ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಗಂಧಿ ಜಗನ್ನಾಥ್ ಇವರ ಮನೆ ಕುಸಿತಸ್ಥಳಕ್ಕೆ ಸಂಸದರಾದ ಶ್ರೀ ಬ್ರಿಜೇಶ್ ಚೌಟ ಶಾಸಕರಾದ ಶ್ರೀ ಹರೀಶ್ ಪೂಂಜಾ ಭೇಟಿ

0

ಬೆಳ್ತಂಗಡಿ;  ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಗಂಧಿ ಜಗನ್ನಾಥ್ ಇವರ ಮನೆ ರಾತ್ರಿ ತಡ ರಾತ್ರಿ 1.30 ಕುಸಿದಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಸುಗಂಧಿ ಇವರ ಪತಿ ಜಗನ್ನಾಥ್, ಮಗ ಅನಿಲ್, ಸೊಸೆ ಮಧುರ ಪುಟ್ಟ ಮಕ್ಕಳು ಮಲಗಿದ್ದರು. ಗೋಡೆ ಬಿರುಕು ಬಿಟ್ಟ ಶಬ್ದ ಕೇಳಿ ಮನೆಯವರು ಎಚ್ಚರ ಗೊಂಡಿದ್ದರಿಂದ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಸಿತದಿಂದ ಮನೆಯ ನಿತ್ಯ ಬಳಕೆಯ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿವೆ. ವಿಷಯ ತಿಳಿದ ತಾಲ್ಲೂಕಿನ ಶಾಸಕರಾದ ಶ್ರೀ ಹರೀಶ್ ಪೂಂಜಾ, ಹಾಗೂ ಸಂಸದರಾದ ಶ್ರೀ...

ಧರ್ಮಸ್ಥಳ ಯೂಟ್ಯೂಬರ್ಸ್ ಮೇಲೆ ಹಲ್ಲೆ : ದಲಿತ ಸಂಘರ್ಷ ಸಮಿತಿ ಮುಖಂಡರ ನಿಯೋಗ ಆಸ್ಪತ್ರೆಗೆ ಭೇಟಿ

0

ಬೆಳ್ತಂಗಡಿ :ಧರ್ಮಸ್ಥಳದಲ್ಲಿ ಹಲವಾರು ಶವಗಳ ಕಾನೂನುಬಾಹಿರ ದಫನ ಪ್ರಕರಣದ ಎಸ್ ಐ ಟಿ ತನಿಖೆಯ ವರದಿ ಮಾಡುತ್ತಿದ್ದಸಂದರ್ಭ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊೂಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಯೂಟ್ಯೂಬರ್ ಗಳನ್ನುಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳು ಮತ್ತು ಮೈಸೂರು ವಿಭಾಗೀಯ ಪದಾಧಿಕಾರಿಗಳ ನಿಯೋಗಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿ‍ದರು.ತನಿಖೆಯ ಹಾದಿ ತಪ್ಪಿಸುವ ದುರುದ್ದೇಶದಿಂದಸ್ಥಳೀಯ ಕೆಲವು ಗೂಂಡಾ ಪ್ರವೃತ್ತಿಯ ಕಿಡಿಗೇಡಿಗಳುಮಾಧ್ಯಮ ವರದಿಗಾರರಾಗಿಬಂದಿರುವ ಯೂಟ್ಯೂಬ್ ಚಾನೆಲ್ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ.ವರದಿಗಾಗಿ ಬಂದಿರುವ ಯೂಟ್ಯೂಬರ್ ಗಳ ಮೇಲೆ ಹಲ್ಲೆ...

ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲ ಪದ‌ಬಳಕೆ; ರಾಕೇಶ್ ಶೆಟ್ಟಿ ವಿರುದ್ದ ಪ್ರಕರಣ ದಾಖಲು

0

ಬೆಳ್ತಂಗಡಿ; ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಅಶ್ಲೀಲವಾಗಿ ಮಾತನಾಡಿರುವ ಬಗ್ಗೆ ರಾಕೇಶ್ ಶೆಟ್ಟಿ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬೆಳ್ತಂಗಡಿ ನಿವಾಸಿ ಶ್ರೀನಿವಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದು ರಾಕೇಶ್ ಶೆಟ್ಟಿ ಎಂಬಾತನು ಯೂಟ್ಯೂಬ್ ನಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾವುವಂತೆ ಅಶ್ಲೀಲ ಪದಗಳನ್ನು ಬಳಸಿ ಮಾತನಾಡಿರುವ ವೀಡಿಯೋ ಕಂಡುಬಂದಿರುವುದಾಗಿ ದೂರು ನೀಡಿದ್ದಾರೆ. ಈದೂರಿನ ಹಿನ್ನಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಕಲಂ 296ಬಿ.ಎನ್. ಎಸ್. ಅಂತೆ ಪ್ರಕರಣ ದಾಖಲಿಸಲಾಗಿದೆ

ಬೆಳ್ತಂಗಡಿ : ಕಾಡು ಹಂದಿಯನ್ನು ಭೇಟೆಯಾಡಿ ಮಾಂಸ ಮಾಡುತ್ತಿದ್ದಾಗ ಅರಣ್ಯ ಇಲಾಖೆ ದಾಳಿ; ಇಬ್ಬರು ವಶಕ್ಕೆ ; ಕಾಡು ಹಂದಿ ಮಾಂಸ ಮತ್ತು ಪರಿಕರಗಳು ವಶಕ್ಕೆ

0

ಬೆಳ್ತಂಗಡಿ : ಪಟ್ಟ ಜಾಗದಲ್ಲಿ ರೋಪ್ ಬಳಸಿ ಉರುಳು ಇಟ್ಟು ಕಾಡು ಹಂದಿಯನ್ನು ಬೇಟೆಯಾಡಿ ಅದನ್ನು ಮನೆಯ ಶೇಡ್ ನಲ್ಲಿ ಮಾಂಸ ಮಾಡುತ್ತಿದ್ದಾಗ ವೇಣೂರು ಅರಣ್ಯ ಇಲಾಖೆ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ಕಾಡು ಹಂದಿ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡು ವನ್ಯಜೀವಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ರಮೇಶ್ ಹೆಗ್ಡೆ ಎಂಬವರ ಪಟ್ಟ ಜಾಗದಲ್ಲಿ ರೋಪ್ ಬಳಸಿ ಉರುಳು ಇಟ್ಟು ಕಾಡು ಹಂದಿಯನ್ನು ಬೇಟೆಯಾಡಿ ಅದನ್ನು ಹೊಸ ಮನೆ ಸುಧಕಾರ ಎಂಬವರ ಮನೆಯ ಶೇಡ್ ಗೆ ತಂದು...

ಎಸ್.ಡಿ.ಪಿ.ಐ ಯಿಂದ ಪ್ರತಿಭಟನೆ; ಸಾಕ್ಷಿ ದೂರು ಪ್ರಕರಣದ ದಿಕ್ಕು ತಪ್ಪಿಸಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ: ಅನ್ವರ್ ಸಾದತ್ ಬಜತ್ತೂರು

0

ಬೆಳ್ತಂಗಡಿ (ಆ-08): ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಫ್ಯೂಡಲ್ ಗೂಂಡಾಗಳ ಅಮಾನವೀಯ ಹಲ್ಲೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಸಮಿತಿ ವತಿಯಿಂದ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿಯವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನಾ ಸಬೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಮಾತನಾಡಿ ಧರ್ಮಸ್ಥಳದಲ್ಲಿ ಯುಟ್ಯೂಬರ್ ಗಳ ಮೇಲೆ ನಡೆದ ಹಲ್ಲೆ ಪೂರ್ವಯೋಜಿತ ಮತ್ತು ಸಾಕ್ಷಿ ದೂರು ಪ್ರಕರಣ ದಿಕ್ಕು ತಪ್ಪಿಸಲು ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಒಂದು ಭಾಗ....

ಬೆಳ್ತಂಗಡಿ: ಎಸ್.ಐ.ಟಿ. ಪೊಲೀಸ್ ಠಾಣೆಗೆ ದೂರುದಾರ ಜಯಂತ್ ಟಿ. ಭೇಟಿ; ಬೆಳ್ತಂಗಡಿ ಎಸ್‌ಐಟಿ ಕಚೇರಿ ಎಸ್‌ಐಟಿ ಪೊಲೀಸ್ ಠಾಣೆಯಾಗಿ ಬದಲಾವಣೆ

0

ಬೆಳ್ತಂಗಡಿ: ಎಸ್.ಐ.ಟಿ. ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಪ್ರದೇಶದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿರುವ ಮಧ್ಯೆಯೇ ಬೆಳ್ತಂಗಡಿ ಇಚಿಲಂಪಾಡಿ‌ ನಿವಾಸಿ ಜಯಂತ್ ಟಿ. ಇದೀಗ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಆಗಮಿಸಿದ್ದಾರೆ. ಬೆಳ್ತಂಗಡಿ ಇಚಿಲಂಪಾಡಿ‌ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ತಾನು ಯುವತಿ ಶವ ನೋಡಿರುವುದಾಗಿ ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆ ಜಯಂತ್ ಟಿ. ಅವರನ್ನು ಕಚೇರಿಗೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ್ದು, ಅಧಿಕಾರಿಗಳು ಮಾಹಿತಿ ಕಲೆಹಾಕುವ ಸಾಧ್ಯತೆಯಿದೆ. ಜಯಂತ್ ಟಿ. ಅವರು ಎಸ್.ಐ.ಟಿ ಬೆಳ್ತಂಗಡಿ...

ಯುಟ್ಯೂಬ್ ನಲ್ಲಿ ನಿಂದನೆ ಪುನಿತ್ ಕೆರೆಹಳ್ಳಿ ವಿರುದ್ದ ಪ್ರಕರಣ ದಾಖಲು

0

ಬೆಳ್ತಂಗಡಿ; ಯುಟ್ಯೂಬ್ ನಲ್ಲಿ ಅಶ್ಲೀಲವಾಗಿ ಮಾತನಾಡಿದ ಬಗ್ಗೆ ಪುನೀತ್ ಕೆರೆಹಳ್ಳಿ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ಜೆರೋಮ್ ಬರ್ಬೋಜಝಾ ಎಂಬವರು. ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಕಲಂ 296, ಬಿ.ಎನ್.ಎಸ್. 2023ರಂತೆ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್; ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ವಿರುದ್ದ ಪ್ರಕರಣ ದಾಖಲು

0

ಬೆಳ್ತಂಗಡಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪರಾಧ ಕೃತ್ಯಗಳನ್ನು ನಡೆಸಲು ದುಷ್ಪ್ರೇರಣೆಯಾಗುವಂತೆ ಅಶ್ಲೀಲವಾಗಿ ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡುವ ರೀತಿಯಲ್ಲಿ ಮಾತನಾಡಿರುವ ವೀಡಿಯೋ ಹಾಕಿರುವ ಬಗ್ಗೆ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ಬೆಳ್ತಂಗಡಿ ನಿವಾಸಿ ಚರಣ್ ಶೆಟ್ಟಿ ಎಂಬವರು ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಕಲಂ 57, 296, ಜೊತೆಗೆ 190 ಬಿಎನ್.ಎಸ್ 2023 ರಂತೆ ಪ್ರಕರಣದಾಖಲಿಸಲಾಗಿದೆ.ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಪ್ರಕರಣ ದಾಖಲು;ಮಹೇಶ್ ಶೆಟ್ಟಿ ತಿಮರೋಡಿ ಅವರು ಯುಟ್ಯೂಬ್ ನಲ್ಲಿ ಪ್ರದೇಶಿಕವಾಗಿ ಜನರ...

ಧರ್ಮಸ್ಥಳ: ಯೂಟ್ಯೂಬರ್ ಮೇಲೆ ಹಲ್ಲೆ  ಓರ್ವನ ಬಂಧನ

0

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧಿಸಿದಂತೆ ವರದಿ ಮಾಡುತ್ತಿದ್ದ ವೇಳೆ  ಆ.6 ರಂದು ಸಂಜೆ ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ನಲ್ಲಿ ನಾಲ್ಕು ಮಂದಿ ಯೂಟ್ಯೂಬರ್ ಮೇಲೆ ಹಲ್ಲೆ ನಡೆಸಿ ಕ್ಯಾಮರಾಗಳಿಗೆ ಹಾನಿ ಮಾಡಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ  ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 189(2),191(2),115(2),324(5),352,307 ಜೊತೆಗೆ 190 BNS ಅಡಿಯಲ್ಲಿ ಸುಮಾರು 15 ರಿಂದ 50 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಗುರುತಿಸಿದ ಪೊಲೀಸರು ...

ಧರ್ಮಸ್ಥಳ, ಉಜಿರೆ ಹಲ್ಲೆ ಪ್ರಕರಣ ಒಟ್ಟು ಏಳು ಪ್ರಕರಣಗಳು ದಾಖಲು; ಎಸ್.ಪಿ ಮಾಹಿತಿ

0

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿ ಯ ಪಾಂಗಲ ಕ್ರಾಸ್ ಎಮಬಲ್ಲಿ ದಿನಾಂಕ 06.08.2025 ರಂದು ನಡೆದ ಅಹಿತಕರ ಘಟಣೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿರುತ್ತದೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ವಿವರ ಒಂದನೆಯ ಪ್ರಕರಣದಲ್ಲಿ ಪ್ರಕರಣದ ಪಿರ್ಯಾದಿದಾರರಾದ ಬಂಟ್ವಾಳ ನಿವಾಸಿ ಅಜಯ್ ಎಂಬವರ ದೂರಿನಂತೆ, ಸದ್ರಿಯವರು ಕುಡ್ಲ ರಾಂಪೇಜ್ ಎಂಬ ಯುಟ್ಯೂಬ್ ಚಾನೆಲ್ ನ ಮಾಲಕರಾಗಿದ್ದು, ದಿನಾಂಕ 06.08.2025 ರಂದು ಸಂಜೆ, ಧರ್ಮಸ್ಥಳ ಪಾಂಗಳ ಕ್ರಾಸ್ ಎಂಬಲ್ಲಿ,...