ಬಾಂಗ್ಲಾ ಪ್ರಜೆಗೆ ಪಾಸ್ ಪೋರ್ಟ್ ಮಾಡಲು ಸಹಕರಿಸಿದ ವಿಟ್ಲ ಪೊಲೀಸ್ ಠಾಣೆಯ ಪೇದೆಯ ಬಂಧನ
ಮಂಗಳೂರು : ಶಂಕಿತ ಬಾಂಗ್ಲಾ ದೇಶದ ಪ್ರಜೆಗೆ ಪಾಸ್ ಪೋರ್ಟ್ ಮಾಡಲು ವಿಟ್ಲ ಪೊಲೀಸ್ ಠಾಣೆಯ ಪೇದೆ ಪ್ರದೀಪ್ ಎಂಬಾತ ಸಹಾಯ ಮಾಡಿ ಬಳಿಕ ಸಾಕ್ಷ್ಯ ನಾಶ ಮಾಡಿದ ಪ್ರಕರಣ ಸಂಬಂಧ ನಕಲಿ ದಾಖಲೆ ನೀಡಿ ಪಾಸ್ ಪೋರ್ಟ್ ಮಾಡಿಸಿಕೊಂಡ ಶಂಕಿತ ಬಾಂಗ್ಲಾದೇಶ ಪ್ರಜೆ ಶಕ್ತಿ ದಾಸ್ ಮತ್ತು ವಿಟ್ಲ ಪೊಲೀಸ್ ಪೇದೆ ಪ್ರದೀಪ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸಾಬು ಮಿರ್ಜಿ ಎಂಬವರು ನೀಡಿದ ದೂರಿನ ಮೇರೆಗೆ ಡಿ.20 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಪೊಲೀಸ್ ಠಾಣಾ...
ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ ಆಶೀರ್ವಾಚನ
ಉಜಿರೆ: ಪವಾಡ ಪುರಷರೆಂದು ಹೆಸರುವಾಸಿಯಾದ ಪಾದುವಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ ಉಜಿರೆಯ ಕ್ರೈಸ್ತ ದೇವಾಲಯವು ದುರಸ್ತಿ ಹಾಗೂ ನವೀಕರಣಗೊಂಡು ಆಶೀರ್ವಚನ ಕಾರ್ಯಕ್ರಮವುಡಿ. 22ರಂದು ನಡೆಯಿತು. ರೈ.ರೆ.ಡಾ.ಪೀಟರ್ ಪೌಲ್ ಸಲ್ದಾನ್ಹಾರವರು ಮುಖ್ಯ ರಸ್ತೆಯ ಬಳಿ ನಿರ್ಮಿಸಿದ ಸಂತ ಅಂತೋನಿಯವರ ಗ್ರೋಟ್ಟೋ ಆಶೀರ್ವಚನ, ನಂತರ ಮುಖ್ಯ ದ್ವಾರದ ಉದ್ಘಾಟನೆ, ವೆಲಂಕಣಿ ಮಾತೆಯ ಗ್ರೋಟ್ಟೋ, ಬಳಿಕ ಚರ್ಚ್ ಶುದ್ಧಿಕರಣ, ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಪವಿತ್ರ ಪರಮ ಪ್ರಸಾದ ಮಂಟಪ್ಪ ಉದ್ಘಾಟಿಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಬಲಿಪೂಜೆಯಲ್ಲಿ ಧರ್ಮಾಧ್ಯಕ್ಷರೊಂದಿಗೆ, ಬೆಳ್ತಂಗಡಿ ವಲಯದ ಪ್ರಧಾನ...
ಧರ್ಮಸ್ಥಳ ಕನ್ಯಾಡಿ ಲಾಡ್ಜ್ ನಲ್ಲಿ ಅಕ್ರಮ ಜೂಜಾಟದ ಮೇಲೆ ಪೊಲೀಸ್ ದಾಳಿ; 11 ಜನರ ಬಂಧನ ; 3 ಲಕ್ಷ ರೂಪಾಯಿ ಹಣ ವಶಕ್ಕೆ
ಬೆಳ್ತಂಗಡಿ : ಅಕ್ರಮವಾಗಿ ಜೂಜಾಟ(ಉಲಾಯಿ-ಪಿದಾಯಿ) ಆಡುತ್ತಿದ್ದ ಲಾಡ್ಜ್ ಮೇಲೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ 11 ಮಂದಿಯನ್ನು ಬಂಧಿಸಿ 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ ಬಳಿಯ ಖಾಸಗಿ ಲಾಡ್ಜ್ ನಲ್ಲಿ ಅಕ್ರಮವಾಗಿ ಜನ ಸೇರಿ ಜೂಜಾಟ(ಉಲಾಯಿ-ಪಿದಾಯಿ) ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿ.22 ರಂದು ರಾತ್ರಿ 7:40 ಕ್ಕೆ ಲಾಡ್ಜ್ ಮೇಲೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ...
ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಎಸ್.ಐ.ಟಿ ಕಚೇರಿಗೆ ಹಾಜರು
ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಸಹಿ ಹಾಕಲು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಡಿ.22 ರಂದು ಬೆಳಗ್ಗೆ 11:30 ಕ್ಕೆ ಆರೋಪಿ ಚಿನ್ನಯ್ಯ ತನ್ನ ಪತ್ನಿ ಮಲ್ಲಿಕಾ ಜೊತೆ ಬಾಡಿಗೆ ಆಟೋ ರಿಕ್ಷಾದಲ್ಲಿ ಬಂದು ಹಾಜರಾಗಿ ಎಸ್ಐಟಿ ದಾಖಲೆ ಪುಸ್ತಕಕ್ಕೆ ಸಹಿ ಹಾಕಿ ವಾಪಸ್ 12:30 ಕ್ಕೆ ಆಟೋ ರಿಕ್ಷಾದಲ್ಲಿ ತೆರಳಿದ್ದಾನೆ.
ಧರ್ಮಸ್ಥಳ ಅಶೋಕ ನಗರದಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ರಾಜ್ಯಸಭಾ ನಿಧಿಯಿಂದ 2.41 ಕೋಟಿ ಅನುದಾನದ ಕಾಮಗಾರಿಗೆ ಶಂಕು ಸ್ಥಾಪನೆ
ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ರಾಜ್ಯಸಭಾ ಅನುದಾನದಲ್ಲಿ ಧರ್ಮಸ್ಥಳದ ಅಶೋಕನಗರ ಅಭಿವೃದ್ಧಿಗೆ 2.41 ಕೋಟಿ ರೂ. ಮಂಜೂರಾಗಿದ್ದು ಕಾಶಮಗಾರಿಗೆ ಶಿಲಾನ್ಯಾಸ ಸಮರಂಭ ಭಾನುವಾರ ಅಮೃತವರ್ಷಿಣಿ ಸಭಾಭವನದ ಬಳಿ ಇರುವ ಮೈದಾನದಲ್ಲಿ ನಡೆಯಿತು.ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಮಾಡಿದ ಶಾಸಕ ಹರೀಶ್ ಪೂಂಜ ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಕನಸು ಕಂಡ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸು ದೇಶದೆಲ್ಲೆಡೆ ನನಸಾಗುತ್ತಿದೆ. ಅಶೋಕನಗರದಲ್ಲಿ ರಸ್ತೆ, ಬೀದಿದೀಪ, ಚರಂಡಿ ವ್ಯವಸ್ಥೆ, ಸ್ವಚ್ಛತೆ ಮೊದಲಾದ ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ...
ಶಿಶಿಲ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮಹಿಳೆ ಮೃತ್ಯು
ಬೆಳ್ತಂಗಡಿ: ಶಿಶಿಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಡಿ. 21ರಂದು ನಡೆದಿದೆ.ಇಲ್ಲಿನ ಗುಡ್ಡೆ ತೋಟ ನಿವಾಸಿ ಪ್ರೇಮ ( ವ. 55)ರವರು ಮೃತ ಮಹಿಳೆಯಾಗಿದ್ದಾರೆ. ಮದ್ಯಾಹ್ನ ದ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಇವರಿಗೆ ನಾಗರ ಹಾವು ಕಡಿದಿದೆಹಾವು ಕಡಿದ ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದೊಂದಿಗೆ ಕರೆದೋಯ್ಯಲಾಯಿತಾದರೂ ವಿಷ ವಿಪರೀತ ಅವರಿಸಿರುವ ಕಾರಣ ಮೃತಪಟ್ಟಿದ್ದಾರೆ ಎಂದು ತಿಳಿದುಮೃತ ಮಹಿಳೆ ಓರ್ವ ಹೆಣ್ಣು ಮಗಳು ವಿಜಯ ಹಾಗೂ ಪುತ್ರ...
ಚಿನ್ನಯ್ಯನಿಗೆ ಪೊಲೀಸ್ ರಕ್ಷಣೆ ನೀಡಿ ಜಯಂತ್ ಟಿ ಯಿಂದ ಮುಖ್ಯಮಂತ್ರಿಗಳಿಗೆ ಮನವಿ
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾಗಿರುವ ಚಿನ್ನಯ್ಯ ಸೌಜನ್ಯ ಹೋರಾಟಗಾರರ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು ಈ ದೂರು ನೀಡಲು ಒತ್ತಡ ಹಾಕಿ ನಡೆಸಿರುವ ಅಪರಾಧಿಕ ಪಿತೂರಿಯ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಚಿನ್ನಯ್ಯನಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿ ರಕ್ಷಣೆ ನೀಡುವಂತೆ ಸೌಜನ್ಯ ಪರ ಹೋರಾಟಗಾರ ಜಯಂತ್ ಟಿ ಮುಖ್ಯಮಂತ್ರಿ ಯವರಿಗೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ಮನವಿಯಲ್ಲಿ ಏನಿದೆಚಿನ್ನಯ್ಯ ಜಾಮೀನಿನ ಮೇಲೆ ಹೊರಬಂದು ಬಳಿಕ ಪೊಲೀಸರಿಗೆ ಸೌಜನ್ಯ ಪರ ಹೋರಾಟಗಾರರಿಂದ ತನಗೆ ಜೀವ ಭಯವಿದೆ ಆದ್ದರಿಂದ ತನಗೆ ರಕ್ಷಣೆ ನೀಡಬೇಕು...
ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಕ್ರಿಸ್ಮಸ್ ಆಚರಣೆ
ಬೆಳ್ತಂಗಡಿ; ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆ ಡಿಸೆಂಬರ್ 20 ರಂದು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪರಾಜ್ ವಹಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ ಜೆ ಪ್ರಾಸ್ತಾವಿಕ ನುಡಿಯನ್ನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೈಂಟ್ ಮೇರಿ ಚರ್ಚ್ ಇದರ ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ಎಬಿನ್ ಕುರಿಯನ್ ಕ್ರಿಸ್ಮಸ್ ಕೇಕ್ ಕತ್ತರಿಸಿ ಕ್ರಿಸ್ಮಸ್ ಸಂದೇಶ ನೀಡಿದರು. ಸಿಸ್ಟರ್ ಲೀನಾ ಮದರ್ಸುಪಿರಿಯರ್ ಕುಟ್ರುಪ್ಪಾಡಿ ಕಾನ್ವೆಂಟ್, ಮಾತೃವೇದಿ...
ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ವಾರ್ಷಿಕ ಸಭೆ
ಬೆಳ್ತಂಗಡಿ, ಡಿಸೆಂಬರ್ 20: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಅಡಿಯಲ್ಲಿ ಬೆಳ್ತಂಗಡಿ ಮತ್ತು ಗುರುವಾಯನಕೆರೆ ವಿಪತ್ತು ನಿರ್ವಹಣಾ ಸಮಿತಿಯ ವಾರ್ಷಿಕ ವಿಶೇಷ ಸಭೆ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ಎಸ್. ಎಸ್ ರವರು ಕಾರ್ಯಕ್ರಮ ಉದ್ಘಾಟನೆ ನಡೆಸಿದರು. ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ಧರ್ಮಸ್ಥಳ ದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಕಾರ್ಯಕ್ರಮವಾಗಿದೆ. ರಾಜ್ಯದ 91 ತಾಲ್ಲೂಕಿನಲ್ಲಿ ವಿಪತ್ತು ನಿರ್ವಹಣಾ ಸಮಿತಿ...
ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಜ್ಯ ಸರಕಾರದಿಂದ ರೂಬ1ಕೋಟಿ ಅನುದಾನ ಮಂಜೂರು
ಬೆಳ್ತಂಗಡಿ; ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವಶ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರಕಾರ ರೂ. 1 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ.ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಹಾಗೂ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಡಾ.ಎಂ.ಸಿ. ಸುಧಾಕರ್ ಅವರಿಗೆ ಶಾಸಕರಾದ ಹರೀಶ್ ಪೂಂಜಾ ಅವರು ಧನ್ಯವಾದ ಸಲ್ಲಿಸಿರುತ್ತಾರೆ.















