ಬೆಳ್ತಂಗಡಿ ಬೆಳಗ್ಗೆ ಬಂದ್ ಆದ ಇಂದಿರಾ ಕ್ಯಾಂಟೀನ್ ಮಧ್ಯಾಹ್ನ ಓಪನ್ ರಕ್ಷಿತ್ ಶಿವರಾಂ ಮಧ್ಯಪ್ರವೇಶದಿಂದ ಸಮಸ್ಯೆಗೆ ಪರಿಹಾರ
ಬೆಳ್ತಂಗಡಿ : ಮೂರು ತಿಂಗಳ ಹಿಂದೆ ರಾಜ್ಯ ಸರಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರನ ಸಮಸ್ಯೆಯಿಂದ ಡಿ.17 ರಂದು ಬಂದ್ ಮಾಡಲಾಗಿತ್ತು. ಇದೀಗ ಬೆಳ್ತಂಗಡಿ ಸಮಾಚಾರ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಮಧ್ಯಾಹ್ನ ವೇಳೆಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರವಾಗಿ ಮತ್ತೆ ಓಪನ್ ಮಾಡುವಂತಾಗಿದೆ. ಗುತ್ತಿಗೆದಾರ ಸಮರ್ಪಕವಾಗಿ ದಾಖಲೆಗಳನ್ನು ಸರಕಾರಕ್ಕೆ ನೀಡದೆ ಆತನಿಗೆ ಹಣ ಸಂದಾಯವಾಗಿರಲ್ಲಿಲ್ಲ ಈ ಕಾರಣದಿಂದ ಗುತ್ತಿಗೆದಾರ ಡಿ.17 ರಂದು ಬಂದ್ ಮಾಡಿ ಹೋಗಿದ್ದ ಬಗ್ಗೆ ಬೆಳ್ತಂಗಡಿ ಸಮಾಚಾರ ವೆಬ್ ಸೈಟ್...
ಡಿ 20ಶಾಸಕರ ನೇತೃತ್ವದಲ್ಲಿ ಜನಸ್ಪಂದನ ಸಭೆ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಡಿ 20 ಶನಿವಾರ ದಂದುಜನರ ಬಳಿಗೆ-ತಾಲೂಕು ಆಡಳಿತಪಂಚಾಯತ್ ಮಟ್ಟದಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ.ಪೂರ್ವಾಹ್ನ - 9.30 - ಗ್ರಾಮ ಪಂಚಾಯತ್ ಮಚ್ಚಿನ.ಪೂರ್ವಾಹ್ನ -11.00 - ಗ್ರಾಮ ಪಂಚಾಯತ್ ಮಾಲಾಡಿಅಪರಾಹ್ನ - 2.00 - ಸಿಎ ಬ್ಯಾಂಕ್ ಹಾಲ್ ಕಳಿಯಸಂಜೆ - 4.00 - ಗ್ರಾಮ ಪಂಚಾಯತ್ ಬಳೆಂಜಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ
ಮಂಗಳೂರು ಕಾರಿನಲ್ಲಿ ಮಾದಕ ವಸ್ತು MDMA ಸಾಗಾಟಕ್ಕೆ ಯತ್ನ ಆರೋಪಿ ಬಂಧನ
ಮಂಗಳೂರು : ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು MDMA ಸಾಗಿಸುತ್ತಿದ್ದ ರೌಡಿಶೀಟರ್ ಒಬ್ಬನನ್ನು ಮೂಡಬಿದಿರೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ ಗೆ ಶಿರ್ತಾಡಿ ಕಡೆಯಿಂದ ಬಂಟ್ವಾಳ ಕಡೆಗೆ ಅಕ್ರಮವಾಗಿ ಮಾದಕ ವಸ್ತು ಡ್ರಗ್ಸ್ ಸಾಗಾಟ ಮಾಡುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿ.16 ರಂದು ಸಂಜೆ 5:30 ಕ್ಕೆ ಮೂಡಬಿದಿರೆ ಪ್ರಾಂತ್ಯ ಗ್ರಾಮದ ಕೊಡಂಗಲ್ಲು ರಸ್ತೆಯಲ್ಲಿ KA-09-MJ-7034 ನಂಬರಿನ ಹುಂಡೈಯಿ ಐ20 ಕಾರನ್ನು ಪೊಲೀಸರ ತಂಡ...
ಮೂರೇ ತಿಂಗಳಿನಲ್ಲಿ ಬಂದ್ ಆದ ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್
ಬೆಳ್ತಂಗಡಿ; ಬಹುದಿನಗಳ ಬೇಡಿಕೆಯ ಬಳಿಕ ಬೆಳ್ತಂಗಡಿಯಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಮೂರೇ ತಿಂಗಳಿನಲ್ಲಿ ಬಂದ್ ಆಗಿದ್ದು ಜನರಲ್ಲಿ ನಿರಾಸೆ ಮೂಡಿಸಿದೆ.ಅಕ್ಟೋಬರ್ ತಿಂಗಳಿನಲ್ಲಿ ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್ ಅನ್ನು ಉಸ್ತುವಾರಿ ಸಚಿವರು ಉದ್ಘಾಟಿಸಿದ್ದರುಉದ್ಘಾಟನಾ ಭಾಷಣದಲ್ಲಿಯೇ ಸಚಿವರು ಟೆಂಡರು ಪಡೆದವರು ಸಮರ್ಪಕವಾಗಿ ಮಾಡಿದ್ದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು ಇದೀಗ ಮೂರೇ ತಿಂಗಳಲ್ಲಿ ಬಹು ನಿರೀಕ್ಷೆಯ ಇಂದಿರಾ ಕ್ಯಾಂಟೀನ್ ಬಾಗಿಲು ಹಾಕಿದೆ.ಕಳೆದ ಎರಡು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡದ ಕಾರಣ ಕಾರ್ಮಿಕರು ಕೆಲಸ ಮಾಡದೆ ಇದ್ದು ಇಂದಿರಾ ಕ್ಯಾಂಟೀನ್ ಮುಚ್ಚಲಾಗಿದೆ ಎಂದು ತಿಳಿದು ಬಂದಿದೆಗುತ್ತಿಗೆ ದಾರರು ಮತ್ತು...
ಬೆಳ್ತಂಗಡಿ : ಪೃಥ್ವಿ ಆಭರಣ ಮಳಿಗೆಯ ಸಿಬ್ಬಂದಿಯಿಂದ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ : ಸಂತೆಕಟ್ಟೆ ಜಯಶ್ರೀ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ 'ಪೃಥ್ವಿ ಆಭರಣ' ಮಳಿಗೆಯ ವ್ಯವಸ್ಥಾಪಕನಾಗಿರುವ ಅಶೋಕ್ ಬಂಗೇರ ಹಾಗೂ ಇತರರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಲ್ಲೆಗೆ ಒಳಗಾದ ವಿಧ್ಯಾರ್ಥಿಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಪೊಲೀಸರಿಗೆ ದೂರು ನೀಡಿದ್ದು ಬೆಳ್ತಂಗಡಿ ಠಾಣೆಯಲ್ಲಿ ಡಿ.16 ರಂದು ಬಿಎನ್ ಎಸ್ u/s 126(2),115(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಮೂವರು ವಿದ್ಯಾರ್ಥಿಗಳು ಡಿ.15 ರಂದು ಸೋಮವಾರ ಶಾಲೆಗೆ ರಜೆ ಹಾಕಿ ಬೆಳ್ತಂಗಡಿ ಪೇಟೆಯಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆಂದು...
ಡಿ.22 ನವೀಕರಣ ಗೊಂಡ ಉಜಿರೆಯ ಸಂತ ಅಂತೋನಿ ಚರ್ಚ್ ನ ಆಶೀರ್ವಚನ
ಪವಾಡ ಪುರುಷರೆಂದು ಜಗತ್ ಪ್ರಸಿದ್ಧರಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ ಉಜಿರೆ ಧರ್ಮಕೇಂದ್ರವು ದುರಸ್ತಿ ಮತ್ತು ನವೀಕರಣಗೊಂಡು ಡಿಸೆಂಬರ್ 22ರಂದು ಆಶೀರ್ವಚನಗೊಳ್ಳಲು ಸಿದ್ಧವಾಗಿದೆ ಎಂದು ಚರ್ಚಿನ ಧರ್ಮಗುರುಗಳಾದ ಫಾ ಆಬೆಲ್ ಲೋಬೋ ಅವರು ತಿಳಿಸಿದ್ದಾರೆ.ಉಜಿರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.1969ರ ತನಕ ಉಜಿರೆ ಕ್ರೈಸ್ತ ವಿಶ್ವಾಸಿಗಳು ಬೆಳ್ತಂಗಡಿಯ ಹೋಲಿ ರಿಡೀಮರ್ ಧರ್ಮಕೇಂದ್ರಕ್ಕೆ ತೆರಳಿ ತಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದರುಅಂದಿನ ದಿನಗಳಲ್ಲಿ ಬೆಳ್ತಂಗಡಿಯ ಧರ್ಮಗುರುಗಳಾಗಿರುವ ವಂದನೀಯ ಇ.ಪಿ.ಡಾಯಸ್ ಸ್ವಾಮಿಯವರು ಈ ಜನರ ಕಷ್ಟಗಳನ್ನು ಮನಗಂಡು ಉಜಿರೆಯಲ್ಲೇ ಒಂದು ದೇವಾಲಯವನ್ನು ನಿರ್ಮಿಸಲು ಯೋಚಿಸಿದರು...
ಬೆಳ್ತಂಗಡಿಯಲ್ಲಿ “ಕೊಂದವರು ಯಾರು” ಬೃಹತ್ ಮಹಿಳಾ ಆಂದೋಲನ
ಬೆಳ್ತಂಗಡಿ: "ಕೊಂದವರು ಯಾರು" ಪ್ರಶ್ನೆಯೊಂದಿಗೆ ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಬೆಳ್ತಂಗಡಿಯಲ್ಲಿ ಆರಂಭಗೊಂಡಿತ್ತು.ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮುಖಂಡೆ ಮಲ್ಲಿಗೆ ಮಾತನಾಡಿ ನ್ಯಾಯ ಕೇಳುವುದು ತಪ್ಪೇ, ಕೊಲೆ ಅತ್ಯಾಚಾರ ನಡೆಸಿದೆ ಆದರೆ ಆರೋಪಿಗಳು ಸಿಗುತ್ತಿಲ್ಲ ಅಂದರೆ ಕೊಂದವರು ಯಾರು ಎಂದು ಪ್ರಶ್ನಿಸಲೇ ಬೇಕಾದ ಅನಿವಾರ್ಯತೆಯಿದೆ ನ್ಯಾಯ ಸಿಗುವ ವರೆಗೂ ಮಹಿಳಾ ಹೋರಾ ನಿರಂತರವಾಗಿ ಮುಂದುವರಿಯುತ್ತದೆ ಎಂದರು. ಹಿರಿಯ ಮಹಿಳಾ ಪರ ಹೋರಾಟಗಾರ್ತಿ ಜ್ಯೋತಿ ಮಾತನಾಡಿ ವೇದವಲ್ಲಿಯಿಂದ ಇಲ್ಲಿಯ ವರೆಗೆ ಮಹಿಳೆಯರ ಕೊಲೆ ಅತ್ಯಾಚಾರ ದೌರ್ಜನ್ಯ ನಡೆದಿದೆ...
ಶಿಶಿಲದಲ್ಲಿ ಬೀಡು ಬಿಟ್ಟಿರುವ ಕಾಡನೆಗಳು ಜನರಲ್ಲಿ ಆತಂಕ
ಬೆಳ್ತಂಗಡಿ; ಶಿಶಿಲ ಗ್ರಾಮದಲ್ಲಿ ಕಳೆದ ಕೆಲದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ನಿರಂತರವಾಗಿ ಕೃಷಿ ಹಾನಿ ಮಾಡುತ್ತಿದೆ.ಶಿಶಿಲದ ಮಲೆಕುಡಿಯರ ಕಾಲೊನಿಯಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ. ಎರಡು ದಿನಗಳಿಂದ ಕಾಡಾನೆ ಇಲ್ಲಿಯೇ ಇದ್ದು ಜನರಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ.ಎರಡು ಮೂರು ಆನೆಗಳು ಇಲ್ಲಿರುವ ಅನುಮಾನ ವ್ಯಕ್ತವಾಗಿದ್ದು ಅರಣ್ಯ ಇಲಾಖೆ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಲು ಕ್ರಮ ಕೂಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ 9 ಶಾಲೆಗಳಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 1. ಕೋಟಿ 71 ಲಕ್ಷ ಅನುದಾನ ಮಂಜೂರು.
ಬೆಳ್ತಂಗಡಿ. ತಾಲೂಕಿನ 9 ಶಾಲೆಗಳಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸರ್ಕಾರ 1. ಕೋಟಿ 71 ಲಕ್ಷ ಅನುದಾನ ಬಿಡುಗಡೆ ಮಾಡಿದೆ.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಕೋಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಜಕೆ, ಸರಕಾರಿ ಪ್ರೌಢ ಶಾಲೆ ನಾವೂರುಸರಕಾರಿ ಪ್ರೌಢ ಶಾಲೆ ಕಲ್ಮಂಜ, ಸರಕಾರಿ ಪ್ರೌಢ ಶಾಲೆ ಮಿತ್ತಬಾಗಿಲು, ಸರಕಾರಿ ಪ್ರೌಢ ಶಾಲೆ ಬಳೆಂಜ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲೇದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆಕರ್ನಾಟಕ ಪಬ್ಲಿಕ್ ಸ್ಕೂಲ್ ಪೂಂಜಾಲಕಟ್ಟೆ- ಶಾಲೆಗಳಲ್ಲಿ,...
ಕಳೆಂಜ 309 ಸರ್ವೆ ನಂಬರ್ ಸರ್ವೆ; ಶಿಶಿಲದಲ್ಲಿ ಪಟ್ಟಾ ಜಾಗದಲ್ಲಿ ಸರ್ವೆಗೆ ಮುಂದಾದ ಅರಣ್ಯ ಇಲಾಖೆ; ಜನರ ಆಕ್ರೋಶ
ಬೆಳ್ತಂಗಡಿ: ಕಳೆಂಜ ಗ್ರಾಮದ ಸರ್ವೇ ನಂಬರ್ 309ರ ಸರ್ವೇ ನಂಬರ್ ನಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯ ಶಿಶಿಲ ಭಾಗದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದೆ ಈ ವೇಳೆ ಶಿಶಿಲ ಗ್ರಾಮದಲ್ಲಿ ಪಟ್ಟಾ ಜಾಗದಲ್ಲಿ ಅರಣ್ಯ ಇಲಾಖೆ ಸರ್ವೆ ನಡೆಸಲು ಮುಂದಾಗಿದ್ದು ಇದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಈ ಹಿನ್ನಲೆಯಲ್ಲಿ ಸ್ಥಳೀಯರು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.ಕಳೆಂಜದ 309 ಸರ್ವೆ ಸಂದರ್ಭದಲ್ಲಿಸಂಧರ್ಭದಲ್ಲಿ ಅರಣ್ಯ ಇಲಾಖೆಯ ಸರ್ವೇ ಅಧಿಕಾರಿಗಳು ಅಲ್ಲಿನ ಪಟ್ಟ ಜಮೀನುಗಳನ್ನು ತಮ್ಮದೆಂದು ಸರ್ವೇ ನಡೆಸಿದ್ದಾರೆ. ಇದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಇದರಿಂದ...















