ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಂಡಿಂಜೆ ಗ್ರಾಮದ ಬೂತ್ ಪ್ರಗತಿ ಸಭೆ
ಬೆಳ್ತಂಗಡಿ. ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ವತಿಯಿಂದ ಅಂಡಿಂಜೆ ಗ್ರಾಮದ ಬೂತ್ ಪ್ರಗತಿ ಸಭೆಯು ಕೊಕ್ರಾಡಿಯಲ್ಲಿ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಬೂತ್ ಮಟ್ಟದಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ನ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯನ್ ಮಾಲಾಡಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿಯ...
ಧರ್ಮಸ್ಥಳ ವಿರುದ್ದ ಅಪಪ್ರಚಾರ,ಷಡ್ಯಂತ್ರ ಸೂಕ್ತ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾರವರನ್ನು ಭೇಟಿ ಮಾಡಿದ ರಾಜ್ಯ ಬಿಜೆಪಿ ನಿಯೋಗ.
ಬೆಳ್ತಂಗಡಿ; ಧರ್ಮಸ್ಥಳದ ಷಡ್ಯಂತರದ ಬಗ್ಗೆ ಸೆಪ್ಟೆಂಬರ್ 08 ರಂದು ಬಿಜೆಪಿ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಶಾಸಕ ಹರೀಶ್ ಪೂಂಜ ಹಾಗೂ ಇತರ ಮುಖಂಡರ ನಿಯೋಗ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಆಗುತ್ತಿರುವ ಅಪಪ್ರಚಾರ, ಷಡ್ಯಂತ್ರದ ಹಿಂದೆ ಇರುವ ಕಾಣದ ಕೈಗಳನ್ನು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಖಬೇಕಾಗಿ ವಿನಂತಿಸಿದರು.ಈ ಸಂದರ್ಭದಲ್ಲಿ ರಾಜ್ಯ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿಧಾನಪರಿಷತ್ ಪ್ರತಿಪಕ್ಷದ ನಾಯಕರದ ಛಲವಾದಿ.ಟಿ. ನಾರಾಯಣಸ್ವಾಮಿ, ವಿಧಾನಸಭಾ ಪ್ರತಿಪಕ್ಷ...
ಬೆಳ್ತಂಗಡಿ : ಎಸ್.ಐ.ಟಿ ವಿಚಾರಣೆಗೆ ಮಟ್ಟಣನವರ್ ಜಯಂತ್ ಸೇರಿ ಆರು ಮಂದಿ ಹಾಜರು
ಬೆಳ್ತಂಗಡಿ: ಬುರುಡೆ ಪ್ರಕರಣದ ತನಿಖೆಗಾಗಿ ಯ್ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್, ಜಯಂತ್.ಟಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಪ್ರದೀಪ್ ಎಸ್ಐಟಿ ವಿಚಾರಣೆಗೆ ಸೆ.9 ರಂದು ಬೆಳಗ್ಗೆ ಹಾಜರಾಗಿದ್ದಾರೆ. ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಆರನೇ ದಿನದ ವಿಚಾರಣೆಗೆ ಎಸ್ಐಟಿ ಕಚೇರಿಗೆ ಎಲ್ಲರನ್ನೂ ವಿಚಾರಣೆಗೆ ಕರೆಸಿದ್ದರಿಂದ ನಿನ್ನೆ ಹಿಂಬದಿ ದಾರಿ ಹಿಡಿದಿದ್ದ ಜಯಂತ್ ಇಂದು ಮುಂಭಾಗದ ಹಾದಿಯಿಂದಲೇ ಬಂದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇವರೊಂದಿಗೆ ಸಂಬಂಧಿಯಾಗಿರುವ ಸಿಂಧೂ ದೇವಿ ಕೂಡ ಎಸ್ಐಟಿ ಕಚೇರಿ ವರೆಗೆ ಬಂದು ಬಳಿಕ ಹಿಂದಿರುಗಿದ್ದಾರೆ. ಇನ್ನೂ ಕೇರಳದ ಯ್ಯೂಟ್ಯೂಬ್ ರ್...
ಬೆಳ್ತಂಗಡಿ ; ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಓಡಿಲ್ನಾಳ ಗ್ರಾಮದ ಭದ್ರಕಜೆ ಎಂಬಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ 8ರಂದು ಸಂಭವಿಸಿದೆ.ಮೃತ ವ್ಯಕ್ತಿ ಸ್ಥಳೀಯ ನಿವಾಸಿ ಸೂರಜ್ (39) ಎಂಬಾತನಾಗಿದ್ದಾನೆ.ಈತ ಓಡಿಲ್ನಾಳದ ಯುವತಿಯನ್ನು ಮದುವೆಯಾಗಿದ್ದು ಕಳೆದ ಆರು ತಿಂಗಳಿನಿಂದ ಓಡಿಲ್ನಾಳ ಗ್ರಾಮದ ಭದ್ರಕಜೆಯಲ್ಲಿರುವ ಪತ್ನಿ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.ಈತ ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದ್ದು ಕುಡಿತದ ಅಮಲಿನಲ್ಲಿ ಈತ ಸೆ 8 ರಂದು ಪತ್ನಿ ಮನೆಯಲ್ಲಿರದ ವೇಳೆ ಪತ್ನಿಯ ತಾಯಿಯ ಮೇಲೆ .ಮರದ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಹಲ್ಲೆಗೆ ಒಳಗಾದ ಮಹಿಳೆ ಆಸ್ಪತ್ರೆಗೆ...
ಧರ್ಮಸ್ಥಳಕ್ಕೆ ಕ್ಷೇತ್ರ ರಕ್ಷಾಯಾತ್ರೆ; ಧಾರ್ಮಿಕ ಶ್ರದ್ಧಾಕೇಂದ್ರಗಳ ರಕ್ಷಣೆ ಭಕ್ತರ ಕರ್ತವ್ಯ; ಸಚ್ಚಿದಾನಂದ ಭಾರತೀ ಸ್ವಾಮೀಜಿ
ಉಜಿರೆ: ಲಕ್ಷಾಂತರ ಮಂದಿ ಸರ್ವಧರ್ಮಿಯರ ಶ್ರದ್ಧಾ-ಭಕ್ತಿಯ ಕೇಂದ್ರವಾದ ಧರ್ಮಸ್ಥಳವು ಎಲ್ಲಾ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಮಾದರಿಯಾಗಿ ಪ್ರೇರಕ ಶಕ್ತಿಯಾಗಿದ್ದು, ಅತಿಶಯ ಕ್ಷೇತ್ರವಾಗಿ ಇನ್ನಷ್ಟು ಬೆಳೆಯಲಿ, ಬೆಳಗಲಿ ಎಂದು ಕಾಸರಗೋಡು ಎಡನೀರು ಮಠದ ಪೂಜ್ಯ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.ಅವರು ಸೋಮವಾರ ಧರ್ಮಸ್ಥಳಕ್ಕೆ ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಣ್ಣೂರು ಚಿಮೇನಿ ನಿತ್ಯಾನಂದ ಮಠದ ಅವಧೂತ ವಿನು ಸ್ವಾಮೀಜಿ ಹಾಗೂ ತಮ್ಮ ಭಕ್ತರೊಂದಿಗೆ ಆಗಮಿಸಿದಾಗ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.ದೇವರ ದರ್ಶನದ ಬಳಿಕ ಅವರನ್ನು ಡಿ. ಹರ್ಷೇಂದ್ರ ಕುಮಾರ್ ಗೌರವಿಸಿದರು.ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು.ನಂತರ ಪ್ರವಚನ...
ಬೆಳ್ತಂಗಡಿ; ಸೌಜನ್ಯ ಪ್ರಕರಣ ವಿಠಲ ಗೌಡ ವಿರುದ್ದ ಎಸ್.ಪಿ ಗೆ ದೂರು ನೀಡಿದ ಸ್ನೇಹ ಮಯಿ ಕೃಷ್ಣನ್
ಬೆಳ್ತಂಗಡಿ; ಸೌಜನ್ಯ ಪ್ರಕರಣದ ಬಗ್ಗೆ ಸ್ನೇಹಮಯಿ ಕೃಷ್ಣನ್ ಎಂಬವರು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ದೂರು ನೀಡಿದ್ದು ಈ ದೂರನ್ನು ಧರ್ಮಸ್ಥಳ ಪೊಲೀಸರಿಗೆ ಕಳುಹಿಸಲಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.ದೂರು ನೀಡಲು ಹೋಗುವ ಮೊದಲು ಬೆಳ್ತಂಗಡಿ ಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣನ್ ಸೌಜನ್ಯ ಪ್ರಕರಣದಲ್ಲಿ ಆಕೆಯ ಮಾವ ವಿಠಲ ಗೌಡ ಅವರೇ ಕೊಲೆಗಾರರಾಗಿರುವ ಬಗ್ಗೆ ಅನುಮಾನವಿದೆ ಈ ಬಗ್ಗೆ ಹಲವಾರು ದಾಖಲೆಗಳಿದ್ದು ಈ ದಾಖಲೆಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡುವುದಾಗಿ ತಿಳಿಸಿದ್ದ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ದೂರನ್ನು ಧರ್ಮಸ್ಥಳ...
ಬೆಳ್ತಂಗಡಿ : ವಸಂತ್ ಗಿಳಿಯರ್ ಮತ್ತು ಹರೀಶ್ ಪೂಂಜ ಪ್ಯಾನ್ಸ್ ಕ್ಲಬ್ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ : ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 'ಬೆಳ್ತಂಗಡಿಯಲ್ಲಿ ಸೋತವನ ಫಾರಂ ಹೌಸ್ ನಲ್ಲಿ ತಿಮರೋಡಿ ಆಶ್ರಯ' ಮತ್ತು ತಿಮರೋಡಿಗೆ ರಕ್ಷಣೆ ನಿಂತಿತಾ ಕಾಂಗ್ರೆಸ್ ಹೈಕಮಾಂಡ್' ಎಂದು ಪೋಸ್ಟ್ ಮಾಡಿರುವ ವಸಂತ್ ಗಿಳಿಯರ್ ಮತ್ತು ಹರೀಶ್ ಪೂಂಜ ಫ್ಯಾನ್ಸ್ ಕ್ಲಬ್ ಕರ್ನಾಟಕ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕವಾಗಿ BNS-352,353(2) ಅಡಿಯಲ್ಲಿ ಸೆ.8 ರಂದು ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಗೌಡ ಅವರು ಸೆ.8 ರಂದು ದೂರು ನೀಡಿದ್ದ ಅದರಂತೆ ವಸಂತ್ ಗಿಳಿಯರ್ ಮತ್ತು ಹರೀಶ್ ಪೂಂಜ...
ಬೆಳ್ತಂಗಡಿ; ವಿಚಾರಣೆಗಾಗಿ ಎಸ್.ಐ.ಟಿ ಕಚೇರಿಗೆ ಹಾಜರಾದ ಯುಟ್ಯೂಬರ್ ಮನಾಫ್
ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಕೇರಳದ ಯುಟ್ಯೂಬರ್ ಮನಾಫ್ ಆಗಮಿಸಿದ್ದಾನೆಸೋಮವಾರ ಸೆ.8 ರಂದು ಮಧ್ಯಾಹ್ನ 12.20 ರ ಸುಮಾರಿಗೆ ಆತ ಎಸ್.ಐ.ಟಿ ಕಚೇರಿಗೆ ಒಳದಾರಿಯ ಮೂಲಕ ಕಚೇರಿಗೆ ತೆರಳಿದ್ದಾನೆ.ತಲೆಬುರುಡೆಯನ್ನು ತೆಗೆಯುತ್ತಿರುವ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಹಾಕಿದ್ದ ಇದಲ್ಲದೆ ಇನ್ನೂ ಹಲವು ವಿಡಿಯೋ ಗಳನ್ನು ಈತ ಹಾಕಿದ್ದಾನೆ ಎನ್ನಲಾಗಿದ್ದು ಈ ಹಿನ್ನಲೆಯಲ್ಲಿ ಈತನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿತ್ತು.ಇದೀಗ ಸೋಮವಾರ ಈತ ವಿಚಾರಣೆಗಾಗಿ ಹಾಜರಾಗಿದ್ದಾನೆಮಾಧ್ಯಮಗಳ ಕಣ್ಣು ತಪ್ಪಿಸಲು ಒಳ ದಾರಿಯ ಮೂಲಕ ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾರೆ
ಎಸ್.ಐ.ಟಿ ಕಚೇರಿಗೆ ವಿಚಾರಣೆಗೆ ಆಗಮಿಸಿದ ಮಟ್ಟಣ್ಣನವರ್ ಜಯಂತ್ ಟಿ
ಬೆಳ್ತಂಗಡಿ; ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಗಿರೀಶ್ ಮಟ್ಟಣ್ಣನವರ್ ಅವರು ವಿಚಾರಣೆಗಾಗಿ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.ಕಳೆದ ಕೆಲದಿನಗಳಿಂದ ಗಿರೀಶ್ ಮಟ್ಟಣ್ಣನವರ್ ಅವರ ವಿಚಾರಣೆ ಎದುರಿಸುತ್ತಿದ್ದಾರೆ.ಜಯಂತ್ ಟಿ ಅವರು ವಿಚಾರಣೆಗಾಗಿ ಒಳ ದಾರಿಯಲ್ಲಿ ಎಸ್.ಐ.ಟಿ ಕಚೇರಿಗೆ ತೆರಳಿದ್ದಾರೆ. ಇಂದು ವಿಚಾರಣೆಗಾಗಿ ವಿಠಲ ಗೌಡ ಅವರಿಗೂ ಬರಲು ಎಸ್.ಐ.ಟಿ ತಂಡ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.ಈ ಮೂವರನ್ನೂ ವಿಚಾರಣೆ ಮುಗಿಸಿ ಭಾನುವಾರ ರಾತ್ರಿ ಹೊಂತಿರುಗಿದ್ದರು.ಎಸ್.ಐ.ಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಗಳು ನಡೆಯುತ್ತಿದ್ದು ಇಂದು ಎಸ್.ಐ.ಟಿ ತನಿಖೆ ಯಾವರೀತಿ ಮುಂದುವರಿಯಲಿದೆ ಎಂಬುದು ಕುತೂಹಲದ ವಿಚಾರವಾಗಿದೆ. ನೇತ್ರಾವತಿ...
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಅರಣ್ಯದ ಸುತ್ತ ಪೊಲೀಸ್ ಕಾವಲು ; ಸ್ಥಳ ಮಹಜರು ವೇಳೆ ಮತ್ತಷ್ಟು ಕುರುಹುಗಳು ಪತ್ತೆ?
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು ಶನಿವಾರ ನೇತ್ರಾವತಿ ಸ್ನಾನ ಘಟ್ಟದ ಸಮೀಪ ಅರಣ್ಯದಲ್ಲಿ ಸ್ಥಳ ಮಹಜರು ನಡೆಸಿದ ವೇಳೆ ಮೃತದೇಹಗಳ ಬಗ್ಗೆ ಮತ್ತಷ್ಟು ಕುರುಹುಗಳು ಲಭ್ಯವಾಗಿರುವುದಾಗಿ ತಿಳಿದು ಬಂದಿದೆ. ಇದೀಗ ನೇತ್ರಾವತಿ ಸ್ನಾನ ಘಟ್ಟದ ಸಮೀಪ ಹಾಗೂ ನೇತ್ರಾವತಿ ಸೇತುವೆಯ ಸಮೀಪ ಪೊಲೀಸ್ ಕಾವಲು ಹಾಕಲಾಗಿದ್ದು ಈ ಅರಣ್ಯ ಪ್ರದೇಶ ಸಂಪೂರ್ಣ ಪೊಲೀಸರ ನಿರೀಕ್ಷಣೆಯಲ್ಲಿದೆ. ನಾಳೆ ಇಲ್ಲಿ ಅರಣ್ಯದ ನಡುವೆ ಸ್ಥಳ ಪರಿಶೀಲನೆ ನಡೆಯುವ ಸಾಧ್ಯತೆಯಿದೆ.ಶನಿವಾರ ಸಂಜೆಯ ವೇಳೆ...















