ಕೆ ಪಿ ಎಸ್ ಪುಂಜಾಲಕಟ್ಟೆ ಪ್ರೌಢಶಾಲಾ ವಿಭಾಗ : ವಿದ್ಯಾರ್ಥಿ ಸರಕಾರಕ್ಕೆ ಪ್ರಮಾಣವಚನ ಬೋಧನೆ

0

ಪೂಂಜಾಲಕಟ್ಟೆ; ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ವಿದ್ಯಾರ್ಥಿ ಸರಕಾರಕ್ಕೆ ಚುನಾವಣೆಯನ್ನು ನಡೆಸಲಾಯಿತು. ಚುನಾವಣಾ ಪ್ರಕ್ರಿಯೆ ತಂತ್ರಜ್ಞಾನವನ್ನು ಬಳಸಿ ನೆರವೇರಿಸಲಾಯಿತು. ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಮತ್ತು ವಿದ್ಯಾರ್ಥಿ ಪ್ರತಿಪಕ್ಷ ನಾಯಕ ಹಾಗೂ ಉಪನಾಯಕ ಹುದ್ದೆಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಸರಳತೆಯೊಂದಿಗೆ ಚುನಾವಣಾ ಪದ್ಧತಿಯಂತೆ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂದೆ ಪಡೆಯಲು ಅವಕಾಶ, ಅಂತಿಮ ಕಣದಲ್ಲಿರುವವರ ಸ್ಪರ್ದಾಳುಗಳ ಪಟ್ಟಿ, ಈ ರೀತಿ ಎಲ್ಲಾ ಹಂತಗಳನ್ನು ಕ್ರಮವತ್ತಾಗಿ ನಡೆಸಲಾಯಿತು. ಬಳಿಕ ವಿಜೇತ ಅಭ್ಯರ್ಥಿಗಳನ್ನು ಪ್ರಕಟಿಸಿದ ನಂತರ ಸಂಸ್ಥೆಯ...

ಅಡಿಕೆ, ಕೋಕೋ, ಕಾಳುಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಸೌಲಭ್ಯ ಒದಗಿಸಲು ಆಗ್ರಹಿಸಿ ಎಂಎಲ್.ಸಿ ಪ್ರತಾಪಸಿಂಹ ನಾಯಕ್ ಅವರಿಂದ ಸರಕಾರಕ್ಕೆ ಪತ್ರ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ಕೋಕೋ ಮತ್ತು ಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಕಲ್ಪಿಸಲು ಇದುವರೆಗೂ ಯಾವುದೇ ಕ್ರಮ ವಹಿಸದಿರುವ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮತ್ತು ತೋಟಗಾರಿಕಾ ಸಚಿನ ಮಲ್ಲಿಕಾರ್ಜುನ ಅವರಿಗೆ ಪತ್ರ ಬರೆದು ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಡಿಕೆ, ಕೋಕೋ ಮತ್ತು ಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಹಲವಾರು ವರ್ಷಗಳಿಂದ ಕಲ್ಪಿಸಲಾಗಿದೆ. ಆದರೆ ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ, ಅಡಿಕೆ, ಕೋಕೋ...

ಸಹಕಾರ ಭಾರತಿಯ ಬೆಳ್ತಂಗಡಿ ತಾಲೂಕು ಸಮಿತಿ ಸಭೆ

0

ಬೆಳ್ತಂಗಡಿ; ಸಹಕಾರ ಭಾರತಿ ಬೆಳ್ತಂಗಡಿ ತಾಲೂಕು ಸಮಿತಿಯ ಸಭೆ ಸೋಮವಾರ ಬೆಳ್ತಂಗಡಿ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.ಸಹಕಾರ ಭಾರತಿ‌ ಜಿಲ್ಕಾಧ್ಯಕ್ಷ ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು.ಮುಂದಿನ ದಿನಗಳಲ್ಲಿ ಸಹಕಾರ ಭಾರತಿ ಇದರ ಕಾರ್ಯಚಡುವಟಿಕೆಗಳ ಮಾಹಿತಿಯನ್ನು ನೀಡಿದರು. ಬೆಳ್ತಂಗಡಿ ತಾಲೂಕಿನಲ್ಲಿ 24 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 18 ಸಂಘಗಳಲ್ಲಿ ಸಹಕಾರ ಭಾರತಿ ಅಡಳಿತ ನಡೆಸುತ್ತಿದ್ದು, ಉತ್ತಮ ಕಾರ್ಯಯೋಜನೆಯನ್ನು ಹಮ್ನಿಕೊಳ್ಳುವಂತೆ ಸೂಚಿಸಿದರು.ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದಶಕ ಕುಶಾಲಪ್ಪ ಗೌಡ ಪೂವಾಜೆ, ಕೆಎಂಎಫ್ ನಿರ್ದಶಕ ಪದ್ಮನಾಭ...

ಡಿ.ಕೆ.ಆರ್.ಡಿ.ಎಸ್ ವತಿಯಿಂದ ವನಮಹೋತ್ಸವ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ತರಬೇತಿ

0

ಬೆಳ್ತಂಗಡಿ; ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಇದರ ಮಾರ್ಗದರ್ಶನದಲ್ಲಿ ಅರುಣೋದಯ ಮಹಾಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿವನಮಹೋತ್ಸವ ಆಚರಣೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ತರಬೇತಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಮಾರಿಯಂಬಿಕ ಶಾಲೆ ಬಂಗಾಡಿಯಲ್ಲಿ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಂದನೀಯ ಫಾದರ್ ಜೋಸೆಫ್ ಚೀರನ್ ರವರು ಗಿಡಗಳನ್ನು ನೆಟ್ಟು ಪೋಷಿಸಿಸುವ ಮೂಲಕ ಪರಿಸರವನ್ನು ಸಂರಕ್ಷಿಸುವ ಬಗ್ಗೆ ತರಬೇತಿ ನೀಡಿದರು. ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಪಾತ್ರದ ಕುರಿತು ಮಾತನಾಡಿದರು. ಡಿ .ಕೆ .ಆರ್.ಡಿ.ಎಸ್ ಸಂಸ್ಥೆಯ...

ಉಜಿರೆಯಲ್ಲಿ ರಸ್ತೆಗೆ ಉರುಳಿದ ಹೆಮ್ಮರ ವಾಹನಗಳು ಜಖಂ

0

‌ಬೆಳ್ತಂಗಡಿ; ಉಜಿರೆ ಪೇಟೆಯ ಸಮೀಪವೇ ಬೆಳ್ತಂಗಡಿ ರಸ್ತೆಯಲ್ಲಿ ಸೋಮವಾರ ಮರವೊಂದು ಹೆದ್ದಾರಿಗೆ ಬುಡ ಸಮೇತ ಉರುಳಿ ಬಿದ್ದು ಮೂರು ವಾಹನಗಳು ಜಖಂಗೊಂಡು ಸಂಚಾರ ಅಸ್ತವ್ಯಸ್ತ ಗೊಂಡ ಘಟನೆ ಸಂಭವಿಸಿದೆ.ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದ ಮೇಲೆಯೇ ಮರ ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣ ರಜ್ಜು ಗುಜ್ಜಾಗಿದ್ದು ರಿಕ್ಷಾ ಚಾಲಕ ಉಜಿರೆ ಹಳೆಪೇಟೆಯ ರತ್ನಾಕರ(50) ಹಾಗೂ ಪ್ರಯಾಣಿಕ ಹಳೆಪೇಟೆಯ ಸಾಂತಪ್ಪ(47( ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಪವಾಡ ಸದೃಶವಾಗಿ ಜೀವಾಪಾಯದಿಂದ ಪಾರಾಗಿದ್ದಾರೆ.ಮರ ಬೀಳುವ ವೇಳೆ ಎರಡು ಕಾರುಗಳಿಗೂ ಹಾನಿಯಾಗಿದೆ.ಘಟನೆಯಿಂದ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ...

ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

0

ಬೆಳ್ತಂಗಡಿ; ಧರ್ಮಸ್ಥಳದ ವಸತಿ ಗೃಹದ ಮುಂಭಾಗದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಧರ್ಮಸ್ಥಳದ ಕಾವೇರಿ ವಸತಿಗೃಹದ ವರಾಂಡದಲ್ಲಿ ಮಲಗಿದ್ದ ವ್ಯಕ್ತಿ ಅಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತನಿಗೆ ಸುಮಾರು 40 ರಿಂದ 45 ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಮೃತ ದೇಹದ ಮೇಲೆ ನಾಗರತ್ನ, ಪುಟ್ಟ, ಮಂಜಮ್ಮ ಲೋಲಾಕ್ಷಮ್ಮ, ತನುಶ್ರೀ ಎಂಬ ಹೆಸರುಗಳನ್ನು ಹಚ್ಚೆ ಹಾಕಿರುವುದು ಕಂಡು ಬಂದಿದ್ದು ಅದರ ಹೊರತಾಗಿ ಯಾವುದೇ ವಿಳಾಸದ ಗುರುತುಗಳು ಕಂಡು ಬಂದಿಲ್ಲ.ಧರ್ಮಸ್ಥಳ...

ಪಟ್ರಮೆಯಲ್ಲಿ ವಸಂತ ಬಂಗೇರರಿಗೆ ನುಡಿನಮನ

0

ಬೆಳ್ತಂಗಡಿ; ಸಮಾಜವನ್ನೇ ತನ್ನ ಕುಟುಂಬವಾಗಿ ಕಂಡಿದ್ದ ಅಪರೂಪದ ವ್ಯಕ್ತಿತ್ವ ನಮ್ಮ ತಂದೆ ವಸಂತ ಬಂಗೇರ ಅವರದ್ದಾಗಿತ್ತು ಎಂದು ಸನ್ಮಾನ್ಯ ಕೆ ವಸಂತ ಬಂಗೇರ ಅವರ ಮಗಳು ಪ್ರಿತಿತಾ ಬಂಗೇರ ಹೇಳಿದರು. ಪಟ್ರಮೆಯ ಅನಾರು ಶಾಲಾ ಜನಾರ್ಪಣ ಭವನದಲ್ಲಿ ಸನ್ಮಾನ್ಯ ಕೆ. ವಸಂತ ಬಂಗೇರ ಅವರಿಗೆ ಗೌರವಯುತ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು. ಮಂಗನಕಾಯಿಲೆಯ ಹುಟ್ಟಡಗಿಸಿದ ಅವರ ಸಾಧನೆ ಕೇಳಿ ಬಲ್ಲೆ. ಅವರನ್ನು ಗೌರವಿಸುವ ಜನರನ್ನು ಕಂಡು ನಮ್ಮ ಅಪ್ಪನ ಬಗ್ಗೆ ಹೆಮ್ಮೆಯೂ, ಇಷ್ಟ ಬೇಗ ಅವರಿಂದ ನಾವೆಲ್ಲ ಅಗಲುವಂತಾದ್ದು ತುಂಬಾ ನೋವೂ...

ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಭೇಟಿ

0

ಉಜಿರೆ: ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಭಾನುವಾರ ಸಂಜೆ ಧರ್ಮಸ್ಥಳಕ್ಕೆ ಬಂದರು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಶಾಸಕರುಗಳಾದ ಹರೀಶ್ ಪೂಂಜ ಮತ್ತು ಕೆ. ಪ್ರತಾಪ ಸಿಂಹ ನಾಯಕ್ ಜೊತೆಗಿದ್ದರು.ಭಾನುವಾರ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ತಂಗಿದ ಯಡಿಯೂರಪ್ಪ ಸೋಮವಾರ ಬೆಳಗ್ಗೆ ದೇವರ ದರ್ಶನ ಮಾಡಲಿದ್ದಾರೆ.

ಗುರಿಪಳ್ಳ ರಿಕ್ಷಾ ಪಲ್ಟಿ ಹಲವರಿಗೆ ಗಾಯ

0

ಬೆಳ್ತಂಗಡಿ:ಕನ್ಯಾಡಿ ಗ್ರಾಮದ ಗುರಿಪಳ್ಳದ ಕೊಡ್ಡೋಳು ಸಮೀಪ ಚಲಿಸುತ್ತಿದ್ದ ರಿಕ್ಷಾದ ಚಕ್ರಕ್ಕೆ ರಸ್ತೆ ಬದಿ ಕಟ್ಟಲಾಗಿದ್ದ ಜಾನುವಾರಿನ ಹಗ್ಗ ಸಿಲುಕಿ ರಿಕ್ಷಾ ಪಲ್ಟಿ ಹೊಡೆದ ಘಟನೆ ಭಾನುವಾರ ನಡೆದಿದೆ.ರಿಕ್ಷಾ ಚಾಲಕ ಸ್ಥಳೀಯ ರಾಮಣ್ಣಗೌಡ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.ರಿಕ್ಷಾದಲ್ಲಿ ಮಡಂತ್ಯಾರು ಕಡೆಯ ಮೂವರು ಪ್ರಯಾಣಿಕರಿದ್ದು ಅವರಿಗೂ ಗಾಯಗಳಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಬೆಳ್ತಂಗಡಿ; ಕಥೊಲಿಕ್ ಸಭಾ ಮಡಂತ್ಯಾರ್ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ

0

ಬೆಳ್ತಂಗಡಿ; ಕಥೊಲಿಕ್ ಸಭಾ ಮಡಂತ್ಯಾರ್ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.ಘಟಕದ ಅಧ್ಯಕ್ಷೆ ಸೆಲೆಸ್ಟಿನ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ಮ್ಯಾಕ್ಸಿಮ್ ಕೋಶಾಧಿಕಾರಿ ನೆಲ್ಸನ್ ನಿಕಟ ಪೂರ್ವ ಅಧ್ಯಕ್ಷರು ಫಿಲಿಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರುಮಾಜಿ ಅಧ್ಯಕ್ಷರು ಕಾರ್ಯಕಾರಿ ಸಮಿತಿಯ ಸದಸ್ಯರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು ಜೆರಾಲ್ಡ್ ಮೊರಾಸ್ ಸಭೆಯಲ್ಲಿ ಪಾಲ್ಗೊಂಡಿದ್ದರುಈ ಸಭೆಯಲ್ಲಿ 12 ಚರ್ಚ್ ಗಳನ್ನೂ ಒಳಗೊಂಡ ವಾರಾಡೊ ಮಟ್ಟದ ಅಧ್ಯಕ್ಷರಾಗಿ ಆಯ್ಕೆಯಾದ ಲಿಯೋ ರೊಡ್ರಿಗಸ್ ಕಾರ್ಯದರ್ಶಿಯಾಗಿ ಆಯ್ಕೆಯಾದ ಫಿಲಿಪ್ ಡಿಕುನ್ಹಾ ರಾಜಕೀಯ ಸಂಚಾಲಕರಾಗಿ ಆಯ್ಕೆಯಾದ ವಿನ್ಸೆಂಟ್ ಡಿಸೋಜಾ ಇವರನ್ನು ಗಿಡಗಳನ್ನು...