ಯುವ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾಗಿ ಅಝರ್ ನಾವೂರು ಆಯ್ಕೆ

0

ಬೆಳ್ತಂಗಡಿ: ಯುವ ಕಾಂಗ್ರೆಸ್ ನ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾವೂರು ನಿವಾಸಿ ಯುವ ಉದ್ಯಮಿ ಅಝರ್ ಎನ್.ಕೆ ನಾವೂರು ಅಧ್ಯಕ್ಷಾರಾಗಿ ಆಯ್ಕೆ ಯಾಗಿದ್ದಾರೆ.ಯುವ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿರುವ ಇವರು ಸಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಯಾಗಿ ಅಭಿನಂದನ್ ಆಯ್ಕೆ

0

ಬೆಳ್ತಂಗಡಿ : ಕರ್ನಾಟಕ ರಾಜ್ಯ ಯುವ ಕಾಂಗ್ರಸ್ ಸಮಿತಿಯ ಕಾರ್ಯದರ್ಶಿಯಾಗಿ ಅಭಿನಂದನ್ ಹರೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಯುವ ಕಾಂಗ್ರೆಸ್ ರಾಜ್ಯ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಭಿನಂದನ್ ಹರೀಶ್ ಕುಮಾ‌ರ್ ಅವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇವರು ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರುಯುವ ಉದ್ಯಮಿಯಾಗಿರುವ ಅಭಿನಂದನ್ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ‌

ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇಬ್ರಾಹಿಂ ನವಾಝ್ ಆಯ್ಕೆ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, 10942 ಮತಗಳನ್ನು ಗಳಿಸಿ ಇಬ್ರಾಹೀಂ ನವಾಝ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಬಡಕಬೈಲ್ ನಿವಾಸಿಯಾಗಿರುವ ಇಬ್ರಾಹೀಂ ನವಾಝ್ ಈ ಹಿಂದೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕರಿಯಂಗಳ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಅವರು ಬಂಟ್ವಾಳ ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಸ್ಥಾಪಕಾಧ್ಯಕ್ಷರಾಗಿ,...

ಬೆಳ್ತಂಗಡಿ : ಮಿತ್ತಬಾಗಿಲು ಕಾಡು ಹಂದಿ ಬೇಟೆ; ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು

0

ಬೆಳ್ತಂಗಡಿ : ಕಾಡುಹಂದಿಯನ್ನು ಯಾವುದೋ ಆಯುಧಗಳಿಂದ ದಾಳಿ ಮಾಡಿ ಸಾಯಿಸಿದ ಪ್ರಕರಣ ಸಂಬಂಧ  ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಹೊಸಬೆಟ್ಟು ನಿವಾಸಿ ಬಾಬು ಗೌಡರ ತೋಟದಲ್ಲಿ ಒಂದು ವರ್ಷ ಪ್ರಾಯದ 26 ಕೆ‌.ಜಿ ತೂಕದ ಕಾಡು ಹಂದಿಯನ್ನು ಜ.23 ರಂದು ಜಾನು ಗೌಡ ಎಂಬಾತ ಆಯುಧದಿಂದ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದು. ಈ ಘಟನೆ ಬಗ್ಗೆ ಸ್ಥಳೀಯರು ಬೆಳ್ತಂಗಡಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಓ ತ್ಯಾಗರಾಜ್ ಮತ್ತು ತಂಡ ಜ.23...

ಕಾರ್ಮಲ್ ಹೋಮಿಯೋ ಕ್ಲಿನಿಕ್ ಉದ್ಘಾಟನೆ

0

ಬೆಳ್ತಂಗಡಿ;  ಕಳೆದ ಸುಮಾರು ಹನ್ನೆರಡುವರ್ಷಗಳಿಂದ ಪುಷ್ಪ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎಂ.ಸಿ ಕಾರ್ಮೆಲ್ ಹೋಮಿಯೋ ಕ್ಲಿನಿಕ್ ಸಂಸ್ಥೆಯು ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.ನೂತನ ಕ್ಲಿನಿಕ್ ನಲ್ಲಿ ಕುಟ್ರುಪ್ಪಾಡಿ ಚರ್ಚಿನ ಧರ್ಮಗುರುಗಳಾದ ಫಾ. ವರ್ಗೀಸ್ ಪುದಿಯೇಡತ್ ಅವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಉದ್ಘಾಟನೆಯನ್ನು ಸಿ.ಎಂ.ಸಿ ಎವುಪ್ರಾಸಿಯಾ ಪ್ರಾವಿನ್ಷ್ಯಲ್ ನ ಮದರ್ ಪ್ರೊವಿನ್ಷ್ಯಲ್ ಸಿ. ಮೆರ್ಲಿನ್ ಸಿ.ಎಂ.ಸಿ ಅವರು ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಧರ್ಮ ಭಗಿನಿಯರು, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.ಪದವಿನ ಕ್ಲಿನಿಕ್ ನಲ್ಲಿ ತಿಂಗಳ ಮೊದಲ ಮತ್ತು...

ಬೆಳ್ತಂಗಡಿ : ಅಪಘಾತ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿ ಕೊಂಡಿದ್ದ  ಲಾರಿ ಚಾಲಕ ಸಿದ್ದಿಕ್ ಬಂಧನ

0

ಬೆಳ್ತಂಗಡಿ : 2006 ರಲ್ಲಿ ನಡೆದ ಲಾರಿಯ ಅಜಾಗರೂಕತೆಯ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ ಪ್ರಕರಣ ಸಂಬಂಧ ಲಾರಿ ಚಾಲಕನಿಗೆ ಬೆಳ್ತಂಗಡಿ ನ್ಯಾಯಾಲಯಲ್ಲಿ ಒಂದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸುತ್ತು.ಬಳಿಕ ಈ ಪ್ರಕರಣದ ವಿರುದ್ಧ ಲಾರಿ ಚಾಲಕ ಚಾರ್ಮಾಡಿ ಸಿದ್ದಿಕ್(40) ಹೈಕೋರ್ಟ್ ವರೆಗೆ ಅಪೀಲು ಹೋಗಿದ್ದು ಅಲ್ಲಿ ಕೂಡ ಬೆಳ್ತಂಗಡಿ ನ್ಯಾಯಾಲಯ ತೀರ್ಪನ್ನು ಎತ್ತಿ ಹಿಡಿದು ಶಿಕ್ಷೆ ಖಾಯಂ ಮಾಡಿತ್ತು ಬಳಿಕ ಲಾರಿ ಚಾಲಕ ಆರೋಪಿ ತಲೆಮರೆಸಿಕೊಂಡಿದ್ದು. ಇದೀಗ ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ...

ಕಡಿರುದ್ಯಾವರ; ಬೈಕ್ ಡಿಕ್ಕಿ ವ್ಯಕ್ತಿಗೆ ಗಂಭೀರ ಗಾಯ

0

ಬೆಳ್ತಂಗಡಿ;  ಮುಂಡಾಜೆ-ದಿಡುಪೆ ರಸ್ತೆಯಕಡಿರುದ್ಯಾವರ ಗ್ರಾಮದ ಕನಪಾಡಿ-ಇಂದಬೆಟ್ಟು ಕ್ರಾಸ್ ಸಮೀಪ ಪಾದಚಾರಿ ಕಡಿರುದ್ಯಾವರದಅಂತರ ಲೋಕಪ್ಪ ಗೌಡ(65) ಎಂಬವರಿಗೆದಿಡುಪೆ ಮೂಲದ ವ್ಯಕ್ತಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.ಗಾಯಾಳುವಿಗೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಬೆಳ್ತಂಗಡಿ; ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

0

ಬೆಳ್ತಂಗಡಿ; ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಸುಳ್ಯ ತಾಲೂಕಿನ ತೊಡಿಕಾನದ ಅಂಡ್ಯಡ್ಕ ನಿವಾಸಿ ರಾಜ(64) ಶಿಕ್ಷೆಗೆ ಒಳಗಾದ ಆರೋಪಿ. ಕಮಲಾ ಕೊಲೆಯಾದ ಮಹಿಳೆ.ರಾಜ ತನ್ನ ಪತ್ನಿ ಕಮಲಾ ಜೊತೆ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಾ ಇರುತ್ತಿದ್ದ. ದಿನಾಂಕ: 04-09-2022 ರಂದು ರಾಜ ಮತ್ತು ಪತ್ನಿ ಕಮಲಾರವರು ರಬ್ಬರ್ ಟ್ಯಾಪಿಂಗ್ ಕೆಲಸ ಕೇಳುತ್ತಾ ಬೆಳ್ತಂಗಡಿ ತಾಲೂಕು ಕೊಯ್ಯರು ಗ್ರಾಮದ ಅಲೆಕ್ಕಿ ಎಂಬಲ್ಲಿನ ಧರ್ಣಪ್ಪ ಗೌಡ ನೇಯವರ ಮನೆಗೆ ತೆರಳಿ ಕೆಲಸ ಕೇಳಿದಾಗ...

ದಿಡುಪೆ; ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

0

ಬೆಳ್ತಂಗಡಿ; ಕಾರು ಅಪಘಾತವಾಗಿ ವ್ಯಕ್ತಿ ಮೃತಪಟ್ಟ ಘಟನೆ ದಿಡುಪೆ ಬಳಿ ಬುಧವಾರ ನಡೆದಿದೆ. ಮೃತರನ್ನು ಕುಕ್ಕಾವು ನಿವಾಸಿ ಪುತ್ತಾಕ (ಇಬ್ರಾಹಿಂ )(67) ಎಂಬವರೆಂದು ಗುರುತಿಸಲಾಗಿದೆ. ಸಹೋದರ ಮನೆಯ ಶುಭ ಕಾರ್ಯ ನಿಮಿತ್ತ ಮಾತುಕತೆಗಾಗಿ ಬಂಧುಗಳು ಜೊತೆಯಾಗಿ ದಿಡುಪೆಗೆ ಹೋಗಿದ್ದರು. ಕಾರಿನಿಂದ ಇಳಿದ ಮುಂದಕ್ಕೆ ಚಲಿಸುತ್ತಿದ್ದಂತೆ ಹಠಾತ್ತನೆ ಕಾರು ಮುಂದಕ್ಕೆ ಚಲಿಸಿ ಈ ಅವಘಡ ಸಂಭವಿಸಿದೆ. ಹಕೀಂ ಎಂಬವರು ವಾಹನ ಚಲಾಯಿಸುತ್ತಿದ್ದರೆಂದು ತಿಳಿದು ಬಂದಿದ್ದು ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಪುತ್ತಾಕ ಅವರನ್ನುತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ...

ಚಾರ್ಮಾಡಿ ಘಾಟಿಯಲ್ಲಿ ಲಾರಿ ತಡೆದು ದರೋಡೆ ಪ್ರಕರಣ ದಾಖಲು

0

ಬೆಳ್ತಂಗಡಿ : ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಬುಧವಾರ ಮಧ್ಯರಾತ್ರಿ ಎರಡು ಬೈಕ್ ನಲ್ಲಿ ಬಂದ ಅಪರಿಚಿತರು ಮೀನು ಸಾಗಾಟದ ಲಾರಿ ತಡೆದು ನಗದು ದೋಚಿದ ಘಟನೆ ವರದಿಯಾಗಿದೆ. ಲಾರಿ ಚಾಲಕನ ಬದಿಯ ಗ್ಲಾಸ್ ಒಡೆದು ಚಾಲಕನಿಗೆ ಥಳಿಸಿ 1.61 ಲಕ್ಷ ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ವಾಹನದ ಚಾಲಕ ಸಲಾಂ ಬಣಕಲ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ್ದಾನೆ. ಬಣಕಲ್ ಪೊಲೀಸರು ಪ್ರಕರಣದ ಪರಿಶೀಲನೆ ನಡೆಸುತ್ತಿದ್ದಾರೆ