Home ರಾಜಕೀಯ ಸಮಾಚಾರ ಬೆಳ್ತಂಗಡಿ; ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ. ಚಪ್ಪರ ಮಹೂರ್ತ

ಬೆಳ್ತಂಗಡಿ; ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ. ಚಪ್ಪರ ಮಹೂರ್ತ

13
0

ಬೆಳ್ತಂಗಡಿ. ಗುರುವಾಯನಕೆರೆಯ ಶಕ್ತಿನಗರ ಮೈದಾನದಲ್ಲಿ ಏಪ್ರಿಲ್ 20ರಂದು ಕೆಪಿಸಿಸಿ ಅಧ್ಯಕ್ಷರು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಇವರ ಉಪಸ್ಥಿತಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ತಾತ್ಕಾಲಿಕ ಚಪ್ಪರಕ್ಕೆ ಮಹೂರ್ತ ನೆರವೇರಿಸಲಾಯಿತು.

ಮೆಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅರ್ಚಕರಾದ ಅನಂತ ಇರುವತ್ರಾಯ ಅವರು ಪೂಜಾ ವಿಧಿ–ವಿಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕೆ ಕಾಶಿಪಟ್ಟಣ, ನಾಗೇಶ್ ಕುಮಾರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ ಕುಕ್ಕೆಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ್ ನಾಯಕ್ ಕುವೆಟ್ಟು, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್, ಓಡಿಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ದಿನೇಶ್ ಮೂಲ್ಯ ಕೊಂಡೆ ಮಾರ್, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರೀಶ್ ಬಿ ಕಳಿಯ ಪಕ್ಷದ ಪ್ರಮುಖರಾದ ಪ್ರವೀಣ್ ಹಳ್ಳಿ ಮನೆ, ಅಬ್ದುಲ್ ಸಲಾಂ ಮರೋಡಿ,ನಾರಾಯಣ ಗೌಡ ದೇವಸ್ಯ, ಮಹಮದ್ ಹನೀಫ್ ಉಜಿರೆ, ವೀರೇಂದ್ರ ಕುಮಾರ್ ಜೈನ್ ನಾವಾರ, ರವೀಂದ್ರ ಅಮೀನ್ ಬಳೆಂಜ, ಧನಂಜಯ್ ರಾವ್, ನವೀನ ಗೌಡ ಸವಣಳು, ಅಜರ್ ನಾವುರು, ಅರುಣ್ ಲೋಬೋ, ದೇವಿಪ್ರಸಾದ್ ಶೆಟ್ಟಿ ಅಳದಂಗಡಿ, ಸಚಿನ್ ಕುಮಾರ್ ನೂಜೋಡಿ, ರಜತ್ ಗೌಡ ಉಜಿರೆ, ಮಹಮ್ಮದ್ ಶರೀಫ್ ಸಬರಬೈಲು, ಉಮೇರಾ ಬಾನು, ಸದಾನಂದ ನಾಲ್ಕುರು, ವಿನಯ್ ಸೋಣಂದೂರು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಧರಿದ್ದರು

LEAVE A REPLY

Please enter your comment!
Please enter your name here