ಪೂಂಜಾಲಕಟ್ಟೆ ಪಿ.ಎಸ್ ಐ ನಂದಕುಮಾರ್ ಅವರಿಗೆ ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ
ಬೆಳ್ತಂಗಡಿ; ಪೂಂಜಾಲಕಟ್ಟೆ ಠಾಣೆಯ ಪಿ.ಎಸ್.ಐ ಆಗಿ ಕಾರ್ಯನಿ ರ್ವಹಿಸುತ್ತಿದ್ದ ನಂದಕುಮಾರ್. ಎಂ.ಎಸ್ ಅವರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಪ್ರಮೋಷನ್ ನೀಡಿ ಇಲಾಖೆ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಒಟ್ಟು 36 ಮಂದಿಗೆ ಪ್ರಮೋಷನ್ ಲಭಿಸಿದ್ದು ನಂದಕುಮಾರ್ ಅವರಿಗೆ ಬಡ್ತಿ ನೀಡಿ ಡಿ.ಎಸ್.ಬಿ ದ.ಕ ಜಿಲ್ಲೆ ಇಲ್ಲಿಗೆ ಇನ್ಸ್ ಪೆಕ್ಟರ್ ಆಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಬೆಳ್ತಂಗಡಿ; ಮಳೆ ಮುನ್ಸೂಚನೆ ಹಿನ್ನಲೆ ಅಪಾಯಕಾರಿ ಸ್ಥಳಗಳಲ್ಲಿರುವ ಮನೆಗಳಲ್ಲಿರುವವರಿಗೆ ನೋಟೀಸು
ಬೆಳ್ತಂಗಡಿ; ಮಳೆಗಾಲದ ಅವಧಿಯಲ್ಲಿ ಉಂಟಾಗಬಹುದಾದ ವಿಪತ್ತುಗಳ ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರು ಸಭೆ ನಡೆಸಿ ನೀಡಿರುವ ಆದೇಶದಂತೆ ಗುಡ್ಡ ಜರಿತ ಉಂಟಾಗಬಹುದಾದ ಸ್ಥಳದಲ್ಲಿ ಅಥವಾ ಹೊಳೆ/ತೊರೆ ಬದಿಯಲ್ಲಿರುವ ಮನೆಗಳವರಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005ರಂತೆ ಗ್ರಾಮ ಪಂಚಾಯತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ನೋಟೀಸನ್ನು ನೀಡುತ್ತಿದ್ದಾರೆ.ಅಳದಂಗಡಿ, ಬಾರ್ಯ ಬೆಳಾಲು ಧರ್ಮಸ್ಥಳ ಕಳಿಯ ಕಾಶಿಪಟ್ಣ ಕೊಕ್ಕಡ ಕೊಯ್ಯುರು ಮಚ್ಚಿನ ಮಾಲಾಡಿ ಮಲವಂತಿಗೆ ಮರೋಡಿ ಮುಂಡಾಜೆ ನಾರಾವಿ ಪಡಂಗಡಿ ತೆಕ್ಕಾರು ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 190...
ಭಾರೀ ಮಳೆಯ ಮುನ್ಸೂಚನೆ: ದ.ಕ ಜಿಲ್ಲೆಯಲ್ಲಿ ಐದು ದಿನ ರಡ್ ಅಲರ್ಟ್ ಘೋಷಣೆ
ಬೆಳ್ತಂಗಡಿ; ಒಂದು ವಾರದಿಂದ ಬಿಡುವು ನೋಡಿದ್ದ ಮಳೆ ಕರಾವಳಿಯಾದ್ಯಂತ ಮತ್ತೆ ಬಿರುಸುಗೊಂಡಿದೆ. ಬೆಳ್ತಂಗಡಿ ತಾಲೂಕಿನಲ್ಲಿಯು ಬುಧವಾರ ಸಂಜೆಯಿಂದ ನಿರಂತರ ಮಳೆ ಆರಂಭಗೊಂಡಿದ್ದು ಜಿಲ್ಲೆಯಲ್ಲಿ ಐದು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಜೂ.12ರಿಂದ 16ರವರೆಗೆ ರಾಜ್ಯ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ನೀಡಿದೆ. ಈ ದಿನಗಳಲ್ಲಿ 200ಮಿ.ಮೀ.ಗೂ ಅಧಿಕ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ....
ಮುಂಡಾಜೆಯಲ್ಲಿ ಜಯರಾಂ ಕೆ ಅವರಿಗೆ ‘ನುಡಿ’ನಮನ; ಜಯರಾಂ ಅವರು ಬಹುವಿಧ ಕಲಾ ಪ್ರಾಕಾರಗಳಲ್ಲಿ ತೊಡಗಿಸಿಕೊಂಡಿದ್ದರು; ಶ್ರೀಧರ ಜಿ ಭಿಡೆ
ಬೆಳ್ತಂಗಡಿ; ವಿದ್ಯೆ, ಕಲೆ, ಸಾಹಿತ್ಯ ಸಂಸ್ಕೃತಿ, ಜಾನಪದ, ತರಬೇತಿ, ನಾಟಕ, ಕ್ರೀಡೆ ಹೀಗೆ ಬಹುವಿಧ ಪ್ರಾಕಾರಗಳಲ್ಲಿ ಜಯರಾಂ ಕೆ ಅವರು ತೊಡಗಿಸಿಕೊಂಡಿದ್ದರು. ಹಲವರಿಗೆ ಬದುಕುವ ದಾರಿ ತೋರಿದ್ದ ಅವರ ಈ ಎಲ್ಲಾ ಪೌಢಿಮೆ ಅನುಕರಣೀಯವಾದುದು ಎಂದು ಮುಂಡಾಜೆ ಭಿಡೆ ಮನೆಯ ಹಿರಿಯ ಮುತ್ಸದ್ದಿ ಶ್ರೀಧರ ಜಿ ಭಿಡೆ ಹೇಳಿದರು.ಇತ್ತೀಚೆಗೆ ಅಗಲಿದ ಕಲಾರಾಧಕ, ಹವ್ಯಾಸಿ ಶಿಕ್ಷಕ, ತರಬೇತುದಾರ ಜಯರಾಂ ಕೆ ಅವರಿಗೆಮುಂಡಾಜೆ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಭಜನಾ ನಮನ, ಗಾನ ನಮನ, 'ನುಡಿ' ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮನುಷ್ಯನ ಒಳ್ಳೆಯ...
ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು ಸಚಿವರಿಗೆ ಅಭಿನಂದನೆ
ಬೆಳ್ತಂಗಡಿ. ತಾಲೂಕಿನ ಸುಮಾರು 60 ವರ್ಷ ಹಳೆಯದಾದ ಬೆಳ್ತಂಗಡಿಯ ನ್ಯಾಯಾಲಯದ ಕಟ್ಟಡನಾದುರಸ್ತಿಯಲ್ಲಿದ್ದು ಹೊಸ ನ್ಯಾಯಾಲಯದ ಕಟ್ಟಡಕ್ಕೆ ಸರ್ಕಾರ 9 ಕೋಟಿ ಅನುದಾನ ಮಂಜೂರು ಗೊಳಿಸಿದೆ. ಇಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಸಚಿವರಾದ ಎಚ್ ಕೆ ಪಾಟೀಲ್ ರವರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ,ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಹಾಗೂ ಅನುದಾನಕ್ಕೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಂ, ಅಪಾರ ಸರ್ಕಾರಿ ವಕೀಲರಾದ ಮನೋಹರ್ ಕುಮಾರ್ ಎ...
ಉಜಿರೆ; ವಿದ್ಯುತ್ ಆಘಾತಕ್ಕೆ ಈಡಾದ ಯುವಕನ ರಕ್ಷಣೆ
ಬೆಳ್ತಂಗಡಿ; ಉಜಿರೆ ಟಿ. ಬಿ ಕ್ರಾಸ್ ನಲ್ಲಿ ವಾಹನ ತೊಳೆಯುತ್ತಿದ್ದ ವೇಳೆ ನೀರು ಹಾಯಿಸುವ ಗನ್ ಮೂಲಕ ವಿದ್ಯುತ್ ಹರಿದು ಶಾಕ್ ಹೊಡೆದು ಅದರಲ್ಲಿಯೇ ಸಿಲುಕಿಕೊಂಡ ವ್ಯಕ್ತಿಯನ್ನು ಸ್ಥಳೀಯರು ಸಾಹಸಿಕವಾಗಿ ರಕ್ಷಿಸದ್ದಾರೆ.ಇಲ್ಲಿನ ನಿವಾಸಿ ಸಾದಿಕ್ ಎಂಬಾತ ವಾಹನ ತೊಳೆಯುತ್ತಿದ್ದ ವೇಳೆ ವಿದ್ಯುತ್ ಗೆ ಆಘಾತಕ್ಕೆ ಈಡಾಗಿದ್ದಾರೆ. ಈ ಸಂದರ್ಭದಲ್ಲಿ ಇದನ್ನು ಗಮನಿಸಿದ ಸ್ಥಳೀಯರಾದ ಉಸ್ಮಾನ್ , ಮನ್ಸೂರ್, ಹಮೀದ್ ಹಾಗೂ ಹಾರಿಸ್ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ವಿದ್ಯುತ್ ಆಘಾತಕ್ಕಡ ಈಡಾಗಿ ಸಿಲುಕಿಕೊಂಡಿದ್ದ ಯುವಕನನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಇದೀಗ ಆತನನ್ನು ಉಜಿರೆಯ ಖಾಸಗಿ...
ಬೆಳ್ತಂಗಡಿ; ಮಳೆ ಹಾನಿ ವಿಪತ್ತು ನಿರ್ವಹಣೆ ಬಗ್ಗೆ ಸಮಾಲೋಚನಾ ಸಭೆ
ಬೆಳ್ತಂಗಡಿ; ಮಳೆ ಹಾನಿ- ವಿಪತ್ತು ನಿರ್ವಹಣೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರು ನೀಡಿರುವ ಸೂಚನೆಯಂತೆ ಬೆಳ್ತಂಗಡಿ ತಾ. ಪಂ. ಸಭಾಂಗಣದಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ರವರು ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ಮೆಸ್ಕಾಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಸಭೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮ ವಹಿಸಲು...
ಗೇರುಕಟ್ಟೆ: ಸುಣ್ಣಲಡ್ಡದಲ್ಲಿ ತಡರಾತ್ರಿ ಮನೆಗೆ ನುಗ್ಗಿ ನಗದು ಕಳ್ಳತನ.ಇನ್ಸ್ ಪೆಕ್ಟರ್ ಸುಬ್ಬಾಪುರ ಮಠ್ ಬೇಟಿ.ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ
ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಸುಣ್ಣ ಲಡ್ಡ ಎಂಬಲ್ಲಿ ಆಸಿಫ್ ಎಂಬವರ ಮನೆಗೆ ದಿನಾಂಕ :09:06:2025 ರಂದು ತಡರಾತ್ರಿ ಯಾರೋ ಕಳ್ಳರು ನುಗ್ಗಿ ಮಲಗಿದ್ದ ಕೋಣೆಯಲ್ಲಿದ್ದ ಗೋದ್ರೆಜ್ ನಲ್ಲಿಟ್ಟಿದ್ದ ದಾಖಲೆ ಪತ್ರ, ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಗೊಳಿಸಿ ನಗದು ಕಳ್ಳತನ ನಡೆಸಿದ್ದಾರೆ. ಗೋದ್ರೇಜ್ ನ ಬಾಗಿಲು ತೆರೆಯುವ ಶಬ್ದ ಕೇಳಿ ಅಲ್ಲೇ ಮಲಗಿದ್ದ ಆಸಿಫ್ ಗೆ ಎಚ್ಚರವಾದಾಗ ಕಳ್ಳನು ಹಿಂದಿನ ಬಾಗಿಲಿನಿಂದ ಓಡಿ ಪರಾರಿಯಾಗಿದ್ದಾನೆ. ತಕ್ಷಣ ಮನೆ ಮಾಲಿಕರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಮತ್ತು ಅರ್ಶದ್ ರವರಿಗೆ...
ಸತ್ಯಶೋಧಕ ವೇದಿಕೆಯಿಂದ ವಿಶ್ವ ಪರಿಸರ ದಿನಾಚರಣೆ
ಬೆಳ್ತಂಗಡಿ; ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸತ್ಯ ಶೋಧಕ ವೇದಿಕೆಯಿಂದ ಭಾನುವಾರ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಹಚ್ಚಾಡಿ ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳೊಂದಿಗೆ, ಅಂಗನವಾಡಿ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಸತ್ಯ ಶೋಧಕ ವೇದಿಕೆಯ ಅಧ್ಯಕ್ಷರಾದ ಸುಕೇಶ್ ಮಾಲಾಡಿ ರವರು ಮಾತಾಡಿ, ನಮ್ಮ ಮುಂದಿನ ಬದುಕಿಗಾಗಿ ನಾವು ಪರಿಸರವನ್ನು ಸಂರಕ್ಷಣೆ ಮಾಡಲೇ ಬೇಕಾಗಿದೆ. ಹಸಿರೇ ಉಸಿರು, ಉಸಿರಿಗಾಗಿ ಪರಿಸರ ಎನ್ನುವಂತೆ ಸತ್ಯ ಶೋಧಕದ ಆಶಯಗಳಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ ಕೂಡ ಒಂದು. ಪರಿಸರದ ಕಾಳಜಿ ಸಣ್ಣ ಮಕ್ಕಳಿಂದಲೇ...
ದಟ್ಟ ಅರಣ್ಯದಲ್ಲಿ ಸಿಲುಕಿದ ಟ್ರಕ್ಕಿಂಗ್ ತಂಡದ ರಕ್ಷಣೆ; ಬಲ್ಲಾಳ ರಾಯನ ದುರ್ಗ ಟ್ರಕ್ಕಿಂಗ್ ಬಂದು ಕಾಡಿನಲ್ಲಿ ಸಿಲುಕಿದ ತಂಡ
ಬೆಳ್ತಂಗಡಿ: ಚಿತ್ರದುಗದಿಂದ ಬಂದುಬೆಳ್ತಂಗಡಿ ಮೂಲಕ ಬಲ್ಲಾಳರಾಯನ ದುರ್ಗಕ್ಕೆ ಚಾರಣಕ್ಕೆ ತೆರಳಿದ್ದ 10 ತಂಡ ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿದ ಘಡನೆ ಸೋಮವಾರ ನಡೆದಿದ್ದು ತಡರಾತ್ರಿಯ ವೇಳೆ ಹತ್ತು ಮಂದಿಯನ್ನು ಪೊಲೀಸರು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿಸುರಕ್ಷಿತವಾಗಿ ಹೊರತರಲಾಗಿರುವುದಾಗಿ ತಿಳಿದು ಬಂದಿದೆ. ಸೋಮವಾರ ಬೆಳಗ್ಗೆ ಬೆಳ್ತಂಗಡಿ ಗೆ ಬಂದು ಅರಣ್ಯದ ಮೂಲಕ ಟ್ರೆಕ್ಕಿಂಗ್ ಆರಂಭಿಸಿದ ಐವರು ಯುವಕರು ಹಾಗೂ ಐದು ಮಂದಿ ಯುವತಿಯರ ತಂಡ ಚಾರಣಿಗರು ರಾತ್ರಿಯ ವೇಳೆ ದಟ್ಟ ಕಾಡಿನ ನಡುವೆ ಸಿಲುಕಿಕೊಂಡಿದ್ದಾರೆ. ಬಳಿಕ ಚಿಕ್ಕಮಗಳೂರು ಜಿಲ್ಲಾ...















