Home ರಾಜಕೀಯ ಸಮಾಚಾರ ಸೆಬಾಸ್ಟಿಯನ್ ಪಿ.ಟಿ ಅವರಿಗೆ ನಿಗಮದ ನಿರ್ದೇಶನ ಸ್ಥಾನ ಕ್ರೈಸ್ತ ಸಮುದಾಯದ ಮುಖಂಡರಿಂದ ರಕ್ಷಿತ್ ಶಿವರಾಂ ಅವರಿಗೆ...

ಸೆಬಾಸ್ಟಿಯನ್ ಪಿ.ಟಿ ಅವರಿಗೆ ನಿಗಮದ ನಿರ್ದೇಶನ ಸ್ಥಾನ ಕ್ರೈಸ್ತ ಸಮುದಾಯದ ಮುಖಂಡರಿಂದ ರಕ್ಷಿತ್ ಶಿವರಾಂ ಅವರಿಗೆ ಅಭಿನಂದನೆ

1
0

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ   ಕ್ರಿಶ್ಚಿಯನ್ ಸಮುದಾಯದ ಮುಖಂಡರು ರಕ್ಷಿತ್ ಶಿವರಾಂ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.ಸೆಬಾಸ್ಟಿಯನ್ ಪಿ.ಟಿ. ಅವರಿಗೆ ರಾಜ್ಯಮಟ್ಟದ ನಿಗಮದಲ್ಲಿ ನಿರ್ದೇಶಕ ಸ್ಥಾನ ದೊರೆತಿರುವುದು ಬೆಳ್ತಂಗಡಿ ತಾಲೂಕಿನ ಕ್ರಿಶ್ಚಿಯನ್ ಸಮುದಾಯಕ್ಕೆ ಸಂತಸ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎಂದು ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ನೂತನ ನಿರ್ದೇಶಕ ಸೆಬಾಸ್ಟಿಯನ್ ಪಿ.ಟಿ. ಅವರನ್ನು ಅಭಿನಂದಿಸಲಾಯಿತು
ತಾಲೂಕಿನ ಕ್ರಿಶ್ಚಿಯನ್ ಸಮುದಾಯದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here