ತೋಡು ಬಂದ್ ಆಗಿ ತೋಟಕ್ಕೆ ನುಗ್ಗಿದ ಕೃಷಿಗೆ ಹಾನಿಕರಾಯ : ಕರಾಯ ಗ್ರಾಮ ಖಂಡಿಗ ಎಂಬಲ್ಲಿ ಕೃಷಿಗೆ ಗುಡ್ಡ ಕುಸಿತ
ಕರಾಯ : ಮೇ 30 ರಂದು ಸುರಿದು ಧಾರಾಕಾರ ಸುರಿದ ಮಳೆಗೆ ಕರಾಯ ಗ್ರಾಮದ ಖಂಡಿಗ ನಿವಾಸಿ ದೊಡ್ಡಪ್ಪ ಗೌಡ, ಶ್ರೀಧರ ಗೌಡ, ಬೊಮ್ಮಣ್ಣ ಗೌಡರ ತೋಟಕ್ಕೆ ಸುಮಾರು 4,5 ಕಡೆ ಪ್ರವಾಹದ ರೀತಿಯಲ್ಲಿ ಗುಡ್ಡ ಕುಸಿದು ಬಿದ್ದು ಹರಿಯುವ ತೋಡು ಬಂದ್ ಆಗಿ ಅಡಿಕೆ ತೋಟದಲ್ಲೇ ನೀರು ಹರಿದಾಡುತ್ತಿದ್ದು ಅಪಾರ ಕೃಷಿ ಹಾನಿಯಾಗಿದ್ದು ನೀರು ಹೀಗೆ ತೋಟದಲ್ಲಿ ಹರಿದುಹೋದದ್ದೇ ಆಗಿದ್ದಲ್ಲಿ ತೋಟವು ಸಂಪೂರ್ಣ ನಾಶವಾಗುತ್ತದೆ ಎಂದು ಸಂತ್ರಸ್ತರು ತಮ್ಮ ಅಲಳನ್ನು ತೊಡಿಕೊಂಡಿದ್ದಾರೆ.ಸಂಬಂಧ ಪಟ್ಟ ಇಲಾಖೆಯೂ ಸೂಕ್ತ ಪರಿಹಾರ ನೀಡುಬೇಕೆಂದು ಆಗ್ರಹಿಸಿದ್ದಾರೆ.
ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ಸಮುದಾಯದ ನಡುವೆ ಕೋಮು ವೈಷಮ್ಯ ದ ಪೋಸ್ಟ್ ಪ್ರಕರಣ ದಾಖಲು
ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ಮಂಗಳೂರು ಬ್ಯಾರಿ ವಾರಿಯರ್ 03 ಎಂಬ ಇನ್ ಸ್ಟ್ರಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳ ಭಾವಚಿತ್ರವನ್ನು ಹೊಂದಿರುವ ಪೋಸ್ಟ್ ಹಾಕಿ ಅದರೊಂದಿಗೆ ವಿವಿಧ ಸಮುದಾಯಗಳ ನಡುವೆ ವೈಮನಸ್ಯವುಂಟುಮಾಡುವ ಹಾಗೂ ಈ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ಯುಂಟುಮಾಡುವ ಸಾಧ್ಯತೆಗಳಿರುವ ಸಂದೇಶವನ್ನು ಬರೆದಿದ್ದು ಈ ಹಿನ್ನಲೆಯಲ್ಲಿ ಆರೋಪಿಯ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 55, 103, 353(2) ರಂತೆ ಪ್ರಕರಣವನ್ನು ದಾಖಲಿಸಲಾಗಿದ್ದು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಉಜಿರೆ ಪೇಟೆಯಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳ್ಳತನ
ಬೆಳ್ತಂಗಡಿ; ಉಜಿರೆ ಪೇಟೆಯಲ್ಲಿ ನಿಲ್ಲಿಸಿ ಹೋಗಿದ್ದ ಬುಲೆಟ್ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಳೆಂಜ ಗ್ರಾಮದ ನಿವಾಸಿಯಾಗಿರುವ ಸಿವಿಲ್ ಎಂಜಿನಿಯರ್ ಆಗಿರುವ ನವೀನ್ ಸಿ.ಕೆ ಎಂಬವರು ಬೈಕ್ ಅನ್ನು ಕಳೆದುಕೊಂಡವರಾಗಿದ್ದಾರೆ ಇವರು ಮೇ 31ರಂದು ಮದ್ಯಾಹ್ನ 12.30 ಅಸಹಜರ ಸುಮಾರಿಗೆಉಜಿರೆಯ ಎಫ್ ಎಂ ಲಾಡ್ಜ್ ನ ಸಮೀಪ ಕೆ.ಎ 19 ಇ. ಹೆಚ್ 2516 ನಂಬರಿನ ಬುಲೆಟ್ ಬೈಕ್ ಅನ್ನು ನಿಲ್ಲಿಸಿ ಹೀಗಿದ್ದರು. ಕಚೇರಿ ಕೆಲಸ ಮುಗಿಸಿಕೊಂಡು 6 ಗಂಟೆಯ ಸುಮಾರಿಗೆ...
ಬೆಳ್ತಂಗಡಿ : ವಿಪರೀತ ಮಳೆಯಾಗುತ್ತಿರುವ ಕಾರಣ ಈ ಪ್ರವಾಸಿ ತಾಣಗಳಿಗೆ ನಿಷೇಧ
ಬೆಳ್ತಂಗಡಿ : ತಾಲೂಕಿನ ಗಡಾಯಿಕಲ್ಲು ಕಡಮಗುಂಡಿ, ಬೊಳ್ಳೆ, ಮತ್ತು ಬಂಡಾಜೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮುಂದಿನ ಆದೇಶದ ವರೆಗೆ ಪ್ರವೇಶವನ್ನು ನಿಷೇದಿಸಿದ ಬೆಳ್ತಂಗಡಿ ವನ್ಯಜೀವಿ ವಿಭಾಗದಿಂದ ಆದೇಶ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹವಮಾನ ಇಲಾಖೆಯ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಜಲಪಾತ ಪ್ರದೇಶದ ಸುತ್ತಮುತ್ತ ತೀರಾ ಕಡಿದಾದ ಕಲ್ಲು ಬಂಡೆಗಳಿದ್ದು, ಘಾಟಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದು, ಎಲ್ಲಾ ನದಿ ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಒಳ ಹರಿವು ಜಾಸ್ತಿ ಇರುವುದರಿಂದ ಪ್ರವಾಸಿಗರ ಚಾರಣಕ್ಕೆ ಅನಾನುಕೂಲ ಪರಿಸ್ಥಿತಿ ಉಂಟಾಗುತ್ತದೆ. ಈ...
ಪಕ್ಷ ವಿರೋಧಿ ಚಟುವಟಿಕೆ ಶಾಹುಲ್ ಹಮೀದ್ ಹಾಗೂ ಮಾಜಿ ಮೇಯರ್ ಅಶ್ರಫ್ ಗೆ ಕಾಂಗ್ರೆಸ್ ಪಕ್ಷದಿಂದ ಕಾರಣ ಕೇಳಿ ನೋಟೀಸ್
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮುಸ್ಲಿಮರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮುಖಂಡರು ಇತ್ತೀಚೆಗೆ ನಗರದಲ್ಲಿ ಸಭೆ ನಡೆಸಿ ರಾಜ್ಯ ಸರಕಾರ, ಮತ್ತು ಪಕ್ಷದ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಮತ್ತು ಮಾಜಿ ಮೇಯರ್ ಕೆ. ಅಶ್ರಫ್ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ರ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಡಿ. ವಿಕಾಸ್ ಶೆಟ್ಟಿ ಶನಿವಾರ ಈ ಇಬ್ಬರು ಮುಖಂಡರಿಗೆ ನೀಡಿದ ನೋಟಿಸ್ನಲ್ಲಿ...
ಕಳಿಯ; ಭಾರೀ ಮಳೆಗೆ ಗುಡ್ಡ ಕುಸಿತ
ಬೆಳ್ತಂಗಡಿ; ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ತಿಮ್ಮಪ್ಪ ಗೌಡರ ಮನೆಯ ಹತ್ತಿರ ವಿಪರೀತ ಮಳೆಗೆ ಗುಡ್ಡ ಜರಿದು ಬಿದ್ದಿದೆ.ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿವಾಕರ ಎಮ್, ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್,ಸದಸ್ಯರಾದ ಸುಧಾಕರ ಮಜಲು, ಲತೀಫ್ ಪರಿಮ,ವಿಜಯ ಗೌಡ ಬೇಟಿ ನೀಡಿ ಪರಿಶೀಲಿಸಿದರು.ಸ್ಥಳೀಯರು ಹಾಜರಿದ್ದರು.
ಭಾರೀ ಮಳೆ; ಬಂದಾರಿನಲ್ಲಿ ವ್ಯಾಪಕ ಹಾನಿ
ಬೆಳ್ತಂಗಡಿ; ಭಾರೀ ಗಾಳಿ ಮಳೆಗೆ ಬಂದಾರು ಗ್ರಾಮದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.ಬಂದಾರು ಗ್ರಾಮದ ಶಿವನಗರ ಪೆರ್ಲಬೈಪಾಡಿ ರಸ್ತೆಯ ಬೋಲೋಡಿ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ಬಿದ್ದಿದೆ.ಮುರ್ತಾಜೆ ಸೇಸಪ್ಪ ಪೂಜಾರಿ ಎಂಬವರ ಕೋಳಿ ಶೆಡ್ ಮೇಲೆ ಗುಡ್ಡ ಕುಸಿದು ಬುದ್ದುದ್ದು ಹಾನಿ ಸಂಭವಿಸಿದೆ. ಬಂದಾರು ಗ್ರಾಮದ ಮುರ್ತಾಜೆ ಬಳಿ ಸಂಪರ್ಕ ರಸ್ತೆಯೊಂದು ಕುಸಿತವಾಗಿ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.
ಇಳಂತಿಲ ಭಾರೀ ಮಳೆಗೆ ಗುಡ್ಡ ಕುಸಿತ ಮನೆಗೆ ಹಾನಿ
ಬೆಳ್ತಂಗಡಿ; ಭಾರೀ ಮಳೆಗೆಇಳಂತಿಲ ಗ್ರಾಮದಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ ಸಂಭವಿಸಿದೆ.ಇಲ್ಲಿನ ನಿವಾಸಿ ಸಿದ್ದಿಕ್ ಬಿನ್ ಪೊಡಿಮೋನು ಬ್ಯಾರಿ ರವರ ಮನೆಯ ಹಿಂದಿನ ಗುಡ್ಡೆ ಕುಸಿದು ಬಿದ್ದಿದೆ. ಮನೆಗೆ ಮಣ್ಣು ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ. ಮನೆಯವರನ್ನುಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ
ಇಳಂತಿಲ; ಗುಡ್ಡ ಕುಸಿತ ಸಂಚಾರ ಅಸ್ಯವ್ಯಸ್ತ
ಬೆಳ್ತಂಗಡಿ; ಇಳಂತಿಲ ಗ್ರಾಮದ ಬಾರಕೆರೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಮಣ್ಣು ಕಲ್ಲು ಹಾಗೂ ಮರಗಳು ರಸ್ತೆಗೆ ಬಿದ್ದಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಇಳಂತಿಲ ಹಾರೆಕೆರೆ ಕುವೆತಂಡ ಎಂಬಲ್ಲಿ ರಸ್ತೆಗೆ ನೀರು ನುಗ್ಗಿದ್ದು ರಸ್ತೆ ಬ್ಲಾಕ್ ಆಗಿದೆ
ಲಾಯಿಲ; ಭಾರೀ ಮಳೆಗೆ ಗುಡ್ಡ ಕುಸಿತ ರಸ್ತೆ ಬಂದ್
ಬೆಳ್ತಂಗಡಿ: ಲಾಯಿಲ ಗ್ರಾಮದ ಅಂಕಾಜೆ ಸಮೀಪ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿ ರಸ್ತೆಗೆ ಮಣ್ಣು ಕಲ್ಕುಗಳು ಬಿದ್ದಿದ್ದು , ರಸ್ತೆ ಸಂಪೂರ್ಣ ಕಡಿತಗೊಂಡಿದೆ. ತಾಲೂಕಿನಾದ್ಯಂತ ಸುರಿಯುತ್ತಿರುವ ಭೀಕರ ಮಳೆಗೆ ಲಾಯಿಲ ಗ್ರಾಮದ ಅಂಕಾಜೆ ಸಮೀಪ ಲಾಯಿಲ-ನಿನ್ನಿಕಲ್ಲು ಚಂದ್ಕೂರು ರಸ್ತೆಯಲ್ಲಿ ಬಂಡೆಕಲ್ಲು ಸಮೇತ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದು ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಸ್ಥಳೀಯ ಗ್ರಾಮಪಂಚಾಯತಿಗೆ ಮಾಹಿತಿ ನೀಡಲಾಗಿದ್ದು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.















