ಕಣಿಯೂರು ಮಹಾಮಾಯಿ ದೇವಸ್ಥಾನದಲ್ಲಿ ರಕ್ಷಿತ್ ಶಿವರಾಮ್ ರವರ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು
ಬೆಳ್ತಂಗಡಿ : ಕಣಿಯೂರು ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನಕ್ಕೆ ನೀರಿನ ವೆವಸ್ಥೆಗೆ ಸಹಾಯಧನಕ್ಕೆ ಸಹಕರಿಸಿದ ಶ್ರೀ ರಕ್ಷಿತ್ ಶಿವರಾಂ ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿಗಳ ಅಭಿನಂದನೆ ಬ್ಯಾನರ್,ಮಹಮ್ಮಾಯಿ ದೇವಸ್ಥಾನದ ಸಮಿತಿಯಿಂದ ವತಿಯಿಂದ ಅಳವಡಿಸಲಾಗಿತ್ತು ಈ ಬ್ಯಾನರ್ ನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ ಈ ಬ್ಯಾನರನ್ನು ಹರಿದು ಹಾಕಿದ್ದವರು ಯಾರು ಎಂಬುದನ್ನು ಆದಷ್ಟು ಬೇಗನೆ ತಿಳಿಯಬೇಕು ಎಂದು ದೇವಸ್ಥಾನದ ಸಮಿತಿಯವರು ಮತ್ತು ಊರಿನ ಭಕ್ತರು ಪ್ರಾರ್ಥನೆ ಮಾಡಲಾಯಿತು.
ದ್ವೇಷ ಭಾಷಣ ಪ್ರಕರಣ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಜಾಮೀನು ಮಂಜೂರು
ಬೆಳ್ತಂಗಡಿ; ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಜಾಮೀನುರಹಿತ ವಾರೆಂಟ್ ಜಾರಿಯಾಗಿದ್ದ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಜಾಮೀನು ಮಂಜೂರು ಮಾಡಿ ಬಂಟ್ವಾಳ ನ್ಯಾಯಾಲಯ ಆದೇಶ ಹೊರಡಿಸಿದೆ.ದ್ವೇಷ ಭಾಷಣ ಮಾಡಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಹಿನ್ನಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯ ಮಹೇಶ್ ಶೆಟ್ಟಿ ಅವರ ವಿರುದ್ದ ವಾರೆಂಟ್ ಜಾರಿ ಮಾಡಿತ್ತು. ಇದೀಗ ಬಂಟ್ವಾಳ ನ್ಯಾಯಾಲಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ....
ಮುಗೆರಡ್ಕ ನಿವೃತ್ತ ಯೋಧ ದೇವಪ್ರಸಾದ್ ಅವರಿಗೆ ಭವ್ಯ ಸ್ವಾಗತ
ಬೆಳ್ತಂಗಡಿ; ರಾಷ್ಟ್ರ ಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು,ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹಾಗೂ ಊರವರ ಸಹಕಾರದಲ್ಲಿ ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಕರ್ತವ್ಯದಿಂದ ನಿವೃತ್ತಿ ಹೊಂದಿ ಫೆ1 ರಂದು ಹುಟ್ಟೂರಿಗೆ ಆಗಮಿಸಿದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಬರೆಮೇಲು ನಿವಾಸಿ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ದೇವಪ್ರಸಾದ್ ಗೌಡ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ, ಕಲ್ಲೇರಿ,...
ಕೇಂದ್ರ ಬಜೆಟ್ ನಲ್ಲಿ ಕರಾವಳಿಯ ಅವಗಣನೆ ಖಂಡನಾರ್ಹ: ರಕ್ಷಿತ್ ಶಿವರಾಂ
ಬೆಳ್ತಂಗಡಿ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಈ ಬಾರಿಯ ಬಜೆಟ್ ನಲ್ಲಿ ಕರಾವಳಿಗೆ ಯಾವುದೇ ಹೊಸ ಯೋಜನೆಗಳನ್ನಾಗಲಿ, ಅನುದಾನಗಳನ್ನು ಘೋಷಿಸದೆ ಅವಗಣನೆ ಮಾಡಿರುವುದು ಸಮಸ್ತ ದಕ್ಷಿಣ ಕನ್ನಡ ಜಿಲ್ಲೆಗೆ ಮಾಡಿದ ಅನ್ಯಾಯ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಕಳೆದ ಸುಮಾರು 25 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಂಸದರನ್ನೇ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿಕೊಡುತ್ತಿದ್ದರೂ ಕೇಂದ್ರ ಸರಕಾರ ಸತತವಾಗಿ ಕರಾವಳಿ ಭಾಗಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಸಹಿಸಲಸಾಧ್ಯವಾಗಿದೆ. ಎಂದು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆಂಜ ಮಲಬಾರ್ ಕ್ಲಿನಿಕ್ ನ ಡಾ. ಟಿ.ವಿ ಜೋಸೆಫ್ ನಿಧನ
ಬೆಳ್ತಂಗಡಿ; ಕಳೆಂಜ ಗ್ರಾಮದ ಕಾಯರ್ತಡ್ಕ ನಿವಾಸಿ ಜನಪ್ರಿಯ ವೈದ್ಯರಾಗಿದ್ದ ಮಲಬಾರ್ ಕ್ಲಿನಿಕ್ ನ ಡಾ.ಟಿ.ವಿ ಜೋಸೆಫ್( 75) ಅವರು ಫೆ.2 ರಂದು ನಿಧನರಾಗಿದ್ದಾರೆ.ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು.ಕಳೆಂಜ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಜನಪ್ರಿಯರಾಗಿದ್ದ ಡಾ. ಜೋಸೆಫ್ ಅವರು ತಮ್ಮ ಮಲವಾರ್ ಕ್ಲಿನಿಕ್ ಮೂಲಕ ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಿದ್ದರು.ಹಣಕ್ಕಿಂತಲೂ ಮುಖ್ಯವಾಗಿ ಸೇವೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದ ಅವರು ಕೊರೋನಾ ಸಂದರ್ಭದಲ್ಲಿಯೂ ಗ್ರಾಮೀಣ ಜನರಿಗೆ ಮುಕ್ತವಾಗಿ ಚಿಕಿತ್ಸೆ ನೀಡುತ್ತಿದ್ದರು.ಮೃತರು ಕುಟುಂಬ ವರ್ಗವನ್ನು ಹಾಗೂ ಅಪಾರ ಬಂಧು...
ಬೆನಕ ಹೆಲ್ತ್ ಸೆಂಟರ್ ಉಜಿರೆಯ ಡಾ. ಗೋಪಾಲಕೃಷ್ಣ ಕೆ ಅವರಿಗೆ “ಆಯುಷ್ ಶ್ರೀ” ಪ್ರಶಸ್ತಿ
ಮಂಗಳೂರು: ಮಂಗಳೂರಿನ ಡಾ. ಟಿ.ಎಂ.ಎ. ಪೈ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾದ ಆಯುಷ್ ಹಬ್ಬ–2026ರ ಅಂಗವಾಗಿ ನಡೆದ ಆಯುಷ್ ಅಭಿನಂದನಂ ಕಾರ್ಯಕ್ರಮದಲ್ಲಿ ಆಯುಷ್ ವೈದ್ಯ ಪದ್ಧತಿಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಗೌರವ ಸಲ್ಲಿಸಲಾಯಿತು. ಈ ಸಮಾರಂಭದಲ್ಲಿ ಉಜಿರೆಯ ಬೆನಕ ಹೆಲ್ತ್ ಸೆಂಟರ್‌ನ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಕೆ ಅವರಿಗೆ ಸಮಾಜಕ್ಕೆ ಆಯುಷ್ ವೈದ್ಯ ಪದ್ಧತಿಗಳ ಮೂಲಕ ಸಲ್ಲಿಸಿದ ವಿಶಿಷ್ಟ ಹಾಗೂ ನಿರಂತರ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ “ಆಯುಷ್ ಶ್ರೀ” ಪ್ರಶಸ್ತಿ ಪ್ರದಾನಿಸಲಾಯಿತು. ಡಾ. ಗೋಪಾಲಕೃಷ್ಣ ಕೆ ಅವರು ಆಯುರ್ವೇದ ಮತ್ತು ಸಮಗ್ರ ವೈದ್ಯಕೀಯ...
ಬೆಳ್ತಂಗಡಿ : ಮೂರು ಅನಧಿಕೃತ ಕಟ್ಟಡ ಕಾಮಗಾರಿಗೆ ತಡೆ ನೀಡಿದ ಪಟ್ಟಣ ಪಂಚಾಯತ್
ಬೆಳ್ತಂಗಡಿ : ಅನಧಿಕೃತವಾಗಿ ಯಾವುದೇ ಸರಕಾರದ ಅನುಮತಿ ಪಡೆಯದೆ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಮೂರು ಕಟ್ಟಡ ಕಾಮಗಾರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ತಡೆ ನೀಡಿದೆ. ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಹಳೆಕೋಟೆ ಸಾಯಿ ಮಂದಿರದ ಎದರುಭಾಗದಲ್ಲಿ ವಲೇರಿಯನ್ ಪಾಯಸ್ ಮಾಲೀಕತ್ವದ ಕಟ್ಟಡ ಕಾಮಗಾರಿ, ಹಳೆಕೋಟೆ ಪೆಟ್ರೋಲ್ ಪಂಪ್ ಬಳಿಯ ಎವರೆಸ್ಟ್ ಡಾಯಸ್ ಮಾಲೀಕತ್ವದ ಕಟ್ಟಡ ಕಾಮಗಾರಿ, ಹಳೆಕೋಟೆ ಪೆಟ್ರೋಲ್ ಪಂಪ್ ಬಳಿಯ ಗಣೇಶ್ ಮಲ್ಯ ಮಾಲೀಕತ್ವದ ಕಟ್ಟಡಗಳಿಗೆ ಸರಕಾರದ ಯಾವುದೇ ಅನುಮತಿ ಪಡೆಯದೆ ಅನಧಿಕೃತ ಕಾಮಗಾರಿ ಕೆಲಸ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ನಗರ ಪಂಚಾಯತ್...
ಜಾಗತಿಕ ಸವಾಲಿನ ನಡುವೆಯೂ ಜನರ ಆಶೋತ್ತರ ಪ್ರತಿಬಿಂಬಿತವಾದ ಬಜೆಟ್ – ಹರೀಶ್ ಪೂಂಜ
ಬೆಳ್ತಂಗಡಿ: ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಹಾಗೂ ಅಮೇರಿಕಾದ ತೆರಿಗೆ ಬೆದರಿಕೆಯ ಸವಾಲಿನ ನಡುವೆ ಇಂದು ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತರಾಮನ್ ಮಂಡಿಸಿದ 2026-2027ನೇ ಕೇಂದ್ರ ಮುಂಗಡ ಪತ್ರ ಆರ್ಥಿಕ ಸ್ಥಿರತೆಯೊಂದಿಗೆ ಬೆಳವಣಿಗೆಯ ಮುನ್ಸೂಚನೆ ನೀಡಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಬಯೋಫಾರ್ಮ್ ಮೂಲಕ ಆರೋಗ್ಯ ಕ್ಷೇತ್ರಕ್ಕೆ 10 ಸಾವಿರ ಕೋಟಿ ಮೀಸಲು ದೇಶದ ಸ್ವಾಸ್ಥ್ಯ ಕ್ಷೇತ್ರದಲ್ಲಿ ಹೊಸ ಆಯಾಮ ನೀಡಲಿದ್ದು ಖಾದಿ ಹಾಗೂ ಕೈ ಮಗ್ಗಕ್ಕೆ ಪ್ರೋತ್ಸಾಹ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿಗೆ ಸಾಲದ ಗ್ಯಾರಂಟಿಯೊಂದಿಗೆ...
ರಾಷ್ಟ್ರದ ಪ್ರಗತಿಗೆ ಪೂರಕವಾದ ಬಜೆಟ್; ಡಾ. ಡಿ. ವೀರೇಂದ್ರ ಹೆಗ್ಗಡೆ
ಉಜಿರೆ: ಗ್ರಾಮೀಣ ಮತ್ತು ಉದ್ಯೋನ್ಮುಖ ಕೇಂದ್ರಗಳಲ್ಲಿ ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು ಬಲಪಡಿಸುವ ಮೂಲಕ ಬಜೆಟ್ ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಜೀವನೋಪಾಯವನ್ನು ಸೃಷ್ಟಿಸಲು ಅವಕಾಶ ಮಾಡಿಕೊಡುತ್ತದೆ.ಆರೋಗ್ಯ, ಶಿಕ್ಷಣ ಮತ್ತು ಮೌಲ್ಯಗಳ ನೆಲೆಯಲ್ಲಿ ಕೌಶಲಗಳ ಮೂಲಕ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದಾಗ ಅದು ಸ್ವಾವಲಂಬನೆ, ಆಂತರಿಕ ಬೆಳವಣಿಗೆ ಮತ್ತು ರಾಷ್ಟ್ರದ ಪ್ರಗತಿಗೆ ಪೂರಕವಾಗುವಂತೆ ಈ ಬಾರಿಯ ಬಜೆಟ್ ಮಂಡಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಿ. ವೀರೇಂದ್ರ ಹೆಗ್ಗಡೆಯವರು ಬಜೆಟ್ ಬಗ್ಯೆ ಪ್ರತಿಕ್ರಿಯೆ ನೀಡಿದ್ದಾರೆ.ದೇಶದ ಪ್ರಗತಿಯ ತಳಹದಿಯಾಗಿ ಮಾನವಸಾಮರ್ಥ್ಯವನ್ನು ಬಲಪಡಿಸುವ...
ಉಪ್ಪಿನಂಗಡಿ ತಡೆಗೋಡೆಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು
ಉಪ್ಪಿನಂಗಡಿ; ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಕಾರು ತಡೆಗೋಡೆಗೆ ಗುದ್ದಿ ಹೊತ್ತಿ ಉರಿದ ಘಟನೆ ಸಂಭವಿಸಿದೆ. 30.01.2026 ರಂದು 13.30 ಗಂಟೆಗೆ KA-05-NN-8222 ಕಾರಿನ ಚಾಲಕ ಹರ್ಷಿತ್ ಜಿ (29) ರಾಜಾಜಿನಗರ ಬೆಂಗಳೂರು ಅವರು ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಅಜಾಗರೂಕ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಪರಿಣಾಮ ಕಾರು ರಸ್ತೆ ಬದಿ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಹೋಗಿದ್ದು ಕಾರಿನಲ್ಲಿ ಪ್ರಯಾಣಿಸಿದ್ದವರಿಗೆ ಯಾವುದೇ ಗಾಯಗಳಿಲ್ಲ. ಈ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡು...














