

ಬೆಳ್ತಂಗಡಿ; ಪ್ರತಿ 1000 ಬೀಡಿ ಕಟ್ಟಿದ್ದಕ್ಕೆ ನಿಗದಿಯಾಗಿರುವ ಕಾನೂನು ಬದ್ದ ಕನಿಷ್ಟ ವೇತನದಲ್ಲಿ ತಲಾ ರೂ 40 ರಂತೆ ಕಡಿತ ಮಾಡಿದ ವೇತನ ವರ್ಷದಲ್ಲಿ 1 ಲಕ್ಷ ಬೀಡಿ ತಯಾರಿಸಿದ್ದವರಿಗೂ 2015 ರ ತುಟ್ಟಿ ಭತ್ತೆ ಬಾಕಿ ಸೇರಿ ತಲಾ ರೂ 60,000 ವೇತನ ಬಾಕಿ ಮಾಡಿದ ಬೀಡಿ ಮಾಲಕರ ವಿರುದ್ದ ಕ್ರಮ ಕೈಗೊಳ್ಳದ ಸರಕಾರ ನಡೆ ಖಂಡನೀಯ ಮತ್ತು ಕಾರ್ಮಿಕ ವಿರೋದಿ ದೋರಣೆಯಾಗಿದೆ ಎಂದು ದ.ಕ. ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು. ಅವರು ಇಂದು ಕಳೆಂಜ ಪಂಚಾಯತು ಎದುರು ಬೀಡಿ ಕಾರ್ಮಿಕರ ಆಂದೋಲನವನ್ನುದ್ದೇಶಿಸಿ ಮಾತಾಡುತ್ತಿದ್ದರು.

ಪ್ರತಿ ಗ್ರಾಮ ಪಂಚಾಯತು ಸದಸ್ಯರು ತಮ್ಮ ತಮ್ಮ ಊರಿನ ನಾಲ್ಕುನೂರು ಐನ್ನೂರು ಬೀಡಿ ಕಾರ್ಮಿಕರ ಈ ಬಾಕಿ ವೇತನ ತೆಗೆಸಿ ಕೊಡಲು ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಲು ಒತ್ತಾಯಿಸಿ ಮತ್ತು ಗ್ರಾಮ ಪಂಚಾಯತು ಮೂಲಕ ಕಾರ್ಮಿಕ ಸಚಿವರಿಗೆ ಮನವಿ ನೀಡುವ ಆಂದೋಲವನ್ನು ಸಿಐಟಿಯು ವತಿಯಿಂದ ನಡೆಸಲಾಗುತ್ತಿದ್ದು ಈ ಆಂದೋಲನದ ಭಾಗವಾಗುವಂತೆ ಅವರು ಕರೆ ನೀಡಿದರು. 01.04.2018 ರಂದು ನಿಗದಿಯಾದ ಕನಿಷ್ಟ ಕೂಲಿ ಡಿ.ಎ. ಸೇರಿ ಸಿಗಬೇಕಿದ್ದ ಪ್ರತಿ 1000 ಬೀಡಿ ರೂ 220.52 ರಿಂದ ರೂ.40 ಕಡಿತ ಮಾಡಿ ವೇತನ ನೀಡುತ್ತಾ ಬಂದ ಬೀಡಿ ಮಾಲಕರು ಪ್ರತಿ ವರ್ಷ ಏರಿಕೆಯಾಗುತ್ತಾ ಬಂದ ತುಟ್ಟಿಭತ್ತ್ಯೆ ಯನ್ನು ಮಾತ್ರ ಸೇರಿಸಿ ವೇತನ ನೀಡುತ್ತಾ ಬಂದರು. ಇಂದು ಪ್ರತಿ ಸಾವಿರ ಬೀಡಿಗೆ ಕನಿಷ್ಟ ಕೂಲಿ ಡಿಎ ಸೇರಿ ರೂ 315 ಆಗಬೇಕಿದ್ದರು ಬೀಡಿ ಮಾಲಕರು ರೂ 263 ಮಾತ್ರಾ ನೀಡಿ ಈ ವರ್ಷದಿಂದ ರೂ 52 ವೇತನ ಕಡಿತ ಮಾಡಿ ವಂಚಿಸಿದ್ದಾರೆ ಎಂದು ದೂರಿದರು. ಆದರೆ ದುಡಿದ ವೇತನ ನೀಡದ ಬೀಡಿ ಮಾಲಕರ ವಿರುದ್ದ ಸರಕಾರ ಯಾವುದೇ ಕ್ರಮಕೈಗೊಳ್ಳದೆ ಮಾಲಕರ ರಕ್ಷಣೆ ನಿಂತು ಕಾರ್ಮಿಕರಿಗೆ ದ್ರೋಹ ಎಸಗುತ್ತಿದೆ ಎಂದು ಆರೋಪಿಸಿದರು.
ಜಯಶ್ರೀ ಸ್ವಾಗತಿಸಿ ವಂದಿಸಿದರು.
ವಿವಿಧ ಸಂಘಟನೆಗಳ ಮುಖಂಡರುಗಳಾದ ಲಕ್ಷ್ಮಣ ಗೌಡ, ಅಭಿಷೇಕ್, ಪುಷ್ಪ, ಈಶ್ವರಿ, ಶ್ಯಾಮರಾಜ್, ಧನಂಜಯ, ಸುಕುಮಾರ್ ದಿಡುಪೆ, ಅಶ್ವಿತ, ಮೊದಲಾದವರು ಭಾಗವಹಿಸಿದ್ದರು.
