ಬಂದಾರು; ಶಾಸಕರ ಅನುದಾನದಿಂದ ನಿರ್ಮಾಣವಾದ ರಿಕ್ಷಾ ತಂಗುದಾಣ ಉದ್ಘಾಟನೆ
ಬಂದಾರು :ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜರವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ರೂ 5.00 ಲಕ್ಷ ಅನುದಾನದಲ್ಲಿ ಬಂದಾರು ಗ್ರಾಮ ಬೈಪಾಡಿ ಸರ್ಕಲ್ ಬಳಿ ಜುಲೈ 21 ರಂದು ರಿಕ್ಷಾ ತಂಗುದಾಣವನ್ನು ಶಾಸಕರಾದ ಹರೀಶ್ ಪೂಂಜರವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಪೆರ್ಲ -ಬೈಪಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಉಮೇಶ್ ಗೌಡ ಅಂಗಡಿಮಜಲು, ಮಾಜಿ ತಾಲೂಕು ಪಂಚಾಯತ್...
ಕೇರಳದ ಹಿರಿಯ ಸಿಪಿಐಎಂ ಮುಖಂಡ ವಿ.ಎಸ್ ಅಚ್ಚುತಾನಂದನ್ ನಿಧನ
ತಿರುವನಂತಪುರಂ: ಹಿರಿಯ ಕಮ್ಯುನಿಸ್ಟ್ ನಾಯಕ, ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿಪಿಐಎಂ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ವಿ.ಎಸ್. ಅಚ್ಯುತಾನಂದನ್ (102) ನಿಧನರಾದರು. ವಿಎಸ್ ಎಂಬ ಎರಡು ಅಕ್ಷರಗಳ ಮೂಲಕ ಮಲಯಾಳಿಗಳ ಮನಸ್ಸಿನಲ್ಲಿ ಕ್ರಾಂತಿಕಾರಿ ಬೆಳಕಾಗಿ ಅಚ್ಚೊತ್ತಿದ ಜನಪ್ರಿಯ ನಾಯಕ ಈಗ ನೆನಪುಗಳಲ್ಲಿ ಉಳಿಯುವ ಸ್ಫೂರ್ತಿಯಾಗಲಿದ್ದಾರೆ. ದೈಹಿಕ ಅನಾರೋಗ್ಯದಿಂದಾಗಿ ವಿಎಸ್ ಅವರನ್ನು ಕಳೆದ ತಿಂಗಳು 23 ರಂದು ತಿರುವನಂತಪುರಂ ಎಸ್‌ಯುಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಸೋಮವಾರ (ಜುಲೈ 21, 2025) ಮಧ್ಯಾಹ್ನ 3.20 ರ ಸುಮಾರಿಗೆ ಅವರು ನಿಧನರಾದರು. 102 ವರ್ಷ ಪ್ರಾಯದ ವಿ.ಎಸ್....
ಬೆಳಾಲು ; ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ: ಚಾಲಕನಿಗೆ ಗಾಯ
ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಜೀಪೊಂದು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಘಟನೆ ಬೆಳಾಲು ದೊಂಪದ ಪಲ್ಕೆ (ಮೀನಂದೇಲು) ಬಳಿ ಸೋಮವಾರ ಸಂಜೆ ನಡೆದಿದೆ. ಬೆಳ್ತಂಗಡಿ ತಾಲೂಕುಬೆಳಾಲು ಗ್ರಾಮದ ದೊಂಪದಪಲ್ಕೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಚರಂಡಿಗೆ ಉರುಳಿದ್ದು ಅವಘಡದಲ್ಲಿ ಬಂದಾರು ಗ್ರಾಮದ ಬೈಪಾಡಿ ಸಮೀಪದ ನಿವಾಸಿ ಭಾರತೀಯ ಸೇನಾ ಯೋಧ ಲಿಂಗಪ್ಪ ಎಂಬವರು ಗಾಯಗೊಂಡಿದ್ದಾರೆ.ರಜೆಯಲ್ಲಿರುವ ಸೇನಾ ಯೋಧ ಲಿಂಗಪ್ಪ ಅವರು ಜೀಪಿನಲ್ಲಿ ಹೋಗಿ ಬರುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಪರಿಣಾಮ ಜೀಪ್ ಉರುಳಿ ಅಪಘಾತ ಸಂಭವಿಸಿದೆ.ಗಾಯಗೊಂಡ ಅವರನ್ನು...
ಬೆಳ್ತಂಗಡಿ; ಕಾಡಾನೆ ಹಾವಳಿ ವಿರುದ್ದ ಕೆ.ಎಸ್.ಎಂ.ಸಿ.ಎ ನೇತೃತ್ವದಲ್ಲಿ ಪ್ರತಿಭಟನೆ
ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಹಾವಳಿ ತೀವ್ರವಾಗಿದ್ದು ಕೃಷಿಕರು ಆತಂಕ ಪಡುವಂತಹ ವಾತಾವರಣವಿದ್ದು ಕಾಡಾನೆಗಳನ್ನು ಕ್ರಮ ಕೈಗೊಳ್ಳಬೇಕು, ಎಂದು ಒತ್ತಾಯಿಸಿ ಕೆ.ಎಸ್.ಎಂ.ಸಿ. ಎ ವತಿಯಿಂದ ಜು 21 ಸೋಮವಾರದಂದು ಬೆಳ್ತಂಗಡಿಯಲ್ಲಿ ಮೆರವಣಿಗೆ ನಡೆಸಿ ಅರಣ್ಯಿಇಲಾಖೆಯ ಕಚೇರಿಯ ಎದುರು ಪ್ರತಿಭಟನೆ ನಡೆಸಿ ವಲಯ ಅರಣ್ಯ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಎಸ್.ಎಂಸಿ ಎ ನಿರ್ದೇಶಕ ಫಾ ಆದರ್ಶ್ ಜೋಸೆಪ್ಕಾಡುಪ್ರಾಣಿಗಳ ಹಾವಳಿಯಿಂದಾಗಿ ಕೃಷಿಕರು ಬದುಕಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಕಾಡಾನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೃಷಿಕರು ನೋಟಾ ಚಳವಳಿಯಂತಹ ದಾರಿಯನ್ನು ಅನುಸರಿಸಬೇಕಾಗಿ...
2025-26ನೇ ಸಾಲಿನ ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ.
ಬೆಳ್ತಂಗಡಿ (ಜು20):- ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ವಾರ್ಷಿಕ ಸಭೆಯು ಭಾನುವಾರದಂದು ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ರಶೀದ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಹೋರಾಟಗಾರ ಅಬ್ಬುಲ್ ರಹಮಾನ್ ನಾವೂರು ಆಗಮಿಸಿದ್ದರು. 2024-25ನೇ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿಯಾದ ಮಹಮ್ಮದ್ ಕುದ್ರಡ್ಕ ಮಂಡಿಸಿದರು. ನೂತನ ಸಾಲಿನ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ , ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ವರ್ಷಾ, ಉಪಾಧ್ಯಕ್ಷರಾಗಿ ಇಸ್ಮಾಲಿ ಐ ಬಿ, ಜೊತೆಕಾರ್ಯದರ್ಶಿಯಾಗಿ ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿಯಾಗಿ ರಿಝ್ವಾನ್ ಬಿಕೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ರಶೀದ್...
ಧರ್ಮಸ್ಥಳ ಶವಹೂತಿದೆ ಎನ್ನಲಾದ ಪ್ರಕರಣ; ಎಸ್.ಐ.ಟಿ ತನಿಖೆಗೆ ನೋಡಿರುವುದು ಉತ್ತಮ; ಶ್ರೀಕ್ಷೇತ್ರ ಧರ್ಮಸ್ಥಳದ ವಕ್ತಾರರ ಹೇಳಿಕೆ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ "ಹಲವಾರು ಶವಗಳನ್ನು ಹೂತಿದ್ದೆ" ಎಂಬ ದೂರು ಪ್ರಕರಣದ ತನಿಖೆಯನ್ನು ಎಸ್.ಐ.ಟಿಗೆ ಹಸ್ತಾಂತರಿಸಿರುವ ರಾಜ್ಯ ಸರಕಾರದ ನಿಲುವು ಉತ್ತಮವಾಗಿದೆ ಎಂದು ಕ್ಷೇತ್ರ ಧರ್ಮಸ್ಥಳದ ವಕ್ತಾರರಾದಕೆ. ಪಾರ್ಶ್ವನಾಥ್ ಜೈನ್ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.ಈ ವಿಚಾರ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕವಾರ್ತೆಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟುಹಾಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕೆಂಬ ನಮ್ಮ ಹಾಗೂ ಸಾರ್ವಜನಿಕರ ನಿರೀಕ್ಷೆಯ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್.ಐ.ಟಿ.) ಗೆ ರಾಜ್ಯ ಸರ್ಕಾರ ಹಸ್ತಾಂತರಿಸಿದೆ ಎಂಬುದು...
ಧರ್ಮಸ್ಥಳ; ಹೆಣಗಳನ್ನು ಹೂತು ಹಾಕಿದ ಘಟನೆ ಎಸ್.ಐ.ಟಿ ತನಿಖೆಗೆ ರಾಜ್ಯ ಸರಕಾರ ಆದೇಶ; ಪ್ರಣವ್ ಕುಮಾರ್ ಮೊಹಂತಿ ನೇತೃತ್ವದಲ್ಲಿ ತನಿಖೆ
ಬೆಳ್ತಂಗಡಿ; ಧರ್ಮಸ್ಥಳ ದಲ್ಲಿ ಹೆಣಗಳನ್ನು ಹೀತಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಠಾಣಾ ಅ.ಕ್ರ 39/2025ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡಕ್ಕೆ (ಎಸ್.ಐ.ಟಿ) ಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶ ನೀಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.ಸದ್ರಿ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ದಿನಾಂಕ 19.07.2025 ರಂದು ಮಾನ್ಯ ಕರ್ನಾಟಕ ಸರ್ಕಾರವು ಅದೇಶಿಸಿರುತ್ತದೆ. ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ತನಿಖಾ ತಂಡದ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ...
ಅನಧಿಕೃತ ಗೂಡಂಗಡಿಗಳಿಗೆ ಉಪ್ಪಿನಂಗಡಿ ಅರಣ್ಯ ಇಲಾಖೆ ಖಡಕ್ ಡೆಡ್‌ಲೈನ್: ಮಧ್ಯಾಹ್ನದೊಳಗೆ ತೆರವುಗೊಳಿಸಲು ಸೂಚನೆ
ಬೆಳ್ತಂಗಡಿ :ಪೆರಿಯಶಾಂತಿ ಇಂದ( ಜುಲೈ 20 ) ಕುದ್ರಾಯವರೆಗಿನ ಮೀಸಲು ಅರಣ್ಯದ ಪಕ್ಕದ ರಸ್ತೆಯಲ್ಲಿ ಅನಧಿಕೃತವಾಗಿ ಇರುವ ಗೂಡಂಗಡಿಗಳಿಗೆ ಇಂದು ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಉಪ್ಪಿನಂಗಡಿ ವಲಯ ಪ್ರೊಫೆಷನಲ್ ಅರಣ್ಯಾಧಿಕಾರಿ ಹಸ್ತ ಶೆಟ್ಟಿ ಮತ್ತು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಖಡಕ್ ಸೂಚನೆ ನೀಡಿದ್ದಾರೆ. ಪ್ರಜಾಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ದಾಖಲಾಗಿರುವ ದೂರುಗಳ ಹಿನ್ನೆಲೆ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಂದಿರುವ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೆರಿಯಶಾಂತಿಯಿಂದ ಕುದ್ರಾಯವರೆಗಿನ ಮೀಸಲು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರಿಗೆ ಮೌಖಿಕ ಆದೇಶ ನೀಡಲಾಗಿತ್ತು. ಈ ವ್ಯಾಪಾರಸ್ಥರು ಜುಲೈ 15ರೊಳಗೆ...
ಅರಸಿನಮಕ್ಕಿಯಲ್ಲಿ ಕಾಡು ಹಂದಿ ದಾಳಿ: ತೋಟದಲ್ಲಿದ್ದ ಕಾರ್ಮಿಕನಿಗೆ ಗಂಭೀರ ಗಾಯ
ಬೆಳ್ತಂಗಡಿ: ಅರಸಿನಮಕ್ಕಿ ಸಮೀಪದ ಉಡ್ಯೆರೆ ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಪದ್ಮಯ್ಯ ಗೌಡ ಎಂಬವರ ತೋಟದಲ್ಲಿ ಗೊಬ್ಬರ ಹಾಕುತ್ತಿದ್ದ ರೆಖ್ಯ ಬೂಡು ನಿವಾಸಿ ಬಾಲಕೃಷ್ಣ ಎಂಬವರು ಗಾಯಗೊಂಡವರಾಗಿದ್ದಾರೆ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಕಾಡು ಹಂದಿಯ ಇವರು ತೋಟದ್ದಲ್ಲಿದ್ದ ವೇಳೆ ಹಠಾತ್ ದಾಳಿಗೆ ಸಿಲುಕಿದ್ದು, ಅವರ ಸೊಂಟ, ಕೈ ಮತ್ತು ಕಾಲಿನ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಅವರನ್ನು ಸ್ಥಳೀಯರು ತಕ್ಷಣವೇ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಜಿರೆ ರಬ್ಬರ್ ಸೊಸೈಟಿ ಮಹಾಸಭೆ; ಸಂಘಕ್ಕೆ 29ಲಕ್ಷ ಲಾಭ,10ಶೇ ಡಿವಿಡೆಂಡ್; ಅಧ್ಯಕ್ಷ ಶ್ರೀಧರ ಜಿ ಭಿಡೆ
ಬೆಳ್ತಂಗಡಿ; "ಸದಸ್ಯರ ಸೇವೆಯೇ ಜೀವಾಳ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಸಂಘವುವರದಿ ವರ್ಷದಲ್ಲಿ ಸಂಘವು 29 ಲಕ್ಷ ರೂ. ಗಿಂತ ಅಧಿಕ ಲಾಭಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲು ನಿರ್ಣಯಿಸಿದೆ" ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರುಅವರು ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾ ಭವನದಲ್ಲಿ ಶನಿವಾರ ಜರಗಿದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು."3,828 ಸದಸ್ಯರನ್ನು ಹೊಂದಿರುವ ಸಂಘವು 1.29 ಕೋಟಿ ರೂ.ಪಾಲು ಭಂಡವಾಳ ಹೊಂದಿದೆ. ಸಂಘದಲ್ಲಿ 26 ಕೋಟಿ ರೂ.ಗಿಂತ ಅಧಿಕ ಠೇವಣಿಗಳಿವೆ.ಸಂಘವು ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ...















