ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಬೆಂಬಲ; ಅಬ್ದುಲ್ ಕರೀಂ ಗೇರುಕಟ್ಟೆ

0

ಬೆಳ್ತಂಗಡಿ;  ದಿನಾಂಕ:18:04:2025 ರಂದು ಮಂಗಳೂರಿನ ಅಡ್ಯಾರ್ ಶಾ ಗಾರ್ಡನ್ ನಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ದ.ಕ.ಜಿಲ್ಲೆಯ ಖಾಝಿಗಳ ಸಂಯುಕ್ತ ನೇತೃತ್ವದಲ್ಲಿ ನಡೆಯುವ ಕೇಂದ್ರ ಸರಕಾರದ ವಿವಾದಿತ ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವುಸಂಪೂರ್ಣ ಬೆಂಬಲವನ್ನು ಘೋಷಿಸುತ್ತದೆ ಹಾಗೂ ಬೆಳ್ತಂಗಡಿ ತಾಲೂಕಿನ ಜಮಾಅತ್ ಗಳ ಅತೀ ಹೆಚ್ಚು ಜನರು ಭಾಗವಹಿಸಬೇಕೆಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷರಾದ ಕೆ.ಎಮ್.ಅಬ್ದುಲ್ ಕರೀಮ್ ಗೇರುಕಟ್ಟೆ ಪ್ರಕಟಣೆಯಲ್ಲಿತಿಳಿಸಿರುತ್ತಾರೆ.

ಕುದುರೇಮುಖ ರಾಷ್ಟ್ರೀಯ ಉದ್ಯಾನ ವನದೊಳಗೆ ಚಿರತೆ ಬೇಟೆ; ತನಿಖೆ ಚುರುಕುಗೊಳಿಸಿದ ಅರಣ್ಯ ಇಲಾಖೆ.

0

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯ ಸವಣಾಲು ಗ್ರಾಮದ ಇತ್ತಿಲಪೇಲ ಅರಣ್ಯ ಪ್ರದೇಶದಲ್ಲಿ ಭಾನುವಾರ ಚಿರತೆಯ ಮೂಳೆಗಳು ಪತ್ತೆಯಾಗಿದ್ದು ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯವರು 1972 ರ ವನ್ಯ ಜೀವಿ ಕಾಯ್ದೆಯ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನವನದ ಒಳಗೆ ಚಿರತೆಯನ್ನು ಬೇಟೆಯಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.ಮನುಷ್ಯನಿಗೆ ಪ್ರವೇಶ ನಿರಾಕರಿಸಲಾಗಿರುವ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ವನ್ಯ ಜೀವಿಯಾಗಿರುವ ಚಿರತೆಯ ಬೇಟೆ ನಡೆದಿರುವುದನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ...

ಉಜಿರೆ ಅನುಗ್ರಹ ಪಿ.ಯು.ಕಾಲೇಜಿನಲ್ಲಿ ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳನ್ನು  ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

0

ಬೆಳ್ತಂಗಡಿ : ಉಜಿರೆ ಅನುಗ್ರಹ ಪಿ.ಯು.ಕಾಲೇಜಿನಲ್ಲಿ ಸಿಸಿಕ್ಯಾಮರದ ಎನ್.ವಿ.ಆರ್ ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಜೈಲಿನಿಂದ ಬಾಡಿವಾರೆಂಟ್ ಮೂಲಕ ಕರೆತಂದು ಮಹಜರು ನಡೆಸಲಾಗಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಅನುಗ್ರಹ ಪಿ.ಯು.ಕಾಲೇಜಿನಲ್ಲಿ ಮಾ.3 ರಂದು ರಾತ್ರಿ ಯುವತಿಯರ ಚ್ಯೂಡಿದಾರ ಡ್ರೆಸ್ ಹಾಕಿಕೊಂಡು ನುಗ್ಗಿ ಸಿಸಿಕ್ಯಾಮರದ ಎನ್.ವಿ.ಆರ್ ಕಳ್ಳತನ ಮಾಡಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಾ.4 ರಂದು ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಉಜಿರೆ ಕಳ್ಳತನ ಪ್ರಕರಣದ ಬಳಿಕ ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕಾರ್ಕಳರಲ್ಲಿ ಕಳ್ಳತನ ಪ್ರಕರಣದಲ್ಲಿ ಕಾರು ಸಮೇತ ಪೊಲೀಸರು ಬಂಧಿಸಿ ವಿಚಾರಣೆ ಬಳಿಕ...

ಬೆಳ್ತಂಗಡಿ; ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ. ಚಪ್ಪರ ಮಹೂರ್ತ

0

ಬೆಳ್ತಂಗಡಿ. ಗುರುವಾಯನಕೆರೆಯ ಶಕ್ತಿನಗರ ಮೈದಾನದಲ್ಲಿ ಏಪ್ರಿಲ್ 20ರಂದು ಕೆಪಿಸಿಸಿ ಅಧ್ಯಕ್ಷರು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಇವರ ಉಪಸ್ಥಿತಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ತಾತ್ಕಾಲಿಕ ಚಪ್ಪರಕ್ಕೆ ಮಹೂರ್ತ ನೆರವೇರಿಸಲಾಯಿತು. ಮೆಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅರ್ಚಕರಾದ ಅನಂತ ಇರುವತ್ರಾಯ ಅವರು ಪೂಜಾ ವಿಧಿ–ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕೆ ಕಾಶಿಪಟ್ಟಣ, ನಾಗೇಶ್ ಕುಮಾರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ ಕುಕ್ಕೆಡಿ, ಮಾಜಿ...

ನಡ; ಮಳೆಯಿಂದ ಹಾನಿಯಾದ ಮನೆಗಳಿಗೆ ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ! ನಡ ಗ್ರಾಮದ ದೇರ್ಲಕ್ಕಿ ಬದ್ರುದ್ದೀನ್ ಅವರು ಮನೆಯು ತೀವ್ರ ಸ್ವರೂಪದ ಗಾಳಿ ಮಳೆಗೆ ಸಂಪೂರ್ಣ ಕುಸಿದಿದ್ದು ಬಿದ್ದಿದ್ದು ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳಿಯ ನಡ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾದ ಝಕೀರ್. ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮೈರಾ ಬಾನು. ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಅಝರ್. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಗೌಡ ಸವಣಾಲು. ಗ್ರಾಮೀಣ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಮದ್...

ಕಥೋಲಿಕ ಸಭಾ ಬೆಳ್ತಂಗಡಿ ವಲಯ ಪದಾಧಿಕಾರಿಗಳ ಆಯ್ಕೆ

0

ಬೆಳ್ತಂಗಡಿ: ಕಥೋಲಿಕ್ ಸಭಾ ಬೆಳ್ತಂಗಡಿ ವಲಯ ಅಧ್ಯಕ್ಷರಾಗಿ ಆಲ್ಬರ್ಟ್ ಮೋನಿಸ್ ಗರ್ಡಾಡಿ, ಉಪಾಧ್ಯಕ್ಷರಾಗಿ ಅರುಣ್ ಫೆರ್ನಾಂಡಿಸ್‌ ಮಡಂತ್ಯಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಸ್ಟೇನಿ ಪಿಂಟೊ ಉಜಿರೆ, ಜೊತೆ ಕಾರ್ಯದರ್ಶಿ ವಾಲ್ವರ್ ಕ್ರಾಸ್ತಾ ಅರ್ವ, ಕೋಶಾಧಿಕಾರಿ ಫೆಡ್ರಿಕ್ ಡಿಕೊಸ್ತಾ ನಾಳ, ಜೊತೆ ಕೋಶಾಧಿಕಾರಿ ವಿನ್ಸೆಂಟ್ ಗಲ್ಪಾವೊ ನೈನಾಡ್, ಅಮ್ಮೊ ಸಂದೇಶ್ ಪ್ರತಿನಿಧಿ ವಾಲ್ಟರ್ ಮೋನಿಸ್ ಬೆಳ್ತಂಗಡಿ, ಸ್ತ್ರೀ ಹಿತಾ ಸಂಚಾಲಕಿ-ಡೈನಾ ರೊಡ್ರಿಗಸ್ ನಾರಾವಿ, ರಾಜಕೀಯ ಸಂಚಾಲಕ ವಿನ್ಸೆಂಟ್ ಡಿಸೋಜ ಮಡಂತ್ಯಾರ್, ಸಮುದಾಯ ಅಭಿವೃದ್ಧಿ ಸಂಚಾಲಕ ಗ್ರೆಗರಿ ಫೆರ್ನಾಂಡಿಸ್‌ ವೇಣೂರು, ಯುವ ಹಿತಾ ಸಂಚಾಲಕ ಜೈಸನ್ ಡಿಸೋಜ...

ಡಿ.ಎಚ್.ಎಸ್. & ಡಿ.ವೈ.ಎಫ್.ಐ, ನೇತೃತ್ವದಲ್ಲಿ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ

0

ಬೆಳ್ತಂಗಡಿ;ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕೇ ನಮಗೆ ಆದರ್ಶವಾಗಬೇಕು ಮತ್ತು ಸಂವಿಧಾನಕ್ಕೆ ಬದ್ದರಿರುವವರು ಅಸ್ಪೃಶ್ಯತೆಯನ್ನು ಕೂಡಾ ಆಚರಿಸಬಾರದು ಎಂದು ಪುತ್ತೂರು ಮಹಿಳಾ ಕಾಲೇಜು ಉಪನ್ಯಾಸಕರಾದ ಡಾ.ಯಶೋಧರ ಎಂ.ಕೆ ಅಂಡಿಂಜೆ ಹೇಳಿದರು.ಅವರು ಇಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 134 ನೇ ಜಯಂತಿ ಅಂಗವಾಗಿ ನಡೆದ 7ನೇ ವರ್ಷದ ಭಾವೈಖ್ಯ ಸಮಾವೇಶವನ್ನುದ್ದೇಶಿಸಿ ಮಾತಾಡುತ್ತಿದ್ದರು. ಹಿಂದು ಧರ್ಮವನ್ನು ತಿದ್ದಿ ಸರಿಪಡಿಸಲು ಸಾದ್ಯವೇ ಇಲ್ಲ ಎಂಬ ದುಃಖದಿಂದ ಅವರು ಕೊನೆಯಲ್ಲಿ ಲಕ್ಷಾಂತರ ಬೆಂಬಲಿಗರೊಂದಿಗೆ ಭೌದ್ದ ಧರ್ಮ ಸೇರಿದರು. ದೇಶದ ಮಹಿಳೆಯರ ಸ್ವಾಭಿಮಾನ, ಸಮಾನತೆ, ಸ್ವತಂತ್ರ ಬದುಕಿಗೆ...

ಮಂಗಳೂರು: ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ದ ಪ್ರತಿಭಟನೆ. ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಪೂರ್ಣ ಬೆಂಬಲ; ಶಾಹುಲ್ ಹಮೀದ್

0

ಬೆಳ್ತಂಗಡಿ;  ದಿನಾಂಕ:18:04:2025 ರಂದು ಮಂಗಳೂರಿನ ಅಡ್ಯಾರ್ ಶಾ ಗಾರ್ಡನ್ ನಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ದ.ಕ.ಜಿಲ್ಲೆಯ ಖಾಝಿಗಳ ಸಂಯುಕ್ತ ನೇತೃತ್ವದಲ್ಲಿ ನಡೆಯುವ ಕೇಂದ್ರ ಸರಕಾರದ ವಿವಾದಿತ ವಕ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆಗೆ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವು ಸಂಪೂರ್ಣ ಬೆಂಬಲವನ್ನು ಘೋಷಿಸುತ್ತದೆ ಹಾಗೂ ಜಿಲ್ಲೆಯ ಜಮಾಅತ್ ಗಳ ಅತೀ ಹೆಚ್ಚು ಜನರು ಭಾಗವಹಿಸಬೇಕೆಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ. ಪ್ರಕಟಣೆಯಲ್ಲಿತಿಳಿಸಿರುತ್ತಾರೆ.

ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಕಿರು ಧೀಕ್ಷೆ ಸ್ವೀಕಾರ

0

ಬೆಳ್ತಂಗಡಿ , ಏಪ್ರಿಲ್ 15: ಬೆಳ್ತಂಗಡಿ ಧರ್ಮಪ್ರಾಂತಾಯಕ್ಕಾಗಿ ವಿವಿಧ ಕಡೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸೆಮಿನರಿ ವಿದ್ಯಾರ್ಥಿಗಳಿಗೆ ಕಿರುದೀಕ್ಷೆ ನೀಡಲಾಯಿತು. ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಜ್ಹಿಯವರು ದೀಕ್ಷೆಯನ್ನು ನೀಡಿದರು. ಗುರುದೀಕ್ಷೆಯ ಮೊದಲು ಹಂತ ಹಂತವಾಗಿ ಕಿರುದೀಕ್ಷೆಗಳ ಮೂಲಕ ಸೆಮಿನರಿ ವಿದ್ಯಾರ್ಥಿಗಳನ್ನು ಯಾಜಕಾಭಿಷೇಕಕ್ಕಾಗಿ ಸಿದ್ಧರಾಗುತ್ತಾರೆ. ಇದೀಗ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕಾಗಿ 3 ವಿದ್ಯಾರ್ಥಿಗಳು ಡೀಕನ್, 6 ವಿದ್ಯಾರ್ಥಿಗಳು ಮತ್ತಿತರ ಕಿರುದೀಕ್ಷೆಗಳನ್ನು ಸ್ವೀಕರಿಸಿದರು.

ಕಜಕೆ ಸ. ಹಿ ಪ್ರಾ. ಶಾಲೆಗೆಬೆಸ್ಟ್ ಫೌಂಡೇಶನ್ ವತಿಯಿಂದ ಪೀಠೋಪಕರಣ ವಿತರಣೆ.

0

ಬೆಳ್ತಂಗಡಿ: ಬೆಸ್ಟ್ ಫೌಂಡೇಶನ್ ವತಿಯಿಂದ ಮಲವಂತಿಗೆ ಗ್ರಾಮದ ಕಜಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣ ವನ್ನು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ. ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರು,ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಜಯರಾಮ್. ಎಂ ಕೆ ಮಿತಬಾಗಿಲು ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಮಹಮ್ಮದ್. ಬಂಗಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಲಕ್ಷ್ಮಣ ಗೌಡ. ಬೆಳ್ತಂಗಡಿ...