Home ಅಪಘಾತ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಯುವಕನಿಗೆ ಗಂಭಿರ ಗಾಯ

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಯುವಕನಿಗೆ ಗಂಭಿರ ಗಾಯ

39
0


ಬೆಳ್ತಂಗಡಿ:ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡ ಘಟನೆ ಕಡಿರುದ್ಯಾವರದಲ್ಲಿ ಬುಧವಾರ ಸಂಜೆ ನಡೆದಿದೆ.
ಮುಂಡಾಜೆ- ದಿಡುಪೆ ರಸ್ತೆಯ ಕಡಿರುದ್ಯಾವರ ಗ್ರಾಮದ ಬೊಳ್ಳೂರುಬೈಲು ಕ್ರಾಸ್ ಸಮೀಪ ಮುಂಡಾಜೆಯಿಂದ ದಿಡುಪೆ ಕಡೆ ಹೋಗುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬೈಕ್ ಸವಾರನ ಬಳಿ ದೊರೆತ ಆಧಾರ್ ಕಾರ್ಡ್ ನಲ್ಲಿರುವ ವಿಳಾಸದಂತೆ ಆತನನ್ನು ವಿಟ್ಲ ಸಮೀಪದ ಕೇಪು ಗ್ರಾಮದ ನೀರ್ಕಜೆ ನಿವಾಸಿ ವಿನಯ ಕೆ.(22) ಎಂದು ಗುರುತಿಸಲಾಗಿದೆ.
ಗಾಯಾಳುವನ್ನು ಸ್ಥಳೀಯರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here