ಬೆಳ್ತಂಗಡಿ; ನಿಡ್ಲೆ ಪಾರ್ಪಿಕಲ್ಲಿನಲ್ಲಿ ನದಿಗೆ ಸ್ನಾನಕ್ಕೆ ಇಳಿದ ಯುವಕ‌ ನೀರಿನಲ್ಲಿ ಮುಳುಗಿ ಮೃತ್ಯು

0

ಬೆಳ್ತಂಗಡಿ: ಸ್ನೇಹಿತರೊಂದಿಗೆ ನದಿಗೆ ಸ್ನಾನಕ್ಕಿಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ಅ.20ರಂದು ಮಧ್ಯಾಹ್ನ ನಡೆದಿದೆ. ಕೌಕ್ರಾಡಿ ಗ್ರಾಮದ ಮೂಡುಬೈಲ್ ನಿವಾಸಿ ಜನಾರ್ದನ್ ಗೌಡ ಅವರ ಪುತ್ರ ಕೀರ್ತನ್ (21) ಮೃತಪಟ್ಟ ಯುವಕ. ಕೀರ್ತನ್ ಹಾಗೂ ಅವರ ಸ್ನೇಹಿತರು ಮಧ್ಯಾಹ್ನ ಸ್ನಾನಕ್ಕಾಗಿ ನಿಡ್ಲೆ ಗ್ರಾಮದ ಪಾರ್ಪಿಕಲ್ಲಿಗೆ ಬಂದಿದ್ದರು.ಎಲ್ಲರೂ ನದಿಗೆ ಇಳಿದು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಆಳದ ಅರಿವಿಲ್ಲದೆ ಕೀರ್ತನ್ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ. ಕೂಡಲೇ ಸ್ಥಳೀಯರು ಕೀರ್ತನ್ ಅವರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ  ಆಸ್ಪತ್ರೆಗೆ ಸಾಗಿಸಿದ್ದಾರೆ. ಕೀರ್ತನ್ ನರ್ಸಿಂಗ್...

ಮೊಗ್ರು ಗ್ರಾಮದ ಒಂದೇ ಮನೆಯ ಇಬ್ಬರು ಮಕ್ಕಳು ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ

0

ಬೆಳ್ತಂಗಡಿ: ಉತ್ತರ ಕನ್ನಡ ಜಿಲ್ಲೆ ಕುಮಟಾ ಮಹಾತ್ಮಾ ಗಾಂಧಿ ಕ್ರೀಡಾoಗಣದಲ್ಲಿ ನಡೆದ 17 ರ ವಯೋಮಾನದ ರಾಜ್ಯಮಟ್ಟದ ಬಾಲಕ ಹಾಗೂ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಅತ್ಯಾರಕಂಡ ನಿವಾಸಿಗಳಾದ ಒಂದೇ ಮನೆಯ ಸಹೋದರ ಮಾ.ಪ್ರಣೀಶ್. ಎ. ಮತ್ತು ಸಹೋದರಿ ಕು. ಚೈತನ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಅತ್ಯಾರಕಂಡ ನಿವಾಸಿ ಶ್ರೀಮತಿ ಪ್ರಮೀಳಾ ಯಾನೆ ರೇವತಿ ಹಾಗೂ ಕುಶಾಲಪ್ಪ ಗೌಡ ದಂಪತಿಯ ಮಕ್ಕಳಾದ ಪುತ್ರ ಪ್ರಣೀಶ್.ಎ...

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಜಾಗ ಒತ್ತುವರಿ ಅಕ್ರಮ ಕಟ್ಟಡನಿರ್ಮಾಣ: ಮಾಜಿ ಅಧ್ಯಕ್ಷರ ವಿರುದ್ಧ ದೂರು, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

0

ಬೆಳ್ತಂಗಡಿ:ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸೇರಿರುವ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿ, ಒತ್ತುವರಿ ನಡೆಸಿ ವಂಚಿಸುತ್ತಿರುವವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯ ಅವರು ಧರ್ಮಸ್ಥಳ ಪೊಲೀಸ್ ಠಾಣಾಧಿಕಾರಿಗಳಿಗೆ ಈ ದೂರು ನೀಡಿದ್ದಾರೆ.ದೂರಿನಲ್ಲೇನಿದೆ?ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ, 1993ನೇ...

ಮಂಗಳೂರು ಎಸ್.ಡಿ.ಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎನ್ ಜೆ ಕಡಂಬ ನಿಧನ

0

ಬೆಳ್ತಂಗಡಿ!: ವೇಣೂರು ಕುಕ್ಕೇಡಿ ಗುತ್ತು ಮನೆತನದ, ಬೆಳ್ತಂಗಡಿಯ ಹಿರಿಯ ವಕೀಲ ಎನ್.ಜೆ.ಕಡಂಬ (91ವ)ವಯೋಸಹಜ ಅಸೌಖ್ಯದಿಂದ ಮಂಗಳೂರಿನ ತಮ್ಮ ಪುತ್ರಿಯ ಮನೆಯಲ್ಲಿ ಅ.19ರಂದು ನಿಧನ ಹೊಂದಿದರು. ಅವರು ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಸುಮಾರು 22 ವರ್ಷಗಳ ಕಾಲ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕರ್ನಾಟಕದ ಒಬ್ಬ ಪ್ರಖ್ಯಾತ ವಕೀಲರು, ಶಿಕ್ಷಣ ತಜ್ಞರು ಮತ್ತು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರಾಗಿದ್ದರು. 1974ರಲ್ಲಿ ಎಸ್‌ಡಿಎಂ ಕಾನೂನು ಕಾಲೇಜು ಪ್ರಾರಂಭವಾದಾಗ ಅದರ ಜವಾಬ್ದಾರಿಯನ್ನು ವಹಿಸಿಕೊಂಡ ಇವರು, ಗುಣಮಟ್ಟದ ಕಾನೂನು ಶಿಕ್ಷಣಕ್ಕೆ ಬಲವಾದ ತಳಹದಿ ಹಾಕಿದ್ದರು....

ಬೆಳ್ತಂಗಡಿ: ಧರ್ಮಸ್ಥಳ ಡಿಪ್ಪೋದ ಬಸ್ ಚಾಲಕ ಚಾರ್ಮಾಡಿ ನಿವಾಸಿ ಪ್ರಶಾಂತ್ ಗೌಡ ನಿಧನ

0

ಬೆಳ್ತಂಗಡಿ:ಕೆಎಸ್ಸಾರ್ಟಿಸಿ ಧರ್ಮಸ್ಥಳ ಡಿಪೋದಲ್ಲಿ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗುಳಿತಡ್ಕ ನಿವಾಸಿ ಪ್ರಶಾಂತ ಗೌಡ (35) ಅಲ್ಪಕಾಲದ ಅಸೌಖ್ಯದಿಂದ ಅ.19ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಅವಿವಾಹಿತ ಅವರಿಗೆ ತಾಯಿ ಸಹೋದರ ಹಾಗೂ ಸಹೋದರಿ ಇದ್ದಾರೆ.ಇವರ ಸಹೋದರ ಜಯಾನಂದ ಗೌಡ ಸೆ.3ರಂದು ಕಕ್ಕಿಂಜೆ ಸಮೀಪ ಅವರು ಚಲಾಯಿಸುತ್ತಿದ್ದ ಬೈಕಿಗೆ ಲಾರಿ ಡಿಕ್ಕಿಯಾಗಿ ನಿಧನ ಹೊಂದಿದ್ದರು.

ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಬೈಕ್‌ ಅಪಘಾತ ಬೆಳ್ತಂಗಡಿ ನಿವಾಸಿ ಯುವಕ ಮೃತ್ಯು

0

ಬೆಳ್ತಂಗಡಿ: ಮೈಸೂರು ದಸರಾ ವೀಕ್ಷಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಬೈಕ್‌ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕೊಳಂಬೆಯ ಯುವಕ ಮೃತಪಟ್ಟ ಘಟನೆ ಅ. 18ರಂದು ಮಧ್ಯರಾತ್ರಿ ನಡೆದಿದೆ. ಕೊಳಂಬೆ ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಮನೋಹರ (23) ಮೃತ ಯುವಕನಾಗಿದ್ದಾನೆ ಸಹಸವಾರರಾಗಿದ್ದ ಕೊಯ್ಯರಿನ ಬಿರ್ಕೆ ನಿವಾಸಿ ದೀಕ್ಷಿತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಮನೋಹರ ಹಾಗೂ ದೀಕ್ಷಿತ್ ಅ. 18ರಂದು ಮೈಸೂರು ದಸರಾ ವೀಕ್ಷಿಸಲು ಬೈಕ್‌ನಲ್ಲಿ ತೆರಳಿದ್ದರು. ರಾತ್ರಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ...

ವೇಣೂರು: ಕೋಳಿ ಅಂಕಕ್ಕೆ ದಾಳಿ – ನಾಲ್ವರು ಆರೋಪಿಗಳ ವಶಕ್ಕೆ7 ಅಂಕದ ಕೋಳಿಗಳು, 3 ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾ ವಶ

0

ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಕಾಣಲಚ್ಚಿ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿಗಳನ್ನು ಮೋಹನ ಗೌಡ (45), ದಿನೇಶ್ (45), ಪ್ರಶಾಂತ್ (35) ಹಾಗೂ ಧೀರಜ್ ಎಂಬವರಾಗಿದ್ದಾರೆ. ಅಕ್ಟೋಬರ್ 18ರಂದು ಮಧ್ಯಾಹ್ನ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಪಿಎಸ್‌ಐ ಅಕ್ಷಯ ಡವಗಿ ಅವರಿಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಇಲ್ಲಿಗೆ ದಾಳಿ ನಡೆಸಿದ್ದು ಈವೇಳೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿರುವುದು ದೃಢಪಟ್ಟಿದೆ.ಪೊಲೀಸರು ದಾಳಿ ನಡೆಸಿದ ವೇಳೆ...

ಉಪ್ಪಿನಂಗಡಿ ಬಾರ್ ನ ಮುಂದೆ ತಲವಾರು ಹಿಡಿದು ಗಲಾಟೆ ಇಬ್ಬರ ಬಂಧನ

0

ಬೆಳ್ತಂಗಡಿ; ಉಪ್ಪಿನಂಗಡಿ ಯಲ್ಲಿ ತಲವಾರು ಹಿಡಿದು ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳು ಮಂಜುನಾಥ್ ಹಾಗೂ ವಿಶ್ವನಾಥ್ ಎಂಬವರಾಗಿದ್ದಾರೆ.ಇವರು ಭಾನುವಾರ ರಾತ್ರಿ ವೇಳೆ ಉಪ್ಪಿನಂಗಡಿಯ ಬಾರಿನ ಮುಂಭಾಗದಲ್ಲಿ‌ ತಲವಾರು ಹಿಡಿದು ಹಲ್ಲೆಗೆ ಮುಂದಾಗಿದ್ದರು.ಮುನ್ನ ಎಂಬಾತ ಕುಡಿದ ಮತ್ತಿನಲ್ಲಿ ಮಂಜುನಾಥ್ ಎಂಬತನ ಮನೆಯವರಿಗೆ ಬೈದಿದ್ದು ಈ ವಿಚಾರವಾಗಿ ಇವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ ಇದೇ ಗಲಾಟೆಯ ವೇಳೆ ಸಾರ್ವಜನಿಕವಾಗಿ ತಲವಾರು ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಉಪ್ಪಿನಂಗಡಿ...

ಕೊಕ್ಕಡದಲ್ಲಿ ಅಂಗಡಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ; ಧರ್ಮಸ್ಥಳ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲು

0

ಬೆಳ್ತಂಗಡಿ: ಕೊಕ್ಕಡ ಗ್ರಾಮದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ ಕಟ್ಟಡದಲ್ಲಿರುವ ಅಂಗಡಿಯ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಹಲ್ಲೆ, ಸೊತ್ತುಗಳಿಗೆ ಹಾನಿ ಹಾಗೂ ಜೀವ ಬೆದರಿಕೆ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ಕೃಷ್ಣ ಭಟ್ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಆದೂರಿನಲ್ಲಿಅ.18ರಂದು ಬೆಳಿಗ್ಗೆ ಅಂಗಡಿಯಲ್ಲಿ ರಾಘವ ಭಂಡಾರಿ ಮತ್ತು ಅವರ ಕೆಲಸಗಾರರು ವ್ಯಾಪಾರ ಮಾಡುತ್ತಿದ್ದ ವೇಳೆ, ಈ ಹಿಂದೆ ಅಲ್ಲಿ ವ್ಯಾಪಾರ ನಡೆಸುತ್ತಿದ್ದ ಹರೀಶ್, ಅವರ ಪತ್ನಿ, ಮಕ್ಕಳು ಹಾಗೂ ಇತರರು ಅಂಗಡಿಯೊಳಗೆ...

ಬಂಟ್ವಾಳ: ಹಣದ ವಿಚಾರಕ್ಕೆ ಚೂರಿಯಿಂದ ಇರಿತ: ಆರೋಪಿ ವಶಕ್ಕೆ

0

ಬಂಟ್ವಾಳ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ಪಲ್ಲಮಜಲು ನಿವಾಸಿ ಅಜಿತ್ ಕುಮಾರ್ ಶೆಟ್ಟಿ (28) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಅ.18ರಂದು ವಶಕ್ಕೆ ಪಡೆದಿದ್ದಾರೆ.ಬಂಟ್ವಾಳ ಬಿ ಮೂಡಾ ಗ್ರಾಮದ ಉದಯ್ ಎಂಬವರು ಆರೋಪಿಯಿಂದ ಹಣವನ್ನು ಮರಳಿ ನೀಡುವಂತೆ ಕೇಳುತ್ತಿದ್ದರು. ಅ.17ರಂದು ರಾತ್ರಿ ಹಣ ವಾಪಸ್ ನೀಡುವುದಾಗಿ ತಿಳಿಸಿದ ಆರೋಪಿ, ಉದಯ್ ಅವರನ್ನು ಪಲ್ಲಮಜಲು ಜಂಕ್ಷನ್‌ಗೆ ಬರುವಂತೆ ತಿಳಿಸಿದ್ದಾನೆ. ಅದರಂತೆ ಹಣ ಪಡೆಯಲು ಉದಯ್ ಸ್ಥಳಕ್ಕೆ ತೆರಳಿದಾಗ, ಆರೋಪಿ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ.ಈ ವೇಳೆ...