ಕುದುರೇ ಮುಖ ರಾಷ್ಟ್ರೀಯ ಉದ್ಯಾನವನದೊಳಗೆ ರಾಣಿಜರಿ ಪರಿಸರದಲ್ಲಿ ಬೆಂಕಿ
ಬೆಳ್ತಂಗಡಿ:ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ರಾಣಿಜರಿ, ಬಲ್ಲಾಳರಾಯನ ದುರ್ಗ ಸಮೀಪ ಬೆಂಕಿ ಹತ್ತಿಕೊಂಡಿದೆ.ಇಲ್ಲಿನ ಅತ್ಯಂತ ದುರ್ಗಮ ಪ್ರದೇಶ, ಕಡಿದಾದ ಕಲ್ಲುಗಳು, ಇಳಿಜಾರು ಇರುವ ಪರಿಸರದಲ್ಲಿ ಬೆಂಕಿ ಆವರಿಸಿದ್ದು ಇದನ್ನು ನಂದಿಸುವುದು ಬಹು ದೊಡ್ಡ ಸವಾಲಾಗಿದೆ. ಬೆಂಕಿ ಬಿದ್ದ ಪರಿಸರಕ್ಕೆ ಮನುಷ್ಯರು ತೆರಳಲು ಸಾಧ್ಯವಾಗದ ಸ್ಥಿತಿ ಇದೆ. ಕಲ್ಲಿನ ಗೋಡೆಗಳ ಒಣ ಹುಲ್ಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಹುಲ್ಲುಗಾವಲಿಗೆ ಆವರಿಸಿದ್ದು ಅರಣ್ಯ ಪ್ರದೇಶದ ಪಸರಿಸಿಲ್ಲ ಹಾಗೂ ಬೆಂಕಿ ಹತೋಟಿಯ ಸ್ಥಿತಿಯಲ್ಲಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್ ಎಫ್ ಒ ಶರ್ಮಿಷ್ಠಾ...
ಪದ್ಮುಂಜ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಕ್ಷಿತ್ ಪಣೆಕರ ಆಯ್ಕೆ
ಕಣಿಯೂರು: ಫೆ 28 ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾಗಿ ಅಶೋಕ ಪಿ ಪಾಂಜಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಡೀಕಯ್ಯ ಗೌಡ,ನಾರಾಯಣ ಗೌಡ, ಉದಯ ಭಟ್, ರುಕ್ಮಯ್ಯ ಗೌಡ ಯಾನೆ ಪ್ರಭಾಕರ ಗೌಡ, ಪ್ರಸಾದ್ ಎ, ಉದಯ ಬಿ.ಕೆ, ಶೀಲಾವತಿ, ಶಾರದಾ ಆರ್ ರೈ, ಚಂದನ್ ಕುಮಾರ್ ಎ, ದಿನೇಶ್ ನಾಯ್ಕ ಇವರುಗಳು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂನ್...
ಕರಾವಳಿಯ ಅಭಿವೃದ್ಧಿಗೆ 500ಕೋಟಿ ಅನುದಾನದ ಬೇಡಿಕೆ: ಐವಾನ್ ಡಿಸೋಜ
ಬೆಳ್ತಂಗಡಿ: ಕರಾವಳಿ ಪ್ರದೇಶದ ಅಭಿವೃದ್ದಿಗೆ ಸೂಕ್ತ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಸಲ್ಲಿಸಿದ್ದು ಈ ಬಾರಿಯ ಬಜೆಡ್ ನಲ್ಲಿ ಸೂಕ್ತ ಅನುದಾನ ಲಭಿಸುವ ನಿರೀಕ್ಷೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿದರು.ಅವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರಾವಳಿ ಅಭಿವೃದ್ಧಿ ಮಂಡಳಿಯ ಮೂಲಕ 500ಕೋಟಿ ಅನುದಾನದ ಬೇಡಿಕೆಯನ್ನು ಮುಂದಿಡಲಾಗಿದೆ. ಪ್ರವಾಸೋದ್ಯಮ, ಮೀನುಗಾರಿಕೆ, ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಸರಕಾರದ ಗಮನಸೆಳೆಯಲಾಗಿದೆ ಎಂದರು.ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿದೆ ಅದರ ಈಡೇರಿಕೆಗೆ ಪ್ರಯತ್ನಿಸಲಾಗುವುದು ಈ...
ಬೆಳ್ತಂಗಡಿ ವಕೀಲರ ಸಂಘದಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರವರಿಗೆ ಸನ್ಮಾನ. ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಮನವಿ.
ಬೆಳ್ತಂಗಡಿ : ವಕೀಲರ ಸಂಘ (ರಿ ) ಬೆಳ್ತಂಗಡಿ ವತಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರವರಿಗೆ ಬೆಳ್ತಂಗಡಿ ವಕೀಲರ ಭವನದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು . ಈ ಸಂದರ್ಭದಲ್ಲಿ ಬೆಳ್ತಂಗಡಿ ನ್ಯಾಯಾಲಯ ಸಂಕೀರ್ಣದ ಕಟ್ಟಡ ನಿರ್ಮಾಣಕ್ಕೆ ಮನವಿಯನ್ನು ಸಲ್ಲಿಸಲಾಯಿತು ಮತ್ತು ವಕೀಲರ ಭವನದ ಕಟ್ಟಡಕ್ಕೆ ಲಿಫ್ಟಿನ ವ್ಯವಸ್ಥೆಯನ್ನು ಮಾಡುವಂತೆ ಮನವಿಯನ್ನು ನೀಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ವಹಿಸಿದ್ದರು, ವೇದಿಕೆಯಲ್ಲಿ ಹಿರಿಯ ಸಮಿತಿಯ ಅಧ್ಯಕ್ಷರಾದ ಅಲೋಸಿಸ್ ಎಸ್ ಲೋಬೊ, ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ...
ಚಾರ್ಮಾಡಿ ಘಾಟಿಯಲ್ಲಿ ತಿರುವಿನಲ್ಲಿಯೇ ಬಸ್ ನ ಸ್ಟೇರಿಂಗ್ ಜಾಯಿಂಟ್ ಕಟ್ .. ತಪ್ಪಿದ ಭಾರೀ ದುರಂತ
ಬೆಳ್ತಂಗಡಿ: ಚಾರ್ಮಾಡಿ ಘಾಟ್ ರಸ್ತೆಯ ತಿರುವಿನಲ್ಲೇ ಕೆಎಸ್ಆರ್ಟಿಸಿ ಬಸ್ಸೊಂದರ ಸ್ಟೇರಿಂಗ್ ಜಾಯಿಂಟ್ ತುಂಡಾಗಿದೆ.ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ KA 17-F-1487 ಶಿವಮೊಗ್ಗ ವಿಭಾಗದ ಬಸ್, ಚಾರ್ಮಾಡಿ ಘಾಟ್ನಲ್ಲಿ ಸಂಚರಿಸುತ್ತಿದ್ದಾಗ ಸ್ಟೇರಿಂಗ್ ಜಾಯಿಂಟ್ ಕಟ್ ಆಗಿದೆ. ಆದರೆ, ಚಾಲಕನ ಚಾಕಚಕ್ಯತೆಯಿಂದ ಪ್ರಯಾಣಿಕರ ಜೀವ ಉಳಿದಿದೆ.ಅಪಾಯದ ಅರಿವಾಗುತ್ತಿದ್ದಂತೆಯೇ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಹೇಗೋ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ಇದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಬಸ್ನಲ್ಲಿದ್ದ ಪ್ರಯಾಣಿಕರನ್ನು ಬದಲಿ ಬಸ್ನಲ್ಲಿ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ಅಜಿಕುರಿ ಹೆಜ್ಜೇನು ದಾಳಿಯಿಂದ ಆಸ್ಪತ್ರೆಗೆ ದಾಖಲಾದ ಗಾಯಳುಗಳ ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ
ಬೆಳ್ತಂಗಡಿ.ಧರ್ಮಸ್ಥಳ ಗ್ರಾಮದ ಅಜಿಕುರಿಯಲ್ಲಿ ಹೆಜ್ಜೇನು ದಾಳಿಯಿಂದ ಹಲವರು ಅಸ್ವಸ್ಥರಾಗಿ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಾಗಿದ್ದು.ಆಸ್ಪತ್ರೆಗೆ ಕೆಪಿಸಿಸಿ ಪ್ರಧಾನ ಕಾಯ೯ದರ್ಶಿ ರಕ್ಷಿತ್ ಶಿವರಾಂ ಬೇಟಿ ನೀಡಿ ಗಾಯಳುಗಳ ಆರೋಗ್ಯ ವಿಚಾರಿಸಿದರು. ಈ ಸಂಧರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸಿದ್ಧಿಕ್ ಧರ್ಮಸ್ಥಳ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಅಂಡಿಂಜೆ ಕಲ್ಲೆತ್ತಿ ಪ್ರದೇಶದಲ್ಲಿ ವ್ಯಾಪಕ ಕಾಡ್ಗಿಚ್ಚು ವ್ಯಾಪಕ ಹಾನಿ
ಬೆಳ್ತಂಗಡಿ : ಅಂಡಿಂಜೆ ಗ್ರಾಮದ ಕಲ್ಲತ್ತಿ ಪ್ರದೇಶದಲ್ಲಿ ಕಾಡ್ಗಿಚ್ಚು ಹರಡಿಕೊಂಡಿದ್ದು ಕಳೆದ ಮೂರು ದಿನಗಳ ಹರಸಾಹಸದ ಬಳಿಕ ಇದೀಗ ಅಗ್ನಿಶಾಮಕ ದಳ ಮತ್ತು ಊರವರ ಪ್ರಯತ್ನದಿಂದ ಬೆಂಕಿ ನಿಯಂತ್ರಣಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಕಲ್ಲತ್ತಿಪ್ರದೇಶದ ಕಾಡು ಮತ್ತು ಸರಕಾರಿ ಗೇರು ತೋಟದ ಒಳಗೆ ಬೆಂಕಿ ವ್ಯಾಪಿಸಿದೆ. ಸೋಮವಾರ ಇಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದ್ದು ಮಂಗಳವಾರ ಇಡೀ ಪ್ರಯತ್ನಿಸಿದರೂ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಲಿಲ್ಲ.ಗೇರು ತೋಟದಲ್ಲಿನ ನೂರಾರು ಹೂ, ಕಾಯಿ ಬಿಟ್ಟ ಗೇರು ಮರಗಳು ಬೆಂಕಿಗಾಹುತಿಯಾಗಿದ್ದು ಕರ್ನಾಟಕ ಗೇರು ಅಭಿವೃದ್ಧಿ...
ಕಲ್ಮಂಜ ಶಾಲೆಯಲ್ಲಿ ಬೆನಕ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ; ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ರೋಗದ ದೀರ್ಘಕಾಲೀನ ಪರಿಣಾಮಗಳನ್ನು ತಡೆಗಟ್ಟಲು ಸಹಾಯಕ ಡಾ.ಗೋಪಾಲಕೃಷ್ಣ
ಬೆಳ್ತಂಗಡಿ; ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಿ ಆರಂಭಿಕ ಹಂತದಲ್ಲಿ ರೋಗಗಳನ್ನು ಗುರುತಿಸಿ ಅಗತ್ಯ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುವುದು ನಮ್ಮ ಆರೋಗ್ಯ ತಪಾಸಣಾ ಶಿಬಿರಗಳ ಆಶಯ ಹಾಗೂ ನಮ್ಮ ಸಾಮಾಜಿಕ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸಮುದಾಯ ಮಟ್ಟದಲ್ಲಿ ಯೋಗಕ್ಷೇಮ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ತಿಳಿಸಿದರು.ಡಾ.ಗೋಪಾಲಕೃಷ್ಣ ಅವರು ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮದ ಅಂಗವಾಗಿ ಉಜಿರೆಯ ಬೆನಕ ಆಸ್ಪತ್ರೆ ಮತ್ತು ಬೆನಕ ಚಾರಿಟೇಬಲ್ ಟ್ರಸ್ಟ್...
ಅಳದಂಗಡಿ; ಬೆಂಕಿ ಆಕಸ್ಮಿಕ ಅಡಿಕೆ ತೋಟಕ್ಕೆ ಹಾನಿ
ಬೆಳ್ತಂಗಡಿ; ಅಳದಂಗಡಿಯ ಬಡಗಕಾರಂದೂರು ಶಾಲಾ ಬಳಿ ಅಗ್ನಿ ಅವಘಡದಿಂದ ಸ್ಥಳೀಯ ನಿವಾಸಿ ಸಂಶುದ್ದೀನ್ ರವರ ತೋಟಕ್ಕೆ ಹಾನಿಸಂಭವಿಸಿದೆ.ಏಕಾ ಏಕಿ ಬೆಂಕಿ ಆವರಿಸಿಕೊಂಡಿದ್ದು ತೋಟದಲ್ಲಿನ ಅಡಿಕೆ ಗಿಡಗಳು ಹಾಗೂ ಇತರ ಗಿಡಗಳಿಗೆ ಹಾನಿ ಸಂಭವಿಸಿದ್ದು ಭಾರೀ ನಷ್ಟ ಸಂಭವಿಸಿದೆ. ಸ್ಥಳೀಯರ ಸಹಕಾರದೊಂದಿಗೆ ಬಕಿ ನಂದಿಸಲಾಗಿದೆ. ಸ್ಥಳಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಭೇಟಿ; ಬೆಂಕಿ ಅನಾಹುತಕ್ಕೆ ಒಳಗಾಗಿದ್ದು ಸ್ಥಳಕ್ಕೆ ಬುಧವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ನ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರುಹಾಗೂ ಸಂಬಂಧಿತ ಇಲಾಖೆಗಳಿಗೆ ಕರೆ ಮಾಡಿ ಸ್ಥಳಕ್ಕೆ ಭೇಟಿ...
ಎರಡನೇ ವ್ಯಾಟಿಕನ್ ಮಹಾಸಮ್ಮೇಳನದ ಸಂವಿಧಾನಿಕ ದಾಖಲೆಗಳ ಕುರಿತು ವಿಶೇಷ ಕಲಿಕಾ ಶಿಬಿರ
ಬೆಳ್ತಂಗಡಿ, ಫೆ.26: ಕ್ರಿಸ್ತ ಯೇಸುವಿನ ಜನನದ 2025 ನೇ ವರ್ಷಧ ಅಂಗವಾಗಿ ಇಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಜ್ಞಾನನಿಲಯ ಪಾಲನಾ ಕೇಂದ್ರದಲ್ಲಿ ವಿಶೇಷ ಕಲಿಕಾ ಶಿಬಿರ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಕೇರಳದ ಪಾಲಕ್ಕಾಡ್ ಧರ್ಮಪ್ರಾಂತ್ಯದ ಯಾಜಕರಾದ ವಂದನೀಯ ಡಾ. ಅರುಣ್ ಕಲಮತ್ತಂರವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. 1965 ರಲ್ಲಿ ಕೊನೆಗೊಂಡ ಎರಡನೇ ವ್ಯಾಟಿಕನ್ ಮಹಾಸಮ್ಮೇಳನದ ಆದುನಿಕ ಕಾಲದ ಧರ್ಮಸಭೆಯ ಸಂವಿಧಾನಿಕ ದಾಖಲೆಗಳ ಕುರಿತು ಚರ್ಚಿಸಲಾಯಿತು. ಧರ್ಮಸಭೆಯು ಸಮಾಜದಲ್ಲಿ ಒಳಿತಿನ, ಧಾರ್ಮಿಕತೆಯ ಕಾವಲುಗಾರನಾಗಿರಲು ಎರಡನೇ ವ್ಯಾಟಿಕನ್ ಮಹಾಸಮ್ಮೇಳನವು ನಮಗೆ ಆಹ್ವಾನ ನೀಡುತ್ತದೆ ಎಂದರು. ಶಿಬಿರವನ್ನು ಉದ್ಗಾಟಿಸಿ ಮಾತನಾಡಿದ ಅತಿ...















