ವಾಯುಭಾರ ಕುಸಿತ; ದ.ಕ ಸೇರಿದಂತೆ 11 ಜಿಲ್ಲೆಗಳಲ್ಲಿ ಮೇ‌19 ರಿಂದ 22ರ ವರೆಗೆ ಭಾರೀ ಮಳೆ ನಿರೀಕ್ಷೆ; ಆರೆಂಜ್ ಅಲರ್ಟ್ ಘೋಷಣೆ

0

ಬೆಂಗಳೂರು: ಅರಬ್ಬಿ ಸಮುದ್ರದ ರಾಜ್ಯದ ಕರಾವಳಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಮೇ 18 ರಿಂದ 22ರ ವರೆಗೆ ರಾಜ್ಯಾದ್ಯಾಂತ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಬೆಂಗಳೂರು ವಿಭಾಗ ಮಾಹಿತಿ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಅವರು, ಕರಾವಳಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಮೇ 18 ರಿಂದ 22ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮೇ 18 ರಿಂದ...

ಗುಂಡ್ಯ ಕೆ.ಎಸ್.ಆರ್. ಟಿ.ಸಿ ಬಸ್ ಹಾಗೂ ಲಾರಿ ನಡುವೆ ಅಪಘಾತ

0

ಬೆಳ್ತಂಗಡಿ; ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಲಾರಿಯ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ. ಬೆಳಾಲು ನಿವಾಸಿಯಾಗಿರುವ  ಬಸ್‌ ಚಾಲಕ,  ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಳ ಕಾಲ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಘಟನೆಯ ವಿವರ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು, ಗುಂಡ್ಯ ಪೇಟೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಲಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ ಎಂದು...

ಚಾರ್ಮಾಡಿ ಜಲಾಲಿಯ್ಯ ನಗರ ಮದ್ರಸದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ

0

ಚಾರ್ಮಾಡಿ. ಮನುಷ್ಯರನ್ನು ಪೈಶಾಚಿಕ ಪ್ರವೃತ್ತಿಗಳ ದಾಸರಾಗಿಸುತ್ತಿರುವ ಮಾದಕ ದ್ರವ್ಯಗಳ ವಿರುದ್ಧದ ಹೋರಾಟ ಆಡಳಿತ ವರ್ಗದ ಕಣ್ಣು ತೆರೆಸುವಷ್ಟು ತೀಕ್ಷ್ಣ ರೀತಿಯಲ್ಲಿ ನಡೆಯಬೇಕಾದದ್ದು ಇಂದಿನ ಅನಿವಾರ್ಯತೆಗಳಲ್ಲೊಂದಾಗಿದೆ ಎಂದು ಚಾರ್ಮಾಡಿ ಜಲಾಲಿಯ್ಯ ನಗರ ಮುಖ್ಯ ಅಧ್ಯಾಪಕರಾದ ಹಾರಿಸ್ ಹನೀಫಿ ಕುಂಡಡ್ಕ ಹೇಳಿದ್ದಾರೆ.ಅವರುಚಾರ್ಮಾಡಿ ಇಝ್ಝತುಲ್ ಇಸ್ಲಾಂ ಮದ್ರಸ ವತಿಯಿಂದ ನಡೆದ ಮಾದಕ ದ್ರವ್ಯ ವಿರೋಧಿ ಅಭಿಯಾನದಲ್ಲಿ ಮಾತನಾಡುತ್ತಿದ್ದರು. ಸಣ್ಣ ಪ್ರಾಯದ ಮಕ್ಕಳು ವಿದ್ಯಾರ್ಥಿಗಳು ಮತ್ತು ಯುವ ಜನತೆ ಮಾದಕ ವಸ್ತುಗಳ ಹಿಂದೆ ಬಿದ್ದು ಮನೆಗೂ ಊರಿಗೂ ಸವಾಲಾಗಿ ಪರಿಣಮಿಸಿದ್ದು ಎಲ್ಲಾ ಮಸೀದಿ, ಮಂದಿರ,ಚರ್ಚ್ ಗಳು ಸಹಿತ ಎಲ್ಲಾ ಸಂಘ...

ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು

0

ಬೆಳ್ತಂಗಡಿ: ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ,ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22 ವರ್ಷ) ನಿಗೂಢವಾಗಿ ಸಾವನ್ನಪ್ಪಿದ ಘಟನೆ ಪಂಜಾಬ್ ನಲ್ಲಿ ಮೇ. 17 ರಂದು ನಡೆದಿದೆ.ಪಂಜಾಬಿನ ಎಲ್ ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಕಳೆದ ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದರು. ಮುಂದೆ ಜಪಾನ್ ಗೆ ಉದ್ಯೋಗಕ್ಕೆ ಹೋಗುವವರಿದ್ದು ಪಂಜಾಬ್ ಎಲ್ ಪಿಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆಯಲು ತೆರಳಿದ್ದರು. ಸರ್ಟಿಫಿಕೇಟ್ ಪಡೆದ ಕೂಡಲೇ ಮನೆಯವರಲ್ಲಿ ಕಾಲ್ ನಲ್ಲಿ ಮಾತನಾಡಿದ್ದರೆಂದು ತಿಳಿದು...

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

0

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿದೆ.ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಇದಾಗಿದ್ದು ಧರ್ಮಸ್ಥಳದ ಮುಖ್ಯದ್ವಾರದ ಬಳಿಯ ಕೆ.ಎಸ್.ಆರ್.ಟಿ.ಸಿ. ಬಸ್ಸು ತಂಗುದಾಣದಲ್ಲಿ ಮೇ. 17ರಂದು ಬೆಳಿಗ್ಗಿನ ಸಮಯ ಮಲಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ.ಘಾನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ‌‌ ದಾಖಲಿಸಿಕೊಳ್ಳಲಾಗಿದೆಮೃತರ ವಾರೀಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

ನಿಡ್ಲೆ ನಿವಾಸಿ ಎಸ್.ಕೆ‌. ಡಿ.ಆರ್ ಡಿ. ಪಿ ಉದ್ಯೋಗಿ ಹೃದಯಾಘಾತದಿಂದ ನಿಧನ

0

ಬೆಳ್ತಂಗಡಿ; ನಿಡ್ಲೆ ಗ್ರಾಮದ ದಾಯಿಲಾಟ ನಿವಾಸಿ ಎಸ್.ಕೆ. ಡಿ. ಆರ್. ಡಿ. ಪಿ ಉದ್ಯೋಗಿ ಸತೀಶ್ (38ವ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಶ್ರೀ ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾಗಿ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಮೃತರು ಪತ್ನಿ ಮಕ್ಕಳು ತಾಯಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಬಂದಾರು ವಾಂತಿಭೇದಿ ಪ್ರಕರಣಆರೋಗ್ಯ ಇಲಾಖೆಯ‌ ಅಧಿಕಾರಿಗಳಿಂದ ಪರಿಶೀಲನೆ

0

ಬೆಳ್ತಂಗಡಿ; ಬಂದಾರು ಗ್ರಾಮದಲ್ಲಿ ವಾಂತಿ ಭೇದಿಯಿಂದ ಮಹಿಳೆಯೊಬ್ಬರು ಮೃತಪಟ್ಟು ಹಲವರು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳ ನೇತೃತ್ವದ ತಂಡ ಶನಿವಾರ ಪರಿಸರದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಪಂಚಾಯತಿನಲ್ಲಿ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು.ಬಂದಾರು ಸಹಿತ ಸಮೀಪದ ಮೊಗ್ರು ಇಳಂತಿಲದಲ್ಲೂ ಹಲವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.ಬಂದಾರಿನ ಮನೆಯೊಂದರಲ್ಲಿ ಆರತಕ್ಷತೆ ಸಮಾರಂಭದ ಭೋಜನ ಸೇವಿಸಿದ ಬಳಿಕ ಹಲವರು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದರ ಬಳಿಕ ಆರತಕ್ಷತೆಯಲ್ಲಿ ಭಾಗವಹಿಸದ ಮಂದಿಯಲ್ಲೂ ಈ ಲಕ್ಷಣಗಳು ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಇದುವರೆಗೆ 3 ಗ್ರಾಮಗಳಲ್ಲಿ...

ಬೆಳ್ತಂಗಡಿ : ಕೊಡಗು  ಸಂಪತ್ ಕೊಲೆ ಪ್ರಕರಣ ಆರೋಪಿಯನ್ನು ಬೆಳ್ತಂಗಡಿಯಲ್ಲಿ ಬಂಧಿಸಿದ ಕೊಡಗು ಪೊಲೀಸರು

0

ಬೆಳ್ತಂಗಡಿ : ಕಳೆದ ಕೆಲ ದಿನಗಳಿಂದ ಕೊಡಗು ಜಿಲ್ಲೆಯ ಯುವಕನೊಬ್ಬ ನಾಪತ್ತೆಯಾಗಿದ್ದ ಪ್ರಕರಣ ಸಂಬಂಧ ಕೊಲೆ ಮಾಡಿ ಆತನ ಕಾರಿನಲ್ಲಿ ತೆಗೆದುಕೊಂಡು ಹೋಗಿ ಹಾಸನ ಜಿಲ್ಲೆಯಲ್ಲಿ ಬಿಸಾಕಿ ಪರಾರಿಯಾಗಿದ್ದ ಪ್ರಕರಣದ ಆರೋಪಿಗಳಲ್ಲಿ ಒಬ್ಬ ಆರೋಪಿಯನ್ನು ಕೊಡಗು ಪೊಲೀಸರು ಬೆಳ್ತಂಗಡಿಯಲ್ಲಿ ಬಂಧಿಸಿದ್ದಾರೆ. ಪ್ರಕರಣ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಮಾಗೇರಿಯ ಸಮೀಪದ ಕಲ್ಲಹಳ್ಳಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಮೇ.10 ರಂದು ಅಪರಿಚಿತ ವ್ಯಕ್ತಿಗಳು ರಕ್ತಸಿಕ್ತವಾದ ಕಾರು ನಿಲ್ಲಿಸಿ ಹೋಗಿದ್ದ ಬಗ್ಗೆ ಸ್ಥಳೀಯರು ಯಸಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಬಳಿಕ ಮೇ.14 ರಂದು ಹತ್ತಿರದ ಕಲ್ಲಹಳ್ಳಿ...

ಬಂದಾರು; ಅರತಕ್ಷತೆ ಊಟದ ಬಳಿಕ ಹಲವರು ಅಸ್ವಸ್ಥ, ಓರ್ವ ಮಹಿಳೆ ಸಾವು

0

ಬೆಳ್ತಂಗಡಿ: ತಾಲೂಕಿನ ಬಂದಾರು ಗ್ರಾಮದಲ್ಲಿ ವಾಂತಿ ಭೇದಿ ಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.ಬಂದಾರು ಗ್ರಾಮದಲ್ಲಿ ಮೇ 12 ರಂದು ನಡೆದ ಅರತಕ್ಷತೆ ಊಟದ ಬಳಿಕ ಹಲವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಹಲವರು ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ 5 ಮಂದಿ ದಾಖಲಾಗಿರುವುದಾಗಿ ತಿಳಿದು ಬಂದಿದ್ದು ಇವರ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿ ರುವುದಾಗಿ ತಿಳಿದು ಬಂದಿದೆ.ಬಂದಾರು ಗ್ರಾಮದಲ್ಲಿ ಸಾರ್ವತ್ರಿಕವಾಗಿ ವಾಂತಿ ಬೇದಿ ಕಾಣಿಸಿಕೊಂಡಿದ್ದುಆರೋಗ್ಯ ಇಲಾಖೆ ಅಧಿಕಾರಿಗಳು ಬಂದಾರಿನ...

ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಖ್ಯಾತ ಕಲಾವಿದ ಮುಂಡಾಜೆಯ ಜಯರಾಮ್ ನಿಧನ

0

ಬೆಳ್ತಂಗಡಿ; ನಿದ್ರೆ ಮಾತ್ರೆ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯ ಮಟ್ಟದ ಕಲಾವಿದ ಕಲಾ ಶಿಕ್ಷಕ ಮುಂಡಾಜೆಯ ಜಯರಾಮ್ ಕೆ‌(58) ಅವರು ಶುಕ್ರವಾರ ಸಂಜೆಯ ವೇಳೆ ಮೃತರಾಗಿದ್ದಾರೆ.ಮೇ 10ರಂದು ಜಯರಾಮ್ ಹಾಗೂ ತಾಯಿ ಕಲ್ಯಾಣಿ ಅವರು ಮನೆಯಲ್ಲಿ ನಿದ್ದೆ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ತಾಯಿ ಕಲ್ಯಾಣಿ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದರು. ಜಯರಾಮ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಂಜೆಯ ವೇಳೆ ಮೃತಪಟ್ಟಿದ್ದಾರೆ.