ಧರ್ಮಸ್ಥಳ; ಧರ್ಮಸ್ಥಳ ಗ್ರಾಮದ ಕೆಂಬರ್ಜೆ ಎಂಬಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಶ್ರೀಧರ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಯಾವುದೇ ಪರವಾನಿಗೆಯಿಲ್ಲದೆ ಪಟ್ರಮೆ ಹೊಳೆಯಿಂದ ಮರಳನ್ನು ತೆಗೆದು ರಾಶಿ ಹಾಕುತ್ತಿದ್ದ ಬಗ್ಗೆ ಬಂದ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ಸುಮಾರು 40ಬುಟ್ಟಿಯಷ್ಟು ಮರಳನ್ನು ಸಂಗ್ರಹಿಸಿರುವುದು ಕಂಡು ಬಂದಿದ್ದು ಈ ಬಗ್ಗೆ ಆರೋಪಿ ಶ್ರೀಧರ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.







