Home ಶಾಲಾ ಕಾಲೇಜು ಬೆಳ್ತಂಗಡಿ ದಯಾ ವಿಶೇಷ ಶಾಲಾ ಪ್ರಾರಂಭೋತ್ಸವ

ಬೆಳ್ತಂಗಡಿ ದಯಾ ವಿಶೇಷ ಶಾಲಾ ಪ್ರಾರಂಭೋತ್ಸವ

27
0


ಬೆಳ್ತಂಗಡಿ; ದಯಾ ವಿಶೇಷ ಶಾಲೆಯಲ್ಲಿ ದಿನಾಂಕ 02.06.2025 ರಂದು 2025-2026 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಕಪುಚಿನ್‌ ಗುರುಗಳಾದ ವಂ.ಫಾ.ರೋಶನ್‌ ಕೋರ್ಡೇರೋ ರವರು ಉಪಸ್ಥಿತರಿದ್ದು, ಸಂಸ್ಥೆಯು ತಾಲೂಕಿನ ವಿಶೇಷ ಮಕ್ಕಳಿಗಾಗಿ ಕೈಗೊಂಡಿರುವ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ, ಮಕ್ಕಳು ನಿರಂತರವಾಗಿ ಶಾಲೆಗೆ ಆಗಮಿಸಿ, ಈ ಶಾಲೆಯಲ್ಲಿ ನೀಡಲಾಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು, ಉತ್ತಮ ಹಾಗೂ ಆರೋಗ್ಯವಂತ ಪ್ರಜೆಗಳಾಗಿ ಬಾಳಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ನಿರ್ದೇಶಕರಾದ ವಂ.ಫಾ.ವಿನೋದ್‌ ಮಸ್ಕರೇನಸ್‌ ರವರು ಮಾತನಾಡಿ, ಇಂದು ಶಾಲೆಯು ಮರುಪ್ರಾರಂಭವಾಗುತ್ತಿದೆ. ಇದು ನಮಗೂ, ಮಕ್ಕಳೆಲ್ಲರಿಗೂ ತುಂಬಾ ಸಂತೋಷದ ವಿಚಾರ. ಎಲ್ಲಾ ಮಕ್ಕಳು ಪ್ರತೀ ದಿನ ಶಾಲೆಗೆ ಬರಬೇಕು. ಇಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಅವರ ಕೌಶಲ್ಯಾಭಿವೃದ್ಧಿಗಾಗಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲರೂ ಅದರ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯಯುತವಾಗಿ, ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬಾಳಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ತಮ್ಮದಾಗಿಸಿ ಅಭಿವೃದ್ಧಿಗೊಳ್ಳಿ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ನಿರ್ದೇಶಕರಾದ ವಂ.ಫಾ.ರೋಹನ್‌ ಲೋಬೋ, ಶಾಲಾ ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಮಗುವನ್ನು ಹೂ, ಪುಸ್ತಕ, ಪೆನ್ಸಿಲ್‌ ಹಾಗೂ ಸಿಹಿ ಯನ್ನು ನೀಡುವುದರೊಂದಿಗೆ ಮಕ್ಕಳ ಹಾದಿಯಲ್ಲಿ ಹೂವನ್ನು ಚೆಲ್ಲಿ ಮಕ್ಕಳನ್ನು ಹೊಸ ಅಧ್ಯಯನ ವರ್ಷಕ್ಕೆ ಅವರನ್ನು ಸ್ವಾಗತಿಸಲಾಯಿತು. ಶಾಲೆಯ ಆಪ್ತಸಮಾಲೋಚಕರಾದ ಮಿಸ್.ಮೆರಿನ್‌ ರವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here