿನಲ್ಲಿ ನಡೆದ ಹಲ್ಲೆಯಿಂದ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಆರೋಪಿಸಿ ಸಫಾನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲದೆ ಸಫಾನ್ ನೀಡಿದ ದೂರಿನಂತೆ ಇದೀಗ ಬರ್ಕೆ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೈಲಿನಲ್ಲಿ ಸಫಾನ್ ಮೇಲೆ ಸೇಡು ತೀರಿಸಲು ರಿಜಾನ್ ಎಂಬಾತನ ಮೂಲಕ ಹಲ್ಲೆ‌ನಡೆಸಲಾಗಿದೆ ಎಂದು ಇದೀಗ ಸಫಾನ್ ಮನೆಯವರು ಆರೋಪಿಸುತ್ತಿದ್ದು ಘಟನೆಯ ಬಗ್ಗೆ ಸಮರ್ಪಕವಾದ ತನಿಖೆ ನಡೆಸುವಂತೆ ಹಲ್ಲೆಗೆ ಒಳಗಾದ ಸಫಾನ್ ನ ತಂದೆ ಎಲ್. ಹಕ್ಕೀಂ ಅಜಿಕುರಿ ಒತ್ತಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here