ಕರ್ನಾಟಕ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ; ಹೇಮಚಂದ್ರ ಬಬ್ಬುಕಟ್ಟೆ ಅವರಿಗೆ ಚಿನ್ನದ ಪದಕ
ಬೆಳ್ತಂಗಡಿ; ಕುಂದಾಪುರದಲ್ಲಿ ಜರಗುತ್ತಿರುವ ಕರ್ನಾಟಕ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧಾ ಕೂಟದ 74 ಕೆಜಿ ಮಾಸ್ಟರ್ ವಿಭಾಗದಲ್ಲಿ ಹೇಮಚಂದ್ರ ಬಬ್ಬುಕಟ್ಟೆ ಇವರು ಚಿನ್ನದ ಪದಕ ವಿಜೇತರಾಗಿ. ಇವರು ಅಕ್ಟೋಬರ್ 2024 ರ ತಿಂಗಳಿನಲ್ಲಿ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಪರ್ಧಾ ಕೂಟಕ್ಕೆ ಆಯ್ಕೆ ಆಗಿರುತ್ತಾರೆ. ಇವರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿಬೆಳ್ತಂಗಡಿಯಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇವರು ಅಂತರ್ ರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರೀಡಾ ಪಟುವಾಗಿರುತ್ತಾರೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಠಾಣೆಗೆ ದೂರು
ಬೆಳ್ತಂಗಡಿ: ಸೆ. 8 ರಂದು ಉಜಿರೆಯ ಗಣೇಶ ಚತುರ್ಥಿ ಹಬ್ಬದ ಸಾರ್ವಜನಿಕ ಸಮಾರಂಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿರುವ ವಿಷಯ ಜಾತಿ ವೈಮನಸ್ಸು ಉಂಟುಮಾಡಲು,ಸಮುದಾಯಗಳ ನಡುವೆ ಅಶಾಂತಿ ಹಾಗೂ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿಯಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಜಿರೆಯ ಅಜಿತ್ ಹೆಗ್ಡೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಗೂ ಬಾಹುಬಲಿ ಸೇವಾ ಸಮಿತಿ ಧರ್ಮಸ್ಥಳ ಇದರ ಅಧ್ಯಕ್ಷ ಪದ್ಮಪ್ರಸಾದ್ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಣೇಶ ಚೌತಿಯ ಹಬ್ಬದ ಧಾರ್ಮಿಕ ಸಮಾರಂಭದಲ್ಲಿ ಜೈನ ಸಮುದಾಯಕ್ಕೆ ಬೆದರಿಕೆ ಹಾಕಿ,...
ಮಹಿಳೆ ಹಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಿ ಸ್ನೇಹ ಕಿರಣ್ ಒಕ್ಜೂಟದಿಂದ ಮನವಿ
ಬೆಳ್ತಂಗಡಿ; ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಇತ್ತೀಚೆಗೆ ರಾಜ್ಯ ಮತ್ತು ಜಿಲ್ಲೆಯ ಹಲವಾರು ಕಡೆಗಳಲ್ಲಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ಆಗುತ್ತಿರುವ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ ತಪ್ಪಿದಸ್ಥರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರಿಗೆ ಶಾಶ್ವತವಾಗಿ ಜಾಮೀನು ನಿರಾಕರಿಸಬೇಕು ಹಾಗೂ ವಿಧವಾ ವೇತನ ಹೆಚ್ಚಳ ಕುರಿತಂತೆ ಹಾಗೂ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಿನಾಂಕ 12.09.2024 ರಂದು ಜಿಲ್ಲಾಧಿಕಾರಿಯವರಿಗೆ, ಪೋಲಿಸ್ ಕಮಿಷನರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ...
ಕ್ರೈಸ್ಟ್ ಅಕಾಡೆಮಿಯಲ್ಲಿ ಅಜ್ಜಿ ಅಜ್ಜಂದಿರ ದಿನಾಚರಣೆ; ಮಕ್ಕಳಂತೆ ನಲಿದ ಅಜ್ಜಿ ಅಜ್ಜಂದಿರು
ಮುಂಡಾಜೆ :ಕುಟುಂಬಗಳು ಚಿಕ್ಕದಾಗುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಅಜ್ಜಿ ಅಜ್ಜಂದಿರನ್ನು ಬೆಸೆಯುವ ಈ ಕಾರ್ಯಕ್ರಮವು ಅತ್ಯಂತ ವಿಶೇಷವಾದುದು ಎಂದು ಮುಂಡಾಜೆ ಕ್ರೈಸ್ಟ್ ಅಕಾಡೆಮಿಯ ಪ್ರಾಚಾರ್ಯರಾದ ಫಾದರ್ ಮ್ಯಾಥಿವ್ ಜೆಜೆ CMI ಇವರು ಬಣ್ಣಿಸಿದರು. ಕ್ರೈಸ್ಟ್ ಅಕಾಡೆಮಿ ಶಾಲೆ(ICSE) ಮುಂಡಾಜೆ, ಇಲ್ಲಿ ಆಯೋಜಿಸಿದ್ದ ಅಜ್ಜಿ ಅಜ್ಜಂದಿರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. "ಪ್ರಸ್ತುತ ದಿನಗಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಇದಕ್ಕೆ ಕಾರಣ ಅಜ್ಜಿ ಅಜ್ಜಂದಿರು ಮೊಮ್ಮಕ್ಕಳೊಂದಿಗೆ ಬೆರೆಯದಿರುವುದು. ಹಿರಿಯರ ಆದರ್ಶ ಮತ್ತು ಮೌಲ್ಯಗಳು ಪ್ರಸ್ತುತ ಪೀಳಿಗೆಗೆ ದಾರಿದೀಪವಾಗಬೇಕಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಸ್ಪಂದಿಸಿ ಇಷ್ಟೊಂದು ಹಿರಿಯರು...
ಸಿ.ಪಿ.ಐ.ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ
ಹೊಸದಿಲ್ಲಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ರಾಜ್ಯಸಭಾ ಸಂಸದ ಸೀತಾರಾಂ ಯೆಚೂರಿ ಅವರು ನಿಧನರಾಗಿದ್ದಾರೆ. 72 ವರ್ಷದ ಸೀತರಾಂ ಯೆಚೂರಿ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ದೆಹಲಿಯ ಏಮ್ಸ್ ನ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ವೆಂಟಿಲೇಟರ್ ಸಹಾಯದಿಂದಿದ್ದರು. ನುರಿತ ವೈದ್ಯರ ತಂಡವು ಅವರ ಆರೋಗ್ಯದ ಮೇಲೆ ನಿಗಾ ವಹಿಸಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಬೆಳ್ತಂಗಡಿ ಪ್ರವಾಸಿ ಮಂದಿರ ಕಾಮಗಾರಿಯಲ್ಲಿ ಅವ್ಯವಹಾರ, ಉನ್ನತ ಮಟ್ಟದ ತನಿಖೆಗೆ ಲೋಕೋಪಯೋಗಿ ಸಚಿವರಿಗೆ ಮನವಿ
ಬೆಳ್ತಂಗಡಿ.ಪ್ರವಾಸಿ ಮಂದಿರ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಯವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪೂರ್ತಿ ದಾಖಲೆಗಳೊಂದಿಗೆ ದೂರು ಸಲ್ಲಿಸಿದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ ಉಪಸ್ಥಿತರಿದ್ದರು.
ಅಸಮರ್ಪಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿರುದ್ಧ ಬೆಳ್ತಂಗಡಿಯಲ್ಲಿ ಹೆದ್ದಾರಿ ತಡೆದು ಎಸ್.ಡಿ.ಪಿ.ಐ ಪ್ರತಿಭಟನೆ.
ಬೆಳ್ತಂಗಡಿ; ಮಂದಗತಿಯಿಂದ ಸಾಗುತ್ತಿರುವ ಪುಂಜಾಲಕಟ್ಟೆ - ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವತಿಯಿಂದ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಗುರುವಾರ ಬೆಳ್ತಂಗಡಿಯ ಮೂರುಮಾರ್ಗದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.ಕ್ಷೇತ್ರ ಸಮಿತಿ ಸದಸ್ಯರಾದ ನವಾಝ್ ಕಟ್ಟೆ ಮಾತನಾಡಿ, ಪುಂಜಾಲಕಟ್ಟೆ - ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಆರಂಭಗೊಂಡು ವರ್ಷಗಳೆ ಕಳೆದರು ಇನ್ನು ಕಾಮಗಾರಿ ಪೂರ್ಣಗೊಳ್ಳದೆ ದಿನ ನಿತ್ಯ ಅಫಘಾತಗಳು ಸಂಭವಿಸುತ್ತಿವೆ. ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು...
ಕೆ.ಎಸ್.ಎಂ.ಸಿ.ಎ ಕೇಂದ್ರೀಯ ಸಮಿತಿಯಿಂದ ವಿವಿಧ ಚರ್ಚ್ ಗಳಿಗೆ ಭೇಟಿ
ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಂಘಟನೆಯಾದ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿಯ ವತಿಯಿಂದ ಧರ್ಮಸ್ಥಳ ಫೊರೋನಾದ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ ಸ್ಥಳೀಯ ಸಮಿತಿಯ ಸದಸ್ಯರುಗಳೊಂದಿಗೆ ಚರ್ಚೆ ನಡೆಸಿ ಸಂಘಟನೆಯ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.ಕೆ.ಎಸ್ ಎಂ.ಸಿ ಎ.ಕೇಂದ್ರ ಸಮಿತಿಯ ನಿರ್ದೇಶಕರದ ಫಾ ಆದರ್ಶ್ ಪುದೀಯೇಡತ್ ಹಾಗೂ ಸಂಘಟನೆಯ ಅಧ್ಯಕ್ಷರಾದ ಬಿಟ್ಟಿ ನೆಡುನಿಲಂ ಅವರು ನೇತೃತ್ವ ವಹಿಸಿದ್ದರು. ಉಜಿರೆ ಸಂತ ಜಾರ್ಜ್ ಚರ್ಚ್, ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ್, ಪುದುವೆಟ್ಟು ಸೈಟ್ ಮೇರಿ...
ಬೆಳ್ತಂಗಡಿಗೆ ನ್ಯಾಯಾಲಯ ಕಟ್ಟಡ ಮಂಜೂರು ಗೊಳಿಸುವಂತೆ ವಿಧಾನ ಸಭಾ ಅಧ್ಯಕ್ಷರಿಗೆ ಮನವಿ
ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವ ನಿಟ್ಟಿನಲ್ಲಿ ಈ ದಿನ ಬೆಂಗಳೂರಿನ ವಿಧಾನ ಸಭಾಧ್ಯಕ್ಷರ ಕಚೇರಿಯಲ್ಲಿ ವಿಧಾನ ಸಭಾಧ್ಯಕ್ಷರಾದ ಯು ಟಿ ಖಾದರ್ ರವರನ್ನು ಭೇಟಿ ಮಾಡಿ ಅಗತ್ಯ ಸಹಕಾರ ನೀಡುವಂತೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ, ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ಕೆ ಶಾಹುಲ್ ಹಮೀದ್ ಜೊತೆಗಿದ್ದರು.
ಬೆಳ್ತಂಗಡಿ, ತಾಲೂಕಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ 54 ಹೋಂಸ್ಟೇಗಳಿಗೆ ಅರಣ್ಯ ಇಲಾಖೆಯಿಂದ ನೋಟೀಸ್
Neetis from Forest Department for 54 homestays in eco-sensitive area of Belthangadi Taluk ಬೆಳ್ತಂಗಡಿ; ತಾಲೂಕಿನಲ್ಲಿ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಹಾಗೂ ಉದ್ಯಾನವನದ ಬಫರ್ ಝೋನ್ ಎಂದು ಗುರುತಿಸಲಾಗಿರುವ ಪರಿಸರಸೂಕ್ಷ್ಮ ಪ್ರದೇಶದಲ್ಲಿರುವ 54 ಹೋಂ ಸ್ಟೇಗಳಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ನೋಟೀಸ್ ನೀಡಿ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ.ಯಾವುದೇ ಪರವಾನಿಗೆಯಿಲ್ಲದೆ ಕುದುರೇ ಮುಖ ರಾಷ್ಟ್ರೀಯ ಉದ್ಯಾನವನದ ಸುತ್ತಲೂ ಅನಧಿಕೃತವಾಗಿ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ನೋಟೀಸ್ ನೀಡಿ ದಾಖಲೆಗಳನ್ನು ಹಾಜರು ಪಡಿಸುವಂತೆ ಸೂಚಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.2020...















