ವಕ್ಫ್ ಕಾಯ್ದೆಗೆ ಅಸಂವಿಧಾನಿಕ ತಿದ್ದುಪಡಿ; ಕಕ್ಕಿಂಜೆಯಲ್ಲಿ ಮೂರು ಪಂಚಾಯತ್ ವ್ಯಾಪ್ತಿಯ ಮಸ್ಜಿದ್ ಗಳ ಜಂಟಿ ಪ್ರತಿಭಟನೆ.
ಬೆಳ್ತಂಗಡಿ; ಕೇಂದ್ರ ಸರಕಾರ ಉದ್ಧೇಶಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ಪ್ರಕ್ರಿಯೆಯನ್ನು ವಿರೋಧಿಸಿ ಮುಂಡಾಜೆ, ಚಾರ್ಮಾಡಿ, ನೆರಿಯ ಈಮೂರು ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಮಸ್ಜಿದ್ ಮತ್ತು ಮೊಹಲ್ಲಾಗಳ ಒಗ್ಗೂಡುವಿಕೆಯೊಂದಿಗೆ ಪ್ರತಿಭಟನಾ ಸಭೆಯು ಕಕ್ಕಿಂಜೆ ಪೇಟೆಯಲ್ಲಿ ಜರುಗಿತು.ಇಲ್ಲಿನ ಹಾರಿಸ್ ಹೊಟೇಲ್ ಬಳಿ ಜಮಾಯಿಸಿದ ಹೋರಾಡಗಾರರು ಸಾರ್ವಜನಿಕ ಸಭೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಅಸಂವಿಧಾನಿಕ ವಕ್ಫ್ ತಿದ್ದುಪಡಿಮಸೂದೆ ವಿರುದ್ಧ ವಾಟ್ಸ್ ಆಪ್ ಮೂಲಕ ರಚಿತವಾದಬಳಗದ ಸಂಯೋಜನೆಯಲ್ಲಿ ಈ ಹೋರಾಟ ಸಂಘಟಿಸಲಾಗಿತ್ತು.ಇಸ್ಲಾಂ ನಲ್ಲಿ ವಕ್ಫ್ ಎಂದರೆ ಏನು? ವಕ್ಫ್ ಕಾಯ್ದೆಯ ತಿದ್ದುಪಡಿ...
ಉಜಿರೆ; ಅನುಗ್ರಹ ಪಿ ಯು ಕಾಲೇಜಿನಲ್ಲಿ ಕಳ್ಳತನ
ಬೆಳ್ತಂಗಡಿ: ಉಜಿರೆಯ ಅನುಗ್ರಹ ಪಿ.ಯು ಕಾಲೇಜಿನಲ್ಲಿ ಮಾ.3ರಂದು ರಾತ್ರಿಯ ವೇಳೆ ಕಳತನದ ಘಟನೆ ನಡೆದಿದೆ.ಕಾಲೇಜಿಜ ಕಚೇರಿಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಕಚೇರಿಯಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದು ಕಚೇರಿಯಲ್ಲಿದ್ದ ದಾಖಲೆಗಳನ್ನು ಚೆಲ್ಲಪಿಲ್ಲಿ ಮಾಡಿ ಹಾಕಿದ್ದಾರೆ. ಕಚೇರಿಯಿಂದ ಸಿಸಿಕ್ಯಾಮೆರಾದ ಎನ್.ವಿ.ಆರ್ ಹಾರ್ಡ್ ಡಿ್ಸ್ಕ್ ಅನ್ನು ಕದ್ದೊಯ್ದಿದ್ದಾರೆ.ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದ್ದು ಪರಿಶೀಲನೆ ನಡೆಸಲಾಗಿದೆ. ಕಳ್ಳರ ಚಹರೆಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದನ್ನು ಇಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸುಬ್ರಮಣ್ಯ ಶಬರಾಯ ಕೆ ಆಯ್ಕೆ
ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಕೆ ಇವರು ನೇಮಕವಾಗಿದ್ದಾರೆ. ಸದಸ್ಯರಾಗಿ ಹರಿಶ್ಚಂದ್ರ, ಸಿನಿ ಗುರುದೇವನ್ , ಗಣೇಶ್ ಕಾಶಿ, ವಿಶ್ವನಾಥ ಕೆ, ಲೋಕೇಶ್ವರಿ ವಿನಯ ಚಂದ್ರ ಗೌಡ, ಪ್ರಮೋದ್ ಕುಮಾರ್ ಶೆಟ್ಟಿ, ಪ್ರಶಾಂತ್ ಮಚ್ಚಿನ, ನೇಮಕವಾಗಿದ್ದಾರೆ. ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಅಧಿಕಾರ ಹಸ್ತಾಂತರವನ್ನು ಮಾಡಿದರು.
ವೇಣೂರು- ಪೆರ್ಮುಡಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ರಕ್ಷಿತ್ ಶಿವರಾಂ ಆಯ್ಕೆ,
ಬೆಳ್ತಂಗಡಿ.32ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳಕೂಟದಿನಾಂಕ 30/3/2025ನೇ ಆದಿತ್ಯವಾರ ನಡೆಯಲಿದ್ದು. ಇದರ ಪದಾಧಿಕಾರಿಗಳ ಸಭೆಯು ದಿನಾಂಕ 3/3/2025 ನೇ ಸೋಮವಾರದಂದು ಕಂಬಳ ಸಮಿತಿಯ ಅಧ್ಯಕ್ಷರಾದ ನಿತೀಶ್ ಎಚ್ ಕೋಟ್ಯಾನ್ ರ ಅಧ್ಯಕ್ಷತೆಯಲ್ಲಿ ಜರಗಿತು. ಸುದೀರ್ಘ 31ವರ್ಷಗಳಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ದಿ. ಕೆ ವಸಂತ ಬಂಗೇರ ರವರು ಸೇವೆ ಸಲ್ಲಿಸಿದ್ದು. ಮುಂದಕ್ಕೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರನ್ನು ಆಯ್ಕೆ ಮಾಡಲಾಯಿತು. ಗೌರವ ಮಾರ್ಗದರ್ಶಕರಾಗಿ ಶ್ರೀಮತಿ ಸುಜಿತಾ ವಸಂತ ಬಂಗೇರ ರವರನ್ನು ಮತ್ತು ಅಧ್ಯಕ್ಷರನ್ನಾಗಿ...
ವೇಣೂರು 5 ಮೆಗಾ ವಾಲ್ಟ್ ವಿದ್ಯುತ್ ಫೀಡರನ್ನು 10 ಮೆಗಾ ವಾಲ್ಟ್ ವಿದ್ಯುತ್ ಫೀಡರ್ ಪರಿವರ್ತಿಸಲು ಮನವಿ.
ಬೆಳ್ತಂಗಡಿ: ವೇಣೂರು ಸಬ್ ಸ್ಕ್ರೆಷನ್ ಎರಡು ವಿದ್ಯುತ್ ಫೀಡರ್ಗಳಿದ್ದು ಕಳೆದ ಬಾರಿ ಒಂದು ವಿದ್ಯುತ್ ಫೀಡರನ್ನು 5 ಮೆಗಾವೋಲ್ಟ್ ನಿಂದ 8 ಮೆಗಾ ವೋಲ್ಟ್ ಗೆ ಪರಿವರ್ತಿಸಿ ವೇಣೂರು ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರು ಮತ್ತು ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ.ಇದೀಗ ಆಗಾಗ ವಿದ್ಯುತ್ ಕಡಿತವಾಗುವುದರಿಂದಈಗ ಬಾಕಿ ಇರುವ ವಿದ್ಯುತ್ ಫೀಡರನ್ನು ಸಹ ಐದು ಮೆಗಾ ವೋಲ್ಟ್ ನಿಂದ ಹತ್ತು ಮೆಗಾ ವೋಲ್ಟ್ ಪರಿವರ್ತಿಸಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರದ ಗಮನವನ್ನು ಸೆಳೆಯಬೇಕೆಂದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ಬ್ಲಾಕ್...
ವೇತನ ಬಾಕಿ ಕೊಡಿಸಲು ಆಗ್ರಹಿಸಿ ಬೀಡಿ ಕಾರ್ಮಿಕರಿಂದ ಗ್ರಾಮ ಪಂಚಾಯ್ತು ಆಂದೋಲನ
ಬೆಳ್ತಂಗಡಿ; ಪ್ರತಿ 1000 ಬೀಡಿ ಕಟ್ಟಿದ್ದಕ್ಕೆ ನಿಗದಿಯಾಗಿರುವ ಕಾನೂನು ಬದ್ದ ಕನಿಷ್ಟ ವೇತನದಲ್ಲಿ ತಲಾ ರೂ 40 ರಂತೆ ಕಡಿತ ಮಾಡಿದ ವೇತನ ವರ್ಷದಲ್ಲಿ 1 ಲಕ್ಷ ಬೀಡಿ ತಯಾರಿಸಿದ್ದವರಿಗೂ 2015 ರ ತುಟ್ಟಿ ಭತ್ತೆ ಬಾಕಿ ಸೇರಿ ತಲಾ ರೂ 60,000 ವೇತನ ಬಾಕಿ ಮಾಡಿದ ಬೀಡಿ ಮಾಲಕರ ವಿರುದ್ದ ಕ್ರಮ ಕೈಗೊಳ್ಳದ ಸರಕಾರ ನಡೆ ಖಂಡನೀಯ ಮತ್ತು ಕಾರ್ಮಿಕ ವಿರೋದಿ ದೋರಣೆಯಾಗಿದೆ ಎಂದು ದ.ಕ. ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು. ಅವರು ಇಂದು ಕಳೆಂಜ ಪಂಚಾಯತು...
ಬನ್ನೆಂಗಳ ಪಿಲಿಗೂಡು ಬಾರ್ಯ ಹಾಲು ಉತ್ಪಾದಕರ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಎರಡು ಲಕ್ಷ ದೇಣಿಗೆ ಹಸ್ತಾಂತರ
ಬೆಳ್ತಂಗಡಿ; ಪಿಲಿಗೂಡು ಬಾರ್ಯಾ ಬನ್ನೆಂಗಳದಲ್ಲಿ ನೂತನ ವಾಗೀ ರಚನೆ ಯಾಗುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಧರ್ಮಾಧಿಕಾರಿ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಕೊಡ ಮಾಡಿದ ಎರಡು ಲಕ್ಷ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ 1 ಜಿಲ್ಲಾ ಶ್ರೀ ಮಹಾಬಲ ಕುಲಾಲ್ ರವರು ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರುತಾಲೂಕು ಜನಜಾಗೃತಿಕಾರ್ಯಕಾರಿಣಿ ಸಮಿತಿ ಸದಸ್ಯರೂ ಹಾಗೂ ಬನ್ನೆಂಗಳ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಗುಣಕರ್ ಅಗ್ನಾಡಿ,...
ಸರಳಿಕಟ್ಟೆ ಗೈಸ್ ವತಿಯಿಂದ 175 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ.
ಸರಳಿಕಟ್ಟೆ: ಇಲ್ಲಿನ ಜುಮ್ಮಾ ಮಸೀದಿ ವ್ಯಾಪ್ತಿಯ 175 ಕುಟುಂಬಗಳಿಗೆ ಈ ಬಾರಿಯ ರಂಝಾನ್ ಕಿಟ್ ವಿತರಿಸಲಾಯಿತು. ಸ್ಥಳೀಯ ಜುಮ್ಮಾ ಮಸೀದಿಯ ಖತೀಬ್ ಬಹು. ಅಬ್ದುರ್ರಹೀಂ ಅಝ್ಹರಿ ಸಖಾಫಿಯವರು ದುವಾ ನೆರವೇರಿಸುವ ಮೂಲಕ ಸರಳಿಕಟ್ಟೆ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರಳಿಕಟ್ಟೆ ಜಮಾಅತ್ ವ್ಯಾಪ್ತಿಯಲ್ಲಿರುವ ಬಡ ಹಾಗೂ ಮಧ್ಯಮ ಕುಟುಂಬಗಳು ಸೇರಿದಂತೆ 175 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸುವ ಮೂಲಕ ಸರಳಿಕಟ್ಟೆ ಗೈಸ್ ಅತ್ಯಂತ ಪುಣ್ಯದ ಮತ್ತು ಗೌರವದ ಕಾರ್ಯವನ್ನು ನೆರವೇರಿಸಿದೆ. ಸರಳಿಕಟ್ಟೆ ಊರಿನ ಉದ್ಯಮಿಗಳ,ದಾನಿಗಳ ನೆರವಿನಿಂದ ಸರಳಿಕಟ್ಟೆ ಗೈಸ್ ಜಮಾಅತ್ ವ್ಯಾಪ್ತಿಯ ಸದಸ್ಯರ...
ಬೆಳ್ತಂಗಡಿ; ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ನವ ವಿವಾಹಿತೆ ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ ಪತ್ನಿ ಪೂಜಾಶ್ರೀ(23) ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಈಕೆ ಮಾ.1ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಹುಡುಕುತ್ತಿದ್ದ ಪೂಜಾರನ್ನು ಪತಿ ಪ್ರಕಾಶ್ ಅವರು ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಪ್ರಕಾಶ್ ಬದ್ಯಾರು ಗ್ರಾಮದ ಬರಾಯದ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಪೂಜಾ ಮೂಲತಃ ಕಣಿಯೂರು ಗ್ರಾಮದ ನೆಲ್ಲಿ ಬಾಕಿಮಾರು ಮನೆಯ ವಾರಿಜ ಹಾಗೂ ಸೇಸಪ್ಪ ಪೂಜಾರಿ ದಂಪತಿಯ ಪುತ್ರಿಯಾಗಿದ್ದು,...
ಕುದುರೇ ಮುಖ ರಾಷ್ಟ್ರೀಯ ಉದ್ಯಾನವನದೊಳಗೆ ರಾಣಿಜರಿ ಪರಿಸರದಲ್ಲಿ ಬೆಂಕಿ
ಬೆಳ್ತಂಗಡಿ:ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ರಾಣಿಜರಿ, ಬಲ್ಲಾಳರಾಯನ ದುರ್ಗ ಸಮೀಪ ಬೆಂಕಿ ಹತ್ತಿಕೊಂಡಿದೆ.ಇಲ್ಲಿನ ಅತ್ಯಂತ ದುರ್ಗಮ ಪ್ರದೇಶ, ಕಡಿದಾದ ಕಲ್ಲುಗಳು, ಇಳಿಜಾರು ಇರುವ ಪರಿಸರದಲ್ಲಿ ಬೆಂಕಿ ಆವರಿಸಿದ್ದು ಇದನ್ನು ನಂದಿಸುವುದು ಬಹು ದೊಡ್ಡ ಸವಾಲಾಗಿದೆ. ಬೆಂಕಿ ಬಿದ್ದ ಪರಿಸರಕ್ಕೆ ಮನುಷ್ಯರು ತೆರಳಲು ಸಾಧ್ಯವಾಗದ ಸ್ಥಿತಿ ಇದೆ. ಕಲ್ಲಿನ ಗೋಡೆಗಳ ಒಣ ಹುಲ್ಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಹುಲ್ಲುಗಾವಲಿಗೆ ಆವರಿಸಿದ್ದು ಅರಣ್ಯ ಪ್ರದೇಶದ ಪಸರಿಸಿಲ್ಲ ಹಾಗೂ ಬೆಂಕಿ ಹತೋಟಿಯ ಸ್ಥಿತಿಯಲ್ಲಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್ ಎಫ್ ಒ ಶರ್ಮಿಷ್ಠಾ...















