ಬೆಳ್ತಂಗಡಿ : ತೋಟಕ್ಕೆ ಬಂದಿದ್ದ ಅಪರೂಪದ ಚಿಪ್ಪುಹಂದಿ( Indian pangolik) ಯನ್ನು ನಾಯಿಗಳ ದಾಳಿಯಿಂದ ರಕ್ಷಿಸಿ ಸ್ಥಳೀಯರ ಸಹಕಾರದೊಂದಿಗೆ ವೇಣೂರು ಅರಣ್ಯ ಇಲಾಖೆಯಬಾಧಿಕಾರಿಗಳು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ತಾರಿದೊಟ್ಟು ನಿವಾಸಿ ಹರೀಶ್ ರೈ ಮನೆಯ ತೋಟಕ್ಕೆ ನ. 7 ರಂದು ಬಂದಿದ್ದ ಅಪರೂಪದ ಚಿಪ್ಪುಹಂದಿ (Indian pangolin) ತಿರುಗಾಡುತ್ತಿರುವುದನ್ನು ನೋಡಿದ್ದು ನಾಯಿಗಳು ಅದರ ಮೇಲೆ ದಾಳಿ ನಡೆಸಲು ಮುಂದಾದದಾಗ ಅದನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ ಬಗ್ಗೆ ಸಾರ್ವಜನಿಕರು ವೇಣೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು. ಅದರಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹಿಡಿದು ಬೋನಿಗೆ ಹಾಕಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ ನೇತೃತ್ವದಲ್ಲಿ ಅಳದಂಗಡಿ ಶಾಖೆಯ ಉಪ ಅರಣ್ಯಾಧಿಕಾರಿ ಹರಿಪ್ರಸಾದ್ , ಬೀಟ್ ಫಾರಸ್ಟರ್ ಮಂಜುನಾಥ್.ಬಿ.ಎನ್, ಸಿಬ್ಬಂದಿ ವೆಂಕಪ್ಪ ,ಪೂವಪ್ಪ,ವಸಂತ ಹಾಗೂ ಸ್ಥಳೀಯರಾದ ಯಶೋಧರ ಶೆಟ್ಟಿ,ಪ್ರವೀಣ, ವೃಷಭ ಹೆಗ್ಡೆ, ನವೀನ,ಪದ್ಮನಾಭ ಕುಲಾಲ್, ನಂದಾ ರೈ, ಸಂಜೀವ ರೈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.










