ಬೆಳ್ತಂಗಡಿ; ಮಚ್ಚಿನ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಒಡೆದು ಒಳನುಗ್ಗಿದ ಕಳ್ಳರು ಸುಮಾರು 13 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಆರು ಲಕ್ಷ ನಗದು ಹಣ ಕಳ್ಳತನ ಮಾಡಿರುವ ಘಟನೆ ನಡೆದಿದ್ದು ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಚ್ಚಿನ ಗ್ರಾಮದ ಬಳ್ಳಮಂಜ ಹೊಸಮನೆ ನಿವಾಸಿಯಾಗಿರುವ ಡಿ. ಮುರಳಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಎ. 5 ರಂದು ಬಳ್ಳಮಂಜ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಜತ್ರಾ ಕಾರ್ಯಕ್ರಮಕ್ಕೆ ಮನೆಯವರೆಲ್ಲರೂ ಮನೆಗೆ ಬೀಗ ಹಾಕಿ ತೆರಳಿದ್ದರು. ಸಂಜೆ 6.40 ರ ಸುಮಾರಿಗೆ ಇವರು ದೇವಸ್ಥಾನಕ್ಕೆ ತೆರಳಿದ್ದು 8 .30 ರ ಸುಮಾರಿಗೆ ಮನೆಗೆ ಹಿಂತಿರುಗಿ ಬಂದು ನೋಡಿದಾಗ ಕಳ್ಳತನವಾಗಿರುವುದು ಕಂಡು ಬಂದಿದೆ. ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮನೆಯ ಮುಂಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ ಕಪಾಟಿನ ಲಾಕ್‌ಅನ್ನು ಮುರಿದು ಕಳ್ಳತನ ಮಾಡಿರುವುದಾಗಿದೆ. ಒಟ್ಟು 136 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು ಇದರ ಅಂದಾಜು ಮೌಲ್ಯ 13,32,800/- ಹಾಗೂ ನಗದು ಹಣ ರೂ 6,00,000/- ಆಗಬಹುದು. ಕಳವಾದ ಚಿನ್ನಾಭರಣ ಹಾಗೂ ನಗದಿನ ಒಟ್ಟು ಮೌಲ್ಯ 19,32,800/- ಆಗಬಹುದು ಎಂದು ಅಂದಾಜಿಸಲಾಗಿದೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 38/2026 ಕಲಂ:331(3)331(4) 305 BNS 2023 ಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮನೆಯವರು ದೇವಸ್ಥಾನಕ್ಕೆ ಹೋಗುತ್ತಾರೆ ಎಂಬುದರ ಬಗ್ಗೆ ತಿಳಿದಿರುವ ಯಾರೋ ಹೊಂಚು ಹಾಕಿ ಕಳ್ಳತನ ನಡೆಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದ್ದು ಸ್ಥಳೀಯರ ಕೈವಾಡವೂ ಇರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಕಳ್ಳತನವಾದ ಸೊತ್ತುಗಳ ವಿವಿರ
ಬೆಡ್ ರೂಮಿನ ಕಪಾಟಿಗೆ ಹಾಕಿದ ಲಾಕ್ ನ್ನು ಮುರಿದು ಅದರಲ್ಲಿದ್ದ ಸುಮಾರು 22 ಗ್ರಾಂ ತೂಕದ ಚಿನ್ನದ ಚೈನ್-2, ಇದರ ಅಂದಾಜು ಮೌಲ್ಯ 215600/- ಆಗಬಹುದು, ಸುಮಾರು 8 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್-1, ಇದರ ಅಂದಾಜು ಮೌಲ್ಯ 78400/- ಆಗಬಹುದು, ಸುಮಾರು 20 ಗ್ರಾಂ ತೂಕದ ಚಿನ್ನದ ಉಂಗುರ-5, ಇದರ ಅಂದಾಜು ಮೌಲ್ಯ 196000/- ಆಗಬಹುದು, ಹೆಂಡತಿಯ ಸುಮಾರು 18 ಗ್ರಾಂ ತೂಕದ ಚಿನ್ನದ ಚೈನ್-1, ಇದರ ಅಂದಾಜು ಮೌಲ್ಯ 176400/- ಆಗಬಹುದು, ಸುಮಾರು 22 ಗ್ರಾಂ ತೂಕದ ಚಿನ್ನದ ನಕ್ಲೇಸ್-1, ಇದರ ಅಂದಾಜು ಮೌಲ್ಯ 215600/- ಆಗಬಹುದು, ಸುಮಾರು 20 ಗ್ರಾಂ ತೂಕದ ಚಿನ್ನದ ಬಳೆ-1 ಜೊತೆ, ಇದರ ಅಂದಾಜು ಮೌಲ್ಯ 196000/- ಆಗಬಹುದು, ಸುಮಾರು 16 ಗ್ರಾಂ ತೂಕದ ಚಿನ್ನದ ಕಿವಿಯೊಲೆ-2 ಜೊತೆ, ಇದರ ಅಂದಾಜು ಮೌಲ್ಯ 156800/- ಆಗಬಹುದು, ಸುಮಾರು 2 ಗ್ರಾಂ ತೂಕದ ಚಿನ್ನದ ಪೆಂಡೆಂಟ್-1, ಇದರ ಅಂದಾಜು ಮೌಲ್ಯ 19600/- ಆಗಬಹುದು, ಮತ್ತು ಪುರೋಹಿತ್ಯ ಸಮಯ ಬಹುಮಾನವಾಗಿ ಬಂದಿರುವ ಚಿನ್ನದ ದೇವರ ಭಾವಚಿತ್ರ ಇರುವ ಚಿಕ್ಕ-ಚಿಕ್ಕ ಬಂಗಾರದ ತುಂಡುಗಳು ಸುಮಾರು 8 ಗ್ರಾಂ, ಇದರ ಅಂದಾಜು 78400/- ಆಗಬಹುದು, ಹಾಗೂ ಕೃಷಿ ಉತ್ಪನ್ನದಿಂದ ಬಂದ ನಗದು 3,00,000 (ಮೂರು ಲಕ್ಷ) ಹಣ ಹಾಗೂ ವೈದಿಕ ವೃತ್ತಿಯಿಂದ ಕೂಡಿಟ್ಟ ನಗದು 3,00,000 (ಮೂರು ಲಕ್ಷ) ಹಣವನ್ನು ಕಳ್ಳತನ ಮಾಡಲಾಗಿದೆ.




