ಬೆಳ್ತಂಗಡಿ; ಎಸ್.ಐ.ಟಿ ಠಾಣೆಗೆ ಹಾಜರಾದ ಜಯಂತ್ ಟಿ

0

ಬೆಳ್ತಂಗಡಿ; ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಜಯಂತ್ ಟಿ ಅವರು ಗುರುವಾರ ಅಪರಾಹ್ನ 3.20 ರ ಸುಮಾರಿಗೆ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.

ಬೆಳ್ತಂಗಡಿ : ಯೂಟ್ಯೂಬರ್ ಅಭಿಷೇಕ್ ಗೆ ರಾತ್ರಿ ಪೂರ್ತಿ ವಿಚಾರಣೆ; ಇಂದು ಮುಂದುವರಿದ ಎಸ್.ಐ.ಟಿ ವಿಚಾರಣೆ

0

ಬೆಳ್ತಂಗಡಿ : ಬುರುಡೆ ಪ್ರಕರಣ ಮತ್ತು ಸುಜಾತ ಭಟ್ ಪ್ರಕರಣಗಳ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್ ಎಸ್.ಐ.ಟಿ ಕಚೇರಿಯಲ್ಲಿ ರಾತ್ರಿ ಪೂರ್ತಿ ವಿಚಾರಣೆ ಎದುರಿಸಿದ್ದಾನೆ. ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಸೆ.3 ರಂದು ಸಂಜೆ ವಿಚಾರಣೆಗೆ ದಾಖಲೆಗಳ ಜೊತೆ ಹಾಜರಾಗಿದ್ದ ಯೂಟ್ಯೂಬರ್ ಅಭಿಷೇಕ್ ಗೆ ಸೆ.4 ರ ಬೆಳಗ್ಗಿನ ಜಾವದವರೆಗೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಅಭಿಷೇಕ್ ನ ವಿಚಾರಣೆ ಇಂದೂ ಮುಂದುರಿಯಲಿರುವುದಾಗಿ ತಿಳಿದು ಬಂದಿದೆ.ಬುರುಡೆ ವಿಚಾರವಾಗಿ ಈತ ವಿಚಾರಣೆ ಎದುರಿಸುತ್ತಿರುವುದಾಗಿ ತಿಳಿದು ಬಂದಿದೆ.

ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ (ಸ) ಸೀರತ್ ಅಭಿಯಾನದ ಪ್ರಯುಕ್ತ ಸೆ 7ರಂದು ಸಾರ್ವಜನಿಕ ಸಮಾವೇಶ

0

ಬೆಳ್ತಂಗಡಿ : 'ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ (ಸ) ಸೀರತ್ ಅಭಿಯಾನದ ಪ್ರಯುಕ್ತ ಸಾರ್ವಜನಿಕ ಸಮಾವೇಶ ' ಸೆ. 7 ರಂದು ಸಂಜೆ ಗಂಟೆ 4 ರಿಂದ 6.30 ರವರೆಗೆ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಲಿದೆ' ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಉತ್ತರ ಇದರ ಅಧ್ಯಕ್ಷ ಸಿ.ಎ. ಮುಹಮ್ಮದ್ ಇಸಾಕ್ ಹೇಳಿದರು. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ' ಮಂಗಳೂರು ಬರಕ ಇಂಟರ್ ನ್ಯಾಶನಲ್ ಸ್ಕೂಲ್ & ಕಾಲೇಜಿನ ಪ್ರಾಂಶುಪಾಲ ಜನಾಬ್ ಶರ್ಫುದ್ದೀನ್ ಬಿ.ಎಸ್. ಅಧ್ಯಕ್ಷತೆಯಲ್ಲಿಧಾರ್ಮಿಕ...

ಚಿನ್ನಯ್ಯ ಪರ ನ್ಯಾಯವಾದಿ ಕೆ.ವಿ ಧನಂಜಯ್ ಹಾಗೂ ಇತರ ನ್ಯಾಯವಾದಿಗಳ ವಿರುದ್ದ ಎಸ್.ಐ.ಟಿ ಗೆ ದೂರು

0

ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆ.ವಿ ಧನಂಜಯ್ ಹಾಗೂ ಇತರ ನ್ಯಾಯವಾದಿಗಳ ವಿರುದ್ದ ಎಸ್.ಐ.ಟಿ ಕಚೇರಿಗೆ ಬುಧವಾರ ದೂರು ನೋಡಲಾಗಿದೆ.ಬೆಳ್ತಂಗಡಿ ಎಸ್.ಐ ಎಸ್.ಐ.ಟಿ ಕಚೇರಿಗೆ ಕಲ್ಮಂಜ ಗ್ರಾಮದ‌ ನಿವಾಸಿ  ರಾಜೇಂದ್ರ ಅಜ್ರಿ ದೂರು ನೀಡಿದ್ದು‌ ದೂರುದಾರ ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆವಿ ಧನಂಜಯ್ ಅವರಿಗೆ ಎಲ್ಲ ದಾಖಲೆಗಳನ್ನು ನೀಡಿರುವುದಾಗಿ ಹೇಳಿಕೆ ನೀಡಿದ್ದಾನೆ,ಈ ಬಗ್ಗೆ ನ್ಯಾಯವಾದಿಗಳಾದ ಓಜಸ್ವಿ ಗೌಡ ಹಾಗೂ ಸಚಿನ್ ದೇಶಪಾಂಡೆ ಅವರು ನೀಡಿರುವ ಪತ್ರಿಕಾಹೇಳಿಕೆಗಳಲ್ಲಿಯೂ ಈ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ. ಇವರು...

ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಮತ್ತೆ ಎಸ್.ಐ.ಟಿ ಕಸ್ಟಡಿಗೆ

0

ಬೆಳ್ತಂಗಡಿ : ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ 12 ದಿನದ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ಸೆ. 3 ರಂದು ಸಂಜೆ 3 ಗಂಟೆಗೆ ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ವಿಜಯೇಂದ್ರ‌.ಹೆಚ್.ಟಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯ ಎಸ್.ಐ.ಟಿಗೆ ಮತ್ತೆ 4 ದಿನ (ಸೆ.6 ವರೆಗೆ) ಕಸ್ಟಡಿಗೆ ನೀಡಿ ಆದೇಶ ಮಾಡಿದೆ.

ಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಬಂಧನ ಪ್ರಕರಣ; ಚಿನ್ಯಯ್ಯ ಪರ  ಮಂಗಳೂರಿನಿಂದ ವಕೀಲರ ಆಗಮನ

0

ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಬಂಧನ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯ ಪರ ವಕಾಲತ್ತು ನಡೆಸಲು ಮಂಗಳೂರಿನಿಂದ ನಾಲ್ಕು ಜನ ವಕೀಲರು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ್ದಾರೆ. ಬೆಳ್ತಂಗಡಿ ಬುರುಡೆ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನನ್ನು ಆ.23 ರಂದು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದರು. ಈ ವೇಳೆ ಆರೋಪಿ ಚಿನ್ನಯ್ಯ ನ್ಯಾಯಾಧೀಶರಲ್ಲಿ ನನಗೆ ಉಚಿತ ವಕೀಲರು ಬೇಕೆಂದು ಮನವಿ ಮಾಡಿದ್ದ ಹಿನ್ನಲೆಯಲ್ಲಿ ಸೆ.3 ರಂದು ಕಸ್ಟಡಿ ಅಂತ್ಯವಾಗುವ ಹಿನ್ನಲೆಯಲ್ಲಿ ಮಂಗಳೂರು ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಿಶೋರ್ ನೇತೃತ್ವದಲ್ಲಿ ನಾಲ್ಕು ಜನ ವಕೀಲ...

ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಮುಕ್ತಾಯ ಇಂದು ನ್ಯಾಯಾಲಯಕ್ಕೆ ಹಾಜರು

0

ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌.ಐ.ಟಿ ತನಿಖೆ ಮುಂದುವರಿದಿದ್ದು ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಬುಧವಾರ ಮುಕ್ತಾಯವಾಗುತ್ತಿದ್ದು ಬುಧವಾರ ಆತನನ್ನು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಎಸ್.ಐ.ಟಿ‌ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.ಸಾಕ್ಷಿ ದೂರುದಾರನಾಗಿ ಬಂದಿದ್ದ ಚಿನ್ನಯ್ಯ ನನ್ನು ಆ. 23 ರಂದು ಎಸ್.ಐ.ಟಿ ತಂಡ ಆತ ತಂದಿದ್ದ ಬುರುಡೆಯ ವಿಚಾರದಲ್ಲಿ ಬಂಧಿಸಿದ್ದರು. ಅದೇದಿನ ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಸೆ.3 ರ ವರೆಗೆ ಆತನನ್ನು ಎಸ್.ಐ.ಟಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದರು. ಆರೋಪಿಯನ್ನು ವಶಕ್ಕೆ ಪಡೆದ ಎಸ್ಐ.ಟಿ ತಂಡ ಮಹೇಶ್...

ಧರ್ಮಸ್ಥಳ ಪ್ರಕರಣಕ್ಕೆ ಈಡಿ ಪ್ರವೇಶ: ವಿದೇಶಿ ದೇಣಿಗೆಯ ಆಯಾಮದಲ್ಲಿ ತನಿಖೆ

0

ಬೆಂಗಳೂರು: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮುವಾದಿ ಪಿತೂರಿಗಳನ್ನು ನಡೆಸಲು ಸಂಶಯಾಸ್ಪದ ವಿದೇಶಿ ದೇಣಿಗೆಯನ್ನು ಬಳಸಲಾಗಿದೆ ಎಂಬ ಆರೋಪಗಳ ಕುರಿತು ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದೆ ಎಂದು ಮಂಗಳವಾರ ಅಧಿಕೃತ ಮೂಲಗಳು ತಿಳಿಸಿವೆ. ಧರ್ಮಸ್ಥಳದ ಸುತ್ತ ವಿವಾದ ಹಬ್ಬಿಸಲು ಸಂಶಯಾಸ್ಪದ ದೇಣಿಗೆಯನ್ನು ಬಳಸಿವೆ ಎಂಬ ಆರೋಪಕ್ಕೆ ಗುರಿಯಾಗಿರುವ ಕೆಲವು ಸರಕಾರೇತರ ಸಂಸ್ಥೆಗಳು ಸೇರಿದಂತೆ ಎಲ್ಲ ಸಂಸ್ಥೆಗಳು, ವ್ಯಕ್ತಿಗಳಿಗೆ ಸಂಬಂಧಿಸಿದ ವಾಸ್ತವಾಂಶಗಳು ಹಾಗೂ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಸಂಗ್ರಹಿಸುತ್ತಿದೆ ಎಂದು ಈ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿದೇಶಿ...

ಈಶ್ಚರಪ್ಪ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಧರ್ಮ ರಕ್ಷಾ ಜಾಥಾ

0

ಬೆಳ್ತಂಗಡಿ:ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದಲ್ಲಿ ಧರ್ಮ ರಕ್ಷಾ ಜಾಥಾ ನಡೆಯಿತು. ಶಿವಮೊಗ್ಗದಿಂದ ಆರಂಭವಾದ ಜಾಥ ಧರ್ಮಸ್ಥಳಕ್ಕೆ ಮಂಗಳವಾರ ಸಂಜೆ ತಲುಪಿತು. ಜಾಥದಲ್ಲಿ 200ಕ್ಕೂ ಹೆಚ್ಚು ವಾಹನದಲ್ಲಿ 1500ಕ್ಕೂ ಹೆಚ್ಚು ಧರ್ಮ ಭಕ್ತರು ಆಗಮಿಸಿದರು. ಈ ವೇಳೆ ಈಶ್ವರಪ್ಪ ಅವರಿಗೆ ದೇವಸ್ಥಾನದ ವತಿಯಿಂದ ಶಾಲು ಹೊದಿಸಿ ಗೌರವ ಸಲ್ಲಿಕೆ ಮಾಡಲಾಯ್ತು. ಇನ್ನು ಜಾಥದ ಜೊತೆಗೆ ತುಂಗಾ-ಗಂಗಾ-ನೇತ್ರಾವತಿಯ ಪವಿತ್ರ ನದಿಯಿಂದ ನೀರನ್ನು ತರಲಾಗಿದ್ದು,ಧರ್ಮಸ್ಥಳದಲ್ಲಿ ಮೂರು ನದಿಯ ನೀರು ಪ್ರೋಕ್ಷಣೆ ಮಾಡಲಾಯಿತು.ಜಾಥ ತಲುಪಿದ ಬಳಿಕ ಮಾತನಾಡಿದ ಕೆ.ಎಸ್ ಈಶ್ವರಪ್ಪ , ನಾವು...

ಗಿರೀಶ್ ಮಟ್ಟಣ್ಣನವರ್ ವಿರುದ್ದ ಮತ್ತೊಂದು ಪ್ರಕರಣ ದಾಖಲು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಕಿದ ಆರೋಪ

0

ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಅಶ್ಲೀಲವಾಗಿ ಮಾತನಾಡಿ ವಿಡಿಯೋವನ್ನು ಹರಿಬಿಟ್ಟ ಬಗ್ಗೆ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಾಲಗಿದೆ.ಧರ್ಮಸ್ಥಳ ನಿವಾಸಿ ರಾಹೇಂದ್ರ ದಾಸ್ ಡಿ ಅವರು ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡುವಂತೆವ ಅಶ್ಲೀಲವಾಗಿ ಮಾತನಾಡುವ ವಿಡಿಯೋವನ್ನು ಜನತಾ ನ್ಯೂಸ್ ನಲ್ಲಿ ಹರಿಬಿಟ್ಟಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಅದರಂತೆ ಗಿರೀಶ್ ಮಟ್ಟಣ್ಣನವರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ 296ಬಿ.ಎನ್.ಎಸ್. ನಂತೆ ಪ್ರಕರಣ ದಾಖಲಿಸಿದ್ದಾರೆ.