ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಸೌಜನ್ಯ ತಾಯಿ ಕುಸುಮಾವತಿ ಅವರಿಂದ ದೂರು; ಪ್ರಕರಣ ದಾಖಲು
ಬೆಳ್ತಂಗಡಿ: ತನ್ನ ವಿರುದ್ದ ಹಾಗೂ ಸೌಜನ್ಯ ಪರ ಹೋರಟಗಾರರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾದ ಬರಹಗಳನ್ನು ಮಾನಹಾನಿಕರವಾದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ಬಗ್ಗೆ ಸೌಜನ್ಯ ತಾಯಿ ಕುಸುಮಾವತಿ ಅವರು ಸಾಮಾಜಿಕ ಜಾಲತಾಣದ 13 ಖಾತೆಗಳ ವಿರುದ್ದ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕುಸುಮಾವತಿ ಅವರು ಸಾಮಾಜಿಕ ಜಾಲತಾಣದಲ್ಲಿನ 13 ಪೇಜ್ ಗಳ ವಿರುದ್ದ ದೂರು ನೀಡಿದ್ದಾರೆ. ಅದರಂತೆ ಶುಭಾ ರೈ , ಯಶವಂತ ಗಟ್ಟಿ ಕೊಕ್ಕಡ, ದೀಪಕ್ ಶೆಟ್ಟಿ ಬೆಂಗಳೂರು, ಸರಸ್ವತಿ ಅಮಿತ್ ಬಜಪೆ, ಅಮಿತ್...
ಬೆಳ್ತಂಗಡಿ : ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರಿಂದ ದಾಳಿದನಗಳ ತಲೆ ಸಹಿತ ಪರಿಕರಗಳು ವಶಕ್ಕೆ; ಆರೋಪಿಗಳು ಪರಾರಿ
ಬೆಳ್ತಂಗಡಿ : ಅಕ್ರಮವಾಗಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗುರುವಾಯನಕೆರೆ ಪಿಲಿಚಂಡಿಕಲ್ಲಿನ ದಾಳಿ ಅಕ್ರಮ ಕಸಾಯಿಖಾನೆಗ ದಾಳಿ ಮಾಡಿ ಸ್ಥಳದಿಂದ ಮಾಂಸಕ್ಕಾಗಿ ಕಡಿದ ದನಗಳ ತಲೆಗಳು ಹಾಗು ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಮಹಮ್ಮದ್ ರಫೀಕ್ ಯಾನೆ ಅಪ್ಪಿ ಎಂಬಾತನ ಮನೆಯಲ್ಲಿ ಅಕ್ರಮವಾಗಿ ದನಗಳನ್ನು ವಧೆ ಮಾಡುತ್ತಿರುವ ಮಾಹಿತಿ ಮೇರೆಗೆ ಸೆ.4 ರಂದು...
ಸಿಯೋನ್ ಆಶ್ರಮ: ಓಣಂ ಹಬ್ಬ ಆಚರಣೆ
ಬೆಳ್ತಂಗಡಿ; ಸಿಯೋನ್ ಆಶ್ರಮ ಗಂಡಿಬಾಗಿಲು ಇಲ್ಲಿ ದಿನಾಂಕ:05.09.2025ರಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾಂಪ್ರದಾಯಿಕವಾಗಿ ಪೂಕಳಂ ಹಾಕಲಾಯಿತು. ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಮೇರಿ ಯು.ಪಿ.ಯವರು ಪುಣಾಣಿಗಳೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮ್ಯಾನೇಜಿಂಗ್ ಟ್ರಸ್ಟೀಯವರಾದ ಡಾ.ಯು.ಸಿ. ಪೌಲೋಸ್ ರವರು ಓಣಂ ಹಬ್ಬದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಈ ಹಬ್ಬಕ್ಕೆ ಸಿಯೋನ್ ಸಂಸ್ಥೆಯ ಆಡಳಿತ ವರ್ಗದವರು, ಕುಟುಂಬಸ್ಥರು, ಹಿತೈಷಿಗಳು, ಸಿಬ್ಬಂದಿವರ್ಗದವರು ಆಶ್ರಮನಿವಾಸಿಗಳು ಉಪಸ್ಥಿತರಿದ್ದರು. ಸಾಂತ್ವನಂ ಕುವೈಟ್ ಇವರ ವತಿಯಿಂದ ಓಣಂ ಊಟದ ವ್ಯವಸ್ಥೆ ಮಾಡಲಾಗಿತ್ತು.
ಬೆಳ್ತಂಗಡಿ: ಈದ್ ಮಿಲಾದ್ ಪ್ರಯುಕ್ತ ಖಿಲರ್ ಜುಮ್ಮಾ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ
ಬೆಳ್ತಂಗಡಿ (ಸೆ-05): ಖಿಲರ್ ಜುಮ್ಮಾ ಮಸೀದಿ ಮತ್ತು ಖಿಲರಿಯಾ ಸ್ವಲಾತ್ ಕಮಿಟಿ ಇದರ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ 3 ದಿನಗಳ ಧಾರ್ಮಿಕ ಕಾರ್ಯಕ್ರಮ ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿಯಲ್ಲಿ ಜಮಾತ್ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಬುಧವಾರ ರಾತ್ರಿ ನಡೆದ ಮದರಸ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ತ್ವಾಹ ಜಿಫ್ರಿ ತಂಗಳ್ ಅವರ ದುವಾಶೀರ್ವಾದದೊಂದಿಗೆ ಮಸೀದಿ ಖತೀಬಾರದ ಹನೀಫ್ ಫೈಝಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮದರಸ ಪ್ರಾಧ್ಯಾಪಕರು, ಜಮಾತ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗುರುವಾರ ರಾತ್ರಿ ಸಮಾರೋಪ ಸಮಾರಂಭ ಕಾರ್ಯಕ್ರಮ ಮತ್ತು SSLC ಪರೀಕ್ಷೆಯಲ್ಲಿ...
ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಆಗಮಿಸಿದ ಪ್ರಣವ್ ಮೊಹಂತಿ; ಮಟ್ಟಣ್ಣನವರ್,ಜಯಂತ್ ವಿಚಾರಣೆ; ಬುರುಡೆ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಸಾಧ್ಯತೆ
ಬೆಳ್ತಂಗಡಿ : ಎಸ್.ಐ.ಟಿ ಮುಖ್ಯಸ್ಥರಾದ ಪ್ರಣವ್ ಮೊಹಂತಿ ಸೆ.5 ರಂದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.ಎಸ್.ಐ.ಟಿ ತಂಡವು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು ಬುರುಡೆ ವಿಚಾರದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಇಂದು ಅತ್ಯಂತ ಮಹತ್ವದ ಬೆಳವಣಿಗೆಗಳು ನಡೆಯುವ ನಿರೀಕ್ಷೆಯಿದೆ. ಎಸ್.ಐ.ಟಿ ಕಚೇರಿಯಲ್ಲಿ ಮಟ್ಟಣ್ಣನವರ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ವಿಚಾರಣೆಗಾಗಿ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಶುಕ್ರವಾರ ಬೆಳಗ್ಗೆ ಆಗಮಿಸಿದ್ದಾರೆ. ಯೂಟ್ಯೂಬರ್ ಅಭಿಷೇಕ್ ಕಳೆದ ಮೂರು ದಿನಗಳಿಂದ ಎಸ್.ಐ.ಟಿ ವಿಚಾರಣೆ ಎದುರಿಸುತ್ತಿದ್ದಾರೆ. ಅದೇರೀತಿ ಜಯಂತ್.ಟಿ, ಗುರುವಾರ ಸಂಜೆ ವಿಚಾರಣೆಗಾಗಿ ಬಂದವರು ಇನ್ನೂ ಎಸ್.ಐ.ಟಿ ಠಾಣೆಯಲ್ಲಿಯೇ ಇದ್ದಾರೆ ಎಂದು ತಿಳಿದು ಬಂದಿದೆ....
ಬೆಳ್ತಂಗಡಿ ಬುರುಡೆ ಚಿನ್ನಯ್ಯನ ಆರೋಗ್ಯ ತಪಾಸಣೆಗೆ
ಬೆಳ್ತಂಗಡಿ; ಬುರುಡೆ ಚಿನ್ನಯ್ಯನ್ನು ಆರೋಗ್ಯ ತಪಾಸಣೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಎಸ್.ಐ.ಟಿ ತಂಡದವರು ಕರೆತಂದಿದ್ದಾರೆ.ಸೆ 5 ರಂದು 12 ಸುಮಾರಿಗೆ ಎಸ್.ಐ.ಟಿ ಠಾಣೆಯಿಂದ ಆತನನ್ನು ಬೆಳ್ತಂಗಡಿ ಆಸ್ಪತ್ರೆಗೆ ಗಂಟೆಯ ತಪಾಸಣೆಗಾಗಿ ಕರೆತಂದಿದ್ದು ಆರೋಗ್ಯ ತಪಾಸಣೆ ಮುಗಿಸಿ ಮರಳಿ ಎಸ್.ಐ.ಟಿ ಕಚೇರಿಗೆ ಕರೆದೊಯ್ದಿದ್ದಾರೆ ಸೆ.3ರಂದ ಚಿನ್ನಯ್ಯ ನನ್ನು ಹೆಚ್ಚಿನ. ವಿಚಾರಣೆಗಾಗಿ ಮೂರು ದಿನಗಳ ಕಾಲ ಎಸ್.ಐ.ಟಿ ತಂಡ ವಶಕ್ಕೆ ಪಡೆದಿತ್ತು.
ಕೇರಳದ ಯುಟ್ಯೂಬರ್ ಮನಾಫ್ ಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್
ಬೆಳ್ತಂಗಡಿ; ಕೇರಳದ ಯುಟ್ಯೂಬರ್ ಮನಾಫ್ ಗೆ ತನಿಖೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿದೆ.ಕೇರಳದ ಯುಟ್ಯೂಬರ್ ಮುನಾಫ್ ಎಸ್.ಐ.ಟಿ ತಂಡ ರಚನೆಯಾಗುವ ಮೊದಲು ಧರ್ಮಸ್ಥಳಕ್ಕೆ ಆಗಮಿಸಿ ಇಲ್ಲಿನ ಹಲವು ವೀಡಿಯೋ ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಆತ ತನ್ನ ಯುಟ್ಯೂಬ್ ನಲ್ಲಿ ಅರಣ್ಯದಲ್ಲಿ ಬುರುಡೆ ತೆಗೆಯುವ ವಿಡಿಯೋ ವನ್ನು ಪ್ರಸಾರ ಮಾಡಿದ್ದ ಎನ್ನಲಾಗಿದೆ ಈ ಹಿನ್ನಲೆಯಲ್ಲಿ ಆತನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.
ಕೇರಳದ ಯುಟ್ಯೂಬರ್ ಮನಾಫ್ ಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್
ಬೆಳ್ತಂಗಡಿ; ಕೇರಳದ ಯುಟ್ಯೂಬರ್ ಮನಾಫ್ ಗೆ ತನಿಖೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿದೆ.ಕೇರಳದ ಯುಟ್ಯೂಬರ್ ಮುನಾಫ್ ಎಸ್.ಐ.ಟಿ ತಂಡ ರಚನೆಯಾಗುವ ಮೊದಲು ಧರ್ಮಸ್ಥಳಕ್ಕೆ ಆಗಮಿಸಿ ಇಲ್ಲಿನ ಹಲವು ವೀಡಿಯೋ ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಆತ ತನ್ನ ಯುಟ್ಯೂಬ್ ನಲ್ಲಿ ಅರಣ್ಯದಲ್ಲಿ ಬುರುಡೆ ತೆಗೆಯುವ ವಿಡಿಯೋ ವನ್ನು ಪ್ರಸಾರ ಮಾಡಿದ್ದ ಎನ್ನಲಾಗಿದೆ ಈ ಹಿನ್ನಲೆಯಲ್ಲಿ ಆತನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.
ಚಾರ್ಮಾಡಿ ತೋಟಗಳಿಗೆ ದಾಳಿ ಮಾಡಿದ ಕಾಡಾನೆ ಹಿಂಡು
ಬೆಳ್ತಂಗಡಿ:ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಮಜಲು, ಕೆರೆಕೋಡಿ ಮೊದಲಾದ ಸ್ಥಳಗಳಲ್ಲಿ ಕಾಡಾನೆ ಹಿಂಡು ಬುಧವಾರ ರಾತ್ರಿ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಉಂಟು ಮಾಡಿದೆ.ಹಿಂಡಿನಲ್ಲಿ ಒಂದು ಮರಿಯಾನೆ ಸಹಿತ ಐದು ಆನೆಗಳಿರುವ ಶಂಕೆ ವ್ಯಕ್ತವಾಗಿದೆ.ಕಳೆದ ಕೆಲವು ದಿನಗಳಿಂದ ಚಾರ್ಮಾಡಿ ಪರಿಸರದಲ್ಲಿ ಕಾಡಾನೆ ಹಾವಳಿ ಕಂಡು ಬಂದಿರಲಿಲ್ಲ. ಇದೀಗ ಕಾಡಾನೆಗಳ ಹಿಂಡು ಈ ಪರಿಸರದಲ್ಲಿ ಲಗ್ಗೆ ಇಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಒಂದು ವಾರದ ಹಿಂದೆ ಬೆಳಗಿನ ಜಾವ ಒಂಟಿ ಸಲಗ ಇಲ್ಲಿನ ಮೃತ್ಯುಂಜಯ ನದಿಯ ಪರಿಸರದಲ್ಲಿ ಕಂಡುಬಂದಿತ್ತು.
ಉಜಿರೆಯಲ್ಲಿ ಲಾರಿ-ಬೈಕ್ ಅಪಘಾತ:ಗಾಯಾಳು ಬೈಕ್ ಸವಾರ ಸಾವು
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ರಸ್ತೆಯ ಉಜಿರೆಯಲ್ಲಿ ಬುಧವಾರ ನಡೆದ ಲಾರಿ-ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ಸಮೀಪದ ನಿವಾಸಿ ಪುರುಷೋತ್ತಮ ಯಾನೆ ಬಾಲು (44), ಗುರುವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಬುಧವಾರ ಸಂಜೆ ಉಜಿರೆ ಸಮೀಪ ಅವರು ಚಲಾಯಿಸುತ್ತಿದ್ದ ಬೈಕಿಗೆ ಲಾರಿ ಡಿಕ್ಕಿ ಹೊಡೆದಿತ್ತು.ಇದರಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಗಾರೆ ಕಾರ್ಮಿಕರಾಗಿದ್ದಅವರಿಗೆ ಪತ್ನಿ ಹಾಗೂ...














