ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಖ್ಯಾತ ಕಲಾವಿದ ಮುಂಡಾಜೆಯ ಜಯರಾಮ್ ನಿಧನ

0

ಬೆಳ್ತಂಗಡಿ; ನಿದ್ರೆ ಮಾತ್ರೆ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯ ಮಟ್ಟದ ಕಲಾವಿದ ಕಲಾ ಶಿಕ್ಷಕ ಮುಂಡಾಜೆಯ ಜಯರಾಮ್ ಕೆ‌(58) ಅವರು ಶುಕ್ರವಾರ ಸಂಜೆಯ ವೇಳೆ ಮೃತರಾಗಿದ್ದಾರೆ.ಮೇ 10ರಂದು ಜಯರಾಮ್ ಹಾಗೂ ತಾಯಿ ಕಲ್ಯಾಣಿ ಅವರು ಮನೆಯಲ್ಲಿ ನಿದ್ದೆ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ತಾಯಿ ಕಲ್ಯಾಣಿ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದರು. ಜಯರಾಮ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಂಜೆಯ ವೇಳೆ ಮೃತಪಟ್ಟಿದ್ದಾರೆ.

ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಧರ್ಮಸ್ಥಳ ಕ್ಕೆ ಭೇಟಿ

0

ಬೆಳ್ತಂಗಡ; ಕೇಂದ್ರ ಸರಕಾರದ ಕಾನೂನು ಮತ್ತು ನ್ಯಾಯ ಸಚಿವರು ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು ಆಗಿರುವ ಅರ್ಜುನ್ ರಾಮ್ ಮೇಘವಾಲ್ ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.ಧರ್ಮಸ್ಥಳ ದಲ್ಲಿ ದೇವರ ದರ್ಶನ‌ಪಡೆದ ಅವರು ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹಾಗೂ ಇತರರು ಇದ್ದರು. ಬಳಿಕ ಅವರು ಶಾಂತಿವನಕ್ಕೂ ಭೆಟಿ ನೀಡಿದರು.

ಧರ್ಮಸ್ಥಳ; ಹೆದ್ದಾರಿ ಬದಿಯ ಗೂಡಂಗಡಿಗಳ ತೆರವು ಕಾರ್ಯಾಚರಣೆ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮಪಂಚಾಯತು ವ್ಯಾಪ್ತಿಯಲ್ಲಿ ಧರ್ಮಸ್ಥಳದಿಂದ ಬೆಂಗಳೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲೇರಿಯಿಂದ ಕುದ್ರಾಯ ಸೇತುವೆ ತನಕ ರಸ್ತೆ ಬದಿ ಹಾಗೂ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಹಾಕಿರುವ 19 ಅಂಗಡಿಗಳನ್ನು ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ ಗುರುವಾರ ತೆರೆವು ಗೊಳಿಸಲಾಯಿತು.ಗ್ರಾಮ ಪಂಚಾಯತಿನಿಂದ ಯಾವುದೆ ಪರವಾನಿಗೆ ಪಡೆಯದೆ, ರಸ್ತೆ ಬದಿಯಲ್ಲಿ ಹಾಗು ಅರಣ್ಯ ಪ್ರದೇಶದಲ್ಲಿ ಈ ಅನಧಿಕೃತ ಗೂಡಂಗಡಿಗಳು ಕಾರ್ಯಾಚರಿಸುತ್ತಿದ್ದುಅಂಗಡಿಗಳನ್ನು ತೆರವುಗೊಳಿಸುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಸದ್ರಿ ಅಂಗಡಿಗಳಿಂದಾಗಿ ಈ ಮೊದಲು ವಾಹನಗಳು ಅಪಘಾತಗಳು ಸಂಭವಿಸಿದ್ದವು. ಈ ಬಗ್ಗೆ ಧರ್ಮಸ್ಥಳ...

ಪುದುವೆಟ್ಟು ಪಂಚಾಯತ್ ಉಪಚುನಾವಣೆ,ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ  ಸಿಂಧೂ ಕೆ ಎಸ್  ನಾಮಪತ್ರ ಸಲ್ಲಿಕೆ

0

ಪುದುವವೆಟ್ಟು ಪಂಚಾಯತ್ 1ನೇವಾರ್ಡ್ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು 14-05-2025 ರಂದು ಪುದುವೆಟ್ಟು ನಿವಾಸಿ,  ಸಿಂಧೂ KS ರವರು ಚುನಾವಣಾಧಿಕಾರಿ ಗಣೇಶ್ ರವರಿಗೆ ನಾಮಪತ್ರ ಸಲ್ಲಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರವಿ ಎಂ ಬಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುದುವೆಟ್ಟು ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕೆ ಸಿ, ಪಂಚಾಯತ್ ರಾಜ್ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾದ ರಾಯ್ ಜೋಸೆಫ್. ಭೂ ನ್ಯಾಯ ಮಂಡಳಿ ಸದಸ್ಯರಾದ ಬೊಮ್ಮಣ್ಣ ಗೌಡ ಮಠ ಮಾಜಿ ಎಪಿಎಂಸಿ ಉಪಾಧ್ಯಕ್ಷರಾದ ಅಬ್ದುಲ್ ಗಪೂರ್ ವಾರ್ಡಿನ ಉಪಾಧ್ಯಕ್ಷರಾದ ಸಿಪಿ ಉಮ್ಮರ್ ಗ್ರಾಮ...

ಹೊಸಂಗಡಿ ಪಂಚಾಯತ್ ಉಪಚುನಾವಣೆ,ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ ಆನಂದ ಕೊಡಂಗೇರಿ ನಾಮಪತ್ರ ಸಲ್ಲಿಕೆ

0

ವೇಣೂರು; ಹೊಸಂಗಡಿ ಪಂಚಾಯತ್ 3ನೇವಾರ್ಡ್ ಸದಸ್ಯ  ಹರಿಪ್ರಸಾದ್ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು 14-05-2025 ರಂದು ಸದ್ರಿ ವಾರ್ಡ್ ನಿವಾಸಿ,ಪೆರಿಂಜೆ ಸರಕಾರಿ ಶಾಲಾ ಮಾಜಿ ಮೇಲುಸ್ತುವಾರಿ ಅಧ್ಯಕ್ಷ ಹಾಗು ಪೆರಿಂಜೆ ಹಾಲು ಉತ್ಪಾದಕ ಸಂಘದ ನಿರ್ದೇಶಕ  ಆನಂದ ಕೊಡಂಗೇರಿ ಚುನಾವಣಾಧಿಕಾರಿಯವರಿಗೆ  ನಾಮಪತ್ರ ಸಲ್ಲಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರ ಗಣೇಶ್ ಶೆಟ್ಟಿ ಇದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರ ಕಾರ್ಯದರ್ಶಿ ಶ್ರೀ ರಕ್ಷಿತ್ ಶಿವರಾಂ,ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ  ಸತೀಶ್ ಕಾಶಿಪಟ್ನ,ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ  ಧರಣೇಂದ್ರ ಕುಮಾರ್ ,ಹೊಸಂಗಡಿ ಪಂಚಾಯತ್...

ಬೆಳ್ತಂಗಡಿ : ಮುಸ್ಲಿಂ ಸಮುದಾಯದ ಅವಹೇಳನ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

0

ಬೆಳ್ತಂಗಡಿ : ಮಂಗಳೂರು ಬಜ್ಪೆಯಲ್ಲಿ ಕೊಲೆಯಾದ ಸುಹಾಸ್ ಶೆಟ್ಟಿಯ ನುಡಿನಮನ ಕಾರ್ಯಕ್ರಮ ಗುರುವಾಯನಕೆರೆಯಲ್ಲಿ ಮೇ.12 ರಂದು ನಡೆದಿದ್ದು ಈ ವೇಳೆ ಸಭಾ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಮುಸ್ಲಿಂ ಸಮೂದಾಯದ ಅವಹೇಳನ ಮಾಡಿದ ವಿಡಿಯೋ ವೈರಲ್ ಅಗಿರುವ ಬೆನ್ನಲ್ಲೇ ಬೆಳ್ತಂಗಡಿ ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತ ಹರಿಪ್ರಸಾದ್ ಇರುವರ್ತಾಯ ಮೇ.12 ರಂದು ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಪೊಲೀಸರು ಮೇ.14 ರಂದು BNS 2023 (u/s 196(1)(a) ಅಡಿಯಲ್ಲಿ ಭಾರತಿ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೂರಿನ ಸಾರಾಂಶ: ಬೆಳ್ತಂಗಡಿ...

ಧರ್ಮಸ್ಥಳ;  ಹಾವು ಕಡಿದು ಮಹಿಳೆ ಸಾವು

0

ಬೆಳ್ತಂಗಡಿ:ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಶಾಂತಾ (68) ಮೇ12 ರಂದು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ನಡೆದಿದೆ.ಮನೆಯ ಹಿಂಬದಿಗೆ ಬಟ್ಟೆಯನ್ನು ಒಗೆಯಲು ಸಾಬೂನು ತೆಗೆಯುವ ಸಂದರ್ಭದಲ್ಲಿ ಕಿಟಕಿಯಲ್ಲಿ ಯಾವುದೋ ವಿಷದ ಹಾವು ಎಡಗೈ ಕಿರು ಬೆರಳಿಗೆ ಕಡಿದಿತ್ತು.ಮನೆ ಮದ್ದು ಮಾಡಿ ಬಳಿಕ ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರೂ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ.

ಮೇ 17 ಮುಳಿಯ ಗೋಲ್ಡ್ & ಡೈಮಂಡ್ಸ್ ವಿಸ್ತೃತ ಮಳಿಗೆ ಉದ್ಘಾಟನೆ

0

ಬೆಳ್ತಂಗಡಿ: ತಾಲೂಕಿನಲ್ಲಿ ಮನೆಮಾತಾಗಿರುವ ತಾಲೂಕಿನ ಅತೀ ದೊಡ್ಡ ಚಿನ್ನದ ಮಳಿಗೆ ಮುಳಿಯ 'ಗೋಲ್ಡ್ ಅಂಡ್ ಡೈಮಂಡ್ಸ್ ಈಗ ಮತ್ತಷ್ಟು ಹೊಸತನದೊಂದಿಗೆ ಮುನ್ನಡೆಯುತ್ತಿದ್ದು, ಇದರ ವಿಸ್ತ್ರತ ಅತೀ ದೊಡ್ಡ ಹೊಸ ಶೋರೂಂ "ಮುಳಿಯ ಗೋಲ್ಡನ್ ಡೈಮಂಡ್ ನ ಉದ್ಘಾಟನಾ ಕಾರ್ಯಕ್ರಮ ಮೇ 17 ರಂದು 10.30ಕ್ಕೆ ಬೆಳ್ತಂಗಡಿ ಮುಖ್ಯ ರಸ್ತೆಯ ರಕ್ಷಾ ಆರ್ಕೇಡ್‌ನಲ್ಲಿ ಜರುಗಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ. ಅವರು ಮೇ 13 ರಂದು ಬೆಳ್ತಂಗಡಿ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು....

ಬೆಳ್ತಂಗಡಿ; ಗುರುವಾಯನಕೆರೆ ಗ್ರಾ.ಪಂ ಅಧ್ಯಕ್ಷೆ ವಿರುದ್ದ ಪೊಲೀಸರಿಗೆ ದೂರು

0

ಬೆಳ್ತಂಗಡಿ; ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆದ "ಸುಹಾಸ್ ಶೆಟ್ಟಿ ನುಡಿ ನಮನ" ಕಾರ್ಯಕ್ರಮದಲ್ಲಿ ಕುವೆಟ್ಟು ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿಯವರು ಮುಸ್ಲಿಂ ಆಟೋ ಚಾಲಕರ ಬಗ್ಗೆ ಹಿಂದೂ ಮುಸ್ಲಿಂ ವಿಭಜಿಸಿ ಕೋಮು ಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂರುವ ರೀತಿಯಲ್ಲಿ ಮಾತನಾಡಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ಸೋಶಿಯಲ್ ಟ್ರೇಡ್ ಯೂನಿಯನ್ ಗುರುವಾಯನಕೆರೆ ಇದರ ಅಧ್ಯಕ್ಷರಾದ ಅಬ್ದುಲ್ ರಹಮಾನ್ ರವರು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದೂರಿನ ನಲ್ಲಿ, ದಿನಾಂಕ: 11-05-2025...

ಬಂದಾರು : 2024 -25 ನೇ ಸಾಲಿನ  ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾಮ ಪಂಚಾಯತ್ ಗೆ ಅಭಿನಂದನೆ

0

ಬಂದಾರು : ಮೇ 13 ಕರ್ನಾಟಕ ಸರ್ಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು, ತಾಲೂಕು ಪಂಚಾಯತ್, ಬೆಳ್ತಂಗಡಿ, 2024-25 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 17,555 ಮಾನವ ದಿನಗಳನ್ನು ಸೃಜಿಸಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾಮ ಪಂಚಾಯತ್ ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಏನ್ ಭವಾನಿ ಶಂಕರ್, ತಾಲೂಕು ಪಂಚಾಯತ್...