ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್ .ಬಿ. ನರೇಂದ್ರ ಕುಮಾರ್ ನಿಧನ
ಉಜಿರೆ : ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್. ಬಿ. ನರೇಂದ್ರ ಕುಮಾರ್ (81) ಸೋಮವಾರ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಮಗಳು ಇದ್ದಾರೆ.ಉತ್ತಮ ಕಬಡ್ಡಿ ಆಟಗಾರರೂ ಆಗಿದ್ದ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಚಿರಪರಿಚಿತರಾಗಿದ್ದರು.ಧರ್ಮಸ್ಥಳದ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಕಾಲದಲ್ಲಿ ಅವರು ಶಿಸ್ತಿನ ಸಿಪಾಯಿಯಾಗಿ, ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು.ಆನಂದ ಶೆಟ್ಟಿಯಂತಹ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ರೂಪಿಸಿದ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಉದಯೋನ್ಮುಖ ಕಲಾವಿದರನ್ನು ರೂಪಿಸಿದ್ದಾರೆ.ಅವರ...
ಜಯಂತ್ ಟಿ ಅವರಿಂದ ಧರ್ಮಸ್ಥಳ ಠಾಣೆಗೆ ದೂರು
ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಮೃತದೇಹವನ್ನು ಹೂತು ಹಕಿರುವುದನ್ನು ತಾನು ನೋಡಿದ್ದೇನೆ ಎಂದು ಶನಿವಾರ ಎಸ್.ಐ.ಟಿ ಕಚೇರಿಗೆ ದೂರು ನೀಡಲು ಬಂದಿದ್ದ ವೇಳೆ ಹೇಳಿಕೆ ನೀಡಿದ್ದ ಜಯಂತ್ ಟಿ ಇದೀಗ ಈ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ. ಇದದಾ ಬಳಿಕ ಇಂದು ಎಸ್.ಐ.ಟಿ ಕಚೇರಿಗೆ ಬಂದಿದ್ದರು. ಅವರನ್ನು ಈ ಪ್ರಕರಣದ ಬಗ್ಗೆ ದೂರನ್ನು ಧರ್ಮಸ್ಥಳ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದು ಅದರಂತೆ ಜಯಂತ್ .ಟಿ ಅವರು ಧರ್ಮಸ್ಥಳ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ. ಈ...
ನೇತ್ರಾವತಿ ಸ್ನಾನ ಘಟ್ಟದಲ್ಲಿ ಮತ್ತೆ ಪತ್ತೆಯಾದ ಮೃತದೇಹದ ಅವಶೇಷಗಳು?
ಬೆಳ್ತಂಗಡಿ; ನೇತ್ರಾವತಿ ಸ್ನಾನಘಟ್ಟ ದಲ್ಲಿ ನಡೆಯುತ್ತಿರುವ ಮೃತದೇಹಗಳಿಗಾಗಿನ ಹುಟುಕಾಟ ಕಾರ್ಯದಲ್ಲಿ ಹೊಸ ಬೆಳವಣಿಗೆ ನಡೆದಿದ್ದು ಸಾಕ್ಷಿ ದೂರು ದಾರ ಇಂದು ಹೊಸ ಸ್ಥಳಕ್ಕೆ ತಂಡವನ್ನು ಕರೆದೊಯ್ದಿದ್ದು ಅಲ್ಲಿ ಕಳೇಬರವೊಂದರ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿದೆ. ಈ ಬಗ್ಗೆ ಯಾವುದೆ ಸ್ಪಷ್ಟನೆಯನ್ನು ನೀಡಲು ಅಧಿಕಾರಿಗಳು ಇನ್ನೂ ಮುಂದಾಗಿಲ್ಲಆತ ಈ ಹಿಂದೆ ಗುರುತಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸದೆ ಇಂದು ಹೊಸ ಸ್ಥಳದಲ್ಲಿ ಹುಡುಕಾಟ ನಡೆಸುವ ವೇಳೆ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಹೊರಬರುತ್ತಿದೆ ಆದರೆ ಅರಣ್ಯದ ಒಳಗೆ 11.30ಕ್ಕೆ ಅರಣ್ಯಕ್ಕೆ ತೆರಳಿದ ತಂಡ ಅರಣ್ಯದಿಂದ ಇನ್ನೂ...
11 ನೇ ಸ್ಥಳದಳದಲ್ಲಿ ನಡೆಯುತ್ತಿಲ್ಲ ಹುಡುಕಾಟ ಮೃತ ದೇಹಗಳ ಹುಡುಕಾಟದಲ್ಲಿ ಹೊಸ ಬೆಳವಣಿಗೆ
ಬೆಳ್ತಂಗಡಿ; ಮೃತದೆಹಗಳಿಗಾಗಿ ಹುಡುಕಾಟ ನಡೆಯುವ ನೇತ್ರಾವತಿ ಸ್ನಾನಘಟ್ಟದ ಪರಿಸರದಲ್ಲಿ ಸೋಮವಾರ ಹೊಸ ಬೆಳವಣಿಗೆಗಳು ನಡೆದಿದ್ದು 11ಸ್ಥಳದಲ್ಲಿ ಅಗೆಯುವ ಕಾರ್ಯ ಆರಂಭವಾಗ ಸಂದರ್ಭದಲ್ಲಿ ಅನಾಮಿಕ ವ್ಯಕ್ತಿ ಕಾರ್ಯಾಚರಣೆ ನಾಡೆಸುತ್ತಿರು ತಂಡವನ್ನು ಗುರುತಿಸಿದ ಸ್ಥಾನದಿಂದ ಮೇಲ್ಭಾಗಕ್ಕೆ ಕರೆದೊಯ್ದಿದ್ದಾನೆ ಇದು ಹಲವಾರು ಕುತೂಹಲಗಳಿಗೆ ಕಾರಣವಾಗಿದೆ.ಆತ ಗುರುತಿಸಿದ 11ನೆಯ ಸ್ಥಳದಲ್ಲಿ ಇನ್ನೂ ಅಗೆಯುವ ಕಾರ್ಯ ಆರಂಭವಾಗಿಲ್ಲಈ ಪ್ರದೇಶಲ್ಲಿ ದಟ್ಟವಾದ ಕಾಡಿದ್ದು ಈ ಕಾಡಿನ ಪ್ರದೇಶದಲ್ಲಿ ಆತ ಹೊಸ ಸ್ಥಳಗಳನ್ನು ಗುರುತಿದ್ದಾನೆಯೇ ಎಂಬ ಅನುಮಾನವಿದೆ. ಈ ಅರಣ್ಯದಲ್ಲಿ ಏನಿದೆ ಎಂಬುದು ಕುತೂಹಲದ ವಿಚಾರವಾಗಿದೆ.ಈತ ಹೊಸ ಸ್ಥಳಗಳನ್ನು ಗುರುತಿಸಿದ್ದಾನೆಯೇ ಅಥವಾ ಬೇರೇನಾದರೂ...
ಮೊಗ್ರು ಮುಗೇರಡ್ಕದ ಗೌಡತ್ತಿಗೆ ಗದ್ದೆಯಲ್ಲಿ ಸಿರಿ ಸಮೃದ್ಧಿ ನೇಜಿ ನೆಡುವ ಕಾರ್ಯಕ್ರಮ
ಮೊಗ್ರು :ಆ 03 ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ - ಮುಗೇರಡ್ಕ -ಮೊಗ್ರು,ಶ್ರೀರಾಮ ಶಿಶು ಮಂದಿರದ ಮಕ್ಕಳ ಅನ್ನಯಜ್ಞಕ್ಕೆ ಮೊಗ್ರು ಗ್ರಾಮದ ಮುಗೇರಡ್ಕ ಪರಿಸರದ ಗೌಡತ್ತಿಗೆ ಗದ್ದೆಯಲ್ಲಿ ಆಗಸ್ಟ್ 03 ರಂದು ಸಿರಿ ಸಮೃದ್ಧಿ ನೇಜಿ ನೆಡುವ ಕಾರ್ಯಕ್ರಮ ನೆರವೇರಿತು, ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಗೌರವಾಧ್ಯಕ್ಷರಾದ ಉದಯ ಭಟ್ ಸಭಾಧ್ಯಕ್ಷತೆ ವಹಿಸಿದ್ದರು,ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ನಾವು ವಿವಿಧ ರೀತಿಯ ಪರ್ಯಾಯ ಕೃಷಿಯನ್ನು ಅಳವಡಿಸಿಕೊಂಡಿದ್ದರು ಸಹ...
ಮುಂಡಾಜೆಯಲ್ಲಿ ಆಟಿಡೊಂಜಿ ದಿನ; ಭಾಷೆಯಿಂದ ಆಚಾರ ವಿಚಾರ ಸಂಸ್ಕ್ರತಿ ಉಳಿಯಲು ಸಾಧ್ಯ
ಬೆಳ್ತಂಗಡಿ: ತುಳುವರ ಸಂಸ್ಕ್ರತಿ ಆಚಾರ ವಿಚಾರ,ಆಹಾರ ಪದ್ದತಿ ವಿಭಿನ್ನವಾದದ್ದು, ತುಳು ಭಾಷೆ ಉಳಿದರೆ ಮಾತ್ರ ಇದೆಲ್ಲ ಉಳಿಯಲು ಸಾಧ್ಯ ಅದ್ದರಿಂದ ಈ ಕಾಲಘಟ್ಟದಲ್ಲಿ ತುಳು ನಾಡಿನ ತುಳು ಭಾಷೆಯ ಮಹತ್ವವನ್ನು ಯುವ ಜನರಿಗೆ ತಿಳಿಸುವ ಅವಶ್ಯಕತೆ ಹಿರಿಯರಾದ ನಮಗಿದೆ. ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಅಭಿಪ್ರಾಯ ಪಟ್ಟರು. ಅವರು ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ,ಧರ್ಮಸ್ಥಳ ಸ್ವ ಸಹಾಯ ಸಂಘಗಳ ಒಕ್ಕೂಟವತಿಯಿಂದ ಅ 03 ರಂದು ಮುಂಡಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಆಟಿಡೊಂಜಿ...
ಉಜಿರೆಯಲ್ಲಿ ತಡೆಗೋಡೆ ಮೇಲೆ ಏರಿದ ಕಾರು
ಬೆಳ್ತಂಗಡಿ; ಉಜಿರೆ ಪೇಟೆಯ ಮುಖ್ಯರಸ್ತೆಯ ಹೋಟೆಲ್ ಒಂದರ ಮುಂಭಾಗ ಕಾರೊಂದು ತಡೆಗೋಡೆ ದಾಟಿ ಬಂದ ಪ್ರಸಂಗ ಭಾನುವಾರ ನಡೆದಿದೆ.ಕಾರು ಅದೃಷ್ಟವಶಾತ್ ತಡೆಗೋಡೆಯಲ್ಲಿ ಸಿಲುಕಿಕೊಂಡ ಕಾರಣಕ್ಕೆ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ.
ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆಗೆ ಧಕ್ಕೆಯುಂಟು ಮಾಡುವ ಸಂದೇಶ; ಪ್ರಕರಣ ದಾಖಲು
ಬೆಳ್ತಂಗಡಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದ ತೆಗೆ ಧಕ್ಕೆಯಾಗುವ ವಿಭಿನ್ನ ಕೊಮುಗಳ ನಡುವೆ ವೈಷಮ್ಯ ಸೃಷ್ಟಿಸುವ ಸಂದೇಶ ಹಾಕಿದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಉಜಿರೆ ನಿವಾಸಿ ಪುತ್ತುಮೋನು ಎಂಬವರು ಈ ಬಗ್ಗೆ ದೂರು ನೀಡಿದ್ದು ಫೇಸ್ ಬುಕ್ ನ ಕುಲುಮೆ ಎಂಬ ಗ್ರೂಪ್ ನಲ್ಲಿ ಅಯಿಶು ಅಯುಶಾ (AyshuAysha) ಎಂಬ ಖಾತೆಯಿಂದ ವಿಭಿನ್ನ ಕೋಮುಗಳ ನಡುವೆ ವೈಶಮ್ಯ ಉಂಟುಮಾಡುವ ಸುಳ್ಳು ವದಂತಿಗಳಿರುವ ವರದಿಯನ್ನು ಪ್ರಸಾರ ಮಾಡಿದ್ದ ಬಗ್ಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.
ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ ಆಯ್ಕೆ
ಬೆಳ್ತಂಗಡಿ; ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ಮಹಾಸಭೆಯು ಜಮೀಯತುಲ್ ಫಲಾಹ್ ಸಭಾ ಭವನದಲ್ಲಿ ಬಿ. ಶೇಕುಂಞ್ಞ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಪ್ರಧಾನ ಕಾರ್ಯದರ್ಶಿ ಗಳಾದ ಆಲಿಯಬ್ಬಾ ಪುಲಾಬೆ ವಾರ್ಷಿಕ ವರದಿ ಮಂದಿಸಿದರು. ನಂತರ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ಜಿಲ್ಲಾ ವೀಕ್ಷಕರಾದ ಎಮ್.ಎಚ್. ಇಕ್ಬಾಲ್ ರವರ ನೇತೃತ್ವದಲ್ಲಿ ನೂತನ ಸಮಿತಿಯ ನ್ನು ರಚಿಸಲಾಯಿತು. 2025-26ನೇ ಸಾಲಿನ ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ, ಉಪಾಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ, ಖಾಸಿಂ ಪದ್ಮುಂಜ, ಪ್ರಧಾನ ಕಾರ್ಯದರ್ಶಿಗಳಾಗಿ ಉಮರ್...
ಕಾಶೀಪಟ್ಣ ಪಂಜಲಗುಡ್ಡೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ; ಪ್ರಕರಣ ದಾಖಲು
ಬೆಳ್ತಂಗಡಿ: ಕಾಶಿಪಟ್ಣ ಗ್ರಾಮದ ಪಂಜಲಗುಡ್ಡೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕಾ ಕೇಂದ್ರಕ್ಕೆ ದಾಳಿ ನಡೆಸಿದ ವೇಣೂರು ಪೊಲೀಸರು ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಪತ್ತೆ ಹಚ್ಚಿದ್ದು ಶೇಖರಿಸಿಡಲಾಗಿದ್ದ ಕಲ್ಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ರಮೇಶ್ ಬೋವಿ ಎಂಬಾತನು ಇಲ್ಲಿನಪಂಜಲಗುಡ್ಡೆ ಎಂಬಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿ ಹಿನ್ನಲೆಯಲ್ಲಿ ವೇಣೂರು ಪೊಲೀಸರು ಜು31ರಂದು ಇಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದು ಕಂಡುಬಂದಿದೆ. ಸ್ಥಳದಲ್ಲಿ ರಮೇಶ್ ಬೋವಿ ಎಂಬಾತನು ಗುಡ್ಡೆ ಜಮೀನಿನಲ್ಲಿ ಯಾವುದೋ ಸ್ಪೋಟಕ ವಸ್ತುವನ್ನು ಉಪಯೋಗಿಸಿ...















