ಕೊಯ್ಯೂರಿನಲ್ಲಿ ಸಿಡಿಲು ಬಡಿದು ದನ ಸಾವು
ಬೆಳ್ತಂಗಡಿ; ತಾಲೂಕಿನ ಕೊಯ್ಯೂರು ಗ್ರಾಮದ ಕೊಪ್ಪದಬೈಲು ಎಂಬಲ್ಲಿ ದನದ ಕೊಟ್ಟಿಗೆಗೆ ಸಿಡಿಲು ಬಡಿದು ದನವೊಂದು ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಸಂಭವಿಸಿದೆ.ಇಲ್ಲಿನ ನಿವಾಸಿ ಬೇಬಿ ಪೂಜಾರಿ ಎಂಬವರ ಮನೆಯ ದನವೇ ಸಿಡಿಲಿನ ಆಘಾತಕ್ಕೆ ಬಲಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ
ಬೆಳ್ತಂಗಡಿ : ಕಳೆಂಜದ ಗ್ರಾಮದ ಬಿಜೆಪಿ ಮುಖಂಡ ರಾಜೇಶ್.ಎಮ್.ಕೆ ಮೇಲೆ ಜೂ.4 ರಂದು ರಾತ್ರಿ ಮಾರಾಕಾಸ್ತ್ರಗಳಿಂದ ದಾಳಿಯಿಂಗ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು . ಇಂದು ಆಸ್ಪತ್ರೆಗೆ ದ.ಕ ಜಿಲ್ಲೆಯ ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಸಂಸದರ ಜೊತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ , ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಬಿಜೆಪಿ ಕಾರ್ಯಕರ್ತರು ಜೊತೆಯಲ್ಲಿದ್ದರು.
ಕಳೆಂಜ ಬಿಜೆಪಿ ಮುಖಂಡನ ಮೇಲೆ ತಲವಾರು ದಾಳಿ
ಬೆಳ್ತಂಗಡಿ: ಕಾಯರ್ತಡ್ಕದಲ್ಲಿ ಬಿಜೆಪಿ ಮುಖಂಡ ಎಸ್.ಟಿ ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ ಎಂಬಾತನ ಮೇಲೆ ತಲವಾರು ದಾಳಿ ನಡೆದಿದ್ದು ಗಂಭೀರವಾಗಿ ಗಾಯಗೊಂಡ ರಾಜೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಾಯರ್ತಡ್ಕ ಕಜೆ ನಿವಾಸಿ ಕಾಂಗ್ರೆಸ್ ಮುಖಂಡ ಗ್ರಾ.ಪಂ ಮಾಜಿ ಸದಸ್ಯ ಕುಶಾಲಪ್ಪ ಗೌಡ ಎಂಬಾತನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಸಂಜೆ ತನ್ನ ಅಂಗಡಿ ಮುಚ್ಚಿ ರಾಜೇಶ್ ಹೋಗುತ್ತಿದ್ದವೇಳೆ ಇವರ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ರಾಜೇಶ್ ಮೇಲೆ ತಲವಾರಿನಿಂದ ದಾಳಿ ನಡೆಸಲಾಗಿದ್ದು ಆಸ್ಪತ್ರೆಗೆ ದಾಖಲಾಗಿರುವ ಇವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ...
ಕರಾವಳಿ ಹಿಂದುತ್ವದ ಭದ್ರಕೋಟೆ;ಹರೀಶ್ ಪೂಂಜ
ಬೆಳ್ತಂಗಡಿ :ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಜಿಯವರ ನೇತೃತ್ವದ ಎನ್. ಡಿ. ಎ. ಮೈತ್ರಿಕೂಟ ಮೂರನೇ ಬಾರಿಗೆ ಜನಾದೇಶ ಪಡೆದುಕೊಂಡಿದ್ದಕ್ಕೆ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ವಿಜಯಶಾಲಿಗಳಾಗಿರುವುದಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತಪಡಿಸಿದ್ದಾರೆ.ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಯಂತ್ರ ದುರುಪಯೋಗಪಡಿಸಿಕೊಂಡು ಅಪವಾದ ಅಪಪ್ರಚಾರಗಳ ನಡುವೆ ನಡೆಸಿದ ಈ ಚುನಾವಣೆಯಲ್ಲಿ ಕರಾವಳಿಯ ಜನತೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಸರಸಗಟಾಗಿ ತಿರಸ್ಕರಿಸಿ ಹಿಂದುತ್ವದ ಭದ್ರಕೋಟೆಯನ್ನು ಪುಡಿಗಟ್ಟಲು ಅಸಾಧ್ಯವೆಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿರುತ್ತಾರೆ.ಪ್ರಥಮ ಬಾರಿಗೆ ಲೋಕಸಭೆಯನ್ನು ಪ್ರವೇಶಸಲಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ...
ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಉಳ್ಳಾಲದಲ್ಲಿ ಕಾಂಗ್ರೆಸ್ ಮುನ್ನಡೆ, ನೋಟಾಕ್ಕೆ ಬೆಳ್ತಂಗಡಿಯಲ್ಲಿ ಮಾತ್ರ ಬೆಂಬಲ
ಬೆಳ್ತಂಗಡಿ; ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದ.ಕ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಉಳ್ಳಾಲ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಗೆ ಮುನ್ನಡೆ ಲಭಿಸಿದೆ. ಉಳಿದಂತೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಉತ್ತಮ ರೀತಿಯ ಮುನ್ನಡೆಯನ್ನು ಪಡೆದು ಕೊಂಡಿದ್ದಾರೆ.ನೋಟಾ ಪರವಾಗಿ ಅಭಿಯಾನ ನಡೆಸಲಾಗಿದ್ದರೂ ನಿರೀಕ್ಷೆಯ ಮತಗಳು ನೋಟಾಕ್ಕೆ ಲಭಿಸಿಲ್ಲ ಬೆಳ್ತಂಗಡಿಯಲ್ಲಿ ಮಾತ್ರ ನೋಟಾ ಆಂದೋಲನಕ್ಕೆ ಬೆಂಬಲ ವ್ಯಕ್ತವಾಗಿದೆ.ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬ್ರಿಜೇಶ್ ಚೌಟ ಅವರು 1,01,408 ಮತಗಳನ್ನು ಪಡೆದುಕೊಂಡರೆ ಕಾಂಗ್ರೆಸ್ ಅಭ್ಯರ್ಥಿ 78,101ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ....
ಪಕ್ಷದ ಕಾರ್ಯಕರ್ತರ ಜನಸಾಮಾನ್ಯರ ಹಿತಕಾಯಲು ಸದಾ ಬದ್ದ: ರಕ್ಷಿತ್ ಶಿವರಾಂ
ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನೀಡಿರುವ ತೀರ್ಪಿಗೆ ತಲೆ ಬಾಗುತ್ತೇವೆ ಈ ಸೋಲಿನಿಂದ ನಾವು ಎದೆಗುಂದುವುದಿಲ್ಲ. ನಮ್ಮ ಪಕ್ಷಕ್ಕೆ ಮತ ನೀಡಿರುವ ಮತದಾರರ ಹಾಗೂ ಜನಸಾಮಾನ್ಯರ ಹಿತಕಾಯಲು ಬದ್ಧ. ಅವರ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೆವೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಡೆದ ಮತಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ 16000 ಸಾವಿರ ಮತಗಳನ್ನು ಕಾಂಗ್ರೆಸ್ ಪಕ್ಷ ಪಡೆದಿದೆ. ಬಿಜೆಪಿಗೆ ಈ ಚುನಾವಣೆಯ ಗೆಲುವು ಸೋಲಿನಂತೆ ಬಾಸವಾಗುತ್ತಿದೆ.ವಿರೋಧ ಪಕ್ಷದ...
ದೇಶದಲ್ಲಿ ಮತ್ತಮ್ಮೆ ಬಿಜೆಪಿ ಸರಕಾರ ಪ್ರತಾಪಸಿಂಹ ನಾಯಕ್
ಬೆಳ್ತಂಗಡಿ: 18 ನೇ ಲೋಕಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಎನ್.ಡಿ.ಎ. ಗೆ ಪೂರ್ಣ ಬಹುಮತ ಸಿಕ್ಕಿದ್ದು ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.ವಿಪಕ್ಷಗಳ ಬಹುನಿರೀಕ್ಷಿತ ಅಪಪ್ರಚಾರ, ಷಡ್ಯಂತ್ರಗಳ ನಡುವೆಯೂ ಎನ್.ಡಿ.ಎ. ಲೋಕಸಭೆಯ ಮ್ಯಾಜಿಕ್ ಸಂಖ್ಯೆಯನ್ನು ದಾಟಿದೆ. ಬಿಜೆಪಿಯೊಂದಿಗಿನ ಅದರ ಮಿತ್ರಪಕ್ಷಗಳು ಸುಭದ್ರ ಸರಕಾರದ ರಚನೆಗೆ ಸಹಯೋಗ ನೀಡಲಿದ್ದು ಮುಂದಿನ ಐದುವರ್ಷಗಳವರೆಗೆ ಮತ್ತೆ ಕಾಂಗ್ರೇಸೇತರ ಸರಕಾರ ದೇಶದಲ್ಲಿ ಅಧಿಕಾರದಲ್ಲಿ ಇರಲಿದೆ.ರಾಜ್ಯದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಂಗಳೂರು ಲೋಕಸಭಾಕ್ಷೇತ್ರದಲ್ಲಿ...
1.48 ಲಕ್ಷ ಮತಗಳ ಅಂತರದಲ್ಲಿ ಬ್ರಿಜೇಶ್ ಚೌಟ ಗೆಲುವು
ಮಂಗಳೂರು; ರಾಜ್ಯದ ಪ್ರತಿಷ್ಟೆಯ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣಕನ್ನಡದಲ್ಲಿ ಕಮಲ ಅರಳಿದೆ. ಭಾರೀ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆದ್ದು ಬೀಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಪದ್ಮರಾಜ್ ಅವರ ವಿರುದ್ಧ 1,48,071 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಬ್ರಿಜೇಶ್ ಚೌಟ 7,60,120 ಮತಗಳನ್ನು ಪಡೆದರೆ, ಪದ್ಮರಾಜ್ 6,12,103 ಮತಗಳನ್ನು ಪಡೆದರು. ಬ್ರಿಜೇಶ್ ಚೌಟ ಅವರು 1,48,071 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.ಬಿಜೆಪಿಗೆ ಕಳೆದ ಬಾರಿ ಲಭಿಸಿದ ಮತಗಳ ಸಂಖ್ಯೆ ಕಡಿಮೆಯಾಗಿದೆ ಕಾಂಗ್ರೆಸ್ ಸಮಬಲದ ಹೋರಾಟ...
ಸಸಿಕಾಂತ್ ಸೆಂಥಿಲ್ ಗೆಲುವು, ಅಣ್ಣಾಮಲೈ ಸೋಲು
ಬೆಂಗಳೂರು; ತಮಿಳುನಾಡಿನಲ್ಲಿ ಚುನವಣಾ ಕಣಕ್ಕೆ ಇಳಿದಿದ್ದ ಕರ್ನಾಟಕದ ಇಬ್ಬರು ಅಧಿಕಾರಿಗಳಲ್ಲಿ ಸಸಿಕಾಂತ್ ಸೆಂಥಿಲ್ ಗೆಲವುವನ್ನು ಪಡೆದರೆ ಅನ್ನಾ ಮಲೈ ಅವರು ಸೋಲನ್ನು ಕಂಡುದ್ದಾರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಗೆಲುವನ್ನು ಪಡೆದಿದ್ದಾರೆ.ಸಸಿಕಾಂತ್ ಸೆಂಥಿಲ್ ಅವರು ತಮಿಳುನಾಡಿನ ತಿರುವಳ್ಳೂರ್ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದರು. ಇದೀಗ ಅವರು ಗೆಲುವನ್ನು ಪಡೆದುಕೊಂಡಿದ್ದಾರೆ.ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಚುನಾವಣೆಯಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದು ಸೋಲನ್ನು ಕಂಡಿದ್ದಾರೆ. ಬಿಜೆಪಿ ಅಧ್ಯಕ್ಷರಾಗಿದ್ದ ಅಣ್ಣಾ ಮಲೈ ಅವರು...
ದ.ಕ ದಲ್ಲಿ ಒಂದು ಲಕ್ಷ ದಾಟಿದ ಬಿಜೆಪಿ ಮುನ್ನಡೆ
ಬೆಳ್ತಂಗಡಿ; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮುನ್ನಡೆಯನ್ನು ನಿರಂತರವಾಗಿ ಕಾಯ್ದುಕೊಂಡಿದ್ದು ಇದೀಗ ಮುನ್ನಡೆಯ ಅಂತರ ಒಂದು ಲಕ್ಷ ದಾಟಿದೆ.ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು 4,64,692 ಮತಗಳನ್ನು ಪಡರದಿದ್ದರೆ ಕಾಂಗ್ರಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಗೆ 3,52,251 ಮತಗಳನ್ನು ಪಡೆದಿದ್ದಾರೆ. ನೋಟಾಕ್ಕೆ 14,210ಮತಗಳನ್ನು ಪಡೆದುಕೊಂಡಿದ್ದರೆ.ಬಿಜೆಪಿ ಅಭ್ಯರ್ಥಿ ಗೆ ಇದೀಗ 1,12,441 ಮತಗಳ ಮುನ್ನಡೆಯನ್ನು ಗಳಿಸಿದ್ದಾರೆ. ಈಗಾಗಲೇ ಶೇ 60ಕ್ಕಿಂತ ಹೆಚ್ಚು ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಬಿಜೆಪಿ ಗೆಲುವು ಬಹುತೇಕ ಖಚಿತವಾಗಿದ್ದು ಇನ್ನು ಅಂತಿಮವಾಗಿ ಗೆಲುವಿನ ಅಂತರ ಮಾತ್ರ ನೋಡಬೇಕಾಗಿದೆ














