ಕೋಳಿ ಅಂಕಕ್ಕೆ ಪೊಲೀಸ್ ದಾಳಿ ಹಲವರ ಬಂಧನ
ಬೆಳ್ತಂಗಡಿ:ಅಳದಂಗಡಿ ಸಮೀಪದ ಪಿಲ್ಯ ಅಲೆಕ್ಕಿ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಯುತ್ತಿದ್ದಾಗ ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ಆನಂದ ಎಂ.ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಪ್ರವೀಣ್ ಬಳಂಜ,ರಮೇಶ್ ಅಲೆಕ್ಕಿ, ಜೋಯೆಲ್ ಕರಂಬಾರು,ರಾಜೇಶ್ ಪೂಜಾರಿ ಸುಲ್ಕೇರಿಮೊಗ್ರು,ಅವಿನಾಶ್ ಕುದ್ಯಾಡಿ,ತೇಜಸ್ ಗರ್ಡಾಡಿ,ಸುಂದರ ಮಾಳ,ಮೇಘರಾಜ್ ಗರ್ಡಾಡಿ,ಉಮೇಶ್ ಬಡಗಕಾರಂದೂರು ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೇ 24 ರಂದು ವೇಣೂರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಆನಂದ ಎಂ. ಹೊಸಂಗಡಿ ಗ್ರಾಮ ಪಂಚಾಯಿತಿ ಮರು ಚುನಾವಣಾ ಬಂದೋಬಸ್ತು ಕರ್ತವ್ಯದಲ್ಲಿರುವ ಸಮಯ ಪಿಲ್ಯ ಗ್ರಾಮದ ಅಲೆಕ್ಕಿ...
ಬಂಟ್ವಾಳ; ತಲವಾರಿನಿಂದ ಕಡಿದು ಯುಕನ ಕೊಲೆ
ಬಂಟ್ವಾಳ: ದುಷ್ಕರ್ಮಿಗಳ ತಂಡವೊಂದು ಇಬ್ಬರು ಯುವಕರ ಮೇಲೆ ತಲವಾರು ದಾಳಿ ಮಾಡಿದ ಪರಿಣಾಮ ಓರ್ವ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಇರಾಕೋಡಿ ಎಂಬಲ್ಲಿ ಮಂಗಳವಾರ ಸಂಭವಿಸಿದೆ. ಘಟನೆಯಲ್ಲಿ ಕೊಲ್ತಮಜಲು ಬೆಲ್ಲೂರು ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಅಬ್ದುಲ್ ರಹಿಮಾನ್ ಮೃತಪಟ್ಟಿದ್ದಾರೆ. ಮತ್ತೋರ್ವ ಯುವಕ ಇಮ್ಮಿಯಾಝ್ ಗಾಯಗೊಂಡಿದ್ದಾರೆ. ಇಬ್ಬರೂ ಕೊಲ್ತಮಜಲು ಎಂಬಲ್ಲಿ ಪಿಕ್ ಅಪ್ ವಾಹನದಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ತಲವಾರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಬೆಳ್ತಂಗಡಿ; ಶಾಸಕ ಹರೀಶ್ ಪೂಂಜರ ದ್ವೇಷ ಭಾಷಣದ ವಿರುದ್ದ ಪ್ರತಿಭಟನೆ; ಆರ್.ಎಸ್.ಎಸ್.ನವರಿಗೆ ಹಿಂದು ಧರ್ಮದ ಬಗ್ಗೆ ತಿಳಿದಿಲ್ಲ; ಎಂ.ಜಿ ಹೆಗಡೆ
ಬೆಳ್ತಂಗಡಿ; ಶಾಸಕ ಹರೀಶ್ ಪೂಂಜರು ಮೈಕ್ ಸಿಕ್ಕಿದಾಗ ದ್ವೇಷ ಭಾಷಣ ಮಾಡಿ ನ್ಯಾಯಾಲಯದ ಮುಂದೆ ಪ್ರಕರಣರದ್ದು ಪಡಿಸುವಂತೆ ವಿನಂತಿಸುತ್ತಾರೆ. ಅವರಿಗೆ ತಾಕತ್ತಿದ್ದರೆ ಇಲ್ಲಿ ಮಾಡಿದ ಭಾಷಣವನ್ನು ನ್ಯಾಯಾಲಯದ ಮುಂದೆಯೂ ಒಪ್ಪಿಕೊಡು ಸಮರ್ಥಿಸಿಕೊಳ್ಳಲಿ,ಮುಸ್ಲಿಮರು ಇಲ್ಲವಾದರೆ ಬಿಜೆಪಿಯವರಿಗೆ ಪಂಚಾಯತು ಸೀಟ್ ಗೆಲ್ಲಲೂ ಅಸಾದ್ಯ ಅದಕ್ಕಾಗಿ ಅವರು ಸದಾ ಮುಸ್ಲಿಮರ ಬಗ್ಗೆಯೇ ಮಾತನಾಡುತ್ತಾರೆ. ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು ಹೇಳಿದರುಅವರು ಸೋಮವಾರ ತೆಕ್ಕಾರು ಧಾರ್ಮಿಕ ಸಭೆಯಲ್ಲಿ ಭಾರತೀಯ ಪ್ರಜೆಗಳನ್ನು ಕೀಳಾಗಿ ಸಂಬೋದಿಸಿ ಭಾರತೀಯರ ಅವಮಾನಿಸಿದ ಶಾಸಕ ಹರೀಶ್ ಪೂಂಜರನ್ನು ಶಾಸಕತ್ವದಿಂದ ತೆಗೆಯಬೇಕು...
ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆ ಮೇ 28ರ ವರೆಗೆ ರೆಡ್ ಅಲರ್ಟ್ ಶಾಲಾ ಕಾಲೇಜುಗಳಿಗೆ ರಜೆ
ಬೆಳ್ತಂಗಡಿ; ದಜ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆ ಇನ್ನೂ ಎರಡು ದಿನ ಮುಂದುವರಿಯುವ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೇ 27 ಮತ್ತು28ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.ರೆಡ್ ಅಲರ್ಟ್ ಹುನ್ನಲೆಯಲ್ಲಿ ಈ ಎರಡೂ ದಿನ ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಸಿಬಿಎಸ್ಸಿ, ಪದವಿಪೂರ್ವ ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಅಧಿಕಾರಿಗಳು ತಾಲೂಕು ಕೇಂದ್ರಗಳಲ್ಲಿ ಇದ್ದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಸದಸ್ಯರಿಂದ ರಕ್ಷಿತ್ ಶಿವರಾಂ ಗೌರವ ಅರ್ಪಣೆ
ಬೆಳ್ತಂಗಡಿ. ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ರಾಜ್ಯದ ಎ ಗ್ರೇಡ್ ದೇವಾಲಯಗಳಲ್ಲಿ ಒಂದಾದ ಬೆಳ್ತಂಗಡಿ ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯು ಇತ್ತೀಚೆಗೆ ರಚನೆಯಾಗಿದ್ದು. ಈ ಸಮಿತಿಯ ರಚನೆಗೆ ಸಹಕಾರ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ಇಂದು ಸಮಿತಿಯ ಅಧ್ಯಕ್ಷರು ಸದಸ್ಯರು ಗೌರವ ಅರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಕೆ.ಎಮ್ ನಾಗೇಶ್ ಕುಮಾರ್ ಗೌಡ,...
ತೆಕ್ಕಾರು ಜುಮ್ಮಾ ಮಸೀದಿ ಆವರಣ ಗೋಡೆ ಕುಸಿತ
ಬೆಳ್ತಂಗಡಿ; ಭಾರೀ ಮಳೆಗೆ ತೆಕ್ಕಾರು ಗ್ರಾಮದ ತೆಕ್ಕಾರು ಜುಮ್ಮಾ ಮಸೀದಿಯ ಆವರಣ ಗೋಡೆ ಕುಸಿದು ಬಿದ್ದಿದೆ.ಆವರಣ ಗೋಡೆಯ ಒಂದು ಬದಿ ಕುಸಿದು ಬಿದ್ದಿದ್ದು ಸ್ಥಳಕ್ಕೆ ಗ್ರಾ.ಪಂ ಸದಸ್ಯ ರಜಾಕ್ ತೆಕ್ಕಾರು ಭೇಟಿ ನೀಡಿದರು.
ಧರ್ಮಸ್ಥಳ ಸಿಡಿಲು ಬಡಿದು ವ್ಯಕ್ತಿಗೆ ಗಾಯ
ಬೆಳ್ತಂಗಡಿ;ತಾಲೂಕಿನಲ್ಲ ಭಾರೀ ಮಳೆ ಮುಂದುವರಿದಿದ್ದುವ ಧರ್ಮಸ್ಥಳ ಗ್ರಾಮದ ಪೂರ್ಜೆ ಬೈಲಿನಲ್ಲಿ ಸಿಡಿಲುಬಡಿದು ವ್ಯಕ್ತೊಯೊಬ್ಬ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಭವಿಸಿದೆ.ಗಾಯಾಳು ಸ್ಥಳೀಯ ನಿವಾಸಿ ಶೀನ ಮಲೆಕುಡಿಯ ಎಂಬಾತನಾಗಿದ್ದಾನೆಮನೆಯಲ್ಲಿ ಇದ್ದವೇಳೆ ಒಂಬತ್ತು ಗಂಟೆ ಸುಮಾರಿಗೆ ಸಿಡಿಲು ಬಡಿದಿದೆ.ಗಾಯಾಳುವನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಸ್ಪತ್ರೆಗೆ ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಮ್ ಭೇಟಿ ನೀಡಿದ್ದಾರೆ.
ಕಲ್ಮಂಜ; ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಲಾರಿ
ಬೆಳ್ತಂಗಡಿ: ಕಲ್ಮಂಜ ಗ್ರಾಮದ ನಿಡಿಗಲ್ ಸೇತುವೆಯ ಸಮೀಪ ದನದ ಮೇವು ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿರುವ ಘಟನೆ ಇಂದು (ಮೇ. 26) ಮುಂಜಾನೆ ನಡೆದಿದೆ. ಚಾರ್ಮಾಡಿಯಿಂದ ಉಜಿರೆ ಕಡೆಗೆ ದನದ ಮೇವು ತುಂಬಿಕೊಂಡು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳ್ತಂಗಡಿ; ಮುಂದುವರಿದ ಭಾರೀ ಗಾಳಿ ಮಳೆ; ಹಲವು ಮನೆಗಳಿಗೆ ಹಾನಿ
ಬೆಳ್ತಂಗಡಿ; ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು ನದಿಗಳು ತುಂಬಿ ಹರಿಯುತ್ತಿದೆ. ದಿನವಿಡೀ ಸುರಿದ ಮಳೆಯಿಂದಾಗಿ ಜನ ಜೀವವನ ಅಸ್ತವ್ಯಸ್ತಗೊಂಡಿದೆ.ಹಲವೆಡೆ ತೋಟಗಳಿಗೆ ನೀರು ನುಗ್ಗಿದ್ದು ರಾತ್ರಿಯೂ ಮುಂದುವರಿದ ಮಳೆ ಜನರಲ್ಲಿ ಆತಂಕ ಮೂಡಿಸಿದೆ.ತಾಲೂಕಿನಲ್ಲಿ ಭಾರೀ ಮಳೆಗೆ ಹಲವೆಡೆ ಭೂಕುಸಿತಗಳಾಗಿದ್ದು ಮನೆಗಳು ಅಪಾಯದಲ್ಲಿದೆ.ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿನ ನಿವಾಸಿ ವಸಂತಿ ಎಂಬವರ ಮನೆಯ ಹಿಂಬದಿಯ ಗುಡ್ಡ ಕುಸಿದಿದ್ದು ಮನೆಯ ಹಿಂಭಾಗಕ್ಕೆ ಹಾಗೂ ಕೊಟ್ಟಿಗೆಗೆ ಹಾನಿ ಸಂಭವಿಸಿದೆ.ನಾವೂರು ಗ್ರಾಮದ ಕಾರ್ಮಿನಡ್ಕ ಎಂಬಲ್ಲಿ ದೇಜಪ್ಪ ಶೆಟ್ಟಿಗಾರ್ ಎಂಬವರ ಮನೆಯ ಸಮೀಪ ಮಣ್ಣು ಕುಸಿದು ಬಿದ್ದಿದೆ ವಾಸ್ತವ್ಯದ ಮನೆಗೆ ಹೆಚ್ಷಿನ...
ಬೆಳ್ತಂಗಡಿ; ಬದುಕು ಕಟ್ಟೋಣ ತಂಡದಿಂದ ಯಶೋವಿಜಯ ಬದುಕು-ನೆನಪು-ಸ್ಮರಣೆ ಕಾರ್ಯಕ್ರಮ
ಬೆಳ್ತಂಗಡಿ: ಕೀರ್ತಿಶೇಷ ಡಾ. ಬಿ.ಯಶೋವರ್ಮ ಮತ್ತು ವಿಜಯರಾಘವ ಪಡ್ವೆಟ್ನಾಯರ ಸರಳ ಹಾಗೂ ಶಿಸ್ತುಬದ್ಧ ಜೀವನ, ಸೇವೆ-ಸಾಧನೆ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಸೋನಿಯ ಯಶೋವರ್ಮ ಹೇಳಿದರು.ಅವರು ಭಾನುವಾರ ಉಜಿರೆಯಲ್ಲಿ ಕೃಷ್ಣಾನುಗ್ರಹ ಸಭಾಭವನದಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿಕ್ಲಬ್, ಎಸ್.ಡಿ.ಎಂ. ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಘಟಕ, ಎಸ್.ಡಿ.ಎಂ. ಕ್ರೀಡಾಸಂಘ ಹಾಗೂ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಯಶೋವಿಜಯ: ಬದುಕು-ನೆನಪು-ಸ್ಮರಣೆ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲಾವಿದ್ಯಾರ್ಥಿಗಳಿಗೆ ಚೀಲ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಡಾ. ಪ್ರದೀಪ್ ನಾವೂರು,...















