ಬೆಳ್ತಂಗಡಿ; ಬಿಹಾರದ ಯುವಕ ಲಾಯಿಲದಲ್ಲಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಬಿಹಾರದಿಂದ ಕೆಲಸಕ್ಕೆಂದು ಬಂದಿದ್ದ ಯುವಕನೋರ್ವ ಲಾಯಿಲದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಬಿಹಾರದ ನಿವಾಸಿಯಾದ ನಂದಕುಮಾರ್(20) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.ಈತ ತನ್ನ ಸಹೋದರನೊಂದಿಗೆ ಕೆಲಸಕ್ಕೆಂದು ಬಂದಿದ್ದ ಎ.27ರಂದು ಮದ್ಯಾಹ್ನದ ವೇಳೆ ಉಜಿರೆ ಕಾಶಿಬೆಟ್ಟುವಿನಲ್ಲಿರುವ ಸಹೋದರನ ಬಾಡಿಗೆ ರೂಮಿನ ಕೀತೆಗೆದುಕೊಂಡು ಹೋದ ನಂದಕುಮಾರ್ ಮರಳಿ ಬರದಿದ್ದಾಗೆ ರೂಮಿಗೆ ಹೋಗಿ ಪರಿಶೀಲಿಸಿದಾಗ ಕೊಠಡಿಯ ಒಳಗಿನ ಫ್ಯಾನಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಕಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು ಬೆಳ್ತಂಗಡಿ ಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದಾರೆ.
ಉಜಿರೆಯಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ; ಹತ್ತಕ್ಕೂ ಹೆಚ್ವು ಮಂದಿಯ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ : ಖಾಸಗಿ ಕಾಲೇಜ್ ವಿದ್ಯಾರ್ಥಿನಿಯೊಬ್ಬಳಿಗೆ ಮೆಸೇಜ್ ಮಾಡಿ ಅಸಭ್ಯವಾಗಿ ವರ್ತಿಸಿರುವುದಾಗಿ ಆರೋಪಿಸಿ ಉಜಿರೆಯಲ್ಲಿಏ.26 ರಂದು ವಾಲಿಬಾಲ್ ಆಟಗಾರ ಸಯ್ಯದ್(24) ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಉಜಿರೆಯ ಪ್ರಜ್ವಲ್ ಹಾಗೂ ಇತರರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.ಉಜಿರೆಯ ಹಿಂದೂ ಸಂಘಟನೆ ಕಾರ್ಯಕರ್ತರು ಏ.26 ರಂದು ಸೈಯ್ಯದ್ ಮೇಲೆ ಹಿಗ್ಗಮುಗ್ಗ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು.ಬೆಳ್ತಂಗಡಿ ಠಾಣೆಯಲ್ಕಿ ಸೈಯ್ಯದ್ ವಿರುದ್ದ ಪೋಸ್ಕೋ ಪ್ರಕರಣ ದಾಖಲಿಸಿದ್ದರು.ಇದೀಗ ಹಲ್ಲೆಗೆ ಒಳಗಾಗಿರುವ ಸೈಯ್ಯದ್ ನೀಡಿದ ದೂರಿನಂತೆ ಪೊಲೀಸರು ಉಜಿರೆಯ ಪ್ರಜ್ವಲ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿಯ...
ಬೆಳ್ತಂಗಡಿ : ಅಪ್ರಾಪ್ತ ಕಾಲೇಜ್ ವಿದ್ಯಾರ್ಥಿನಿಗೆ ಕಿರುಕುಳ ಆರೋಪಿ ಸಯ್ಯದ್ ಬಂಧನ; ಪೋಕ್ಸೋ ಪ್ರಕರಣ ದಾಖಲು
ಬೆಳ್ತಂಗಡಿ : ಖಾಸಗಿ ಕಾಲೇಜ್ ವಿದ್ಯಾರ್ಥಿನಿಗೆ ವಾಲಿಬಾಲ್ ತರಬೇತಿದಾರ ಮೊಬೈಲ್ ಮೂಲಕ ಮೆಸೇಜ್ ಕಳುಹಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಖಾಸಗಿ ಕಾಲೇಜಿನ 17ರ ಹರಯದ ವಿದ್ಯಾರ್ಥಿ ನಿಗೆ ಕಾರ್ಕಳ ನಿವಾಸಿ ಸೈಯ್ಯದ್ (24) ಎಂಬಾತ ಕಳೆದ ಕೆಲವು ದಿನಗಳಿಂದ ನಿರಂತರ ಮೆಸೇಜ್ ಹಾಕುತ್ತಾ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಏ.26 ರಂದು ಉಜಿರೆಯಲ್ಲಿ ಆರೋಪಿ ಸಯ್ಯದ್(24) ಎಂಬಾತನನ್ನು ಪತ್ತೆಹಚ್ಚಿ ಹಿಗ್ಗ ಮುಗ್ಗ ಥಳಿಸಿದ್ದಾರೆ. ಬಳಿಕ ಈತನನ್ನು...
ಅಳದಂಗಡಿ; ವ್ಯಕ್ತಿಯ ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆಯತ್ನ
ಬೆಳ್ತಂಗಡಿ; ಅಳದಂಗಡಿ ಸಂತೆ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬನ ಕುತ್ತಿಗೆ ಹಾಗೂ ಎದೆಗೆ ಚೀರಿಯಿಂದ ಇರಿದು ಹತ್ಯೆಮಾಡಲು ಪ್ರಯತ್ನಿಸಿಸಿದ್ದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಡೆನ್ನಿಸ್ ಪಟೋ ಎಂಬಾತನೆ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಸ್ಥಳೀಯ ನಿವಾಸಿ ಶೀನ ಎಂಬವನೇ ಆರೋಪಿಯಾಗಿದ್ದಾನೆ ಅಳದಂಗಡಿ ಸಂತೆ ಮಾರುಕಟ್ಟೆಯ ಒಳಗೆ ಎ 26 ರಂದು ರಾತ್ರಿಯ ವೇಳೆ ಕ್ಷುಲ್ಲಕ ಕಾರಣಕ್ಕೆ ಆರೋಪಿ ಶೀನ ಎಂಬಾತ ಹಾಗೂ ಡೆನ್ನಿಸ್ ಪಿಂಟೋ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶೀನ ಡೆನ್ನಿಸ್ ಅನ್ನು ನೆಲಕ್ಕೆ ದೂಡಿ ಹಾಕಿ ಆತನ ಮೇಲೆ ಹತ್ತಿ...
ಧರ್ಮಸ್ಥಳ ಕನ್ಯಾಡಿಯಲ್ಲಿ ಸಿಡಿಲು ಬಡಿದು ದನ ಸಾವು
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಕನ್ಯಾಡಿ ಅರಿಕೋಡಿಯ ನಿವಾಸಿ ಬೊಮ್ಮ ಗೌಡ ಅವರ ಮನೆ ಸಮೀಪದ ಕೊಟ್ಟಿಗೆಗೆ ಸಿಡಿಲು ಬಡಿದು ದನವೊಂದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಕೊಟ್ಟಿಗೆಯಲ್ಲಿ ಕಟ್ಟಿದ್ದ ನಾಲ್ಕು ವರ್ಷದ ದನ ಸಾವನ್ನಪ್ಪಿದೆ.
ಚಾರ್ಮಾಡಿ; ಗಾಳಿ ಮಳೆಗೆ ವ್ಯಾಪಕ ಹಾನಿ,
ಬೆಳ್ತಂಗಡಿ; ಚಾರ್ಮಾಡಿ ಗ್ರಾಮಪಂಚಾಯತು ವ್ಯಾಪ್ತಿಯ ಕತ್ತರಿಗುಡ್ಡೆ ಎಂಬಲ್ಲಿ ಭಾರಿ ಗಾಳಿ ಮಳೆಗೆ ಮನೆಯೊಂದರ ಮೇಲ್ಛಾವಣಿಯ ಶೀಟ್ ಗಳಿಗೆ ಸಂಪೂರತಣ ಹಾನಿಯಾದ ಘಟನೆ ಸಂಭವಿಸಿದೆ.ಇಲ್ಲಿನ ನಿವಾಸಿ ಹಮಾಜ್ ಎಂಬವರ ಮನೆಗೆ ಹಾನಿ ಸಂಭವಿಸಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಇವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಾಂಗ್ರೆಸ್ ಮುಖಂಡರುಗಳಾದ ಇಲಿಯಾಸ್, ಇಮ್ರಾನ್, ನಿಫಾಲ್, ರಮೇಶ್, ರಹೀಂ ಹಾಗೂ ಇತರರು ಕೂಡಲೇ ಸ್ಥಳಕ್ಕೆ ಆಗಮಿಸಿ ಸಂತ್ರಸ್ತ ಕುಟುಂಬಕ್ಕೆ ಸಹಕಾರ ನೀಡಿದರು. ಗ್ರಾ.ಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ...
ವಿಜಯರಾಘವ ಪಡ್ವೆಟ್ನಾಯ ಸ್ಮಾರಕ ಗೋಪುರ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 15 ಲಕ್ಷ ರೂ. ನೆರವು
ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ರೂ. ೧೫ ಲಕ್ಷದ ಡಿ.ಡಿ. ಯನ್ನು ಹಸ್ತಾಂತರಿಸಿದರು.ಉಜಿರೆ: ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಎದುರು ನಿರ್ಮಾಣಗೊಳ್ಳುತ್ತಿರುವ ಕೀರ್ತಿಶೇಷ ವಿಜಯರಾಘವ ಸ್ಮಾರಕ ಗೋಪುರ ನಿರ್ಮಾಣಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಸಾದರೂಪವಾಗಿ ಮಂಜೂರು ಮಾಡಿದ ೧೫ ಲಕ್ಷ ರೂ. ನ ಡಿ.ಡಿ. ಯನ್ನು ಡಿ. ಹರ್ಷೇಂದ್ರ ಕುಮಾರ್ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೋಹನ ಕುಮಾರ್, ರವಿ ಚಕ್ಕಿತ್ತಾಯ, ರಾಘವೇಂದ್ರ ಬೈಪಾಡಿತ್ತಾಯ, ರವೀಂದ್ರ ಶೆಟ್ಟಿ,...
ಕಾಶಿಪಟ್ಣ; ಎರಡು ತಂಡಗಳ ನಡುವೆ ಹೊಟೆದಾಟ ಹಲವರಿಗೆ ಗಾಯ; ಪ್ರಕರಣ ದಾಖಲು
ಬೆಳ್ತಂಗಡಿ: ಇನ್ವರ್ಟರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಶಿಪಟ್ಣದಲ್ಲಿ ಎರಡು ತಂಡಗಳು ಕತ್ತಿಯಿಂದ ಹಾಗೂ ಕಬ್ಬಿಣದ ರಾಡ್ ನಿಂದ ಹೊಡೆದಾಟ ನಡೆದಿದ್ದು ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಎರಡೂ ಗುಂಪಿನ ಏಳು ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. . ಮರೋಡಿ ಗ್ರಾಮದ ಪೆಂಚಾರ್ ಪಿಜತಕಟ್ಟೆ ನಿವಾಸಿ ಸುಜಿತ್ ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಕಾಶಿಪಟ್ಟ ಗ್ರಾಮದ ಮಿತ್ತೊಟ್ಟು ಅಭಿಷೇಕ್ ನೊಂದಿಗೆ ಕೆಲಸ ಮಾಡಿಕೊಂಡಿದ್ದು, ಅಭಿಷೇಕ್‌ನ ಮನೆಯಲ್ಲಿ ಇಟ್ಟಿದ್ದ ಇನವರ್ಟನ್ನು ವಾಪಾಸು ಅಂಗಡಿಗೆ ತಂದುಕೊಡುವಂತೆ ಸುಜಿತ್ ಕೇಳಿದಾಗ ಬೇಕಾದಲ್ಲಿ ಮನೆಗೆ ಬಂದು...
ಬೆಳ್ತಂಗಡಿ; ಕಾಂಗ್ರೆಸ್ ಕಚೇರಿಯಲ್ಲಿ ಸಮಾಲೋಚನಾ ಸಭೆ
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ದಿನಾಂಕ : 24:04:2025 ರಂದು ಪಂಚಾಯತ್ ವ್ಯಾಪ್ತಿಯ ಅಧ್ಯಕ್ಷರುಗಳ ಸಭೆ ನಡೆಯಿತು.ಸಭೆಯಲ್ಲಿ ಮಂಗಳೂರಿನಲ್ಲಿ 28:04:2025 ರ ಸೋಮವಾರ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ಗ್ಯಾಸ್ ಮತ್ತು ಡಿಸೇಲ್ ಬೆಲೆ ಏರಿಕೆ ವಿರುದ್ಧ ನಡೆಯುವ ಪ್ರತಿಭಟನೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಅತೀ ಹೆಚ್ಚು ಕಾರ್ಯಕರ್ತರು ಭಾಗವಹಿಸಲು ತೀರ್ಮಾನಿಸಲಾಯಿತು.ಜಿಲ್ಲಾ ಕೆ.ಎಂ.ಎಫ್ ನಿರ್ದೇಶಕರ ಚುನಾವಣೆಯ ಬಗ್ಗೆ ಚರ್ಚಿಸಲಾಯಿತು.ಹಾಗೂ ಮುಂದಿನ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಈಗಿಂದಲೇ ಕಾರ್ಯಪ್ರವರ್ತ ರಾಗುವಂತೆ ಮತ್ತು ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಸಭೆಯಲ್ಲಿ...
ಬೆಳ್ತಂಗಡಿ ಅಲ್ಲಾಟ ಬೈಲು ನಿವಾಸಿ ವಿನೋದ್ ಬಾವಿಗೆ ಹಾರಿ ಆತ್ಮಹತ್ಯೆ
ಬೆಳ್ತಂಗಡಿ: ನಗರದ ಇಲ್ಲಿಯ ಸಂತೆಕಟ್ಟೆ ಬಳಿ ಖಾಸಗಿ ತೋಟದ ಬಾವಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಎ.24) ರಂದು ನಡೆದಿದೆ. ಮೃತ ವ್ಯಕ್ತಿ ಬೆಳ್ತಂಗಡಿ ಅಲ್ಲಾಟ ಬೈಲು ನಿವಾಸಿ ಪಟ್ಟಣ ಪಂಚಾಯತು ಮಾಜಿ ಅಧ್ಯಕ್ಷೆ ವೀಣಾ ರವರ ಪತಿ ವಿನೋದ್ (48) ರವರು ಎಂದು ತಿಳಿದುಬಂದಿದೆ.ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.














