ಬೆಳ್ತಂಗಡಿ : ನ್ಯಾಯಾಲಯಕ್ಕೆ ಹಾಜರಾದ ಬುರುಡೆ ಚಿನ್ನಯ್ಯ

0

ಬೆಳ್ತಂಗಡಿ : ಬುರುಡೆ ಷಡ್ಯಂತ್ರ ಪ್ರಕರಣದ ಆರೋಪಿ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಚಿನ್ನಯ್ಯ ಜೈಲಿನಿಂದ ಬಿಡುಗಡೆ ಬಳಿಕ ಮೊದಲ ಭಾರಿಗೆ ಡಿ.26 ರಂದು 12 ಗಂಟೆಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಪತ್ನಿ ಮಲ್ಲಿಕಾ ಹಾಗೂ ವಕೀಲರ ಜೊತೆ ಬಾಡಿಗೆ ಆಟೋ ರಿಕ್ಷಾದಲ್ಲಿ ಬಂದು ಹಾಜರಾಗಿ ಅಲ್ಲಿಂದ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಸಹಿ ಹಾಕಿ ವಾಪಸ್ ಆಟೋ ರಿಕ್ಷಾದಲ್ಲಿ ತೆರಳಿದ್ದಾರೆ.

ಲಾಯಿಲ ಜನಸ್ಪಂದನ ಸಭೆ; ಅನಧಿಕೃತ ಕಟ್ಟಡಗಳ ವಿರುದ್ಧ ಗ್ರಾಮಸ್ಥರು ಆಕ್ಷೇಪ ಕ್ರಮಕ್ಕೆ ಒತ್ತಾಯ

0

ಲಾಯಿಲ: ‌ಲಾಯಿಲ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ. 26 ರಂದು ಭಾರತ್ ಮಾತಾ ಸಭಾಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ‌ ಜಯಂತಿ ಎಂ.ಕೆ., ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಸದಸ್ಯರು, ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರುಲಾಯಿಲ ಗ್ರಾಮದ ವಿವಿದೆಡೆಗಳಲ್ಲಿ ಅಕ್ರಮ ಕಟ್ಟಡಗಳು ಎದ್ದು ನಿಲ್ಲುತ್ತಿವೆ ಇದರ ವಿರುದ್ದ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು.24 94/ಸಿಸಿ ಕಡತಗಳು ಕಳೆದ ನಾಲ್ಕು ವರ್ಷಗಳಿಂದ ವಿಲೇಯಾಗದೆ ಬಾಕಿ ಉಳಿದಿದೆ ಆದರೆ ಸರ್ವೇ ನಂಬರ್...

ವೇಣೂರು; ಪೋಕ್ಸೋ ಪ್ರಕರಣ ಆರೋಪಿಗೆ ಜಾಮೀನು ಮಂಜೂರು

0

ಬೆಳ್ತಂಗಡಿ; ಪೋಕ್ಸೋ ಪ್ರಕರಣ ಆರೋಪಿಗೆ ಮಂಗಳೂರಿನ  ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ‌ ಜಾಮೀನು ಮಂಜೂರು ಮಾಡಿದೆ.ದಿನಾಂಕ 25 11 2025 ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಪರಾಧ ಸಂಖ್ಯೆ 91/2025ರಂತೆ ಆರೋಪಿ ಅಮ್ಜದ್ ಖಾನ್ ಎಂಬವರ ವಿರುದ್ಧ ಪೋಕ್ಸೋ ಕಾಯ್ದೆ ಕಲಂ 4 ಮತ್ತು 6 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಸದ್ರಿ ಪ್ರಕರಣದಲ್ಲಿ ದಿನಾಂಕ 15/ 12/ 2025 ರಂದು ಆರೋಪಿಯ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕಿರುತ್ತಾರೆ ಸದರಿ ಜಾಮೀನು ಅರ್ಜಿಯನ್ನು ಪರಿಶೀಲಿಸಿ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಆರೋಪಿಗೆ ಜಾಮೀನು...

ಅಲ್ಪಸಂಖ್ಯಾತ ಇಲಾಖೆಯಿಂದ  ತಾಲೂಕಿನ 4 ಮಸೀದಿ, ಮದರಸಗಳ ದುರಸ್ತಿ ಗೆ 70 ಲಕ್ಷ ಅನುದಾನ ಮಂಜೂರು.

0

ಬೆಳ್ತಂಗಡಿ. ಅಲ್ಪಸಂಖ್ಯಾತ ಇಲಾಖೆಯಿಂದ ಬೆಳ್ತಂಗಡಿ ತಾಲೂಕಿನ 4 ಮಸೀದಿ, ಮದರಸಗಳ ದುರಸ್ತಿ ಕಾಮಗಾರಿಗೆ 70 ಲಕ್ಷ ಅನುದಾನ ಸರ್ಕಾರ ಮಂಜೂರು ಮಾಡಿದೆ.ತಾಲೂಕಿನ ಉರುವಾಲುಪದವು ಗ್ರಾಮದ,ಬಾಖಿಯಾತುಸ್ಮಾಲಿಹಾತ್ ಜುಮ್ಮಾ ಮಸೀದಿ ಇದರ ದುರಸ್ಥಿ ಕಾಮಗಾರಿ.20.ಲಕ್ಷ ಧರ್ಮಸ್ಥಳ ಗ್ರಾಮದ ಕನ್ಯಾಡಿ ಮಸ್ಕಿದ್ ಮತ್ತು ಹಯಾತುಲ್ ಇಸ್ಲಾಂ ಮದರಸ ಕಟ್ಟಡದ ದುರಸ್ತಿ ಮತ್ತು ನವೀಕರಣ.10 ಲಕ್ಷ ಮುಂಡಾಜೆ ಗ್ರಾಮದ ಸೋಮಂತಡ್ಕ ಬದ್ರಿಯ ಮಸೀದಿಯ ದುರಸ್ಥಿ ಮತ್ತು ನವೀಕರಣ. 20 ಲಕ್ಷಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಮುಯಿದ್ದೀನ್ ಜುಮ್ಮಾ ಮಸೀದಿ ಇದರ ದುರಸ್ತಿ ಮತ್ತು ನವೀಕರಣ.20. ಲಕ್ಷ ಸರ್ಕಾರಮಂಜೂರು ಮಾಡಿದೆ‌ಎಂದು...

ಬೆಳ್ತಂಗಡಿ : ಮನೆಯಲ್ಲಿ ಜಗಳವಾಡಿ ಓಡಿ ಹೋದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆ

0

ಬೆಳ್ತಂಗಡಿ : ಪತ್ನಿ ಮನೆಗೆ ಬಂದು ಪತ್ನಿ ಮತ್ತು ಮನೆ ಮಂದಿಯೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಓಡಿ ಹೋದ ವ್ಯಕ್ತಿಯ ಮೃತದೇಹ ಫಲ್ಗುಣಿ ನದಿಯಲ್ಲಿ ಪತ್ತೆಯಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪೆರಿಂಜೆ ನಿವಾಸಿ ಸುಜಯ ಜೊತೆ 15 ವರ್ಷದ ಹಿಂದೆ ಯತೀಶ್ ಪೂಜಾರಿ(41) ವಿವಾಹವಾಗಿ ಈ ದಂಪತಿಗಳಿಗೆ 2 ಗಂಡು ಮಕ್ಕಳಿದ್ದು. ಬಳಿಕ ಪತ್ನಿ ಸುಜಯ ಮನೆಯ ಬಳಿ ಪ್ರತ್ಯೇಕ ಮನೆ ಮಾಡಿ ಸಂಸಾರ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಪತಿ -...

ಬೆಳ್ತಂಗಡಿ; ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಿಸಿದ ಕ್ರೈಸ್ತ ಬಾಂಧವರು

0

ಬೆಳ್ತಂಗಡಿ; ತಾಲೂಕಿನಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಬಿಷಪ್ ಅವರು ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ಕ್ರಿಸ್ಮಸ್ ಹಬ್ಬ ಜಗತ್ತಿಗೆ ಪ್ರೀತಿ ಮತ್ತು ಸಾಹೋದರತೆಯ ಸಂದೇಶವನ್ನು ನೀಡುತ್ತಿದೆ ಎಂದರು. ಧರ್ಮಪ್ರಾಂತ್ಯದ ಚಾನ್ಸೆಲರ್ ಫಾ ಲಾರೆನ್ಸ್ ಪೂಣೂಲಿಲ್, ಫಾ ಅಬ್ರಹಾಂ ಪಟ್ಟೇರಿಲ್, ಫಾ.ಥೋಮಸ್ ಕಣ್ಣಾಂಗಲ್, ಅವರು ಇದ್ದರು.ತಾಲೂಕಿನ ಎಲ್ಲ ಚರ್ಚ್ ಗಳಲ್ಲಿಯೂ ಸಂಭ್ರಮದಿಂದ ಕ್ರಿಸ್ಮಸ್‌ ಆಚರಣೆ ನಡೆಯಿತು. ಸ್ಥಳೀಯ ಧರ್ಮಗುರುಗಳು‌ ಧರ್ಮಿಕ ವಿಧಿ ವಿಧಾನಗಳನ್ನು...

ಬೆಳ್ತಂಗಡಿ ಧರ್ಮಾಧ್ಯಕ್ಷರನ್ನು ಭೇಟಿಯಾಗಿ ಶುಭಾಶಯ ಕೋರಿದ ಶಾಸಕ ಹರೀಶ್ ಪೂಂಜ

0

ಬೆಳ್ತಂಗಡಿ; ಕ್ರಿಸ್ಮಸ್ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಜೇಮ್ಸ್‌ ಪಟ್ಟೇರಿಲ್ ಅವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಭೇಟಿಯಾಗಿ ಭೇಡಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಸೆಬಾಸ್ಟಿಯನ್ ಮುಂಡಾಜೆ ಹಾಗೂ ಇತರರು ಇದ್ದರು.

ಇಂದಬೆಟ್ಟು : ಜಾತಿನಿಂದನೆ ಮಾಡಿ ವ್ಯಕ್ತಿಗೆ ಚೂರಿಯಿಂದ ಇರಿತ ಆರೋಪಿ ಬಂಧನ

0

ಬೆಳ್ತಂಗಡಿ : ಜಾತಿ ನಿಂದನೆ ಮಾಡಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದ ಸಂಬಂಧ ಆರೋಪಿ ಆಂಬುಲೆನ್ಸ್ ಚಾಲಕ ನೌಷದ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.21 ರಂದು ರಾತ್ರಿ 9 ಗಂಟೆಗೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಇಂದಬೆಟ್ಟು ನಿವಾಸಿ ದಯಾನಂದ ಹಾಗೂ ಸ್ನೇಹಿತರಾದ ಆರೀಫ್ ಕಲ್ಲಾಜೆ,ಆಸೀಫ್ ಇಂದಬೆಟ್ಟು, ಸ್ವಾಲಿ ನಾವೂರ ಜೊತೆ ತೆರಳಿದ್ದು. ಸುಮಾರು ರಾತ್ರಿ 9:30...

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ನಿಧನ

0

ಉಜಿರೆ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಪ್ರೊ.ಎಸ್ ಪ್ರಭಾಕರ್ ಅವರು ಇಂದು(ಡಿ.24) ನಿಧನರಾದರು. ಎಸ್.ಡಿ.ಎಂ ಕಾಲೇಜು  ಇದರ ನಿವೃತ್ತ ಪ್ರಾಂಶುಪಾಲರೂ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮಾಜಿ ಕಾರ್ಯದರ್ಶಿಯಾಗಿ ಪ್ರೊ. ಎಸ್ ಪ್ರಭಾಕರ್ ಅವರು ಸೇವೆ ಸಲ್ಲಿಸಿದ್ದಾರೆ.

ನಾವೂರು ಪತಿಯನ್ನು ಕೊಲೆ ಮಾಡಿದ ಪತ್ನಿಯನ್ನು ಅಪರಾಧಿಕ ಹೊಣೆಯಿಂದ ಮುಕ್ತಗೊಳಿಸಿದ ನ್ಯಾಯಾಲಯ

0

ಮಂಗಳೂರು: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ 2022 ರಲ್ಲಿ ನಡೆದ ಪತ್ನಿಯಿಂದ ಪತಿ ಹತ್ಯೆ ಪ್ರಕರಣದ ತೀರ್ಪು ಡಿ.23 ರಂದು ಹೊರಬಿದ್ದಿದೆ. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್‌.ಸಿ -೧ (ಪೋಕ್ರೋ) ದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ಆರೋಪಿ ನಲ್ಲಮ್ಮ ಯಾನೆ ಎಲಿಯಮ್ಮ(56) ಅವರನ್ನು ಅಪರಾಧಿಕ ಹೊಣೆಯಿಂದ ಮುಕ್ತಗೊಳಿಸಿದ್ದಾರೆ. ಪ್ರಕರಣ: ದಿನಾಂಕ 05-07-2022 ರಂದು ಬೆಳಿಗ್ಗೆ 5:30 ಕ್ಕೆ ನಾವೂರು ಮನೆಯಲ್ಲಿ ಪತಿ ಯೋಹಾನನ್(72) ಅವರನ್ನು ಎಲಿಯಮ್ಮ(56) ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಬಳಿಕ ಆರೋಪಿ ಎಲಿಯಮ್ಮ ನನ್ನು ಬೆಳ್ತಂಗಡಿ...