ಮೊಗ್ರು :ಮುಗೇರಡ್ಕ ಮೂವರು ದೈವಸ್ಥಾನದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ

0

ಬೆಳ್ತಂಗಡಿ; ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ಮತ್ತು ಬಿಸಿನೀರಿನ ವ್ಯವಸ್ಥೆಯ ಯಂತ್ರವನ್ನು ಮೊಗ್ರು ಗ್ರಾಮದ ಪರಾರಿ ಮನೆ ಜಯಂತಿ ಮತ್ತು ಸುಂದರಗೌಡ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿರುತ್ತಾರೆ.ಈ ನೀರಿನ ಘಟಕವನ್ನು ಜ 14 ಮಕರಸಂಕ್ರಮಣ ದಿನ ಮುಗೇರಡ್ಕ ದೈವಸ್ಥಾನದ ಗುತ್ತು ಮನೆಯ ಡಿ ರಾಮಣ್ಣ ಗೌಡ ಇವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮನೋಹರ್ ಅಂತರ, ಜಯಂತಿ ಮತ್ತು ಸುಂದರ ಗೌಡ ಪರಾರಿ ಮನೆ,ಸಹೋದರರಾದ ಸಾಂತಪ್ಪ ಗೌಡ ಮುಗೇರಡ್ಕ,ಚಂದ್ರಶೇಖರ ಮುಗೇರಡ್ಕ, ಸುಧಾಕರ್ ಗೌಡ ನೈಮಾರು , ರಾಮಣ್ಣ...

ಉಪ್ಪಿನಂಗಡಿಯಲ್ಲಿ ಗಾಂಜಾ ಸಾಗಾಟ ಪತ್ತೆ, ಬೆಳ್ತಂಗಡಿ ಪುತ್ತಿಲ ನಿವಾಸಿ ಬಂಧನ

0

ಬೆಳ್ತಂಗಡಿ; ಅಟೋರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದು ಒಂದುರೆ ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ಬೆಳ್ತಂಗಡಿ ತಾಲೂಕಿನ ಪುತ್ತಿಲ ನಿವಾಸಿ ಅಬ್ದುಲ್ ಸಲೀಂ (35) ಎಂಬಾತನನ್ನು ಬಂಧಿಸಿದ್ದಾರೆ.ಉಪ್ಪಿನಂಗಡಿ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅವಿನಾಶ್ ಅವರು ಗುರುವಾರ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಟೋ ರಿಕ್ಷಾವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ ಈ ವೇಳೆ ಪೊಲೀಸರು ವಾಹನವನ್ನು ಸುತ್ತುವರಿದು ಚಾಲಕನ್ನು ವಶಕ್ಕೆ ಪಡೆದು ವಿಚಾರಣೆ...

ಮುಂಡಾಜೆ; ಸಾವಿರ ಸಾಧಕರಿಗೆ ಮನೆ- ಮನದ ಸನ್ಮಾನಕ್ಕೆ ಚಾಲನೆ

0

ಬೆಳ್ತಂಗಡಿ: ಮಂಗಳೂರಿನ ಸಂಸ್ಕಾರ ಭಾರತಿ ವತಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸಾವಿರ ಸಾಧಕರಿಗೆ ಮನೆ- ಮನದ ಸನ್ಮಾನ ಕಾರ್ಯಕ್ರಮಕ್ಕೆ ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.ಸಂಸ್ಕಾರ ಭಾರತಿಯ ತಾಲೂಕು ಅಧ್ಯಕ್ಷ ಸಂಪತಾ ಸುವರ್ಣ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು,ತಾಲೂಕಿನ 81 ಗ್ರಾಮಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಸಾಧಕರ ಮನೆಗಳಿಗೆ ತೆರಳಿ ಸಂಸ್ಕಾರ ಭಾರತಿಯ ಸದಸ್ಯರು, ಗ್ರಾಮಸ್ಥರು ಹಾಗೂ ಗಣ್ಯರು ತೆರಳಿ ಸನ್ಮಾನಿಸಿದರು.ಸಹಕಾರಿ ಕ್ಷೇತ್ರದ ಶ್ರೀಧರ ಜಿ.ಭಿಡೆ, ಸಾಮಾಜಿಕ ಕ್ಷೇತ್ರದ ಅನಂತ ಭಟ್ ಮಚ್ಚಿಮಲೆ, ಅಡೂರು ವೆಂಕಟ್ರಾಯ, ರಾಜಕೀಯ ಕ್ಷೇತ್ರದ ಕೊರಗಪ್ಪ ನಾಯ್ಕ,...

ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಧರ್ಮಸ್ಥಳ ಮುಂಡ್ರುಪ್ಪಾಡಿ ನಿವಾಸಿ ಯುವಕ ಸಾವು.

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿ ನಿವಾಸಿ ಮಿಥುನ್ ಕರ್ಕೇರ( 25) ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿರುವ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಬೈಕ್ ಮಗುಚಿ ಬಿದ್ದು ಗಂಭೀರವಾಗಿ ಗಯಗೊಂಡು ಸಾವನ್ನಪ್ಪಿರುವ ಘಟನೆ ಜ. 16 ರಂದು ತಡರಾತ್ರಿ ನಡೆದಿದೆ. ಯಾವುದೋ ಸಮಾರಂಭ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಹೋಗಿದ್ದ ಯುವಕ ಹಿಂತಿರುಗುವ ವೇಳೆ ಕಲ್ಮಂಜ ನಿಡಿಗಲ್ ಸಮೀಪ ಬೈಕ್ ಸ್ಕಿಡ್ ಆಗಿ ರೋಡಿಗೆ ಬಿದ್ದು ತಲೆಬಾಗಕ್ಕೆ ಗಂಭೀರ ಗಾಯವಾಗಿತ್ತು ಸ್ಥಳೀಯರು ಆತನನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಯುವಕ ಮೃತಪಟ್ಟಿದ್ದಾನೆ.ಮತರು ಖಾಸಗಿ ಬಸ್ ಮತ್ತು...

ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ದಿಯಾ ಎಂ ಕೋಟ್ಯಾನ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಗುರುವಾಯನಕೆರೆ ದೇವಿಕಿರಣ್ ಕಲಾನಿಕೇತನದ ವಿದ್ಯಾರ್ಥಿನಿ ದಿಯಾ ಎಂ ಕೋಟ್ಯಾನ್ ಉನ್ನತಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ವಿದುಷಿ ಸ್ವಾತಿ ಜಯರಾಮ್ ಮತ್ತು ವಿದುಷಿ ಪ್ರಥ್ವಿ ಸತೀಶ್ ರವರ ಶಿಷ್ಯೆಯಾಗಿದ್ದು ಪತ್ರಕರ್ತ ಮನೊಹರ್ ಬಳಂಜ, ಬೆಳ್ತಂಗಡಿ ಸಮುದಾಯ ಆಸ್ಪತ್ರೆಯ ಶುಷ್ರೂಷಕಿ ಲಿಖಿತಾ ದಂಪತಿಗಳ ಪುತ್ರಿಯಾಗಿದ್ದಾಳೆ.

ಉಜಿರೆ;ರಜತ ಮಹೋತ್ಸವದ ಸಂಭ್ರಮದಲ್ಲಿ ಬೆನಕ ಆಸ್ಪತ್ರೆ; ಜ18 ನೂತನ ಕಟ್ಟಡದ ಉದ್ಘಾಟನೆ; ಡಾ. ಗೋಪಾಲಕೃಷ್ಣ ಮಾಹಿತಿ

0

ಬೆಳ್ತಂಗಡಿ; ಕಳೆದ 25ವರ್ಷಗಳಿಂದ ಗ್ರಾಮೀಣ ಪ್ರದೇಶವಾಗಿರುವ ಉಜಿರೆಯಲ್ಲಿ ಕಾರ್ಯನುರ್ವಹಿಸುತ್ತಿರುವ ಬೆನಕ ಆಸ್ಪತ್ರೆ ಅತ್ಯತ್ತಮದರ್ಜಿಯ ಆರೋಗ್ಯ ಶುಶೂಷೆಯನ್ನು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಹಾಗೂ ಸಮುದಾಯದ ಆಶಯಗಳಿಗೆ ಅನುಗುಣವಾಗಿ ಒದಗಿಸುವ ಕಾರ್ಯ ವನ್ನು ಮಾಡುತ್ತಾ ಬಂದಿದೆ. ಈ ಸಂಸ್ಥೆ ಜನರ ಆಶಯಗಳಿಗೆ ಅನುಗುಣವಾಗಿರುವ ಆಸ್ಪತ್ರೆಯಾಗಿಬೆಳೆಯಬೇಕು ಎಂಬುದು ನಮ್ಮ ಸಂಕಲ್ಪ" ಎಂದು ಬೆನಕ ಆಸ್ಪತ್ರೆಯ ಡಾ ಗೋಪಾಲಕೃಷ್ಣ ಕೆ ಹೇಳಿದರು. ಬೆನಕ ಆಸ್ಪತ್ರೆಯ ರಜತ ಮಹೋತ್ಸವದ ಸಂಭ್ರಮದಲ್ಲಿದೆ ವಿಸ್ತ್ರತ ನೂತನ ಕಟ್ಟಡ ಕಾಮಗಾರಿ ಕೂಡ ಮುಗಿದಿದ್ದು, ಕಟ್ಟದ ಉದ್ಘಾಟನೆ ಜ. 18 ರಂದು ನಡೆಯಲಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ...

ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಯ 5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜ 18 ರಂದು ಶಿಲನ್ಯಾಸ; ರಕ್ಷಿತ್ ಶಿವರಾಂ ಮಾಹಿತಿ

0

ಬೆಳ್ತಂಗಡಿ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದ 4 ಕೋಟಿ 60 ಲಕ್ಷ ವೆಚ್ಚದ ನೂತನ ಕಟ್ಟಡ ನಿರ್ಮಾಣ ಮತ್ತು ಸಿಬ್ಬಂದಿ ವಸತಿಗೃಹ ಕಾಮಗಾರಿಗೆ ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 40 ಲಕ್ಷ ವೆಚ್ಚದಲ್ಲಿ ನಡೆಯುವ ಮೂಲಭೂತ ಸೌಕರ್ಯ ಹಾಗೂ ಉನ್ನತಿಕರಣ ಕಾಮಗಾರಿಯಶಿಲನ್ಯಾಸವನ್ನು ರಾಜ್ಯ ಸರಕಾರದ ಆರೋಗ್ಯ ಸಚಿವರೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರೂ ಆದ ದಿನೇಶ್ ಗುಂಡೂರಾವ್ ಅವರುನೆರವೇರಿಸಲಿದ್ದಾರೆ ನಂತರ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿನ ಸಾರ್ವಜನಿಕ ಪ್ರಯೋಗಾಲಯ ಕಟ್ಟಡದ ಉದ್ಘಾಟನೆ, ತಾಲೂಕು ಆಸ್ಪತ್ರೆಯಲ್ಲಿನ 12 ಬೆಡ್ ಗಳ ಐಸೋಲೇಶನ್...

ಧರ್ಮಸ್ಥಳ; ಕಟ್ಟದ ಬಯಲು ನಿವಾಸಿ ನೇಣು ಬಿಗಿದು ಆತ್ಮಹತ್ಯೆ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಕಟ್ಟದ ಬೈಲು ನಿವಾಸಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ವ್ಯಕ್ತಿ ಕಟ್ಟದ ಬಯಲು ನಿವಾಸಿ ಉಮೇಶ್ ಗುಡಿಗಾರ (42) ಎಂಬವರಾಗಿದ್ದಾರೆ.ಮನೆಯ ಸಮೀಪವೇ ಇರುವ ಬಾವಿಯ ಅಡ್ಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಉಮೇಶ್ ಅವರ ಮೃತದೇಹ ಪತ್ತೆ ಯಾಗಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಮೇಶ್ ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದ್ದು ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ

ಮದ್ದಡ್ಕ; ವಸಂತ ಬಂಗೇರ ಹುಟ್ಟುಹಬ್ಬ, ಬಂಗೇರ ಬ್ರಿಗೇಡ್ ನಿಂದ ಕಬಡ್ಡಿ ಪಂದ್ಯಾಟ

0

ಬೆಳ್ತಂಗಡಿ : 'ಮನುಷ್ಯ ಬದುಕಿದರೆ ಕೆ. ವಸಂತ ಬಂಗೇರರ ಹಾಗೆ ಬದುಕಬೇಕು. ಬಡವರ ಪರ ಸದಾ ಕಾಳಜಿ ಬೆಳೆಸಿಕೊಂಡಿದ್ದ ಅವರು ತನ್ನ ಸಿದ್ಧಾಂತದಿಂದ ಹೊರಬಾರದ ಅಪರೂಪದ ವ್ಯಕ್ತಿಯಾಗಿದ್ದರು ' ಎಂದು ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು. ಅವರು ಬುಧವಾರ ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬಿನುತಾ ಬಂಗೇರರವರ ಸಾರಥ್ಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇದರ ಸಹಕಾರದಲ್ಲಿ ಮಾಜಿ ಶಾಸಕರೂ, ಬೆಳ್ತಂಗಡಿ ಅಭಿವೃದ್ಧಿಯ ಹರಿಕಾರರೂ ಕೀರ್ತಿಶೇಷ ಕೆ.ವಸಂತ ಬಂಗೇರರವರ 79 ನೇ...

ನಿಡ್ಲೆ; ಸೇವಾ ಸಹಕಾರಿ ಬ್ಯಾಂಕಿನ ಚುನಾವಣೆ; ಎಲ್ಲ ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತರಿಗೆ ಗೆಲುವು

0

ಬೆಳ್ತಂಗಡಿ: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಎಲ್ಲ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಗೆಲುವನ್ನು ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲಿ ಸೋಲನ್ನು ಕಂಡಿದ್ದಾರೆ. ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಸಾಮಾನ್ಯ ಕ್ಷೇತ್ರದಿಂದ ಕೆ. ರಮೇಶ್ ರಾವ್ (497), ಧನಂಜಯ ಗೌಡ ಕಳೆಂಜ (559), ವಿಜಯ ಕುಮಾರ್ ಹೆಚ್....