Home ಸ್ಥಳೀಯ ಸಮಾಚಾರ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

62
0

ಬೆಳ್ತಂಗಡಿ: ಆದಿಚುಂಚನಗಿರಿ ಮಠ ಮಾನ್ಯವಾಗಿಸಿಕೊಂಡು ದ.ಕ.ಜಿಲ್ಲಾ ಗೌಡರ ಸಂಘದಡಿ ತಾಲೂಕಿಗೆ ಒಳಪಟ್ಟು ಎಲ್ಲ ಭಾಷೆ ಮಾತಾಡುವ ಗೌಡ ಸಮುದಾಯ ಸೇರಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಸ್ಥಾಪಿಸಿರುವುದು ಉತ್ತಮ‌ಬೆಳವಣಿಗೆ ಎಂದು ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಡಿ.ಬಿ.ಬಾಲಕೃಷ್ಣ ಗೌಡ ಹೇಳಿದರು.

ನೂತನವಾಗಿ ಅಸ್ತಿತ್ವಕ್ಕೆ ಬಂದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಸೆ.23 ರಂದು ಬೆಳ್ತಂಗಡಿ ಸಿವಿಸಿ ಹಾಲ್ ನಲ್ಲಿ ನಡೆದ ಸದಸ್ಯತ್ವ ಅಭಿಯಾನ ಸಭೆ ಉದ್ಘಾಟಿಸಿ ಮಾತನಾಡಿದರು.

ಗೌಡ ಸಮುದಾಯದಡಿ ಬೇರೆ ಬೇರೆ ಆಚಾರ ವಿಚಾರ ಕಟ್ಟುಪಾಡು ಇರಬಹುದು, ಆದರೆ ಎಲ್ಲರ ಅಭಿವೃದ್ಧಿಗೆ ಹುಟ್ಟು ಹಾಕಿದ ಟ್ರಸ್ಟ್ ಈ ಹಿಂದೆಯೇ ಸ್ಥಾಪಿತವಾಗಬೇಕಿತ್ತು. ನೂತನ ಟ್ರಸ್ಟ್ ನಿಂತ ನೀರಾಗದೆ
ಸಮಾಜದ ಅಗತ್ಯತೆ ಪೂರೈಸುತ್ತ ಹರಿವ ನೀರಂತಾಗಬೇಕು. ಟ್ರಸ್ಟ್ ನಿಂದ ಗ್ರಾಮ ಗ್ರಾಮಗಳ ಅರ್ಹ ಬಡವನ ಮನೆಗೆ ನೆರವು ತಲುಪುವ ಕಾರ್ಯವಾಗಬೇಕು ಎಂದು ಆಶಿಸಿದರು.

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಮೋಹನ್ ಗೌಡ ಕಲ್ಮಂಜ ಮಾತನಾಡಿ, ಆದಿಚುಂಚನಗಿರಿ ಸ್ವಾಮಿಗಳ ಆಶಯದಂತೆ ದ.ಕ.ಜಿಲ್ಲೆಯಲ್ಲಿ ಎಲ್ಲ ಒಕ್ಕಲಿಗ ಗೌಡ ಸಮುದಾಯ ಒಟ್ಟಾಗಿ ಸಾಗಬೇಕೆಂಬ ನೆಲೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ರಚಿಸಿದೆ. ಗೌಡರ ಸಮುದಾಯ ಒಟ್ಟಾದರೆ ತಾಲೂಕಿನಲ್ಲಿ 60 ರಿಂದ 70 ಸಾವಿರ ಮಂದಿಯಿದ್ದೇವೆ. ಒಕ್ಕಲಿಗ ಸಮುದಾಯ ಆದಿಚುಂಚನಗಿರಿ ಮಠದಂತ ಶ್ರೇಷ್ಠ ಮಠದ ಪರಂಪರೆಯಡಿ ನಾವೆಲ್ಲ ಮುಂದೆ ಟ್ರಸ್ಟ್ ಮೂಲಕ ಉತ್ತಮ ಸೇವಾ ಮನೋಭಾವದ ಕಾರ್ಯ ಹೊಂದಿದ್ದೇವೆ ಎಂದು ಹೇಳಿದರು.

ಸ್ಥಾಪಕ ಟ್ರಸ್ಟಿ ವಿಜಯ ಗೌಡ ವೇಣೂರು ಸದಸ್ಯತ್ವದ ಕುರಿತು ಮಾತನಾಡಿ, ಸಮುದಾಯದ ಎಲ್ಲರ ಸಹಕಾರದಿಂದ ಮಾತ್ರ ಟ್ರಸ್ಟ್ ನ‌‌ ಉದ್ದೇಶ ಈಡೇರಲು ಸಾಧ್ಯ ಎಂದರು.

ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಗೌಡ ಬೆಳಾಲು ಅಧ್ಯಕ್ಷತೆ ವಹಿಸಿ ಟ್ರಸ್ಟ್ ನ ಉದ್ದೇಶದ ಬಗ್ಗೆ ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಭಾಸ್ಕರ್ ದೇವಸ್ಯ, ಸಮಿತಿ ಕಾರ್ಯಾಧ್ಯಕ್ಷ ಜಯಂತ ಗೌಡ, ಕಾರ್ಯದರ್ಶಿ ಭರತ್ ಬಂಗಾಡಿ, ಗೌರವಾಧ್ಯಕ್ಷ ರಂಜನ್ ಜಿ.ಗೌಡ, ನಿರ್ದೇಶಕಿ ಸೌಮ್ಯಲತಾ, ಟ್ರಸ್ಟಿ ದಾಮೋದರ್ ಗೌಡ ಸುರುಳಿ ಉಪಸ್ಥಿತರಿದ್ದರು.

ಸಮುದಾಯದ ಬಾಲಕೃಷ್ಣ ಗೌಡ ಕೇರಿಮಾರು ಹಾಗೂ ಮೋನಪ್ಪ ಗೌಡ ಬಜಿರೆ ಅವರಿಗೆ ಸಾಂಕೇತಿಕವಾಗಿ ಸದಸ್ಯತ್ವ ಅರ್ಜಿ ಫಾರಂ ವಿತರಿಸಲಾಯಿತು.

ಸ್ಥಾಪಕ ಟ್ರಸ್ಟಿ ವಸಂತ ಗೌಡ ಮರಕಡ ಸ್ವಾಗತಿಸಿದರು.
ನವೀನ್ ಗೌಡ, ಸತೀಶ್ ಮುನ್ನಡ್ಕ ನಿರೂಪಿಸಿದರು. ಕೋಶಾಧಿಕಾರಿ ಸೂರಜ್ ಒಳಂಬ್ರ ವಂದಿಸಿದರು.

LEAVE A REPLY

Please enter your comment!
Please enter your name here