ಮುಂಡಾಜೆ:ವಿದ್ಯುತ್ ಶಾಕ್ ಗಬ್ಬದ ಹಸು ಸಾವು

0

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಗಬ್ಬದ ಹಸು ಸಾವನ್ನಪ್ಪಿದ ಘಟನೆ ನಡೆದಿದೆ.ಮುಂಡಾಜೆ ಗ್ರಾಮದ ಗುಂಡಿ ಸೇತುವೆ ಸಮೀಪ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಹಸುವಿನ ಕೊಂಬಿಗೆ ತಾಗಿದ್ದು ಈ ವೇಳೆ ತಂತಿಯನ್ನು ಎಳೆದಾಡಿದ ಹಸು ಶಾಕ್ ನಿಂದ ಸ್ಥಳದಲ್ಲೇ ಮೃತಪಟ್ಟಿತು.ಸ್ಥಳೀಯ ಕೊಂಬಿನಡ್ಕದ ಶಿವಪ್ಪ ಶೆಟ್ಟಿ ಎಂಬವರ 4ವರ್ಷ ಪ್ರಾಯದ ಹಸು ಇದಾಗಿದ್ದು,ಮೆಸ್ಕಾಂ ಅಧಿಕಾರಿಗಳು,ಪಶು ಇಲಾಖೆ ಅಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ

0

ಬೆಳ್ತಂಗಡಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ಸಂಘಟನಾ ಸಂಚಾಲಕರಾಗಿದ್ದಚಂದು ಎಲ್ ರವರಪ್ರಥಮ ವರ್ಷದ ಪುಣ್ಯ ಸ್ಮರಣೆಯು ಜೂ22ರಂದು ಬೆಳ್ತಂಗಡಿಯಶ್ರೀ ನಾರಾಯಣಗುರು ಸಭಾ ಭವನದಲ್ಲಿ ನೆರವೇರಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ತಾಲೂಕು ಪ್ರಧಾನ ಸಂಚಾಲಕ ರಮೇಶ್ ಆರ್ ಅಧ್ಯಕ್ಷತೆವಹಿಸಿದ್ದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ಮಲ್ಲೇಶ್ ಅಂಬುಗ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಚಂದು ಎಲ್ ಅವರ ಒಡನಾಟದ ದಿನಗಳನ್ನು ಸ್ಮರಿಸಿಕೊಂಡು ಚಂದು ಅವರ ಅಭಿಮಾನಿಗಳಾಗಬೇಡಿ...

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಆಳ್ವಾಸ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಬೆಳ್ತಂಗಡಿ;  ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಿಜಾರ್ ಮತ್ತು ರಾಜ್ಯ ಪ್ರಶಸ್ತಿ ಪಡೆದ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ 22.06.2025 ರಂದು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಭಾ ಭವನದಲ್ಲಿ ನಡೆಯಿತು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ  ಧರಣೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ ಫ್ರೆಂಡ್ಸ್ ಕ್ಲಬ್ ಸದಾ ಗ್ರಾಮಸ್ಥರ ಆರೋಗ್ಯದ ಬಗ್ಗೆ ಒತ್ತುಕೊಟ್ಟು ಆಳ್ವಾಸ್ ಆಸ್ಪತ್ರೆವತಿಯಿಂದ ವಾರಕ್ಕೊಮ್ಮೆ ಅರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆ ಯ ಏರ್ಪಾಡು ಮಾಡುತ್ತಿದೆ.50 ವರ್ಷಗಳು ಮೇಲ್ಪಟ್ಟವರ ರಕ್ತದೊತ್ತಡ...

ಮಂಗಳೂರಿನಲ್ಲಿ ಅಪಘಾತ ಬೆಳ್ತಂಗಡಿ ಯ ವ್ಯಕ್ತಿ ಮೃತ್ಯು

0

ಬೆಳ್ತಂಗಡಿ; ಮಂಗಳೂರು ಬಳಿಯ ಫರಂಗಿಪೇಟೆಯಲ್ಲಿ ಶನಿವಾರ ಸಂಜೆ ನಡೆದ ಕಂಟೈನರ್ ಹಾಗೂ ದ್ವಿಚಕ್ರ ವಾಹನದ ನಡುವಿನ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಪುತ್ತಿಲ ನಿವಾಸಿವ ಇಬ್ರಾಹಿಂ ಎಂಬವರು ಮೃತಪಟ್ಟ ಘಟನೆ ಸಂಭವಿಸಿದೆ.ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಳೆಂಜಿಬೈಲು ನಿವಾಸಿ ಇಬ್ರಾಹಿಮ್ ಎನ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುತ್ತಾರೆ.ಮೃತದೇಹ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿದೆ.

ತೋಟತ್ತಾಡಿ ನಿವಾಸಿ ರೋಸಮ್ಮ ಜೋಸೆಫ್ ನಿಧನ

0

ಬೆಳ್ತಂಗಡಿ; ತೋಟತ್ತಾಡಿ ನಿವಾಸಿ ಕುರುಪ್ಪನಾಟ್ ರೋಸಮ್ಮ ಜೋಸೆಫ್ (90ವ) ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಮಗ ಬಿಜು.ಕೆ ಜೋಸೆಫ್, ಸೊಸೆ ಶೀನಾ ಜೋಸೆಫ್, ಮಗಳು ಲಿನ್ಸಿ ಅಳಿಯ ಸಾಜನ್ , ಮಗಳು ಬಿನ್ಸಿ ಹಾಗು ಅಳಿಯ ರೆಜಿ ಮೊಮ್ಮಕ್ಕಳು ಹಾಗೂ ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಭಾನುವಾರ 3ಗಂಟೆಗೆ ತೋಟತ್ತಾಡಿ ಸೈಂಟ್ ಆಂಟನಿ ಫೊರೋನಾ ಚರ್ಚನಲ್ಲಿ ನಡೆಯಲಿದೆ.

ಖಾಸಗೀ ಸಂಸ್ಥೆಗಳಲ್ಲಿ ನೌಕರರ ದುಡಿಮೆಯ ಅವಧಿ ಹೆಚ್ಚಳಕ್ಕೆ ಸಿಐಟಿಯು ವಿರೋದ- ಬಿ.ಎಂ.ಭಟ್

0

ಬೆಳ್ತಂಗಡಿ; ಇಂದು ಖಾಸಗಿ ಸಂಸ್ಥೆಗಳಲ್ಲಿ, ವಾಣಿಜ್ಯ ಸಂಸ್ಥೆಗಳಲ್ಲಿ ದುಡಿಯುವ ನೌಕರರ ದುಡಿಮೆಯ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಏರಿಸಲು ನಿರ್ಧರಿಸಿದ ರಾಜ್ಯ ಸರಕಾರದ ಪ್ರಸ್ತಾಪವನ್ನು ಸಿಐಟಿಯು ಒಪ್ಪಲು ಸಾದ್ಯವಿಲ್ಲ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಂ.ಭಟ್ ಹೇಳಿದ್ದಾರೆ.ನೌಕರರ ಕೆಲಸದ ಅವದಿಯನ್ನು ಹೆಚ್ಚಿಸಲು ಮುಂದಾಗುತ್ತಿರುವ ರಾಜ್ಯ ಸರಕಾರದ ನಡೆ ಕಾರ್ಮಿಕ ವರ್ಗಕ್ಕೆ ಮಾಡುವ ಮಹಾದ್ರೋಹವಾಗಲಿದೆ ಎಂದ ಅವರು, 1885 ರಲ್ಲಿ ಚಿಕಾಗೋದಲ್ಲಿ ಪ್ರಾರಂಭವಾಗಿ ಜಗತ್ತಿನಾಧ್ಯಂತ ನಡೆದ ತ್ಯಾಗ ಬಲಿದಾನದ ಹೋರಾಟದ ಪರಿಣಾಮ ಜಾರಿಯಾದ 8 ಗಂಟೆಯ ದುಡಿಮೆಯನ್ನು 10 ಗಂಟೆಗೆ ಏರಿಸುವುದೆಂದರೆ ಇತಿಹಾಸವನ್ನು...

ಬೆಂಗಳೂರಿನ ಸಂದ್ಯಾ ಪವಿತ್ರ ನಾಗರಾಜ್ ವಿರುದ್ದ ಪೂಂಜಾಲಕಟ್ಟೆ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು

0

ಬೆಳ್ತಂಗಡಿ; ಸೌಜನ್ಯ ಹೆಲ್ಪ ಲೈನ್ ಸಂಬ ಹೆಸರಿನಲ್ಲಿ   ನೊಂದವರಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿ ಪ್ರಕರಣವೊಂದನ್ನು ಹೈಕೋರ್ಟ್ ನಲ್ಲಿ ಬಗೆ ಹರಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬುವರ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೇಶ್ ಅವರ ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಗೆಹರಿಸುವುದಾಗಿ ಹೇಳಿ ಹಣ ಪಡೆದಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನ ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬುವರು ನೀಡಿದ...

ಬೆಳ್ತಂಗಡಿ; ಎಸ್.ಡಿ.ಪಿ.ಐ ಸಂಸ್ಥಾಪನಾ ದಿನಾಚರಣೆ; ರಾಜಿಯಿಲ್ಲದ ಹೋರಾಟ ರಾಜಕೀಯಕ್ಕಾಗಿ ಎಸ್‌ಡಿಪಿಐ ಜೊತೆ ಕೈ ಜೋಡಿಸಿ : ಅನ್ವರ್ ಸಾದಾತ್ ಎಸ್

0

ಬೆಳ್ತಂಗಡಿ : ಜೂ. 21- ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಭಿವೃದ್ಧಿ ರಹಿತ ವಂಶಾಡಳಿತ, ಕೋಮು ಧ್ರುವೀಕರಣದ ರಾಜಕೀಯ, ನ್ಯಾಯ ನಿರಾಕರಣೆ, ಹಕ್ಕುಗಳಿಂದ ವಂಚನೆ, ಅಧಿಕಾರಶಾಹಿಗಳಿಂತ ದಲಿತರ, ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಇತ್ಯಾದಿಗಳಿಂದ ಬೇಸತ್ತು ಭಯ ಮುಕ್ತ; ಹಸಿವು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜೂನ್ 21, 2009ರಲ್ಲಿ ಉದಯವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಂಬ ಪಕ್ಷ ಆರಂಭ ಕಾಲದಿಂದಲೇ ಹೋರಾಟ ರಂಗದಲ್ಲಿ ಮುಂಚೂಣಿಯಲ್ಲಿ ತೊಡಗಿಕೊಂಡು ಆಡಳಿತ ಪಕ್ಷಗಳ ದುರಾಡಳಿತದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಆಡಳಿತ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ದಮನಿತರ ಮನೆಮಾತಾಗಿ...

ಬೆಳ್ತಂಗಡಿ ತಾಲೂಕು ಸರಕಾರಿ ಸಮುದಾಯ ಆಸ್ಪತ್ರೆಗೆ ತಾಲೂಕು ಆರೋಗ್ಯ ರಕ್ಷಾ ಸಮಿತಿಯವರು ಬೇಟಿ

0

ಬೆಳ್ತಂಗಡಿ ತಾಲೂಕು ಸರಕಾರಿ ಸಮುದಾಯ ಆಸ್ಪತ್ರೆಗೆ ತಾಲೂಕು ಆರೋಗ್ಯ ರಕ್ಷಾ ಸಮಿತಿಯವರು ಬೇಟಿ ನೀಡಿದರು.ವಾರ್ಡ್ ಗಳಿಗೆ ಬೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.ರಕ್ತ ಪರೀಕ್ಷಾ ಕೇಂದ್ರ,ಶವಾಗಾರ, ಡಯಾಲಿಸ್ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲಿಸಿದರು.ವೈದ್ಯಾಧಿಕಾರಿ ಡಾ.ರಮೇಶ್ ರವರನ್ನು ಬೇಟಿ ಮಾಡಿ ತಾಲೂಕಿನಾಧ್ಯಂತ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ ಹತೋಟಿಗೆ ತರಲು ಮುಂಜಾಗೃತಾ ಕ್ರಮವಹಿಸುವಂತೆ ತಿಳಿಸಿದರು. ತಾಲೂಕಿನಲ್ಲಿ 19 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ ಎಂದು ತಿಳಿಸಿದರು. ರೋಗಿಗಳಿಗೆ ನೀಡಲು ಔಷದ ಕೊರತೆಯ ಬಗ್ಗೆ ಮಾಹಿತಿ ಕೇಳಿದಾಗ ಯಾವುದೇ ಕೊರತೆ ಇಲ್ಲ ಹೆಚ್ಚುವರಿಯಾಗಿ ತರಿಸಿದ್ದೇವೆ ಎಂದು ತಿಳಿಸಿದರು.ಇತ್ತೀಚೆಗೆ ಆಸ್ಪತ್ರೆಯಲ್ಲಿ...

ಬೆಳ್ತಂಗಡಿ : ಲಾಯಿಲ ನೂರುಲ್ ಹುದಾ ಜುಮ್ಮಾ ಮಸೀದಿಯ ನೂತನ ಪದಾಧಿಕಾರಿಗಳ ಅಯ್ಕೆ

0

ಬೆಳ್ತಂಗಡಿ : ನೂರುಲ್ ಹುದಾ ಜುಮ್ಮಾ ಮಸೀದಿ ಲಾಯಿಲದಲ್ಲಿ ಜೂನ್ 20 ರಂದು ನೂರುಲ್ ಹುದಾ ಮದರಸ ಹಾಲ್ ನಲ್ಲಿ ಗೌರವಧ್ಯಕ್ಷ ರಾದ ಇಸ್ಮಾಯಿಲ್ ರವರ ಸಮ್ಮುಖದಲ್ಲಿ ಮಹಾಸಭೆ ನಡೆಯಿತು. ಈ ಮಹಾ ಸಭೆಯಲ್ಲಿ 2025-26 ರ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹನೀಫ್ ಲಾಯಿಲ, ಉಪಾಧ್ಯಕ್ಷಾಗಿ ಮುಸ್ತಫಾ ಲಾಯಿಲ, ಕಾರ್ಯದರ್ಶಿಯಾಗಿ ಆಸೀಫ್ ಕಕ್ಕೆನ,ಜೊತೆ ಕಾರ್ಯದರ್ಶಿಯಾಗಿ ಸಮೀರ್ ಮತ್ತು ಹಬೀಬ್,ಕೋಶಾಧಿಕಾರಿಯಾಗಿ ಅಝೀಜ್ ಲಾಯಿಲ,ಲೆಕ್ಕಪರಿಶೋಧಕರಾಗಿ ಮುಸ್ತಫಾ ಕಾಶಿಬೆಟ್ಟು ಮತ್ತು ಆಸೀಫ್ ಎ.ಎನ್ ಆಯ್ಕೆಯಾಗಿದ್ದಾರೆ.