ಸಸಿಕಾಂತ್ ಸೆಂಥಿಲ್ ಗೆಲುವು, ಅಣ್ಣಾಮಲೈ ಸೋಲು
ಬೆಂಗಳೂರು; ತಮಿಳುನಾಡಿನಲ್ಲಿ ಚುನವಣಾ ಕಣಕ್ಕೆ ಇಳಿದಿದ್ದ ಕರ್ನಾಟಕದ ಇಬ್ಬರು ಅಧಿಕಾರಿಗಳಲ್ಲಿ ಸಸಿಕಾಂತ್ ಸೆಂಥಿಲ್ ಗೆಲವುವನ್ನು ಪಡೆದರೆ ಅನ್ನಾ ಮಲೈ ಅವರು ಸೋಲನ್ನು ಕಂಡುದ್ದಾರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಗೆಲುವನ್ನು ಪಡೆದಿದ್ದಾರೆ.ಸಸಿಕಾಂತ್ ಸೆಂಥಿಲ್ ಅವರು ತಮಿಳುನಾಡಿನ ತಿರುವಳ್ಳೂರ್ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದರು. ಇದೀಗ ಅವರು ಗೆಲುವನ್ನು ಪಡೆದುಕೊಂಡಿದ್ದಾರೆ.ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಚುನಾವಣೆಯಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದು ಸೋಲನ್ನು ಕಂಡಿದ್ದಾರೆ. ಬಿಜೆಪಿ ಅಧ್ಯಕ್ಷರಾಗಿದ್ದ ಅಣ್ಣಾ ಮಲೈ ಅವರು...
ದ.ಕ ದಲ್ಲಿ ಒಂದು ಲಕ್ಷ ದಾಟಿದ ಬಿಜೆಪಿ ಮುನ್ನಡೆ
ಬೆಳ್ತಂಗಡಿ; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮುನ್ನಡೆಯನ್ನು ನಿರಂತರವಾಗಿ ಕಾಯ್ದುಕೊಂಡಿದ್ದು ಇದೀಗ ಮುನ್ನಡೆಯ ಅಂತರ ಒಂದು ಲಕ್ಷ ದಾಟಿದೆ.ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು 4,64,692 ಮತಗಳನ್ನು ಪಡರದಿದ್ದರೆ ಕಾಂಗ್ರಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ 3,52,251 ಮತಗಳನ್ನು ಪಡೆದಿದ್ದಾರೆ. ನೋಟಾಕ್ಕೆ 14,210ಮತಗಳನ್ನು ಪಡೆದುಕೊಂಡಿದ್ದರೆ.ಬಿಜೆಪಿ ಅಭ್ಯರ್ಥಿ ಗೆ ಇದೀಗ 1,12,441 ಮತಗಳ ಮುನ್ನಡೆಯನ್ನು ಗಳಿಸಿದ್ದಾರೆ. ಈಗಾಗಲೇ ಶೇ 60ಕ್ಕಿಂತ ಹೆಚ್ಚು ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ ಗೆಲುವು ಬಹುತೇಕ ಖಚಿತವಾಗಿದ್ದು ಇನ್ನು ಅಂತಿಮವಾಗಿ ಗೆಲುವಿನ ಅಂತರ ಮಾತ್ರ ನೋಡಬೇಕಾಗಿದೆ
ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿನ್ನಡೆ
ಬೆಳ್ತಂಗಡಿ; ವಾರಣಾಸಿಯಲ್ಲಿ ಮತಗಳಎಣಿಕೆ ಮುಂದುವರಿಯುತ್ತಿದ್ದಂತೆಯೇ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಅವರ ಎದುರು ತೀವ್ರ ಹಿನ್ನಡೆ ಕಂಡಿದ್ದಾರೆ.ಚುನಾವಣಾ ಆಯೋಗದ ಮಾಹಿತಿಯಂತೆ ಸುಮಾರು 4000 ಸಾವಿರಕ್ಕೂ ಅಧಿಕ ಮತಗಳಿಂದ ಹಿಂದಿರುವುದಾಗಿ ತಿಳಿದು ಬಂದಿದೆ.ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟ ಭಾರೀ ಮುನ್ನಡೆಯನ್ನು ಸಾಧಿಸುತ್ತಿದ್ದು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಮುನ್ನಡೆಯನ್ನು ಸಾಧಿಸುತ್ತಿದ್ದಾರೆ.
ಮೊದಲ ಸುತ್ತಿನಲ್ಲಿ ಬ್ರಿಜೇಶ್ ಚೌಟ 7582 ಮತಗಳ ಮುನ್ನಡೆ
ಮಂಗಳೂರು : ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 7582 ಮತಗಳ ಮುನ್ನಡೆ ಸಾಧಿಸಿದ್ದಾರೆ. ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಪಡೆದಿದೆ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು 18181 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಆರ್.ಪದ್ಮರಾಜ್ 10599 ಮತಗಳನ್ನು ಗಳಿಸಿದ್ದಾರೆ. ಚೌಟ 7582 ಮತಗಳ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ಮಂಗಳೂರು ಮತ ಎಣಿಕೆ ಆರಂಭ ಬಿಜೆಪಿಗೆ ಮುನ್ನಡೆ
ಬೆಳ್ತಂಗಡಿ; ದ.ಕ ಲೋಕಸಭಾ ಕ್ಷೇತ್ರದ ಮತಗಳ ಎಣಿಕೆ ಆರಂಭಗಿಂಡಿದ್ದು ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ.ಅಂಚೆ ಮತಗಳ ಎಣಿಕೆ ನಡೆದಿದ್ದು ಅಂಚೆ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಮುನ್ನಡೆಯನ್ನು ಗಳಿಸಿರುವುದಾಗಿ ತಿಳಿದು ಬಂದಿದೆ.ಮತಯಂತ್ರಗಳ ಎಣಿಕೆ ಕಾರ್ಯ ಇನ್ನಷ್ಟೇ ಆರಂಭವಾಗಬೇಕಾಗಿದೆ.
ನಿವೃತ್ತ ಯೋಧ ಅನೀಶ್ ಡಿ.ಎಲ್. ಅವರಿಗೆ ಭವ್ಯ ಸ್ವಾಗತ
ಬೆಳ್ತಂಗಡಿ; ಕಳೆದ 20ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಆಗಮಿಸಿದ ಧರ್ಮಸ್ಥಳದ ಅನೀಶ್ ಡಿ.ಎಲ್ ಅವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ಅವರನ್ನು ಕರೆತರಲಾಯಿತು. ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಫಿ, ಬೆಳ್ತಂಗಡಿ ಇನ್ಸ್ ಪೆಕ್ಟರ್ ಸುಬ್ಭಾಪುರ ಮಠ್ ಸೇರಿದಂತೆ ಗಣ್ಯರು ಪುಷ್ಪ ಗುಚ್ಚನೀಡಿ ಅವರನ್ನು ಸ್ವಾಗತಿಸಿದರು. ಕೆ.ಎಸ್. ಎಂ.ಸಿ ಎ ಧರ್ಮಸ್ಥಳ ವಲಯ ಅಧ್ಯಕ್ಷ ಜೈಸನ್ ಪಟ್ಟೇರಿ, ಬೆಳ್ತಂಗಡಿ ಸಿರಿಯನ್ ಕಥೋಲಿಕ್ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ.ಜೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ...
ಶಾಸಕ ಹರೀಶ್ ಪೂಂಜ ಹಾಗೂ ಪ್ರತಾಪಸಿಂಹ ನಾಯಕ್ ಅವರಿಂದ ಮತದಾನ
ಬೆಳ್ತಂಗಡಿ: ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮತದಾನದ ಪ್ರಕ್ರಿಯೆ ಅತ್ಯಂತ ಬಿರುಸಿನಿಂದ ನಡೆಯುತ್ತಿದೆ.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಬೆಳ್ತಂಗಡಿಯ ಮತಗಟ್ಟೆಗೆ ತರಳಿ ಮತದಾನ ಮಾಡಿದರು.
ಮಾಚಾರಿನಲ್ಲಿ ಹೊಡೆದಾಟ ಹಲವರ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ; ಉಜಿರೆ ಗ್ರಾಮದ ಮಾಚಾರಿನಲ್ಲಿ ಹಳೆಯ ದ್ವೇಷಕ್ಕೆ ಹೊಡೆದಾಟ ನಡೆದಿದ್ದು ಇದೀಗ ಎರಡೂ ತಂಡದ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮಾಚಾರು ನಿವಾಸಿ ಅಶ್ವಥ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಜೂ.2 ರಂದು ಸಂಜೆಯ ವೇಳೆ ಉಜಿರೆ ಗ್ರಾಮದ ಮೇಲಿನ ಮಾಚಾರು ಎಂಬಲ್ಲಿದ್ದಾಗ ಅಲ್ಲಿಗೆ ಬಂದ ಆರೋಪಿಗಳಾದ ಕರುಣಾಕರಗೌಡ, ನಿತಿನ್ ಹಾಗೂ ಇನ್ನೊಬ್ಬ ವ್ಯಕ್ತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಕರುಣಾಕರ ಗೌಡ ಈ ಸಂದರ್ಭದಲ್ಲಿ ಜಾತಿನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಮೂವರು ಸೇರಿ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ. ಅದರಂತೆ ಬೆಳ್ತಂಗಡಿ...
ರಕ್ಷಿತ್ ಶಿವರಾಂ ಅವರಿಂದ ಮತ ಚಲಾವಣೆ
ಬೆಳ್ತಂಗಡಿ; ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ತಾಲೂಕಿನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಬೆಳ್ತಂಗಡಿ ಯಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮತ ಚಲಾಯಿಸಿದರು.
ರೆಖ್ಯ ಸಿಡಿಲು ಬಡಿದು ದನ, ನಾಯಿ ಸಾವು.ಮನೆಗೆ ಹಾನಿ
ಬೆಳ್ತಂಗಡಿ; ಭಾನುವಾರ ಸಂಜೆಯ ವೇಳೆ ಭಾರಿ ಸಿಡಿಲು ಮಳೆಗೆ ರೆಖ್ಯ ಗ್ರಾಮದ ಸುಂದರ ಗೌಡ ಕುರುಡೇಲು ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವೈಯರುಗಳು ಸಂಪೂರ್ಣ ಸುಟ್ಟು ಹೋಗಿ ದನ ಹಾಗೂ ನಾಯಿ ಸಾವಿಗೀಡಾಗಿದ ಘಟನೆ ಸಂಭವಿಸಿದೆ. ಮನೆಗೆ ಸಿಡಿಲು ಬಡಿದಿದ್ದು ಮನೆಯ ಮೇಲ್ಪಾವಣಿಯ ಒಂದು ಭಾಗಕ್ಕೂ ಹಾನಿಯಾಗಿದೆ. ಟಿವಿ, ಫ್ಯಾನು ಸಹಿತ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ.ಈ ವೇಳೆ ಹಟ್ಟಿಯಲ್ಲಿದ್ದ ದನ ಹಾಗೂ ಮನೆಯ ಅಂಗಳದಲ್ಲಿದ್ದ ನಾಯಿ ಸಿಡಿಲಿನ ಆಘಾತದಿಂದ ಮೃತಪಟ್ಟಿದೆ.













