ಬೆಳ್ತಂಗಡಿ; ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿಯುತ್ತಿದ್ದು
ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಸಂಭವಿಸಿದೆ
ಚಾರ್ಮಾಡಿ ಘಾಟಿಯ ಹತ್ತನೆಯ ತಿರುವಿನಲ್ಲಿ ಗುಡ್ಡ ಕುಸಿತ ವಾಗಿರುವುದಾಗಿ ತಿಳಿದು ಬಂದಿದೆ . ಭೂ ಕುಸಿತದಿಂದಾಗಿ ನೂರಾರು ಸಂಖ್ಯೆಯಲ್ಲಿ ವಾಹನಗಳು ಅಲ್ಲಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿ ಬಂತು.
ರಾತ್ರಿಯ ವೇಳೆ ಭೂ ಕುಸಿತವಾಗಿದ್ದು ಸ್ಥಳೀಯರ ಸಹಕಾರದೊಂದಿಗೆ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.
ಭೂ ಕುಸಿತದಿಂದಾಗಿಕೆಲ ಗಂಟೆಗಳ ಕಾಲ ಘಾಟಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಯುಂಟಾಯಿತು. ನೂರಾರು ವಾಹನಗಳು ಘಾಟಿಯಲ್ಲಿ ಹಾಗೂ ಕೊಟ್ಟಿಗೆ ಹಾರದಲ್ಲಿ ಕಾಯಬೇಕಾಗಿ ಬಂತು.
ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಆಗಾಗ ಭೂಕುಸಿತಗಳಾಗುತ್ತಿದೆ.