Home ಸ್ಥಳೀಯ ಸಮಾಚಾರ ಡಿ. ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ – ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಮತ್ತು ಕ್ರಿಸ್ಮಸ್ ಆಚರಣೆ

ಡಿ. ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ – ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮ ಮತ್ತು ಕ್ರಿಸ್ಮಸ್ ಆಚರಣೆ

0
3


ಬೆಳ್ತಂಗಡಿ;ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಡಿಸೆಂಬರ್ 21 ರಂದು ಕ್ರಿಸ್ಮಸ್ ಆಚರಣೆಯನ್ನು ಬೆಳ್ತಂಗಡಿ, ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.
ಸೈಂಟ್ ಥೋಮಸ್ ಚರ್ಚ್
ಗಂಡಿಬಾಗಿಲು ಧರ್ಮಗುರುಗಳಾದ ವಂದನೀಯ ಫಾ. ಜೋಸ್ ಆಯಾಂಕುಡಿ ಇವರು ಈ ಕಾರ್ಯಕ್ರಮದ ಪ್ರಾರಂಭದ ಸವಿನೆಪುಗಳನ್ನು ನೆನಪಿಸಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಸಂದೇಶ ನೀಡಿದರು.


ಸೈಂಟ್ ತೋಮಸ್ ಪ್ರೌಡಶಾಲೆ ಗಂಡಿಬಾಗಿಲು ಇಲ್ಲಿಯ ಪ್ರಾಧ್ಯಾಪಕಾರದ ಥೋಮಸ್
ಪಿ. ಎ ಹಾಗೂ ಸ್ನೇಹಕಿರಣ್ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ
ಏಲೀಯಮ್ಮ ತೋಮಸ್ ಇವರು ಆಹಾರ ಕಿಟ್ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಿಸ್ಟರ್ ಸೆಲಿನ್ ಮದರ್ ಸುಪಿರಿಯರ್ ಎಸ್.ಎ.ಬಿ. ಎಸ್ ಕಾನ್ವೆಂಟ್, ಗಂಡಿಬಾಗಿಲು ಇವರು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮದ ಲಕ್ಕಿ ಪರ್ಸನ್ ಆಫ್ ದಿ ಇಯರನ್ನು ಆಯ್ಕೆ ಮಾಡಿದರು

, ಮಾತೃವೇದಿ ಸಂಘಟನೆಯ
ಅಧ್ಯಕ್ಷೆಯಾದ ಪ್ರಭಾ ಇವರು ಯಶೋದರವರಿಗೆ ಬಹುಮಾನ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯರು ವಿವಿಧ ಗೀತೆಗಳನ್ನು ಹಾಡಿ ಎಲ್ಲರ ಮನರಂಜಿಸಿದರು.
ಹಾಗೂ ಮಾತೃ ವೇದಿ ಸಂಘಟನೆಯ ಸದಸ್ಯರು ಕ್ರಿಸ್ಮಸ್ ಕ್ಯಾರೋಲ್ ಹಾಡನ್ನು ಹಾಡಿದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನೇತೃತ್ವದಲ್ಲಿ ನವಜೀವನ ಕುಟುಂಬದ ಸದಸ್ಯರಿಗೆ ನೀಡಿರುವ ಸೇವೆಗೆ ಕೃತಜ್ಞತಾ ಭಾವವಾಗಿ ನವಜೀವನ ಕುಟುಂಬದ ಸದಸ್ಯರು ಕಿರುಕಾಣಿಕೆಯನ್ನು
ಡಿ. ಕೆ ಆರ್.ಡಿ. ಎಸ್ ಸಂಸ್ಥೆಗೆ ಹಾಗೂ
ವ. ಫಾದರ್ ಜೋಸ್ ಆಯಾಂಕುಡಿ ಇವರಿಗೆ ನೀಡಿದರು.
ಲಲಿತ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ
ಫಾ. ಬಿನೋಯಿ ಎ.ಜೆ.ಇವರು
ಪ್ರಾಸ್ತವಿಕವಾಗಿ ಮಾತನಾಡಿದರು.


ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಪುಷ್ಪರವರು ಪ್ರಾರ್ಥಿಸಿದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ವಿದ್ಯಾನಿಧಿ ಸಂಯೋಜಕಿ ಜಿನ್ಸಿ ಸ್ವಾಗತಿಸಿ,
ಕಾರ್ಯಕರ್ತರಾದ ಮಾರ್ಕ್ ಡಿ ಸೋಜ ವಂದಿಸಿದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕಿ ಶ್ರೇಯಾ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ದಿನದ ಭೋಜನ ಕೂಟಕ್ಕೆ ಆರ್ಥಿಕ ಸಹಾಯವನ್ನು ಥೋಮಸ್ ಪಿ. ಎ ಕುಟುಂಬದವರು ಹಾಗೂ ಪ್ರತಿ ಸದಸ್ಯರಿಗೆ ಕೇಕನ್ನು ನೀಡಿಲು ಆರ್ಥಿಕ ಸಹಾಯ ನೀಡಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

NO COMMENTS

LEAVE A REPLY

Please enter your comment!
Please enter your name here