Home ಸ್ಥಳೀಯ ಸಮಾಚಾರ ಮೊಗ್ರು :ಮುಗೇರಡ್ಕ ಮೂವರು ದೈವಸ್ಥಾನದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ

ಮೊಗ್ರು :ಮುಗೇರಡ್ಕ ಮೂವರು ದೈವಸ್ಥಾನದಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ

28
0

ಬೆಳ್ತಂಗಡಿ; ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ಮತ್ತು ಬಿಸಿನೀರಿನ ವ್ಯವಸ್ಥೆಯ ಯಂತ್ರವನ್ನು ಮೊಗ್ರು ಗ್ರಾಮದ ಪರಾರಿ ಮನೆ ಜಯಂತಿ ಮತ್ತು ಸುಂದರಗೌಡ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿರುತ್ತಾರೆ.ಈ ನೀರಿನ ಘಟಕವನ್ನು ಜ 14 ಮಕರಸಂಕ್ರಮಣ ದಿನ ಮುಗೇರಡ್ಕ ದೈವಸ್ಥಾನದ ಗುತ್ತು ಮನೆಯ ಡಿ ರಾಮಣ್ಣ ಗೌಡ ಇವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮನೋಹರ್ ಅಂತರ, ಜಯಂತಿ ಮತ್ತು ಸುಂದರ ಗೌಡ ಪರಾರಿ ಮನೆ,ಸಹೋದರರಾದ ಸಾಂತಪ್ಪ ಗೌಡ ಮುಗೇರಡ್ಕ,ಚಂದ್ರಶೇಖರ ಮುಗೇರಡ್ಕ, ಸುಧಾಕರ್ ಗೌಡ ನೈಮಾರು , ರಾಮಣ್ಣ ಗೌಡ ಎರ್ಮಲ, ಕೇಶವ ಗೌಡ ಜಾಲ್ನಡೆ, ವೀರಪ್ಪ ಗೌಡ, ಕಿನ್ಯಣ್ಣ ಬರುಂಗುಡೆಲು , ಚಂದಪ್ಪ ದoಬೆತ್ತಿಮಾರು ಕೊರಗಪ್ಪ ಗೌಡ ಪುಣ್ಕೆತಡಿ, ಹಾಗು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ ದoಬೆತ್ತಿಮಾರು ಮತ್ತು ಗ್ರಾಮದ ಸಮಸ್ತ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here