ನಿಡಿಗಲ್ ಹೊಸ ಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ ದಂಡ ವಿಧಿಸಿದ ಮುಂಡಾಜೆ ಗ್ರಾಪಂ
ಬೆಳ್ತಂಗಡಿ; ಕಳೆದ ವಾರವಷ್ಟೇ ನಿಡಿಗಲ್ ಹಳೇಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ 2000ರೂ. ದಂಡ ವಿಧಿಸಿದ ಘಟನೆ ಮುಂಡಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತೆ ಅಂಥದ್ದೇ ಘಟನೆ ಮತ್ತೆ ಮರುಕಳಿಸಿದೆ.ಮಂಗಳವಾರ ಬೆಳಗಿನ ಹೊತ್ತು ನಿಡಿಗಲ್ ಹೊಸ ಸೇತುವೆಯ ಬಳಿ ತ್ಯಾಜ್ಯ ಕಂಡುಬಂದಿದ್ದು ಯಾರೋ ನದಿಯನ್ನು ಗುರಿಯಾಗಿಸಿ ಎಸೆದ ತ್ಯಾಜ್ಯವು ಸೇತುವೆಯ ಮೇಲೆ ಬಿದ್ದಿರುವುದು ಕಂಡುಬಂದಿದೆ.ಈ ಕಸದ ಚೀಲ, ಹಾಗೂ ಸೇತುವೆಯ ಇಕ್ಕೆಲಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಅದು ಉಜಿರೆಯ ವ್ಯಕ್ತಿಗಳದ್ದೆoದು ತಿಳಿದುಬಂತು. ಕೂಡಲೇ ಅವರನ್ನು ದೂರವಾಣಿ ಮೂಲಕ ಸ್ಥಳಕ್ಕೆ...
ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಬಂಗಾರ ಪಲಿಕೆ ಪ್ರದೇಶದಲ್ಲಿ ಭಾರೀ ಬೆಂಕಿ; ನೂರಾರು ಎಕ್ರೆ ಪ್ರದೇಶ ಬೆಂಕಿಗೆ ಆಹುತಿ
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದ ಮಲವಂತಿಗೆ ಗ್ರಾಮದ ಬಂಗಾರಪಲಿಕೆ ಪರಿಸರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.ಇಲ್ಲಿನ ಬಂಡೆಕಲ್ಲುಗಳು ಮತ್ತು ಕಡಿದಾದ ಪ್ರದೇಶದ ಹುಲ್ಲುಗಾವಲಿಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿದೆ. ಅತ್ಯಂತ ದುರ್ಗಮ ಪ್ರದೇಶವಾದ ಇಲ್ಲಿ ಬೆಂಕಿ ಹತೋಟಿಗೆ ತರುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದವರು ಬೆಂಕಿಯನ್ನು ಹತೋಟಿಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹಲವು ಕಿ.ಮೀ ದೂರದವರೆಗೂ ಕಂಡು ಬರುತ್ತಿದ್ದು ಹತ್ತಾರು ಎಕ್ರೆ ಪ್ರದೇಶ ಬೆಂಕಿಗೆ ಆಹುತಿಯಾಗಿರುವುದು ಹೊರ ನೋಟಕ್ಕೆ ಕಂಡು ಬರುತ್ತಿದೆ. ಇದೀಗ ಬೆಂಕಿ ಹುಲ್ಲುಗಾವಲನ್ನು...
ದ.ಕ ಜಿಲ್ಲೆಯಲ್ಲಿ ಬಿಸಿ ಗಾಳಿ, ಹವಾಮಾನ ಇಲಾಖೆ ಮಾಹಿತಿ: ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ. 41 ಡಿಗ್ರಿಸೆಲ್ಸಿಯಸ್ ದಾಖಲಾಗಿರುವ ಉಷ್ಣಾಂಶ.
ಮಂಗಳೂರು: ಭಾರತಿಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು ಬಿಸಿಗಾಳಿ(ಹೀಟ್ ವೇವ್) ಎಚ್ಚರಿಕೆಯನ್ನು ನೀಡಲಾಗಿದೆ.ದ.ಕ. ಜಿಲ್ಲೆಯಲ್ಲಿ ಪ್ರಸ್ತುತ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ ಎರಡು ದಿನ ಮುಂದುವರೆಯುವ ಮುನ್ಸೂಚನೆ ಇರುತ್ತದೆ. ಇದರಿಂದ ಹೀಟ್ ವೇವ್ ಸ್ಟ್ರೋಕ್ (ಶಾಖದ ಅಲೆ)ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಬಿಸಿಗಾಳಿ/ ಹೀಟ್ ವೇವ್‌ಗೆ ಸಲಹೆಗಳು: ವಿಶೇಷವಾಗಿ ಮಧ್ಯಾಹ್ನ 12 ರಿಂದ...
ದಿಡುಪೆಯಲ್ಲಿ ಗುಡ್ಡಕ್ಕೆ ಬೆಂಕಿ:ಅಗ್ನಿಶಾಮಕ ವಾಹನಕ್ಕಾಗಿ ಪರದಾಟ
ದಿಡುಪೆಯ ಗೋಡೌನ್ ಗುಡ್ಡ ಎಂಬಲ್ಲಿ ಗುಡ್ಡ ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಹರಡಿ ಹತ್ತಾರು ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.ಸ್ಥಳೀಯರ ಖಾಸಗಿ ಜಾಗದಿಂದ ಆರಂಭವಾದ ಬೆಂಕಿ ಕಂದಾಯ ಜಾಗವನ್ನು ಪ್ರವೇಶಿಸಿತು. ಬೆಂಕಿಯಿಂದ ಕೆಲವು ಮರ ಗಿಡಗಳಿಗೆ ಹಾನಿಯಾಗಿದೆ. ಆಕಸ್ಮಿಕವಾಗಿ ಉಂಟಾದ ಬೆಂಕಿ ಉರಿಬಿಸಿಲಿನ ವಾತಾವರಣದಲ್ಲಿ ತ್ವರಿತವಾಗಿ ವ್ಯಾಪಿಸಿ ರಸ್ತೆ ಬದಿಯನ್ನು ಸುಟ್ಟುಕೊಂಡು ಹೋಗಿ ಗುಡ್ಡ ಪ್ರದೇಶಕ್ಕೆ ನುಗ್ಗಿದೆ. ಗುಡ್ಡದ ಆಸು ಪಾಸು ಮನೆಗಳು ಇದ್ದು ಅಪಾಯದ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಬೆಂಕಿ ಮನೆಗಳಿರುವ ಪ್ರದೇಶಕ್ಕೆ ಹರಡದಂತೆ ಸಾಕಷ್ಟು ಶ್ರಮವಹಿಸಿದರು.-ಅಗ್ನಿಶಾಮಕಕ್ಕೆ ಪರದಾಟ-ಬೆಂಕಿಯನ್ನು...
ಶ್ರೀ ರಾಘವೇಂದ್ರ ಸ್ವಾಮಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ರಕ್ಷಿತ್ ಶಿವರಾಂ ಆಯ್ಕೆ.
ಬೆಳ್ತಂಗಡಿ; ಲೈಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಏಪ್ರಿಲ್ 20ರಿಂದ 23ರ ವರೆಗೆ ನಡೆಯುವ ಬ್ರಹ್ಮ ಕಳಶೋತ್ಸವದ ಪೂರ್ವಭಾವಿ ಸಭೆ ಈ ದಿನ ಆದಿತ್ಯವಾರ ಸಾಯಂಕಾಲ ಶ್ರೀಮಠದಲ್ಲಿ ನಡೆದು ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ಶ್ರೀ ರಕ್ಷಿತ್ ಶಿವರಾಮ್ ರವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಬ್ರಹ್ಮಕಲಶೋತ್ಸವದ ಉಳಿದ ಸಮಿತಿಯ ಸದಸ್ಯರನ್ನು ಆಯ್ಕೆಗೊಳಿಸಲು ಸಭೆ ರಕ್ಷಿತ್ ಶಿವರಾಂ ರವರಿಗೆ ಅಧಿಕಾರ ನೀಡಿತು. ಪ್ರೊಫೆಸರ್ ಎ ಕೃಷ್ಣಪ್ಪ ಪೂಜಾರಿಯವರು ಪ್ರಸ್ತಾವಿಸಿ ಶ್ರೀ ರಾಘವೇಂದ್ರ ಮಠ 24 ವರ್ಷದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು. ಅಧ್ಯಕ್ಷತೆ...
ಬೆಳ್ತಂಗಡಿ; ಜೆ.ಎಂ.ಎಸ್. ವತಿಯಿಂದ ಮಹಿಳಾ ದಿನಾಚರಣೆ
ಬೆಳ್ತಂಗಡಿ; ಅಖಿಲಭಾರತ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ಮಂಗಳೂರಿನ ಸಮಾಜಿಕ ಕಾರ್ಯ ಕರ್ತೆ ವತ್ಸಲ ನಾಯಕ್ ಮಾತನಾಡಿ ಮಹಿಳೆಯರ ಶೋಷಣೆ, ಲಿಂಗತಾರತಮ್ಯ ಸಮಾಜದಲ್ಲಿ,ಕುಟುಂಬದಲ್ಲಿ ನಮಗೆ ಅರಿವಿಲ್ಲದ ಹಾಗೇ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರಿಂದಲೇ ಬದಲಾವಣೆ ಆರಂಭವಾಗಬೇಕಾಗಿದೆಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಮಕ್ಕಳನ್ನು ಜಾಗೃತರಾಗಿಸುವ ಕಾರ್ಯ ಮಾಡಬೇಕು. ಲಿಂಗತಾರತಮ್ಯವನ್ನು ನಮ್ಮ ಮನೆಯಿಂದಲೇ ಮೊದಲು ಹೋಗಲಾಡಿಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಮಹಿಳಾ ರಿಕ್ಷಾ ಚಾಲಕರಾದ ಕೆಮ್ಮಟೆಯ ಹರಿಣಾಕ್ಷಿ ರತ್ನಾಕರ ಗೌಡ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು...
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾಗಿ ಬಿ.ಕೆ.ವಸಂತ್ ಆಯ್ಕೆ
ಬೆಳ್ತಂಗಡಿ; ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮೈಸೂರು ವಿಭಾಗಮಟ್ಟದ ಸರ್ವ ಸದಸ್ಯರ ಸಭೆ ಮೈಸೂರಿನಲ್ಲಿ ನಡೆಯಿತು. ಸಭೆಯಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾಗಿಎರಡನೇ ಬಾರಿಗೆ ಬಿ.ಕೆ.ವಸಂತ್ ಬೆಳ್ತಂಗಡಿ ಇವರು ಸರ್ವಾನುಮತದಿಂದಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ : ಅನುಮತಿ ಇಲ್ಲದೆ ಮರ ಕಡಿದು ಮೂರು ವಿದ್ಯುತ್ ಕಂಬಕ್ಕೆ ಹಾನಿ; ಮೆಸ್ಕಾಂ ಸಹಾಯವಾಣಿಗೆ ದೂರು ನೀಡಿದ್ದಕ್ಕೆ ದಂಪತಿಗಳಿಗೆ ಹಲ್ಲೆ ಆರೋಪ
ಬೆಳ್ತಂಗಡಿ : ಅನುಮತಿ ಇಲ್ಲದೆ ಮರ ಕಡಿದ ಪರಿಣಾಮ ವಿದ್ಯುತ್ ವೈಯರ್ ಗೆ ಬಿದ್ದು ಮೂರು ಕಂಬ ಹಾನಿಯಾಗಿದೆ .ಇದರಿಂದ ಪಕ್ಕದ ಮನೆಯ ನಿವಾಸಿ ಮನೆಯ ಮೇಲೂ ವಿದ್ಯುತ್ ವೈಯರ್ ಬಿದ್ದಿತ್ತು. ಇದಕ್ಕೆ ಮೆಸ್ಕಾಂ ಸಹಾಯವಾಣಿಗೆ ದೂರು ನೀಡದ್ದಕ್ಕೆ ಮೂವರು ಸೇರಿ ದಂಪತಿಗಳಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗೆ.ಇದೀಗ ದಂಪತಿಗಳು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನೆತ್ತಾರ ಬಳಿಯ ಹಂಡಾಲು ನಿವಾಸಿ ಅಬುಬಕ್ಕರ್ ಮನೆಯ ಅಂಗಳದಲ್ಲಿದ್ದ ಹಳೆಯ ಮರವನ್ನು ಕಡಿಯಲ್ಲಿ ಮೆಸ್ಕಾಂ ಇಲಾಖೆಗೆ ಮನವಿ ಮಾಡಿಕೊಂಡಿದ್ದರು...
ದಯಾ ವಿಶೇಷ ಶಾಲೆಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಭೇಟಿ
ಬೆಳ್ತಂಗಡಿ; ದಯಾ ವಿಶೇಷ ಶಾಲೆಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದಂತಹ ಅತೀ ವಂದನೀಯ ಡಾ||ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಷಪ್ ಅವರು ವಿಶೇಷ ಮಕ್ಕಳಲ್ಲಿ ವಿಶೇಷವಾದ ಪ್ರೀತಿ ಕಾಣುತ್ತದೆ, ಈ ಮಕ್ಕಳ ನಗು ನಮ್ಮಲ್ಲಿರುವ ಎಲ್ಲಾ ನೋವುಗಳನ್ನು ಮರೆಸುತ್ತದೆ ಹಾಗೆಯೇ ವಿಶೇಷ ಚೇತನ ಮಕ್ಕಳ ಮನಸ್ಸಿನಲ್ಲಿ ಕಪಟವಿಲ್ಲ ಅವರ ಹೃದಯದಲ್ಲಿ ನೈರ್ಮಲ್ಯತೆ ಹೆಚ್ಚಿರುತ್ತದೆ ಎಂದರು. ಇಂತಹ ವಿಶೇಷ ಚೇತನ ಮಕ್ಕಳಿಗೆ ಸೇವೆ ಮಾಡುವುದೆಂದರೆ ಅದೊಂದು ದೊಡ್ಡ ಕಾರ್ಯ ಅಂತನಹ ಸೇವೆ ನೀಡುತ್ತಿರುವ ದಯಾ...
ಅರಸಿನ ಮಕ್ಕಿ; 31ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ
ಅರಸಿನಮಕ್ಕಿ; ಸೇವಾಭಾರತಿ (ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ, ಸಬಲಿನಿ ಯೋಜನೆಯಡಿ ಗ್ರಾಮ ಪಂಚಾಯತ್ ಅರಸಿನಮಕ್ಕಿ ಮತ್ತು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಅರಸಿನಮಕ್ಕಿ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 31ನೇ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಅರಸಿನಮಕ್ಕಿಯ ಹತ್ಯಡ್ಕ ಸಿ ಎ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು. ಅರಸಿನಮಕ್ಕಿ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘ ಇದರ ಸಿಇಒ ಶ್ರೀಮತಿ ಸ್ವರ್ಣಗೌರಿ...















