ಬೆಳ್ತಂಗಡಿ : ನೆರಿಯದಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ಗಣಿ ಇಲಾಖೆ ದಾಳಿ; ಎರಡು ಹಿಟಾಚಿ,ಒಂದು ಟಿಪ್ಪರ್, ಟಾಕ್ಟರ್ ವಶಕ್ಕೆ: ಪ್ರಕರಣ ದಾಖಲು
ಬೆಳ್ತಂಗಡಿ : ಪಟ್ಟಾ ಜಾಗದಲ್ಲಿ ಕೃಷಿ ಉದ್ದೇಶದಿಂದ ಅನುಮತಿ ಪಡೆದು ನದಿ ಪರಂಬೋಕು ಸೇರಿದಂತೆ ಸರಕಾರಿ ಜಾಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆಕ್ಕರೆ ನಿವಾಸಿ ಬೋಬನ್ಎಂಬವರ ಪಟ್ಟಾ ಜಾಗದಲ್ಲಿ ಕೃಷಿ ಉದ್ದೇಶದಿಂದ ಕಲ್ಲು ಗಣಿಗಾರಿಕೆಗೆ ಪರವಾನಿಗೆ ಪಡೆದು ನದಿಯ ಪರಂಬೋಕು ಜಾಗದಲ್ಲಿ ಮುಂಡಾಜೆ ನಿವಾಸಿ ಜಾನ್ ಎಂಬವರ ಮಗ ಪವನ್ ಎಂಬಾತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆ.18 ಕ್ಕೆ...
ಸಿದ್ದರಾಮಯ್ಯ ಕೊಲೆಗಾರ ವಿಧಾನ ಸಭೆಯಲ್ಲಿ ಚರ್ಚೆಯಾದ ಮಹೇಶ್ ಶೆಟ್ಟಿ ಹೇಳಿಕೆಯ ಅಸಲಿಯತ್ತೇನು?
ಬೆಳ್ತಂಗಡಿ; ಮಹೇಶ್ ಶೆಟ್ಟಿ ತಿಮರೋಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24ಕೊಲೆಗಳನ್ನು ಮಾಡಿದ್ದಾರೆ ಎಂದು ಹೇಳುತ್ತಿರುವ ವೀಡಿಯೋ ಒಂದು ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ವಿರೋಧ ಪಕ್ಷದ ಸದಸ್ಯರುಗಳು ಸರಕಾರದ ವಿರುದ್ದ ಮಹೇಶ್ ಶೆಟ್ಟಿ ವಿರಯದ್ದ ಮುಗಿಬಿದ್ದು ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸುವಂತೆ ಒತ್ತಾಯವೂ ಸದನದಲ್ಲಿ ಕೇಳಿ ಬಂದಿತ್ತು. ಇದು ಭಾನುವಾರ ಮಹೇಶ್ ಶೆಟ್ಟಿ ನೀಡಿದ ಹೇಳಿಕೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಕೊನೆಗೂ ಇದೊಂದು ಹಳೆಯ ವೀಡಿಯೋ ಎಂಬುದು ಬಹಿರಂಗಗೊಂಡಿತ್ತು. ಇದರ ಸತ್ಯಾಸತ್ಯತೆಯೇನು ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡುತ್ತಿರುವ...
ಆ18 ಸೋಮವಾರ ದ.ಕ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಆ.18ರಂದು ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಸಮಿತಿಗಳ ವತಿಯಿಂದ ‘ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ’ ಪ್ರತಿಭಟನೆ
ಬೆಳ್ತಂಗಡಿ. ಉಭಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ' , ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ, ಎಂಬ ಘೋಷ ವಾಕ್ಯಗಳೊಂದಿಗೆ ಬ್ಲಾಕ್ ಕಾಂಗ್ರೆಸ್ ಎದುರುಗಡೆ ಸಾಂಕೇತಿಕವಾಗಿ ಪ್ರತಿಭಟನೆ, ಮಾಡಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾತನಾಡಿ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ "ಬೃಹತ್ ಅಕ್ರಮ" ನಡೆದಿದ್ದು. ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಈ ಅಕ್ರಮಗಳನ್ನು ನಡೆಸಿದೆ.ಚುನಾವಣಾ ಆಯೋಗವು ಇನ್ನು ಪ್ರಜಾಪ್ರಭುತ್ವದ ಕಾವಲುಗಾರನಾಗಿ ಉಳಿದಿಲ್ಲ, ಅದು ಕಾರ್ಯಾಂಗದ ಕೈಗೊಂಬೆಯಾಗಿದೆ" ಎಂದರು. . ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ...
ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಕುತ್ಲೂರು (ಕುರಿಯಾಡಿ) ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕುತ್ಲೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿರುವ ಕುತ್ಲೂರು ಮಲೆ (ಕುರಿಯಾಡಿ) ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು. ಕುತ್ಲೂರು ಕುರಿಯಾಡಿ ಅಂಗನವಾಡಿ ಸಮಿತಿ, ಮಲೆಕುಡಿಯ ಸಂಘ ಗ್ರಾಮ ಸಮಿತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾಮದ ಹಿರಿಯರಾದ ಹುಕ್ರ ಮಲೆಕುಡಿಯ ಧ್ವಜಾರೋಹಣ ನೆರವೇರಿಸಿದರು. ಕುರಿಯಾಡಿ ಅಂಗನವಾಡಿ ಸಮಿತಿಯ ಕಾರ್ಯದರ್ಶಿ ಸುಧಾಕರ ಮಲೆಕುಡಿಯ ಅವರು ವರದಿಯನ್ನು ಮಂಡಿಸಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದರು. ಕುತ್ಲೂರು ಮಲೆ ಅಂಗನವಾಡಿ ಸಮಿತಿ ಅಧ್ಯಕ್ಷ ವಿಶ್ವನಾಥ ಪೆರಿಂಚ, ನೇಲ್ಯಪಲ್ಕೆ ಅಂಗನವಾಡಿ ಕೇಂದ್ರದ ಶಶಿಕಲಾ ಬಾರ್ದಜೆ, ಸ್ತ್ರೀಶಕ್ತಿ...
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ
ಬೆಳ್ತಂಗಡಿ, ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ _ಧ್ವಜಾರೋಹಣ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಕೆ ಎಂ ನಾಗೇಶ್ ಕುಮಾರ್ ಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್, ಕಾಂಗ್ರೆಸ್ ಗ್ರಾಮೀಣ ಸೇವಾದಳದ ಅಧ್ಯಕ್ಷರಾದ ಪ್ರದೀಪ್ ಕೆ ಸಿ, ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಝರ್ ನಾವುರು,...
ಬೆಳ್ತಂಗಡಿ; ತಾಲೂಕಿನಲ್ಲಿ ಕಾಡಾನೆ ದಾಳಿ ಸಂತ್ರಸ್ತರಿಗೆ ಶಾಸಕ ಹರೀಶ್ ಪೂಂಜ ಅವರಿಂದ ಪರಿಹಾರ ವಿತರಣೆ
ಬೆಳ್ತಂಗಡಿ; ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಅವರ ಕುಟುಂಬಕ್ಕೆ ಸೇರಿದಂತರ ಇತರ ಸಂತ್ರಸ್ತರಿಗೆ ಸರಕಾರದ ಸಹಾಯಧನವನ್ನು ಶಾಸಕ ಹರೀಶ್ ಪೂಂಜ ಅವರು ವಿತರಿಸಿದರು.ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಅವರ ಪತ್ನಿ ಸುಜಾತರವರಿಗೆ ರೂ.20 ಲಕ್ಷ ಹಾಗೂ ಕಾಡನೆ ದಾಳಿಯಿಂದ ಬೆಳೆ ನಾಶಗೊಂಡ ಫಲಾನುಭವಿಗಳಾದ ಮಲವಂತಿಗೆ ಗ್ರಾಮದ ವಸಂತಿ ಇವರಿಗೆ ರೂ.81 ಸಾವಿರ ಚಾರ್ಮಾಡಿ ಗ್ರಾಮದ ಕುಂಞ ಮಲೆಕುಡಿಯ ರೂ.1.16 ಲಕ್ಷ ಮತ್ತು ಆನೆ ದಾಳಿಯಿಂದ ರಿಕ್ಷಾ ಹಾನಿಗೊಂಡ ಫಲಾನುಭವಿ ಧರ್ಮಸ್ಥಳ ಗ್ರಾಮದ ಬೋಳಿಯರು ನಿವಾಸಿ ದಿನೇಶ್ ರವರಿಗೆ ರೂ.20...
ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹಣ ಕಾರ್ಯಕ್ರಮ.
ಬೆಳ್ತಂಗಡಿ : ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ಸಂಜಯ್ ನಗರ ಜಂಕ್ಷನ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹಣವನ್ನು ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಖಿಳ್ರ್ ಜುಮ್ಮಾ ಮಸೀದಿ ಉಪಾಧ್ಯಕ್ಷರಾದ ಬಿ.ಶೇಖುಂಞ್ಞ, ಮೆಹಬೂಬ್ ಸಂಜಯ ನಗರ ಆಗಮಿಸಿದ್ದರು. 2025 ನೇ ಸಾಲಿನ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ಪ್ರಧಾನ...
ಖಿಲರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಬೆಳ್ತಂಗಡಿ : ಖಿಳ್ರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಯವರು ನೆರವೇರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಸೀದಿ ಖತೀಬರಾದ ಹನೀಫ್ ಫೈಝಿಯವರು ದುವಾ ನೆರವೇರಿಸಿದರು. ಅತಿಥಿಗಳಾಗಿ ಉಪಾಧ್ಯಕ್ಷರಾದ ಬಿ.ಶೇಖುಂಞ್ಞ, ಪ್ರಧಾನ ಕಾರ್ಯದರ್ಶಿ ರಝಾಕ್ ಕೋಡಿಸಭೆ, ಕಾರ್ಯದರ್ಶಿಗಳಾದ ಹನೀಫ್ ವರ್ಷಾ, ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿ ಫೈಝಲ್ ಐ.ಜೆ, ಜಮಾತ್ ಬಾಂಧವರು ಹಾಗೂ ಮದರಸ ಮಕ್ಕಳು ಉಪಸ್ಥಿತರಿದ್ದರು. ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಹಮಾನ್ ಮುಸ್ಲಿಯಾರ್...
ಬೆಳ್ತಂಗಡಿ ನ್ಯಾಯಾಲಯದ ಅವರಣದಲ್ಲಿ ಸ್ವಾತಂತ್ರೋತ್ಸವ ಆಚರಣೆ
ಬೆಳ್ತಂಗಡಿ; ಇಲ್ಲಿನ ನ್ಯಾಯಾಲಯದ ಅವರಣದಲ್ಲಿ ಸ್ವಾತಂತ್ರೋತ್ಸವ ಆಚರಣೆ ನಡೆಯಿತು. ಧ್ವಜಾರೋಹಣವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಮನು ಬಿ ಕೆ ನೆರವೇರಿಸಿದರು.ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂದೇಶ್ ಕೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀ ವಿಜಯೇಂದ್ರ ಟಿ ಹೆಚ್, ಕಿರಿಯ ವಕೀಲರ ಸಮಿತಿಯ ಅಧ್ಯಕ್ಷರಾದ ಅಲೋಶಿಯಸ್ ಎಸ್ ಲೋಬೋ, ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ, ಕೋಶಾಧಿಕಾರಿ ಪ್ರಶಾಂತ್ ಎಂ., ಚಿದಾನಂದ ಪಿ, ಅಪರ ಸರಕಾರಿ ವಕೀಲರಾದ ಮನೋಹರ್ ಕುಮಾರ್ ಎ, ಹಿರಿಯ ವಕೀಲರಾದ ಹರಿಶ್ಚಂದ್ರ ಬಲ್ಲಾಳ್, ಶೈಲೇಶ್ ತೋಸರ್, ಸತೀಶ್...















