ಕೊಕ್ಕಡ; ವಿಶ್ವ ಮಹಿಳಾ ದಿನಾಚರಣೆ ಮತ್ತು ಸಂಜೀವಿನಿ ಸಂತೆ

0

ಬೆಳ್ತಂಗಡಿ;  ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಜಿಲ್ಲಾ ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ ದಕ್ಷಿಣ ಕನ್ನಡ, ತಾಲೂಕು ಅಭಿಯಾನ ನಿರ್ವಹಣಾ ಘಟಕ, ತಾಲೂಕು ಪಂಚಾಯತ್ ಬೆಳ್ತಂಗಡಿ, ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ (ರಿ.)ಬೆಳ್ತಂಗಡಿ, ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ.) ಕೊಕ್ಕಡ ಗ್ರಾಮ ಪಂಚಾಯತ್ ಇವುಗಳ ಜಂಟಿ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಂಜೀವಿನಿ ಸಂತೆ ಮಾರ್ಚ್ 15ರಂದು ಶನಿವಾರ ಕೊಕ್ಕಡದ ಸೌತಡ್ಕ ಶ್ರೀ ಮಹಾ ಗಣಪತಿ...

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಮಾಸಿಕ ಸಭೆ ಮತ್ತು ಇಫ್ತಾರ್ ಸಮ್ಮಿಲನ.

0

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆ ಮತ್ತು ಇಫ್ತಾರ್ ಸಮ್ಮಿಲನ ಪಕ್ಷದ ಕಚೇರಿಯಲ್ಲಿ ಭಾನುವಾರ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು. ವೀಕ್ಷಕರಾಗಿ ಆಗಮಿಸಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಸಮಾರೋಪ ಮಾತುಗಳನ್ನಾಡಿದರು. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಉಪಾಧ್ಯಕ್ಷರಾದ...

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಮೋಡಾ ವೀಲ್ ಚೇರ್ ವಿತರಣೆ.

0

ಬೆಳಾಲು :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ,ಉಜಿರೆ ವಲಯದ, ಬೆಳಾಲು ಕಾರ್ಯಕ್ಷೇತ್ರದ ಕುಕ್ಕೊಟ್ಟು ನಿವಾಸಿ ಮುತ್ತಪ್ಪ ನಾಯ್ಕ್ ರವರಿಗೆ ನಡೆದಾಡಲು ಕಷ್ಟಸಾಧ್ಯವಾಗಿದ್ದು ಇವರಿಗೆ ಸಮುದಾಯ ಅಭಿವೃದ್ಧಿ ವಿಭಾಗದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಕಮೋಡ ವೀಲ್ ಚೇರ್ ಗೆ ಬೇಡಿಕೆ ನೀಡಿದ್ದು, ಸದ್ರಿ ಬೇಡಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಖಾವಂದರು ಮಂಜೂರು ಮಾಡಿರುತ್ತಾರೆ. ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ರವರು ವೀಲ್ ಚೇರ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಉಜಿರೆ ವಲಯದ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿದಿ ಪ್ರಮೀಳಾ, ಸೇವಾಪ್ರತಿನಿದಿ ತಾರನಾಥ,...

ಲಾಯಿಲ ನಿವಾಸಿ ಮಾಯಿಲ(ರಮೇಶ್) ನಿಧನ

0

ಬೆಳ್ತಂಗಡಿ;  ಹಿರಿಯ ದಲಿತ ನಾಯಕ , ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿದ್ದ ದಿ. ಚಂದು ಎಲ್ ರವರ ಸಹೋದರ , ಲಾಯಿಲ ಗ್ರಾಮದ ನಿನ್ನಿಕಲ್ಲು ನಿವಾಸಿ ಮಾಯಿಲ(ರಮೇಶ್)(56) ರವರು ಅಲ್ಪಕಾಲದ ಅನಾರೋಗ್ಯದಿಂದ ಮಾರ್ಚ್ 15 ರಂದು ಶನಿವಾರ ಸ್ವಗೃಹದಲ್ಲಿ ನಿಧನರಾದರು. ಹಿರಿಯ ಸೆಂಟ್ರಿಂಗ್ ಮೇಸ್ತ್ರಿಯಾಗಿದ್ದ ಅವರು ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಸುನಂದಾ , ಪುತ್ರ ಸುದೀಪ್ , ಪುತ್ರಿ ಸುಪ್ರಿಯಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಹಿರಿಯ ಉದ್ಯಮಿ , ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ನಡ...

ಮಂಗಳೂರು ಪೊಲೀಸರ‌ ಯಶಸ್ವಿ ಕಾರ್ಯಾಚರಣೆ; ‌   37.87 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

0

ಮಂಗಳೂರು: ಕರ್ನಾಟಕ ರಾಜ್ಯದ ಇತಿಹಾದಲ್ಲಿಯೇ ಅತಿ ದೊಡ್ಡ ಡ್ರಗ್ಸ್‌ ಜಾಲವೊಂದನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ. ಸುಮಾರು 75 ಕೋಟಿ ರೂ ಮೌಲ್ಯದ 37.87 ಕೆ ಜಿ ತೂಕದ ಎಂಡಿಎಂಎ ಡ್ರಗ್ಸನ್ನು ಮಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜ್ಯಕ್ಕೆ ಮತ್ತು ಇತರ ಸ್ಥಳಗಳಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಪ್ರಜೆಗಳನ್ನು ಬೆಂಗಳೂರಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಬಂಬಾ ಫಂಟಾ (31 ವ) ಮತ್ತು ಅಬಿಗೈಲ್‌ ಅಡೊನಿಸ್‌ (30 ವ) ಎಂಬವರನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರ ಸತತ ಪ್ರಯತ್ನ 2024ರಲ್ಲಿ ಪಂಪ್‌ ವೆಲ್‌ ಬಳಿ ಲಾಡ್ಜ್‌ವೊಂದರಲ್ಲಿ...

ಬದುಕು ಕಟ್ಟೋಣ ಬನ್ನಿ ತಂಡದ ನೇತೃತ್ವದಲ್ಲಿ ನೇತ್ರಾವತಿ ಸ್ವಚ್ಚತಾ ಅಭಿಯಾನ

0

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ.)ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಧ.ಮಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಶ್ರೀ ಧ.ಮಂ. ಸ್ಪೋಟ್ಸ್ ಕ್ಲಬ್ ಉಜಿರೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ (ರಿ.) ಬೆಳ್ತಂಗಡಿ ಇದರ ನೇತೃತ್ವದಲ್ಲಿ 'ವಂದೇ ಮಾತರಂ' ನನ್ನ ಸೇವೆ ದೇಶಕ್ಕಾಗಿ.. ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮ ಮಾ.16ರಂದು ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ನಡೆಯಿತು.ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮವನ್ನು ನಾಗೇಶ್ ಕದ್ರಿ, ವೃತ್ತ ನಿರೀಕ್ಷಕರು ಬೆಳ್ತಂಗಡಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,ನೇತ್ರಾವತಿ ಪುಣ್ಯ ನದಿಯಲ್ಲಿ...

ಮರ್ಹೂಮ್ ಹಸನ್ ಗಿಂಡಾಡಿ ಇವರ ಸ್ಮರಣಾರ್ಥ ಎಸ್‌ಡಿಪಿಐ ವತಿಯಿಂದ ಪೇರಲ್ದರಕಟ್ಟೆಯಲ್ಲಿ ಇಫ್ತಾರ್ ಮೀಟ್

0

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ತೆಂಕಕಾರಂದೂರು ಬ್ರಾಂಚ್ ಸಮಿತಿ ವತಿಯಿಂದ, ಮರ್ಹೂಮ್ ಹಸನ್ ಗಿಂಡಾಡಿ ಇವರ ಸ್ಮರಣಾರ್ಥ ಶುಕ್ರವಾರ, ಬದ್ರಿಯಾ ಜುಮ್ಮಾ ಮಸೀದಿ ಪೇರಲ್ದರಕಟ್ಟೆಯಲ್ಲಿ ಇಫ್ತಾರ್ ಮೀಟ್ ಕಾರ್ಯಕ್ರಮ ನಡೆಯಿತು. ಎಸ್‌ಡಿಪಿಐ ತೆಂಕಕಾರಂದೂರು ಬ್ರಾಂಚ್ ಅಧ್ಯಕ್ಷರಾದ ನವಾಝ್ ಮಂಜೊಟ್ಟಿ ನೇತೃತ್ವದಲ್ಲಿ ಇಫ್ತಾರ್ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಕ್ಷೇತ್ರ ನಾಯಕರಾದ ಮುಸ್ತಾಫಾ ಜಿ. ಕೆರೆ, ಅಶ್ರಫ್ ಕಟ್ಟೆ, ರೌಫ್ ಪುಂಜಾಲಕಟ್ಟೆ, ಹಾಜಿ...

ದಿ.ಎನ್ ಪದ್ಮನಾಭ ಮಾಣಿಂಜರಿಗೆ ಗುರುದೇವ ಸಹಕಾರಿ ಸಂಘದಿಂದ ನುಡಿನಮನ

0

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ ನಿವೃತ್ತ ಡಿಎಫ್‌ಓ, ಆಗಿದ್ದ ದಿ.ಎನ್.ಪದ್ಮನಾಭ ಮಾಣಿಂಜರವರಿಗೆ ಶ್ರೀ ಗುರುದೇವ ಸಹಕಾರಿ ಸಂಘದಿಂದ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮ ಮಾ.15 ರಂದು ಬೆಳ್ತಂಗಡಿ ಶ್ರೀಗುರು ಸಾನಿಧ್ಯ ಸಭಾಭವನದಲ್ಲಿ ನಡೆಯಿತು. ಬೆಂಗಳೂರು ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆರ್ಶೀವಚನ ನೀಡಿ ನಿರಂತರ ಉನ್ನತಿ ಹಾಗೂ ಒಳಿತಿನ ಚಿಂತನೆ ಮಾಡುವ ಮನಸ್ಸು ಪದ್ಮನಾಭರವರು. ಸಮಾಜದ ಬಗ್ಗೆ ಕಾಳಜಿ,ಹಿತ ಚಿಂತನೆ ಮಾಡಿದ ನಿಜವಾದ ರಾಜರ್ಷಿ ಪದ್ಮನಾಭರವರು ಎಂದರು.ಸಂಘದ ಉಪಾಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆ...

ವೇಣೂರು ಸೂರ್ಯ ಚಂದ್ರ ಜೋಡುಕರೆ ಕಂಬಳ ಪೂರ್ವಭಾವಿ ಸಭೆ

0

ವೇಣೂರು: 32ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳ ಕೂಟ ದಿನಾಂಕ 30/3/2025ನೇ ಆದಿತ್ಯವಾರ ನಡೆಯಲಿದ್ದು. ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಕಂಬಳ ಸಮಿತಿಯ ಅಧ್ಯಕ್ಷರಾದ ನಿತೀಶ್ ಎಚ್ ಕೋಟ್ಯಾನ್ ರ ಅಧ್ಯಕ್ಷತೆಯಲ್ಲಿ ನಡೆಯಿತು, ಕಂಬಳ ಸಮಿತಿಯ ಗೌರವಾಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ, ಕಂಬಳದ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರಿದರು, ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಶೇಖರ್ ಕುಕ್ಕೆಡಿ, ಪ್ರಧಾನ ಕಾರ್ಯದರ್ಶಿ ಭರತರಾಜ್ ಜೈನ್ ಪಾಪುದಡ್ಕಗುತ್ತು, ಕೋಶಾಧಿಕಾರಿ ಅಶೋಕ್ ಪಾಣೂರು, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ...

ಬಂದಾರು; ಮನೆಯಿಂದ ಪೇಟೆಗೆಂದು ಹೋಗಿದ್ದ ವ್ಯಕ್ತಿಯ ಮೃತದೇಹ ಬಸ್ ನಿಲ್ದಾಣದಲ್ಲಿ ಪತ್ತೆ

0

ಬೆಳ್ತಂಗಡಿ; ಬಂದಾರಿನಲ್ಲಿ ಮನೆಯಿಂದ ಪೇಟೆಗೆಂದು ಹೋದ ವ್ಯಕ್ತಿಯ ಮೃತದೇಹ ಪದ್ಮುಂಜ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.ಮೃತ ವ್ಯಕ್ತಿ ಬಂದಾರು ಗ್ರಾಮದ ನೂಜಿ ಮನೆ ನಿವಾಸಿ ಚೆನ್ನಪ್ಪ ಪರವ (58) ಎಂಬವ ರಾಗಿದ್ದಾರೆ.ಮಾ 11ರಂದು ಚೆನ್ನಪ್ಪ ಪರವ ಉಪ್ಪಿನಂಗಡಿ ಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಅವರು ಮನೆಗೆ ಹಿಂತಿರುಗಿರಲಿಲ್ಲ. ಮಾ12 ರಂದು ಅವರು ಪದ್ಮುಂಜ ಬಸ್ ನಿಲ್ದಾಣದಲ್ಲಿ ಬಿದ್ದುಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು ಅಲ್ಲಿಗೆ ತೆರಳಿ ನೋಡಿದಾಗ ಅವರು ಮೃತಪಟ್ಟಿರುವುದು ಕಂಡುಬಂದಿದೆ. ವಿಪರೀತ ಮದ್ಯಸೇವನೆಯ ಚಟ ಹೊಂದಿದ್ದ...