Home ಅಪಘಾತ ಮದ್ದಡ್ಕ; ಹೆದ್ದಾರಿ ಚರಂಡಿಗೆ ಉರುಳಿದ ಕಾರು

ಮದ್ದಡ್ಕ; ಹೆದ್ದಾರಿ ಚರಂಡಿಗೆ ಉರುಳಿದ ಕಾರು

29
0

ಬೆಳ್ತಂಗಡಿ: ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಮದ್ದಡ್ಕ ಸಮೀಪ ಮಾರುತಿ ಕಾರು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಮಾ 26 ರಂದು ಮಧ್ಯಾಹ್ನ ನಡೆದಿದೆ.

ಉಜಿರೆ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದು ಕಾರು ಹೆದ್ದಾರಿಯ ರಸ್ತೆಯ ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಬಿದ್ದಿದ್ದು ಕಾರು ನಜ್ಜುಗುಜ್ಜಾಗಿದೆ. ಅದೃಷ್ಟವಾತ್ ಯಾವುದೇ ಅಪಾಯ ಸಂಭವಿಸಿಲ್ಲ ಇಬ್ಬರು ಪ್ರಯಾಣಿಕರು ಕಾರಿನಲ್ಲಿ ಇದ್ದರು ಎನ್ನಲಾಗಿದೆ.
ಇಲ್ಲಿ ತೆರೆದ ಚರಂಡಿ ಇದ್ದು ಇದನ್ನು ಗುರುತಿಸಲು ಯಾವುದೇ ಸೂಚನಾ ಫಲಕಗಳಿಲ್ಲ.ಕಳೆದ ಎರಡು ಮೂರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ವಾಹನಗಳು ಚರಂಡಿಗೆ ಬೀಳುತ್ತಿದ್ದು ಇನ್ನದರೂ ಹೆದ್ದಾರಿ ಕಾಮಗಾರಿ ನಡೆಸುವವರು ಎಚ್ಚೆತ್ತುಕೊಂಡು ಕನಿಷ್ಟ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here