ಪುದುವೆಟ್ಟು; ಬಿಜೆಪಿ ಗ್ರಾ.ಪಂ ಮಟ್ಟದ ಅಭ್ಯಾಸ ವರ್ಗ
ಪುದುವೆಟ್ಟು :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ 11 ರಂದು ನಡೆದ ಪುದುವೆಟ್ಟು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸವರ್ಗ ಸಭೆ ನಡೆಯಿತು. ಹಿರಿಯ ಕಾರ್ಯಕರ್ತರಾದ ದಿವಾಕರ ಗೌಡ ಮುಚ್ಚಾರು,ಪುಟ್ಟ ಗೌಡ ಬರಮೇಲು, ನಾರಾಯಣ ಪೂಜಾರಿ ಕಾಯರಂಡ ಇವರುಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಡಲ ಉಪಾಧ್ಯಕ್ಷರು ಅಭ್ಯಾಸವರ್ಗ ಸಂಚಾಲಕರಾದ ಕೊರಗಪ್ಪ ಗೌಡ ಚಾರ್ಮಾಡಿ ಉದ್ಘಾಟನ ಭಾಷಣ ನೆರವೇರಿಸಿದರು. ಶಾಸಕರಾದ ಹರೀಶ್ ಪೂಂಜರವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ...
ಬೆಳ್ತಂಗಡಿ : ಅಪ್ರಾಪ್ತೆಯನ್ನು ಬೆದರಿಸಿ ಗರ್ಭವತಿಯಾಗಿಸಿದ ಪ್ರಕರಣ; ಪೋಕ್ಸೋ ಪ್ರಕರಣದಡಿ ಆರೋಪಿಯ ಬಂಧನ
ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನನ್ನು ಧರ್ಮಸ್ಥಳ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.ಬಂಧಿತ ಆರೋಪಿ ಪುದುವೆಟ್ಟು ಗ್ರಾಮದ ನಿವಾಸಿ ದಿನೇಶ್ ಗೌಡ ಎಂಬಾತನಾಗಿದ್ದಾನೆ.ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿರುವುದಲ್ಲದೆ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದು. ಕೆಲವು ದಿನಗಳ ಬಳಿಕ ಬಾಲಕಿ ಹೊಟ್ಟೆ ನೋವು ಎಂದು ಮನೆಯವರಿಗೆ ತಿಳಿಸಿದಾಗ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಗರ್ಭಿಣಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪೋಷಕರು...
ಧರ್ಮಸ್ಥಳದಲ್ಲಿ ಜಿ.ಪಿ.ಆರ್ ಕಾರ್ಯಾಚರಣೆಗೆ ಕ್ಷಣಗಣನೆ
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ಸಾಕ್ಷಿದಾರ ಗುರುತಿಸಿರುವ 13ನೇ ಸ್ಥಳದಲ್ಲಿ ಸೋಮವಾರ ಜಿಪಿಆರ್ ಕಾರ್ಯಾಚರಣೆಗೆ ಎಲ್ಲ ಸಿದ್ದತೆಗಳು ನಡೆದಿದ್ದು ಇದೀಗ ಕೆಲವೇ ಹೊತ್ತಿನಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ.ಕ್ಲಿಷ್ಟಕರವಾದ 13ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ಮುಂದೂಡಲ್ಪಡುತ್ತಿದ್ದು ಇದೀಗ ಮಂಗಳವಾರ ಇಲ್ಲಿ ಅಧಿಕೃತವಾಗಿ ಪರಿಶಿಲನಾಕಾರ್ಯ ನಡೆಯಲಿದೆ.ನೇತ್ರಾವತಿ-ಅಜೆಕುರಿ ರಸ್ತೆಯಲ್ಲಿ ನೇತ್ರಾವತಿ ನದಿ ಪಕ್ಕದ ಕಿಂಡಿ ಅಣೆಕಟ್ಟಿನ ಸಮೀಪದ 13ನೇ ಸ್ಥಳದಲ್ಲಿ ಸೋಮವಾರ ಮಧ್ಯಾಹ್ನ 3 ರಿಂದ 3:30ರ ವರೆಗೆ ಪ್ರಾಯೋಗಿಕ ಕಾರ್ಯಾಚರಣೆ ನಡೆಯಿತು.ಬಳಿಕ ಪೌರ ಕಾರ್ಮಿಕರು ಸುಮಾರು 60 ಅಡಿ ಉದ್ದ, 30 ಅಗಲದ...
ತನ್ನ ಮೇಲೆ ದಾಳಿ ನಡೆಸಲು ಸಂಚು; ಜಯಂತ್ ಟಿ.ಅವರಿಂದ 17 ಮಂದಿಯ ವಿರುದ್ದ ದೂರು
ಬೆಳ್ತಂಗಡಿ: ತನ್ನನ್ನು ಕೆಲವರು ಹಿಂಬಾಲಿಸಿಕೊಂಡು ಬಂದು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು 17 ಮಂದಿಯ ವಿರುದ್ಧ ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಯುವತಿಯ ಮೃತದೇಹವನ್ನು ಹೂತು ಹಾಕಿರುವುದನ್ನು ನೋಡಿದ್ದೇನೆ ಎಂದು ಎಸ್ಐಟಿ ನೀಡಿರುವ ಎರಡನೇ ದೂರುದಾರ ಜಯಂತ್ ಟಿ. ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.ಎಸ್ಐಟಿಗೆ ದೂರು ನೀಡಿದ ದಿನದಿಂದ ತನ್ನ ಮೇಲೆ ಹಲ್ಲೆ ಮಾಡಲು ಮಾಧ್ಯಮಗಳ ಮೂಲಕ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಸಂತ್ ಗಿಳಿಯಾರು, ಕಿರಿಕ್ ಕೀರ್ತಿ, ವಿಕಾಸ್ ಶಾಸ್ತ್ರಿ ಮತ್ತು ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಎಂಬವರನ್ನು...
ಪದ್ಮಲತಾ ಪ್ರಕರಣ ಮರುತನಿಖೆಯಾದರೆ ಸತ್ಯ ಹೊರಬರಲಿದೆ ಇಂದ್ರಾವತಿ ವಿಶ್ವಾಸ
ಪದ್ಮಲತಾಳ ಹತ್ಯೆಯಾಗಿ 39 ವರ್ಷಗಳಾಗಿದೆ ಈಗಲೂ ತನಿಖೆ ನಡೆದರೆ ಸತ್ಯ ಹೊರ ಬಂದು ಆರೋಪಿಗಳಿಗೆ ಶಿಕ್ಷೆಯಾಗುವ ವಿಶ್ವಾಸವಿದೆ ಎಂದು ಕೊಲೆಯಾದ ಪದ್ಮಲತಾಳ ಅಕ್ಕ ಇಂದ್ರಾವತಿ ಹೇಳಿದ್ದಾರೆ.ಪದ್ಮಲತಾ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಎಸ್.ಐ.ಟಿ. ಗೆ ದೂರು ನೀಡಲು ಆಗಮಿಸಿದ ವೇಳೆ ಅವರು ಮಾದ್ಯಮದವರೊಂದಿಗೆ ಮಾತನಾಡಿದರು.ಪದ್ಮಲತಾ ಪ್ರಕರಣದಲ್ಲಿ ಈ ಹಿಂದೆ ಹಲವು ಹಂತದ ತನಿಖೆಗಳು ನಡೆದಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಸಿಒಡಿ ತನಿಖೆ ನಡೆಸಿ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿದ್ದಾರೆ.ಇದೀಗ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಾಜ್ಯ...
ಧರ್ಮಸ್ಥಳ ಘರ್ಷಣೆ ಪ್ರಕರಣ 6ಮಂದಿ ಆರೋಪಿಗಳ ಬಂಧನ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ನಲ್ಲಿ ಆ.6 ರಂದು ಸಂಜೆ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಿದ ಬಳಕಿ ಪಾಂಗಳ ಕ್ರಾಸ್ ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂದಿಸಿದಂತೆ ಧರ್ಮಸ್ಥಳ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಆ.9 ರಂದು ಧರ್ಮಸ್ಥಳ ನಿವಾಸಿಗಳಾದ ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ನನ್ನು ಬಂಧಿಸಿದ್ದು ಶನಿವಾರ ಸಂಜೆ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು. 6 ಮಂದಿಗೂ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಆ.11 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಲು...
ಸಂದ್ಯಾ ವಾಯ್ಸ್ ಫಾರ್ ಜಸ್ಟಿಸ್ ಎಂಬ ಫೇಸ್ ಬುಕ್ ಪೇಜ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ; ಸಂದ್ಯಾ ಎಂಬ ಹೆಸರಿನಲ್ಲಿ ಸಂದ್ಯಾ ವಾಯ್ಸ್ ಫಾರ್ ಜಸ್ಟಿಸ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡುವಂತೆ ಅಶ್ಲೀಲವಾಗಿ ಮಾತನಾಡಿದ ಬಗ್ಗೆ ಫೇಸ್ ಬುಕ್ ಪೇಜ್ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ದಯಾನಂದ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಪೇಜ್ ವಿರುದ್ದ ಕಲಂ 296 ಬಿಎನ್.ಎಸ್ ನಂತೆ ಪ್ರಕರಣ ದಾಖಲಿಸಲಾಗಿದೆ
ಧರ್ಮಸ್ಥಳ; ಪಾಂಗಳದಲ್ಲಿ ಗುಂಪು ಘರ್ಷಣೆ ಆರು ಮಂದಿಯ ಬಂಧನ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ನಲ್ಲಿ ಆ.6 ರಂದು ಸಂಜೆ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಿದ ಬಳಕಿ ಪಾಂಗಳ ಕ್ರಾಸ್ ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂದಿಸಿದಂತೆ ಧರ್ಮಸ್ಥಳ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಆ.9 ರಂದು ಧರ್ಮಸ್ಥಳ ನಿವಾಸಿಗಳಾದ ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ನನ್ನು ಬಂಧಿಸಿದ್ದು ಶನಿವಾರ ಸಂಜೆ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು. 6 ಮಂದಿಗೂ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಆ.11 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಲು...
ಸಾಮಾಜಿಕ ಜಾಲತಾಣದಲ್ಲಿ ಧರ್ಮ ಧರ್ಮ ಗಳ ನಡುವೆ ವೈಮನಸ್ಯ ಮೂಡಿಸುವ ಸಂದೇಶ; ವಸಂತ ಗಿಳಿಯಾರ್ ವಿರುದ್ದ ಪ್ರಕರಣ ದಾಖಲು
ಬೆಳ್ತಂಗಡಿ; ಧರ್ಮ ಧರ್ಮಗಳ ನಡುವೆ ಸಮುದಾಯಗಳ ನಡುವೆ ವೈಮನಸ್ಯವುಂಟುಮಾಡುವ ಸಂದೇಶವನ್ನು ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ ಬಗ್ಗೆ ವಸಂತ ಗಿಳಿಯಾರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ಶೇಖರ ಲಾಯಿಲ ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ವಸಂತ ಗಿಳಿಯಾರ್ ಅವರು ಫೇಸ್ ಬುಕ್ ನಲ್ಲಿ ಹಾಕಿರುವ ಸಂದೇಶದಿಂದ ಧರ್ಮ ಧರ್ಮಗಳ ನಡುವೆ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತಿದ್ದು ಇದರಿಂದ ಸಾಮಾಜಿಕ ಸ್ವಾಸ್ಥ್ಯ ಕೆಡುವ ಸಾಧ್ಯತೆಗಳಿವೆ ಎಂಬುದಾಗಿ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಸೆಕ್ಷನ್ 196(1)(ಎ), 353(2)...
ಧರ್ಮಸ್ಥಳ; ಬೊಳಿಯಾರಿನಲ್ಲಿ ರಸ್ತೆ ಬದಿಯಲ್ಲಿ ಕಾಡಾನೆ
ಧರ್ಮಸ್ಥಳ: ಇಲ್ಲಿಯ ಬೋಳಿಯರ್ ನಲ್ಲಿ ಎರಡು ಮೂರು ವಾರದಿಂದ ಬೀಡುಬಿಟ್ಟಿರುವ ಕಾಡಾನೆಯು ಇಂದು(ಆ.9) ಬೆಳಿಗ್ಗೆ ಮತ್ತೆ ರಸ್ತೆಯ ಬದಿ ಪ್ರತ್ಯಕ್ಷವಾಗಿದೆ. ಶಾಲಾ ಮಕ್ಕಳು ಬಸ್ ಗೆ ಕಾಯುತ್ತಿರುವ ವೇಳೆ ಕಾಡಾನೆಯು ಪ್ರತ್ಯಕ್ಷವಾಗಿದ್ದು ಯಾವುದೇ ತೊಂದರೆ ಮಾಡದೆ ಬೋಳಿಯಾರ್ ನಿಂದ ಅರಣ್ಯಕ್ಕೆ ಹೋಗಿದೆ. ರಾತ್ರಿ ಹೊತ್ತು ಕಾಣಿಸುತ್ತಿದ್ದ ಕಾಡಾನೆಗಳು ಕಳೆದ ಕೆಲ ದಿನಗಳಿಂದ ಬೊಳಿಯಾರು ಪರಿಸರದಲ್ಲಿ ಹಗಲು ಹೊತ್ತಿನಲ್ಲಿಯೇ ಓಡಾಟ ನಡೆಸುತ್ತಿದ್ದು ಸಾರ್ವಜನಿಕರಲ್ಲಿ ಭಯ ಮೂಡಿಸಲು ಕಾರಣವಾಗಿದೆ. ವಾರದ ಹಿಂದೆ ಇಲ್ಲಿ ಕಾಡಾನೆ ಶಾಲೆಗೆ ಹೋಗಲು ಬಸ್ ಕಾಯುತ್ತಿದ್ದ ಮಕ್ಕಳತ್ತ ನುಗ್ಗಿತ್ತು. ಮಕ್ಕಳು ಓಡಿ ತಪ್ಪಿಸಿಕೊಂಡಿದ್ದರು. ಇದೀಗ...














