Home ಸ್ಥಳೀಯ ಸಮಾಚಾರ ವೇಣೂರು ಮಹಾ ಮಸ್ತಕಾಭಿಷೇಕ; ಸಮಾಜದ ಪ್ರಗತಿಗೆ ಜೈನರ ಕೊಡುಗೆ ಮಹತ್ವದ್ದು; ನಳಿನ್ ಕುಮಾರ್

ವೇಣೂರು ಮಹಾ ಮಸ್ತಕಾಭಿಷೇಕ; ಸಮಾಜದ ಪ್ರಗತಿಗೆ ಜೈನರ ಕೊಡುಗೆ ಮಹತ್ವದ್ದು; ನಳಿನ್ ಕುಮಾರ್

212
0

ಬೆಳ್ತಂಗಡಿ : ಸಮಾಜದ ಸಂಘಟನೆ ಮತ್ತು ಪ್ರಗತಿಗೆ ಜೈನರ ಕೊಡುಗೆ ಅಮೂಲ್ಯವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಭಾನುವಾರ ವೇಣೂರಿನಲ್ಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಅಯೋಜಿಸಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಹುಬಲಿಯ ಆದರ್ಶತತ್ವಗಳನ್ನು ಪಾಲಿಸಿದರೆ ರಾಜಕೀಯದಲ್ಲಿ ಪಕ್ಷಾಂತರ ಸಾಧ್ಯವಾಗುವುದಿಲ್ಲ ಎಂದು ಹೇಳಿದರು
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ ಜೈನರು ಅಲ್ಪಸಂಖ್ಯಾತರಾದರೂ ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದರು


ಶಾಸಕರುಗಳಾದ ಹರೀಶ್ ಪೂಂಜ, ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್ ಮತ್ತು ಮಂಜುನಾಥ ಭಂಡಾರಿ ಶುಭ ಹಾರೈಸಿದರು.
ಜೀವಂಧರ ಕುಮಾರ್ ಸ್ವಾಗತಿಸಿದರು, ನವೀನ್ ಕುಮಾರ್ ಧವ್ಯವಾದವಿತ್ತರು.

LEAVE A REPLY

Please enter your comment!
Please enter your name here