2025-26ನೇ ಸಾಲಿನ ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ.

0

ಬೆಳ್ತಂಗಡಿ (ಜು20):- ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ವಾರ್ಷಿಕ ಸಭೆಯು ಭಾನುವಾರದಂದು ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ರಶೀದ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಹೋರಾಟಗಾರ ಅಬ್ಬುಲ್ ರಹಮಾನ್ ನಾವೂರು ಆಗಮಿಸಿದ್ದರು. 2024-25ನೇ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿಯಾದ ಮಹಮ್ಮದ್ ಕುದ್ರಡ್ಕ ಮಂಡಿಸಿದರು. ನೂತನ ಸಾಲಿನ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ , ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ವರ್ಷಾ, ಉಪಾಧ್ಯಕ್ಷರಾಗಿ ಇಸ್ಮಾಲಿ ಐ ಬಿ, ಜೊತೆಕಾರ್ಯದರ್ಶಿಯಾಗಿ ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿಯಾಗಿ ರಿಝ್ವಾನ್ ಬಿಕೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ರಶೀದ್...

ಧರ್ಮಸ್ಥಳ ಶವಹೂತಿದೆ ಎನ್ನಲಾದ ಪ್ರಕರಣ; ಎಸ್.ಐ.ಟಿ ತನಿಖೆಗೆ ನೋಡಿರುವುದು ಉತ್ತಮ; ಶ್ರೀಕ್ಷೇತ್ರ ಧರ್ಮಸ್ಥಳದ ವಕ್ತಾರರ ಹೇಳಿಕೆ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ "ಹಲವಾರು ಶವಗಳನ್ನು ಹೂತಿದ್ದೆ" ಎಂಬ ದೂರು ಪ್ರಕರಣದ ತನಿಖೆಯನ್ನು ಎಸ್.ಐ.ಟಿಗೆ ಹಸ್ತಾಂತರಿಸಿರುವ ರಾಜ್ಯ ಸರಕಾರದ ನಿಲುವು ಉತ್ತಮವಾಗಿದೆ ಎಂದು ಕ್ಷೇತ್ರ ಧರ್ಮಸ್ಥಳದ ವಕ್ತಾರರಾದಕೆ. ಪಾರ್ಶ್ವನಾಥ್ ಜೈನ್ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.ಈ ವಿಚಾರ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕವಾರ್ತೆಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟುಹಾಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕೆಂಬ ನಮ್ಮ ಹಾಗೂ ಸಾರ್ವಜನಿಕರ ನಿರೀಕ್ಷೆಯ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್.ಐ.ಟಿ.) ಗೆ ರಾಜ್ಯ ಸರ್ಕಾರ ಹಸ್ತಾಂತರಿಸಿದೆ ಎಂಬುದು...

ಧರ್ಮಸ್ಥಳ; ಹೆಣಗಳನ್ನು ಹೂತು ಹಾಕಿದ ಘಟನೆ ಎಸ್.ಐ.ಟಿ ತನಿಖೆಗೆ ರಾಜ್ಯ ಸರಕಾರ ಆದೇಶ; ಪ್ರಣವ್ ಕುಮಾರ್ ಮೊಹಂತಿ ನೇತೃತ್ವದಲ್ಲಿ ತನಿಖೆ

0

ಬೆಳ್ತಂಗಡಿ; ಧರ್ಮಸ್ಥಳ ದಲ್ಲಿ ಹೆಣಗಳನ್ನು ಹೀತಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಠಾಣಾ ಅ.ಕ್ರ 39/2025ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡಕ್ಕೆ (ಎಸ್.ಐ.ಟಿ) ಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶ ನೀಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.ಸದ್ರಿ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ದಿನಾಂಕ 19.07.2025 ರಂದು ಮಾನ್ಯ ಕರ್ನಾಟಕ ಸರ್ಕಾರವು ಅದೇಶಿಸಿರುತ್ತದೆ. ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ತನಿಖಾ ತಂಡದ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ...

ಅನಧಿಕೃತ ಗೂಡಂಗಡಿಗಳಿಗೆ ಉಪ್ಪಿನಂಗಡಿ ಅರಣ್ಯ ಇಲಾಖೆ ಖಡಕ್ ಡೆಡ್‌ಲೈನ್: ಮಧ್ಯಾಹ್ನದೊಳಗೆ ತೆರವುಗೊಳಿಸಲು ಸೂಚನೆ

0

ಬೆಳ್ತಂಗಡಿ :ಪೆರಿಯಶಾಂತಿ ಇಂದ( ಜುಲೈ 20 ) ಕುದ್ರಾಯವರೆಗಿನ ಮೀಸಲು ಅರಣ್ಯದ ಪಕ್ಕದ ರಸ್ತೆಯಲ್ಲಿ ಅನಧಿಕೃತವಾಗಿ ಇರುವ ಗೂಡಂಗಡಿಗಳಿಗೆ ಇಂದು ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಉಪ್ಪಿನಂಗಡಿ ವಲಯ ಪ್ರೊಫೆಷನಲ್ ಅರಣ್ಯಾಧಿಕಾರಿ ಹಸ್ತ ಶೆಟ್ಟಿ ಮತ್ತು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಖಡಕ್ ಸೂಚನೆ ನೀಡಿದ್ದಾರೆ. ಪ್ರಜಾಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ದಾಖಲಾಗಿರುವ ದೂರುಗಳ ಹಿನ್ನೆಲೆ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಂದಿರುವ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೆರಿಯಶಾಂತಿಯಿಂದ ಕುದ್ರಾಯವರೆಗಿನ ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರಿಗೆ ಮೌಖಿಕ ಆದೇಶ ನೀಡಲಾಗಿತ್ತು. ಈ ವ್ಯಾಪಾರಸ್ಥರು ಜುಲೈ 15ರೊಳಗೆ...

ಅರಸಿನಮಕ್ಕಿಯಲ್ಲಿ ಕಾಡು ಹಂದಿ ದಾಳಿ: ತೋಟದಲ್ಲಿದ್ದ ಕಾರ್ಮಿಕನಿಗೆ ಗಂಭೀರ ಗಾಯ

0

ಬೆಳ್ತಂಗಡಿ: ಅರಸಿನಮಕ್ಕಿ ಸಮೀಪದ ಉಡ್ಯೆರೆ ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಪದ್ಮಯ್ಯ ಗೌಡ ಎಂಬವರ ತೋಟದಲ್ಲಿ ಗೊಬ್ಬರ ಹಾಕುತ್ತಿದ್ದ ರೆಖ್ಯ ಬೂಡು ನಿವಾಸಿ ಬಾಲಕೃಷ್ಣ ಎಂಬವರು‌ ಗಾಯಗೊಂಡವರಾಗಿದ್ದಾರೆ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಕಾಡು ಹಂದಿಯ ಇವರು ತೋಟದ್ದಲ್ಲಿದ್ದ ವೇಳೆ ಹಠಾತ್ ದಾಳಿಗೆ ಸಿಲುಕಿದ್ದು, ಅವರ ಸೊಂಟ, ಕೈ ಮತ್ತು ಕಾಲಿನ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಅವರನ್ನು ಸ್ಥಳೀಯರು ತಕ್ಷಣವೇ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಜಿರೆ ರಬ್ಬರ್ ಸೊಸೈಟಿ ಮಹಾಸಭೆ; ಸಂಘಕ್ಕೆ 29ಲಕ್ಷ ಲಾಭ,‌10ಶೇ ಡಿವಿಡೆಂಡ್; ಅಧ್ಯಕ್ಷ ಶ್ರೀಧರ ಜಿ ಭಿಡೆ

0

ಬೆಳ್ತಂಗಡಿ; "ಸದಸ್ಯರ ಸೇವೆಯೇ ಜೀವಾಳ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಸಂಘವುವರದಿ ವರ್ಷದಲ್ಲಿ ಸಂಘವು 29 ಲಕ್ಷ ರೂ. ಗಿಂತ ಅಧಿಕ ಲಾಭಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲು ನಿರ್ಣಯಿಸಿದೆ" ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರುಅವರು ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾ ಭವನದಲ್ಲಿ ಶನಿವಾರ ಜರಗಿದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು."3,828 ಸದಸ್ಯರನ್ನು ಹೊಂದಿರುವ ಸಂಘವು 1.29 ಕೋಟಿ ರೂ.ಪಾಲು ಭಂಡವಾಳ ಹೊಂದಿದೆ. ಸಂಘದಲ್ಲಿ 26 ಕೋಟಿ ರೂ.ಗಿಂತ ಅಧಿಕ ಠೇವಣಿಗಳಿವೆ.ಸಂಘವು ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ...

ಬೆಳ್ತಂಗಡಿ; ಕಾಡಾನೆ ದಾಳಿ; ಜು21 ರಂದು ಕೆ.ಎಸ್.ಎಂ.ಸಿ ಎ ನೇತೃತ್ವದಲ್ಲಿ ಕೃಷಿಕರಿಂದ ಅರಣ್ಯ ಇಲಾಖೆಗೆ ಮನವಿ

0

ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಹಾವಳಿ ತೀವ್ರವಾಗಿದ್ದು ಕೃಷಿಕರು ಆತಂಕ ಪಡುವಂತಹ ವಾತಾವರಣವಿದ್ದು ಕಾಡಾನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು,‌ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಯಿಸಿ ಕೆ.ಎಸ್.ಎಂ.ಸಿ. ಎ ವತಿಯಿಂದ ಜು 21 ಸೋಮವಾರ ಬೆಳ್ತಂಗಡಿಯಲ್ಲಿ ಮೆರವಣಿಗೆ ನಡೆಸಿ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ಎಂ.ಸಿ ಎ ಅಧ್ಯಕ್ಷ ಬಿಟ್ಟಿ ನೆಡುನಿಲಂ ತಿಳಿಸಿದ್ದಾರೆ.ಬೆಳ್ತಂಗಡಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು.ಬೆಳ್ತಂಗಡಿ ತಾಲೂಕಿನ ಮಲೆನಾಡಿನ ಭಾಗಗಳಲ್ಲಿ ಕಾಡಾನೆ ಹಾವಳಿ ತೀರಾ ಹೆಚ್ಚಾಗಿದೆ. ಕೃಷಿಕರು ತಮ್ಮ...

ಧರ್ಮಸ್ಥಳದಲ್ಲಿ ಮುಂದುವರಿದ ಕಾಡಾನೆ ದಾಳಿ ಕೃಷಿ ನಾಶ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ‌ ನೇರ್ತನೆ ಪರಿಸರದಲ್ಲಿ ಕಾಡಾನೆಗಳು ಪ್ರತಿ ನಿತ್ಯ ತೋಟಗಳಿಗೆ ನುಗ್ಗುತ್ತಿದ್ದು ಕೃಷಿಗೆ ವ್ಯಾಪಕ ಹಾನಿಯುಂಟುಮಾಡುತ್ತಿದೆ.ಕಳೆದ ಮೂರು ದಿನಗಳಿಂದ ಕಾಡಾನೆಗಳು ಇಲ್ಲಿಯೇ ಬೀಡು ಬಿಟ್ಟಿದ್ದು ಸಂಜೆಯಾದಕೂಡಲೇ ತೋಟಗಳಿಗೆ ನುಗ್ಗುತ್ತಿವೆ.ಗುರುವಾರ ರಾತ್ರಿಯ ವೇಳೆ ಇಲ್ಲಿನ ನಿವಾಸಿ ಟಿ.ವಿ ದೇವಸ್ಯ ಎಂಬವರ ಮನೆಯ ಸಮೀಪಕ್ಕೆ ಬಂದ ಕಾಡಾನೆಗಳು ಇಲ್ಲಿ ಕೃಷಿ ಮಾಡಿದ್ದ ಮರಗೆಣಸಿನ ಗಿಡಗಳನ್ನು ಸಂಪೂರ್ಣ ನಾಶಗೈದಿದೆ. ಬಾಲೆ ಹಾಗೂ ಇತರ ಕೃಷಿಗೂ ಹಾನಿಯುಂಟಾಗಿದೆ.ಸಮೀಪದ ವಿಲ್ಸನ್ ಟಿ.ವಿ ಅವರ ತೋಟಕ್ಕೂ ನುಗ್ಗಿದ್ದು ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶಗೊಳಿಸಿದೆ. ಇಲ್ಲಿನ ನಿವಾಸಿ ವಿಲ್ಸನ್ ಎಂಬವರ...

ಕೊಕ್ಕಡ; ಚಲಿಸಿತ್ತಿದ್ದ ಬಸ್ ಮೇಲೆ ಮುರಿದು ಬಿದ್ದ ವಿದ್ಯುತ್ ಕಂಬ

0

ಬೆಳ್ತಂಗಡಿ; ಧರ್ಮಸ್ಥಳದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಅಶ್ವಮೇಧ ಬಸ್ ಮೇಲೆ ವಿದ್ಯುತ್ ಕಂಬ ಬಿದ್ದ ಘಟನೆ ಜು.18 ರಂದು ನಡೆದಿದೆ. ಕೊಕ್ಕಡ ಸಮೀಪದ ಕೌಕ್ರಡಿ ಬಳಿ ಈ ಘಟನೆ ಸಂಭವಿಸಿದ್ದು ಬಸ್ ನ ಎಡಭಾಗದಲ್ಲಿದ್ದ ವಿದ್ಯುತ್ ಕಂಬ ಬಸ್ ಮೇಲೆ ಬಿದ್ದು ಅದನ್ನು ತಪ್ಪಿಸಲು ಹೋಗಿ ಬಲ ಭಾಗದಲ್ಲಿದ್ದ ಕಂಬವು ಬಸ್ ಮೇಲೆ ಮುರಿದು ಬಿದ್ದಿದೆ. ತಂತಿಗಳು ತುಂಡರಿಸಿ ಬಿದ್ದಿದ್ದು, ವಿದ್ಯುತ್ ಸರಬರಾಜು ಇಲ್ಲದ ಪರಿಣಾಮ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಬಸ್ ನ ಗಾಜುಗಳು ಹುಡಿಯಾಗಿದೆ ಎಂದು ಧರ್ಮಸ್ಥಳ ಡಿಫೋ ಅಧಿಕಾರಿ ತಿಳಿಸಿದ್ದಾರೆ.

ಪತ್ರಕರ್ತ, ಭುವನೇಶ್ ಗೇರುಕಟ್ಟೆ ಮಾತೃವಿಯೋಗ ಮಂಗಳೂರು ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನ

0

ಬೆಳ್ತಂಗಡಿ: ಗೇರುಕಟ್ಟೆ ಮಾತೃ ಕೃಪ ನಿವಾಸಿ, ದಿ. ಲಕ್ಷ್ಮಣ ರಾವ್ ಅವರ ಪತ್ನಿ ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೋಶಾಧಿಕಾರಿ, ಜಿಲ್ಲಾ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಅವರ ಮಾತೃಶ್ರೀ ಶ್ರೀಮತಿ ಸರೋಜಿನಿ(70) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು. ಕಳೆದ ಭಾನುವಾರ ಅಸೌಖ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾದರು. ಅವರು ಪುತ್ರ ಭುವನೇಶ್, ಸೊಸೆ, ಮೊಮ್ಮಕ್ಕಳು, ಸಹೋದರಿಯನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ ಗೇರುಕಟ್ಟೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.